Asianet Suvarna News Asianet Suvarna News
132 results for "

Karnataka Ranji Team

"
Karnataka announce 20 member squad for Ranji Trophy quarterfinal Mayank Padaikkal Available  kvnKarnataka announce 20 member squad for Ranji Trophy quarterfinal Mayank Padaikkal Available  kvn

Ranji Trophy‌: ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮಯಾಂಕ್‌, ಪಡಿಕ್ಕಲ್‌ ಬಲ

* ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ

* ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್‌ಗೆ ಸ್ಥಾನ, ಮನೀಶ್ ಪಾಂಡ್ಯ ನಾಯಕ

* ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಸವಾಲು

 

Cricket Jun 2, 2022, 9:05 AM IST

Ranji Trophy Bengal defeats Karnataka moves into final after 2007 for the 1st timeRanji Trophy Bengal defeats Karnataka moves into final after 2007 for the 1st time

ರಣಜಿ ಟ್ರೋಫಿ: ಕರ್ನಾಟಕ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಬಂಗಾಳ

ಫೈನಲ್ ಪ್ರವೇಶಿಸಲು 352 ರನ್‌ಗಳ ಗುರಿ ಪಡೆದ ಕರ್ನಾಟಕ ಮೂರನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಕ್ರೀಸ್ ಕಾಯ್ದುಕೊಂಡಿದ್ದ ಮನೀಶ್ ಪಾಂಡೆ ಹಾಗೂ ದೇವದತ್ ಪಡಿಕ್ಕಲ್ ಮೇಲೆ ನಿರೀಕ್ಷೆಯಿತ್ತು. 

Cricket Mar 3, 2020, 11:29 AM IST

Ranji Trophy Karnataka fightback after lose 2 quick wickets against bengalRanji Trophy Karnataka fightback after lose 2 quick wickets against bengal

ರಣಜಿ ಟ್ರೋಫಿ: ರಾಜ್ಯಕ್ಕೆ ಪಡಿಕ್ಕಲ್ ಆಸರೆ, ಗುರಿ ಇನ್ನೂ ದೂರವಿದೆ..!

352 ರನ್‌ಗಳ ಗುರಿ ಪಡೆದ ಕರ್ನಾಟಕ ಮೊದಲ ಓವರ್‌ನಲ್ಲೇ ಕೆ.ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಸಮರ್ಥ್ ಕೂಡಿಕೊಂಡ ದೇವದತ್ ಪಡಿಕ್ಕಲ್ ಎರಡನೇ ವಿಕೆಟ್‌ಗೆ 57 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಾಕಷ್ಟು ಎಚ್ಚರಿಕೆಯ ಆಟವಾಡುತ್ತಿದ್ದ ಸಮರ್ಥ್ 69 ಎಸೆತಗಳಲ್ಲಿ 2 ಬೌಂಡರಿ ಸಹಿತ 27 ರನ್ ಗಳಿಸಿ ಅಕ್ಷ್ ದೀಪ್‌ಗೆ ವಿಕೆಟ್ ಒಪ್ಪಿಸಿದರು.

Cricket Mar 2, 2020, 6:12 PM IST

Ranji Trophy Bengal set 352 run Target to Karnataka in semi final MatchRanji Trophy Bengal set 352 run Target to Karnataka in semi final Match

ರಣಜಿ ಟ್ರೋಫಿ: ಕರ್ನಾಟಕ ಫೈನಲ್ ಪ್ರವೇಶಿಸಲು 352 ರನ್‌ಗಳ ಗುರಿ

ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದ ಬಂಗಾಳ ತಂಡಕ್ಕೆ ಮೂರನೇ ದಿನದಾಟದಲ್ಲಿ ಅನುಸ್ತೂಪ್(41) ಹಾಗೂ ಶೆಹಬಾಜ್ ಅಹಮ್ಮದ್(31) ಕೆಲಕಾಲ ಕರ್ನಾಟಕ ಬೌಲರ್‌ಗಳನ್ನು ಕಾಡಿದರು.

Cricket Mar 2, 2020, 1:35 PM IST

Ranji Trophy Ishan Porel 5 wickets puts Bengal in driver seat against KarnatakaRanji Trophy Ishan Porel 5 wickets puts Bengal in driver seat against Karnataka

ರಣಜಿ ಟ್ರೋಫಿ: ಬಂಗಾಳ ಎದುರು ರನ್ ಗಳಿಸಲು ಪರದಾಡಿದ ಕರ್ನಾಟಕ

ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ 190 ರನ್‌ಗಳ ಹಿನ್ನಡೆ ಅನುಭವಿಸಿದೆ. ಇನ್ನು 2ನೇ ಇನಿಂಗ್ಸ್ ಆರಂಭಿಸಿರುವ ಬಂಗಾಳ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿದ್ದು, ಒಟ್ಟಾರೆ 262 ರನ್‌ಗಳ ಮುನ್ನಡೆ ಸಾಧಿಸಿದೆ.

Cricket Mar 1, 2020, 6:54 PM IST

Ranji Trophy Anustup Majumdar hits century revives Bengal against KarnatakaRanji Trophy Anustup Majumdar hits century revives Bengal against Karnataka

ರಣಜಿ ಟ್ರೋಫಿ: ಬಂಗಾಳಕ್ಕೆ ಆಸರೆಯಾದ ಮಜುಂದಾರ್

ಇಲ್ಲಿನ ಈಡನ್ ಗಾರ್ಡನ್‌ ಮೈದಾನದಲ್ಲಿ  ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಕರುಣ್ ನಾಯರ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಕರ್ನಾಟಕ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪರಿಣಾಮ ಬಂಗಾಳ ತಂಡ 67 ರನ್ ಗಳಿಸುವಷ್ಟರಲ್ಲಿ 6 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. 

Cricket Feb 29, 2020, 6:25 PM IST

Ranji Trophy Karnataka elects to bowl first against BengalRanji Trophy Karnataka elects to bowl first against Bengal

ರಣಜಿ ಟ್ರೋಫಿ: ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ, DRSನಲ್ಲಿ ರಾಜ್ಯಕ್ಕೆ ಮೊದಲ ಯಶಸ್ಸು

ಇಲ್ಲಿನ ಈಡನ್‌ಗಾರ್ಡನ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಕರುಣ್ ನಾಯರ್ ಫೀಲ್ಡಿಂಗ್ ಆಯ್ದುಕೊಂಡರು. ರಾಜ್ಯ ತಂಡ 7 ಜನ ಬ್ಯಾಟ್ಸ್‌ಮನ್ ಹಾಗೂ ನಾಲ್ಕು ಜನ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದೆ. ಇದೇ ಮೊದಲ ಬಾರಿಗೆ ಡಿಆರ್‌ಎಸ್ ಬಳಸುತ್ತಿದ್ದು, ಮಿಥುನ್ ಮೊದಲ ವಿಕೆಟ್ ಕಬಳಿಸಿದ್ದಾರೆ.

Cricket Feb 29, 2020, 10:07 AM IST

Ranji Trophy consistent Karnataka faces Bengal challengeRanji Trophy consistent Karnataka faces Bengal challenge

ರಣಜಿ ಟ್ರೋಫಿ: ಸೆಮಿಫೈನಲ್‌ ಫೈಟ್‌ಗೆ ಸಜ್ಜಾದ ಕರ್ನಾಟಕ

ಗುಂಪು ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, ಇನ್ನುಳಿದ 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ ಹಂತಕ್ಕೇರಿತ್ತು.

Cricket Feb 29, 2020, 9:26 AM IST

Ranji Trophy KL Rahul included in Karnataka squadRanji Trophy KL Rahul included in Karnataka squad

ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ

ಜಮ್ಮು ಮತ್ತು ಕಾಶ್ಮೀರ ಎದುರು ಕರ್ನಾಟಕ ತಂಡ 167 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಫೆಬ್ರವರಿ 29ರಂದು ಕೋಲ್ಕತಾದ ಈಡನ್ ಗಾರ್ಡನ್‌ ಮೈದಾನದಲ್ಲಿ ಕರ್ನಾಟಕ ತಂಡವು ಬಂಗಾಳ ವಿರುದ್ಧ ಸೆಣಸಲಿದೆ.

Cricket Feb 25, 2020, 2:14 PM IST

Ranji Trophy Karnataka thrash Jammu Kashmir by 167 runs and enter semifinalRanji Trophy Karnataka thrash Jammu Kashmir by 167 runs and enter semifinal

ರಣಜಿ ಟ್ರೋಫಿ: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಕರ್ನಾಟಕ ನೀಡಿದ್ದ 331 ರನ್‌ಗಳ ಗುರಿ ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ 4ನೇ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಸಿದ್ಧ್ ಕೃಷ್ಣ ರಾಜ್ಯ ತಂಡಕ್ಕೆ ಮೊದಲ ಯಸಸ್ಸು ದಕ್ಕಿಸಿಕೊಟ್ಟರು. ಆ ಬಳಿಕ  ಕೃಷ್ಣಪ್ಪ ಗೌತಮ್ 7 ವಿಕೆಟ್ ಕಬಳಿಸುವ ಅಕ್ಷರಶಃ ಮ್ಯಾಜಿಕ್ ಮಾಡಿದರು.

Cricket Feb 24, 2020, 3:54 PM IST

Ranji Trophy Karnataka set 331 runs target to Jammu and KashmirRanji Trophy Karnataka set 331 runs target to Jammu and Kashmir

ರಣಜಿ ಟ್ರೋಫಿ: ಜಮ್ಮು-ಕಾಶ್ಮೀರಕ್ಕೆ 331 ರನ್‌ಗಳ ಗುರಿ ನೀಡಿದ ಕರ್ನಾಟಕ

ನಾಲ್ಕನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡವು 4 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿ ಒಟ್ಟಾರೆ 259 ರನ್‌ಗಳ ಮುನ್ನಡೆ ಸಾಧಿಸಿತ್ತು. ಇನ್ನು ನಾಲ್ಕನೇ ದಿನದಾಟದಲ್ಲೂ ಕರ್ನಾಟಕ ತನ್ನ ಖಾತೆಗೆ 30 ಸೇರಿಸಿತು. ಈ ವೇಳೆ ಶತಕದ ಹೊಸ್ತಿಲಲ್ಲಿ ಸಿದ್ಧಾರ್ಥ್(98) ಆಬೀದ್ ಮುಷ್ತಾಕ್‌ಗೆ ವಿಕೆಟ್ ಒಪ್ಪಿಸಿದರು. 

Cricket Feb 24, 2020, 12:39 PM IST

Ranji Trophy Karnataka 14 runs FIL against Jammu and KashmirRanji Trophy Karnataka 14 runs FIL against Jammu and Kashmir

ರಣಜಿ ಟ್ರೋಫಿ: ಕರ್ನಾಟಕಕ್ಕೆ ರೋಚಕ 14 ರನ್‌ಗಳ ಇನಿಂಗ್ಸ್ ಮುನ್ನಡೆ

ಮಳೆಯಾಟದ ನಡುವೆಯೂ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 206 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೂರನೇ ದಿನದಾಟದಂತ್ಯಕ್ಕೆ ಜುಮ್ಮು ತಂಡ 2 ವಿಕೆಟ್ ಕಳೆದುಕೊಂಡು 88 ರನ್ ಬಾರಿಸಿತ್ತು. ಇನ್ನು 4  ದಿನದಾಟದಲ್ಲಿ ಕರ್ನಾಟಕ ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ಇನಿಂಗ್ಸ್ ಮುನ್ನಡೆಗೆ ಕಾರಣರಾದರು. 

Cricket Feb 23, 2020, 12:26 PM IST

Ranji Trophy Karnataka all out in First Innings 206 against Jammu and KashmirRanji Trophy Karnataka all out in First Innings 206 against Jammu and Kashmir

ರಣಜಿ ಟ್ರೋಫಿ: ಕರ್ನಾಟಕ ಆಲೌಟ್ @206

ಇಲ್ಲಿನ ಗಾಂಧಿ ಮೆಮೋರಿಯಲ್ ಸೈನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ಕರ್ನಾಟಕ-ಜಮ್ಮು ಮತ್ತು ಕಾಶ್ಮೀರ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಮೊದಲ ದಿನ ಕೇವಲ 6 ಓವರ್ ಬೌಲಿಂಗ್ ಮಾಡಲಷ್ಟೇ ಸಾಧ್ಯವಾಗಿತ್ತು. 

Cricket Feb 22, 2020, 3:48 PM IST

Ranji Trophy Day two of  Jammu and Kashmir Karnataka washed outRanji Trophy Day two of  Jammu and Kashmir Karnataka washed out

ರಣಜಿ ಟ್ರೋಫಿ: ಮೊನ್ನೆ ಸುರಿದ ಮಳೆಗೆ ನಿನ್ನೆ ಇಡೀ ದಿನದಾಟ ಬಲಿ!

ಪಿಚ್‌ಗೆ ಹೊದಿಸಿದ್ದ ಹೊದಿಕೆಯಿಂದ ನೀರು ಸೋರಿದ ಕಾರಣ, ಪಿಚ್‌ ಒದ್ದೆಯಾಗಿತ್ತು. ಪಿಚ್‌ ಒಣಗಿಸಲು ಮೈದಾನ ಸಿಬ್ಬಂದಿ ಹರಸಾಹಸ ಪಟ್ಟರು. 5 ಬಾರಿ ಅಂಪೈರ್‌ಗಳು ಪರಿಶೀಲನೆ ನಡೆಸಿದರು. ಆದರೆ ಮೈದಾನ ಆಟಕ್ಕೆ ಯೋಗ್ಯವಾಗಿರಲಿಲ್ಲ. 

Cricket Feb 22, 2020, 10:28 AM IST

Ranji Trophy Karnataka vs Jammu and Kashmir weather play major play 1st dayRanji Trophy Karnataka vs Jammu and Kashmir weather play major play 1st day

ರಣಜಿ ಟೂರ್ನಿ ಕ್ವಾರ್ಟರ್‌ಗೆ ಬೆಳಕು ಅಡ್ಡಿ

ಟಾಸ್‌ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಕೇವಲ 6 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ಕರ್ನಾಟಕದ ಆರ್‌.ಸಮರ್ಥ್ (5) ದೇವದತ್‌ ಪಡಿಕ್ಕಲ್‌ (2) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ ಸೇರಿದರು. ನಾಯಕ ಕರುಣ್‌ ನಾಯರ್‌ (4), ಕೆ.ವಿ. ಸಿದ್ಧಾಥ್‌ರ್‍ ಖಾತೆ ತೆರೆಯದೇ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Cricket Feb 21, 2020, 9:21 AM IST