ಕೆಲವೊಂದು ಆಕಸ್ಮಿಕ ಘಟನೆಗಳು ಪ್ರಾಣವನ್ನೇ ಉಳಿಸುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಇಂಗ್ಲೆಡ್'ನ ಮಾಜಿ ನಾಯಕ ಅಲಿಸ್ಟರ್ ಕುಕ್ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಇಂಗ್ಲೆಂಡ್'ನಲ್ಲಿ ಎಸೆಕ್ಸ್ ಹಾಗೂ ಮಿಡಲ್'ಸೆಕ್ಸ್ನ ಡುವೆ ಕೌಂಟಿ ಕ್ರಿಕೆಟ್ ನಡೆಯುತ್ತಿದ್ದ ವೇಳೆ ಕುಕ್ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರನೊಬ್ಬ ಕುಕ್ ಮತ್ತು ಪತ್ರಕರ್ತರಿದ್ದ ಜಾಗಕ್ಕೆ ಜೋರಾಗಿ ಬ್ಯಾಟ್ ಬೀಸಿದ್ದಾನೆ. ಹಿಂದಿನಿಂದ ಬಂದ ಬಾಲು ಇನ್ನೇನು ಕೆಲವೆ ಸೆಕೆಂಡ್'ಗಳಲ್ಲಿ ಪತ್ರಕರ್ತನ ತಲೆಗೆ ಏನೋ ಬೀಳುತ್ತಿದೆ ಎಂಬಂತೆ ಆ ಬಾಲನ್ನು ಕ್ಯಾಚ್ ಹಿಡಿದು ಪತ್ರಕರ್ತನಿಗೆ ಆಗುತ್ತಿದ್ದ ಗಂಭೀರ ಗಾಯವನ್ನು ತಪ್ಪಿಸಿದ್ದಾರೆ. ಒಂದು ವೇಳೆ ಬಾಲು ಪತ್ರಕರ್ತನ ತಲೆಗೆ ಬಡಿದಿದ್ದರೆ ಗಂಭೀರ ಪ್ರಾಣಕ್ಕೆ ಎರವಾಗುವ ಸಾಧ್ಯತೆಯಿತ್ತು.