ಬೆಂಗಳೂರು: ಸಬ್-ಏರ್ ಸಿಸ್ಟಂ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಗ್ರಹವಾಗಿದ್ದ 3 ಲಕ್ಷ ಲೀಟರ್‌'ನಷ್ಟು ಮಳೆನೀರನ್ನು ಕೇವಲ 45 ನಿಮಿಷದಲ್ಲಿ ಹೊರಹಾಕಲಾಗಿದೆ.

ಶುಕ್ರವಾರ ಮಧ್ಯಾಹ್ನ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಪರಿಣಾಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ಮಳೆನೀರು ಸಂಗ್ರಹಗೊಂಡಿತು. ಇದರಿಂದ ಡೆಲ್ಲಿ ಡೇರ್‌'ಡೆವಿಲ್ಸ್ ತಂಡಕ್ಕೆ ಅಭ್ಯಾಸ ನಡೆಸಲು ತೊಡಕಾಯಿತು. ತಕ್ಷಣ ಕ್ರೀಡಾಂಗಣದ ಸಿಬ್ಬಂದಿ ಸಬ್-ಏರ್ ಯಂತ್ರದ ನೆರವಿನಿಂದ ಕ್ರೀಡಾಂಗಣದಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಹೊರ ತೆಗೆಯುವ ಕಾರ್ಯಕ್ಕೆ ಮುಂದಾದರು.

ಪರಿಣಾಮ 45 ನಿಮಿಷದಲ್ಲಿ 3 ಲಕ್ಷ ಲೀಟರ್‌'ನಷ್ಟು ನೀರನ್ನು ಮೈದಾನದಿಂದ ಹೊರಕ್ಕೆ ಹಾಕಲಾಯಿತು. ಹೀಗೆ ಹೊರಬರುವ ನೀರನ್ನು ಶೇಖರಿಸುವ ವ್ಯವಸ್ಥೆಯಿದ್ದು, ಇದನ್ನು ಮರುಬಳಕೆ ಮಾಡಲಾಗುವುದು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿತು.

ರಾತ್ರಿ 9ರ ಬಳಿಕ ಅಭ್ಯಾಸ:

ಹೀಗೆ ಸಬ್-ಏರ್ ವ್ಯವಸ್ಥೆಯಿಂದ ಗಂಟೆಯೊಳಗೆ ಕ್ರೀಡಾಂಗಣ ಮತ್ತೆ ಆಟಕ್ಕೆ ಲಭ್ಯವಾಯಿತು. ರಾತ್ರಿ 9 ಗಂಟೆಯ ನಂತರ ಡೆಲ್ಲಿ ತಂಡದ ಆಟಗಾರರು ಫ್ಲಡ್ ಲೈಟ್‌'ನಲ್ಲೇ ಅಭ್ಯಾಸ ನಡೆಸಿದರು.