ಸ್ಪೇನ್ ಮಾಸ್ಟರ್ಸ್: ಚಿನ್ನದ ಕನಸು ಭಗ್ನ, ಬೆಳ್ಳಿಗೆ ತೃಪ್ತಿಪಟ್ಟ ಸಿಂಧು
ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬೆಳ್ಳಿಗೆ ಕೊರಳೊಡ್ಡಿದ ಸಿಂಧು
ಫೈನಲ್‌ನಲ್ಲಿ ಜಾರ್ಜಿಯಾ ಮರಿಸ್ಕಾ ಎದುರು ಹೀನಾಯ ಸೋಲು
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಸಿಂಧು ಫೈನಲ್‌ನಲ್ಲಿ ನಿರಾಸೆ
ಮ್ಯಾಡ್ರಿಡ್(ಏ.02): 2023ರಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಭಾರತೀಯ ತಾರಾ ಶಟ್ಲರ್ ಪಿ.ವಿ.ಸಿಂಧು ಅವರ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನದಲ್ಲಿರುವ ಇಂಡೋನೇಷ್ಯಾದ ಜಾರ್ಜಿಯಾ ಮರಿಸ್ಕಾ ತುಂಜುಂಗ್ ವಿರುದ್ಧ 8-21, 8-21 ನೇರ ಗೇಮ್ಗಳಲ್ಲಿ ಪರಾಭವಗೊಂಡರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಸಿಂಧು ಫೈನಲ್‌ನಲ್ಲಿ ನೀರಸ್ ಆಟವಾಡಿ ಚಿನ್ನದ ಪದಕ ಕೈಚೆಲ್ಲಿದರು. ಸಿಂಧು 23 ವರ್ಷದ ಜಾರ್ಜಿಯಾ ವಿರುದ್ಧ 7-0 ಗೆಲುವಿನ ದಾಖಲೆ ಹೊಂದಿದ್ದರೂ ನಿರ್ಣಾಯಕ ಪಂದ್ಯದಲ್ಲಿ ನಿರೀಕ್ಷಿತ ಆಟವಾಡಲು ವಿಫಲರಾದರು.
ಬಿಎಫ್ಸಿಯ ಝಿಂಗನ್ ಗೋವಾ ಎಫ್‌ಸಿ ಸೇರ್ಪಡೆ?
ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡದ ತಾರಾ ಆಟಗಾರ ಸಂದೇಶ್ ಝಿಂಗನ್ ಈ ಋುತುವಿನ ಬಳಿಕ ಎಫ್‌ಸಿ ಗೋವಾ ತಂಡ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 29 ವರ್ಷದ ಸಂದೇಶ್ ಈ ಆವೃತ್ತಿಯ ಐಎಸ್ಎಲ್ನಲ್ಲಿ ಬಿಎಫ್ಸಿ ಪರ 22 ಪಂದ್ಯಗಳನ್ನಾಡಿದ್ದು, ತಂಡ ರನ್ನರ್-ಅಪ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಎಫ್ಸಿ ಜೊತೆಗಿನ ಅವರ ಒಪ್ಪಂದ ಈ ಋುತುವಿನ ಕೊನೆಯಲ್ಲಿ ಮುಕ್ತಾಯಗೊಳ್ಳಲಿದ್ದು, ಏ.8ರಿಂದ ಆರಂಭಗೊಳ್ಳಲಿರುವ ಸೂಪರ್ ಕಪ್ ಬಳಿಕ ಬಿಎಫ್ಸಿ ತೊರೆದು ಗೋವಾ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬ್ರಿಟನ್ನ ಲೋಫಾಜೆನ್ಗೆ ಮೈಸೂರು ಓಪನ್ ಪ್ರಶಸ್ತಿ
ಮೈಸೂರು: ಬ್ರಿಟನ್ನ ಜಾಜ್‌ರ್ ಲೋಫಾಜೆನ್ ಮೈಸೂರು ಓಪನ್ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್ಟಿಎ) ಆಯೋಜಿಸಿದ ಟೂರ್ನಿಯ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಲೋಫಾಜೆನ್, ಆಸ್ಪ್ರೇಲಿಯಾದ ಬ್ಲೇಕ್ ಎಲ್ಲಿಸ್ ವಿರುದ್ಧ 4-6, 6-2, 7-6(4) ಸೆಟ್ಗಳಿಂದ ರೋಚಕ ಗೆಲುವು ಸಾಧಿಸಿದರು. ಮೊದಲ ಸೆಟ್ ಕಳೆದುಕೊಂಡರೂ ಸುಮಾರು 2 ಗಂಟೆ 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಎಲ್ಲಿಸ್‌ರನ್ನು ಮಣಿಸಿ ಲೋಫಾಜೆನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕೊಡವ ಹಾಕಿ: ಮೇಕೆರಿರಕ್ಕೆ 6-1 ಜಯ
ನಾಪೋಕ್ಲು: 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಭಾನುವಾರದ ಪಂದ್ಯಗಳಲ್ಲಿ ಅಚ್ಚಪಂಡ, ಮೇಕೇರಿರ, ಚೇಂದಿರ, ಇಟ್ಟಿರ, ಕರವಟ್ಟಿರ, ಕಳ್ಳಿಚಂಡ, ಪುದಿಯೋಕ್ಕಡ, ಕೊಂಗಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು. ಬಿದ್ದಂಡ ವಿರುದ್ಧ ಅಚ್ಚಪಂಡ 2-1 ಗೋಲುಗಳ ಅಂತರದಿಂದ ಗೆಲುವ ಸಾಧಿಸಿದರೆ, ಚೀಯಕಪೂವಂಡ ವಿರುದ್ಧ ಮೇಕೆರಿರವು 6 -1 ಭರ್ಜರಿ ಜಯ ಸಾಧಿಸಿತು.
ಚುನಾವಣಾ ಕಸರತ್ತಿನ ನಡುವೆ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ!
ಅಂತಾರಾಷ್ಟ್ರೀಯ ಆಟಗಾರ ನಿತಿನ್ ತಿಮ್ಮಯ್ಯ ಮೇಕೆರಿರಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು. ಇಟ್ಟಿರ ತಂಡವು ಕೊಂಗೇಟಿರ ವಿರುದ್ಧ 2-0 ಅಂತರದ ಜಯಗಳಿಸಿದರೆ, ಕಲಿಯಾಟಂಡ ವಿರುದ್ಧ ಕರವಟ್ಟಿರ 3-0 ಅಂತರದ ಗೆಲುವು ಸಾಧಿಸಿತು. ಪುಲ್ಲಂಗಡ ವಿರುದ್ಧ ಕಳ್ಳಿಚಂಡ 1- 0 ಅಂತರದ ಜಯ ಸಾಧಿಸಿತು. ಪುದಿಯೊಕ್ಕಡ ತಂಡವು ಬಾರಿಯಂಡತಂಡದ ವಿರುದ್ಧ 1- 0 ಅಂತರದ ಜಯಗಳಿಸಿತು. ಕೊಂಗಂಡ ತಂಡವು ನಾಳಿಯಂಡ ತಂಡದ ವಿರುದ್ಧ ಜಯಗಳಿಸಿತು. ಸಡನ್ ಡೆತ್‌ನಲ್ಲಿ ಕೊಂಗಂಡ ಒಂದು ಗೋಲು ಗಳಿಸಿ ವಿಜಯಮಾಲೆ ಧರಿಸಿತು.