Asianet Suvarna News Asianet Suvarna News

ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕ ಸ್ಥಾನಕ್ಕೆ ಮಾಜಿ ನಾಯಕ ದಿಢೀರ್ ರಾಜಿನಾಮೆ!

ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕನಾಗಿ ಅತ್ಯುತ್ತಮ ಆಡಳಿತ ನೀಡಿದ ಮಾಜಿ ನಾಯಕ ಆಂಡ್ರೂ ಸ್ಟ್ರಾಸ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿದ್ದಾರೆ. ಅಷ್ಟಕ್ಕೂ ಸ್ಟ್ರಾಸ್ ದಿಢೀರ್ ರಾಜಿನಾಮೆಗೆ ಕಾರಣವೇನು? ಇಲ್ಲಿದೆ. 

Andrew Strauss steps down as Director of England Cricket
Author
Bengaluru, First Published Oct 3, 2018, 9:19 PM IST
  • Facebook
  • Twitter
  • Whatsapp

ಲಂಡನ್(ಅ.03): ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಮಾಜಿ ನಾಯಕ ಆಂಡ್ರೂ ಸ್ಟ್ರಾಸ್ ದಿಢೀರ್ ರಾಜಿನಾಮೆ ನೀಡಿದ್ದಾರೆ. ಕಳೆದ ಮೂರೂವರೆ ವರ್ಷ ನಿರ್ದೇಶಕನಾಗಿ ಸೇವೆ ಸಲ್ಲಿಸಿದ ಸ್ಟ್ರಾಸ್ ರಾಜಿನಾಮೆ ಕ್ರಿಕೆಟ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕನಾಗಿ ಗಮನಸೆಳೆದಿದ್ದ ಆಂಡ್ರೂ ಸ್ಟ್ರಾಸ್ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಂಡ್ರೂ ಸ್ಟ್ರಾಸ್ ಪತ್ನಿ ರುತ್ ಮೆಕ್‌ಡೋನಾಲ್ಡ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪತ್ನಿ ಹಾಗು ಮಕ್ಕಳಿಗಾಗಿ ಸ್ಟ್ರಾಸ್ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಮುಂದಿನ ವರ್ಷ ಇಂಗ್ಲೆಂಡ್ ವಿಶ್ವಕಪ್ ಟೂರ್ನಿ,ಆಶಸ್ ಸರಣಿ ಸೇರಿದಂತೆ ಪ್ರತಿಷ್ಠಿತ ಟೂರ್ನಿ ಆಯೋಜಿಸಲಿದೆ. ಇದೇ ವೇಳೆ ಪತ್ನಿ ಚಿಕಿತ್ಸೆ ಕೂಡ ಇರೋದರಿಂದ ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡುತ್ತಿರುವುದಾಗಿ ಸ್ಟ್ರಾಸ್ ಹೇಳಿದ್ದಾರೆ. 
 

Follow Us:
Download App:
  • android
  • ios