Asianet Suvarna News Asianet Suvarna News

ಇದೇ ಕಾರಣಕ್ಕೆ ಅನಿಲ್ ಕುಂಬ್ಳೆ ನಮಗೆ ಇಷ್ಟ ಆಗ್ತಾರೆ!

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ದಿಗ್ಗಜ ಕ್ರಿಕೆಟಿಗನಾದರೂ ಅಭಿಮಾನಿಗಳಿಗೆ ಯಾವುತ್ತು ಬೇಸರ ಮಾಡಿಲ್ಲ. ಇದೀಗ ಕುಂಬ್ಳೆ ನಡೆ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿದೆ ವಿವರ.

Anil Kumbles warm gesture for fan wins hearts
Author
Bengaluru, First Published Oct 10, 2018, 4:59 PM IST
  • Facebook
  • Twitter
  • Whatsapp

ಬೆಂಗಳೂರು(ಅ.10): ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಅದೆಂತಾ ಅಗ್ರೆಸ್ಸಿವ್ ಕ್ರಿಕೆಟರ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಮೈದಾನದ ಹೊರೆಗೆ ಕುಂಬ್ಳೆ ಅಷ್ಟೇ ಹೃದಯವಂತ. ಇದೀಗ ಸ್ಪಿನ್ ದಿಗ್ಗಜ ಕುಂಬ್ಳೆ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಕುಂಬ್ಳೆ ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಲು ವಿಮಾನ ಏರಿದ್ದರು. ಅದೇ ವಿಮಾನದಲ್ಲಿದ್ದ ಅಭಿಮಾನಿ ಸೊಹಿನಿಗೆ ನೆನಪುಗಳನ್ನ, ಅವಿಸ್ಮರಣೀಯ ಗೆಲುವುಗಳನ್ನ ನೀಡಿದ ಅನಿಲ್ ಕುಂಬ್ಳೆಗೆ ಧನ್ಯವಾದ ಹೇಳಲು ಬಯಸಿದ್ದರು. ಆದರೆ ದಿಗ್ಗಜ ಕುಂಬ್ಳೆ ಬಳಿ ತೆರಳಿ ಹೇಗೆ ಹೇಳಬೇಕು ಅನ್ನೋದೇ ತೋಚಲಿಲ್ಲ. ಇದಕ್ಕಾಗಿ ಟ್ವೀಟ್ ಮೂಲಕ ವಿಷಯನ್ನ ಪ್ರಸ್ತಾಪಿಸಿದ್ದರು.

 

 

 

ತಕ್ಷಣವೇ ಅನಿಲ್ ಕುಂಬ್ಳೆ ಸೋಹಿನಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಸಂಕೋಚವಿಲ್ಲದೆ ಬಂದು ಹಾಯ್ ಹೇಳಿ ಎಂದು ರಿಪ್ಲೈ ಮಾಡಿದ್ದಾರೆ.

 

 

ಇದಾದ ಬಳಿಕ ಅಭಿಮಾನಿ ಸೋಹಿನಿ ತಮ್ಮ ಬೋರ್ಡಿಂಗ್ ಪಾಸ್ ಮೇಲೆ ಅನಿಲ್ ಕುಂಬ್ಳೆ ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ಇದನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. 


 

Follow Us:
Download App:
  • android
  • ios