Paris Olympics: ಅಥ್ಲೀಟ್‌ಗಳಿಗೆ 3 ಲಕ್ಷ ಕಾಂಡೋಮ್ ವ್ಯವಸ್ಥೆ ಮಾಡಿದ ಆಯೋಜಕರು: ಒಬ್ಬರು 21 ಬಾರಿ ಸೆಕ್ಸ್ ಮಾಡ್ಬುದು!

ಇದೀಗ ಒಲಿಂಪಿಕ್ ಆಯೋಜಕರು ಮಹತ್ವದ ತೀರ್ಮಾನ ಪ್ರಕಟಿಸಿದ್ದು, "ನಾವು ಅಥ್ಲೀಟ್ ಆಯೋಗದ ಜತೆ ಮಾತುಕತೆ ನಡೆಸಿದ್ದು, ಕ್ರೀಡಾಪಟುಗಳು ಉತ್ಸಾಹದಿಂದ ಇರಲು ಹಾಗೂ ಆರಾಮಾದಾಯಕವಾಗುವಂತಹ ಕೆಲವು ಸ್ಥಳಗಳನ್ನು ನಿರ್ಮಿಸಲು ನಾವು ಬಯಸಿದ್ದೇವೆ" ಎಂದು Sky News ಮಾಧ್ಯಮಕ್ಕೆ ಲೌರೆಂಟ್ ಮಿಚೌದ್ ತಿಳಿಸಿದ್ದಾರೆ.

3 lakh Condoms to be Given to Athletes for Paris Olympics 2024 kvn

ಪ್ಯಾರಿಸ್(ಮಾ.21): ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್‌ಗೆ ಇದೀಗ ದಿನಗಣನೆ ಆರಂಭವಾಗಿದೆ. ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ ಆಯೋಜಕರು ಮಹತ್ವದ ತೀರ್ಮಾನ ಪ್ರಕಟಿಸಿದ್ದು, ಕ್ರೀಡಾಗ್ರಾಮದಲ್ಲಿ ಅಥ್ಲೀಟ್‌ಗಳಿಗೆ ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಜಾಗತಿಕ ಕೂಟದಲ್ಲಿ ಪಾಲ್ಗೊಳ್ಳಲಿರುವ 14,250 ಅಥ್ಲೀಟ್‌ಗಳಿಗೆ 3,00,000 ಕಾಂಡೋಮ್ ವಿತರಿಸಲು ಆಯೋಜಕರು ತೀರ್ಮಾನಿಸಿದ್ದಾರೆ.

ಈ ಕುರಿತಂತೆ Sky News ಜತೆ ಮಾತನಾಡಿರುವ ಒಲಿಂಪಿಕ್ಸ್ ಕ್ರೀಡಾಗ್ರಾಮದ ಡೈರೆಕ್ಟರ್ ಲೌರೆಂಟ್ ಮಿಚೌದ್, "ಅಥ್ಲೀಟ್‌ಗಳು ಇಲ್ಲಿ ಅನ್ಯೋನ್ಯತೆಯಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಸೋಂಕು ವಕ್ಕರಿಸಿದ್ದರಿಂದಾಗಿ 2020ರ ಟೋಕಿಯೋ ಒಲಿಂಪಿಕ್ಸ್‌ನ ಕ್ರೀಡಾಗ್ರಾಮದಲ್ಲಿ ಅಥ್ಲೀಟ್‌ಗಳು ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳು ಗಾಢ ಸ್ನೇಹ ಹೊಂದುವುದನ್ನು ನಿಷೇಧಿಸಿತ್ತು. ಅಥ್ಲೀಟ್‌ಗಳು ಸೆಕ್ಸ್ ಸೇರಿದಂತೆ ದೈಹಿಕ ಸಂಪರ್ಕ ಹೊಂದುವುದಕ್ಕೆ ನಿಷೇಧ ಹೇರಲಾಗಿತ್ತು. ಇದಷ್ಟೇ ಅಲ್ಲದೇ ಕೋವಿಡ್‌ ಭೀತಿಯಿಂದ ಪಾರಾಗಲು ಅಥ್ಲೀಟ್‌ಗಳು ಒಬ್ಬರಿಂದ ಮತ್ತೊಬ್ಬರಿಗೆ ಆರೂವರೆ ಅಡಿ ಅಂತರ ಕಾಯ್ದುಕೊಳ್ಳುವುದಕ್ಕೂ ಮನವಿ ಮಾಡಿಕೊಂಡಿತ್ತು.

IPL ಮಹಾಸಂಗ್ರಾಮಕ್ಕೆ ಕ್ಷಣಗಣನೆ: CSK-RCB ಮ್ಯಾಚ್‌ಗೆ ಲೋಕಲ್ ಹೀರೋ ಅಶ್ವಿನ್‌ಗೆ ಸಿಕ್ತಿಲ್ಲ ಟಿಕೆಟ್..!

ಇದೀಗ ಒಲಿಂಪಿಕ್ ಆಯೋಜಕರು ಮಹತ್ವದ ತೀರ್ಮಾನ ಪ್ರಕಟಿಸಿದ್ದು, "ನಾವು ಅಥ್ಲೀಟ್ ಆಯೋಗದ ಜತೆ ಮಾತುಕತೆ ನಡೆಸಿದ್ದು, ಕ್ರೀಡಾಪಟುಗಳು ಉತ್ಸಾಹದಿಂದ ಇರಲು ಹಾಗೂ ಆರಾಮಾದಾಯಕವಾಗುವಂತಹ ಕೆಲವು ಸ್ಥಳಗಳನ್ನು ನಿರ್ಮಿಸಲು ನಾವು ಬಯಸಿದ್ದೇವೆ" ಎಂದು Sky News ಮಾಧ್ಯಮಕ್ಕೆ ಲೌರೆಂಟ್ ಮಿಚೌದ್ ತಿಳಿಸಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಗ್ರಾಮದ ಉಸ್ತುವಾರಿ ಹೊತ್ತಿರುವ ಲೌರೆಂಟ್ ಮಿಚೌದ್, "ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ 3 ಲಕ್ಷ ಕಾಂಡೋಮ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರತಿಯೊಬ್ಬ ಅಥ್ಲೀಟ್‌ ಕೂಡಾ 21 ಬಾರಿ ಸೆಕ್ಸ್ ಮಾಡಲು ಸಾಕಾಗುವಷ್ಟು ಕಾಂಡೋಮ್ ಇರಲಿದೆ ಎಂದು ತಿಳಿಸಿದ್ದಾರೆ. 

WPL ಕಪ್‌ ಗೆದ್ದು ಬಾಯ್‌ ಫ್ರೆಂಡ್‌ ಜತೆ ಫೋಸ್‌ ಕೊಟ್ಟ RCB ಕ್ವೀನ್ ಸ್ಮೃತಿ ಮಂಧನಾ..! ನಮ್ಮ ಕ್ರಶ್‌ ಬಿಟ್ಬಿಡು ಎಂದ ಫ್ಯಾನ್ಸ್

ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಕಾಂಡೋಮ್ ವಿತರಿಸುವುದು ಇದೇ ಮೊದಲೇನಲ್ಲ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ಕಾಂಡೋಮ್ ವಿತರಿಸುವುದು ಒಂದು ಸಂಪ್ರದಾಯವೆನಿಸಿಕೊಂಡಿದೆ. 1988ರ ಸಿಯೋಲ್ ಒಲಿಂಪಿಕ್ಸ್‌ನಿಂದಲೂ ಅಥ್ಲೀಟ್‌ಗಳಿಗೆ ಕಾಂಡೋಮ್ ವಿತರಿಸಲಾಗುತ್ತಿದೆ. ಎಚ್‌ಐವಿ ಮತ್ತು ಏಡ್ಸ್‌ನ ಬಗ್ಗೆ ಜಾಗೃತಿ ಮೂಡಿಸಲು ಅಥ್ಲೀಟ್‌ಗಳಿಗೆ ಕಾಂಡೋಮ್ ವಿತರಿಸಲಾಗುತ್ತಿದೆ. ಇನ್ನು 2020ರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಠಿಣ ನಿಯಮದ ಹೊರತಾಗಿಯೂ 1.50 ಲಕ್ಷ ಕಾಂಡೋಮ್‌ಗಳನ್ನು ಅಥ್ಲೀಟ್‌ಗಳಿಗೆ ವಿತರಿಸಲಾಗಿತ್ತು.
 

Latest Videos
Follow Us:
Download App:
  • android
  • ios