ನವದೆಹಲಿ(ಮಾ.01): ಇರಾನ್‌ನ ಚಾಬಹರ್‌ನಲ್ಲಿ ನಡೆದ ಮಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತ 1 ಚಿನ್ನ, 5 ಬೆಳ್ಳಿ ಹಾಗೂ 2 ಕಂಚಿನೊಂದಿಗೆ 8 ಪದಕ ಜಯಿಸಿದೆ. ಫೈನಲ್‌ ಪ್ರವೇಶಿಸಿದ್ದ 6 ಬಾಕ್ಸರ್‌ಗಳ ಪೈಕಿ ರಾಷ್ಟ್ರೀಯ ಚಾಂಪಿಯನ್‌ ದೀಪಕ್‌ ಸಿಂಗ್‌ (49 ಕೆ.ಜಿ) ಮಾತ್ರ ಚಿನ್ನದ ಪದಕ ಗೆದ್ದರು. 

 

 

ಉಳಿದಂತೆ ಲಲಿತಾ ಪ್ರಸಾದ್‌ (52 ಕೆ.ಜಿ), ಮನೀಶ್‌ ಕೌಶಿಕ್‌ (60 ಕೆ.ಜಿ), ದುರ್ಯೋಧನ್‌ ಸಿಂಗ್‌ (69 ಕೆ.ಜಿ), ಸಂಜೀತ್‌ (91 ಕೆ.ಜಿ) ಹಾಗೂ ಸತೀಶ್‌ ಕುಮಾರ್‌ (+91 ಕೆ.ಜಿ) ಬೆಳ್ಳಿ ಪದಕ ಜಯಿಸಿದರು. ರೋಹಿತ್‌ ಟೋಕಾಸ್‌ (64 ಕೆ.ಜಿ) ಹಾಗೂ ಮಂಜೀತ್‌ ಸಿಂಗ್‌ ಪಂಗಲ್‌ (75 ಕೆ.ಜಿ) ಸೆಮೀಸ್‌ನಲ್ಲಿ ಸೋತು ಕಂಚಿಗೆ ತೃಪ್ತಿಪಟ್ಟರು.