Asianet Suvarna News Asianet Suvarna News

ಪಾಕಿಸ್ತಾನ ಅಣೆಕಟ್ಟು ನಿಧಿಗೆ ಅಂಪೈರ್ ದರ್ ₹7 ಲಕ್ಷ ದೇಣಿಗೆ

ದೇಶದಲ್ಲಿ ಎದುರಾಗುವ ಬರದ ಸಮಸ್ಯೆ ಎದುರಿಸಲು ಪಾಕಿಸ್ತಾನ ಸರ್ಕಾರ ಮುಂದಿನ 7 ವರ್ಷಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿದೆ. ನೀರಿನ ಸಮಸ್ಯೆಯನ್ನು ನೀಗಿಸಲು ದೇಶದ ಪ್ರತಿಯೊಬ್ಬರು ಅಣೆಕಟ್ಟು ನಿರ್ಮಿಸಲು ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.

Aleem Dar Donates to Pakistan Dam Fund
Author
New Delhi, First Published Sep 11, 2018, 12:39 PM IST

ನವದೆಹಲಿ[ಸೆ.11]: ಐಸಿಸಿ ಗಣ್ಯರ ಸಮಿತಿ ಸದಸ್ಯ ಮತ್ತು ಅಂಪೈರ್ ಅಲೀಮ್‌ದರ್, ಪಾಕಿಸ್ತಾನದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ₹7.24 ಲಕ್ಷ ದೇಣಿಗೆ ನೀಡಿದ್ದಾರೆ. 

ಈ ಕುರಿತು ವೆಬ್‌ಸೈಟ್'ವೊಂದರಲ್ಲಿ ಓಡಾಡುತ್ತಿದ್ದ ವೀಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅಲೀಮ್ ದರ್, ‘ಪಾಕಿಸ್ತಾನ ಅಣೆಕಟ್ಟು ನಿಧಿಗೆ ₹7.24 ಲಕ್ಷ ನೀಡಲು ನಿರ್ಧರಿಸಿದ್ದೇನೆ. ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿ ಮತ್ತು ಸರ್ಕಾರ, ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವುದನ್ನು ಶ್ಲಾಘಿಸುತ್ತೇನೆ’ ಎಂದಿದ್ದಾರೆ.

ದೇಶದಲ್ಲಿ ಎದುರಾಗುವ ಬರದ ಸಮಸ್ಯೆ ಎದುರಿಸಲು ಪಾಕಿಸ್ತಾನ ಸರ್ಕಾರ ಮುಂದಿನ 7 ವರ್ಷಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿದೆ. ನೀರಿನ ಸಮಸ್ಯೆಯನ್ನು ನೀಗಿಸಲು ದೇಶದ ಪ್ರತಿಯೊಬ್ಬರು ಅಣೆಕಟ್ಟು ನಿರ್ಮಿಸಲು ತಮ್ಮ ಕೈಲಾದ ಸಹಾಯ ಮಾಡಬೇಕು ಎಂದು ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ.

Follow Us:
Download App:
  • android
  • ios