Asianet Suvarna News Asianet Suvarna News

ಆಫ್ಘನ್ ಈ ಬಾರಿಯ ನಿಜವಾದ ಏಷ್ಯಾಕಪ್ ಚಾಂಪಿಯನ್..!

Sep 27, 2018, 4:28 PM IST

ದುಬೈ[ಸೆ.27]: ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಈ ಬಾರಿಯ ನಿಜವಾದ ಚಾಂಪಿಯನ್. ಅರೇ ಇದೇನಿದು ಇನ್ನೂ ಫೈನಲ್ ಪಂದ್ಯವೇ ನಡೆದಿಲ್ಲ, ಅಷ್ಟರೊಳಗೆ ಆಫ್ಘಾನ್ ಚಾಂಪಿಯನ್ ಎಂದರೆ ಹೇಗೆ ಎನ್ನುತ್ತೀರಾ..?

ಹೌದು, ಆಫ್ಘನ್ ಈ ಬಾರಿಯ ಏಷ್ಯಾಕಪ್’ನಲ್ಲಿ ಫೈನಲ್ ಪ್ರವೇಶಿಸದೇ ಇರಬಹುದು, ಆದರೆ ಅಸ್ಗರ್ ಆಫ್ಘಾನ್ ಪಡೆ ನಿಜಕ್ಕೂ ಚಾಂಪಿಯನ್ ತಂಡದಂತೆಯೇ ಆಡಿದೆ. ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಆಫ್ಘಾನಿಸ್ತಾನ ದ್ವೀಪರಾಷ್ಟ್ರ ಶ್ರೀಲಂಕಾ ಹಾಗೂ ಬಾಂಗ್ಲಾದೇಶವನ್ನು ಬಗ್ಗುಬಡಿದು ಸೂಪರ್ 4 ಹಂತ ಪ್ರವೇಶಿಸಿತ್ತು. ಆದರೆ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಓವರ್’ನಲ್ಲಿ ಮೂರು ವಿಕೆಟ್’ಗಳಿಂದ ಸೋಲುಕಂಡರೆ, ಬಾಂಗ್ಲಾದೇಶ ವಿರುದ್ಧ ಕೇವಲ 3 ರನ್’ಗಳ ಅಂತರದಲ್ಲಿ ಮುಗ್ಗರಿಸಿತ್ತು. ಇನ್ನು ಭಾರತ ವಿರುದ್ಧ ರೋಚಕ ಡ್ರಾದೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಆಫ್ಘನ್ ಸೂಪರ್ 4
ಹಂತದ ಪಂದ್ಯ ಗೆಲ್ಲದಿದ್ದರೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಚಾಂಪಿಯನ್ ಎನಿಸಿಕೊಂಡಿದ್ದಂತೂ ಸುಳ್ಳಲ್ಲ.