ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

First Published 26, Jul 2018, 8:03 PM IST
Adil Rashid named in England squad for first Test against India
Highlights

ಭಾರತ ವಿರುದ್ದದ 5 ಟೆಸ್ಟ್ ಪಂದ್ಯಗಳ ಪೈಕಿ ಆರಂಭಿಕ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನ ಆಯ್ಕೆ ಮಾಡಿದೆ. ಜೋ ರೂಟ್ ನಾಯಕತ್ವದ ತಂಡದಲ್ಲಿ ಮಾಜಿ ಕ್ರಿಕೆಟಿಗನಿಗೂ ಸ್ಥಾನ ನೀಡಲಾಗಿದೆ. ಹೇಗಿದೆ ಇಂಗ್ಲೆಂಡ್ ತಂಡ? ಇಲ್ಲಿದೆ

ಲಂಡನ್(ಜು.26): ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟಿಸಿರುವ ಇಂಗ್ಲೆಂಡ್, ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದ ಆದಿಲ್ ರಶೀದ್‌ಗೆ ಸ್ಥಾನ ನೀಡಿದೆ.

ಟೆಸ್ಟ್ ಸರಣಿ ಗೆಲುವಿಗೆ ಇಂಗ್ಲೆಂಡ್ ಆಯ್ಕೆ ಸಮಿತಿ ಅಳೆದು ತೂಗಿ ತಂಡವನ್ನ ಆಯ್ಕೆ ಮಾಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನ ಕಾಡಿದ ಆದಿಲ್ ರಶೀದ್ ಇದೀಗ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತವನ್ನ ಸ್ಪಿನ್ ಅಸ್ತ್ರದಿಂದಲೇ ಕಟ್ಟಿ ಹಾಕಲು ಇಂಗ್ಲೆಂಡ್ ಮಾಸ್ಟರ್ ಪ್ಲಾನ್ ಮಾಡಿದೆ. 

 

 

ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಹಿರಿಯ ಆಟಗಾರರಾದ ಆಲಿಸ್ಟರ್ ಕುಕ್, ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಇಂಗ್ಲೆಂಡ್ ತಂಡ:
ಜೋ ರೂಟ್(ನಾಯಕ), ಅಲಿಸ್ಟರ್ ಕುಕ್, ಕೆಟನ್ ಜೆನ್ನಿಂಗ್ಸ್, ಡೇವಿಡ್ ಮಲನ್, ಜಾನಿ ಬೈರಿಸ್ಟೋ, ಬೆನ್ ಸ್ಟೋಕ್ಸ್, ಮೊಯಿನ್ ಆಲಿ, ಜೋಸ್ ಬಟ್ಲರ್, ಆದಿಲ್ ರಶೀದ್, ಸ್ಯಾಮ್ ಕುರ್ರನ್ ಸ್ಟುವರ್ಟ್ ಬ್ರಾಡ್, ಜಿಮ್ಮಿ ಆಂಡರ್ಸನ್, ಜ್ಯಾಮಿ ಪಾರ್ಟರ್
 

loader