Hockey India  

(Search results - 196)
 • Indian Hockey Players Clean sweeps FIH annual awards kvnIndian Hockey Players Clean sweeps FIH annual awards kvn

  HockeyOct 7, 2021, 8:37 AM IST

  FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ತಂಡದಲ್ಲಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಪುರುಷರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಐತಿಹಾಸಿಕ 4ನೇ ಸ್ಥಾನ ಪಡೆದ ಮಹಿಳಾ ತಂಡದ ಸದಸ್ಯೆ ಗುರ್ಜೀತ್‌ ಕೌರ್‌ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

 • India to not send hockey teams to Commonwealth Games in 2022 Says Hockey India kvnIndia to not send hockey teams to Commonwealth Games in 2022 Says Hockey India kvn

  HockeyOct 6, 2021, 8:10 AM IST

  ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿದ ಭಾರತ ಹಾಕಿ ತಂಡ..!

  ಕಾಮನ್‌ವೆಲ್ತ್‌ ಗೇಮ್ಸ್‌ ಮುಕ್ತಾಯಗೊಂಡ ಕೇವಲ 32 ದಿನಗಳಲ್ಲಿ ಚೀನಾದಲ್ಲಿ ಏಷ್ಯನ್‌ ಗೇಮ್ಸ್‌ ಸೆಪ್ಟೆಂಬರ್ 10ರಿಂದ 25ರ ವರೆಗೆ ನಡೆಯಲಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಜಯಿಸಿದರೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ದೊರೆಯಲಿದೆ. ಹೀಗಾಗಿ, ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ ನಡೆಸುವ ಹಾಗೂ ಆಟಗಾರರು ಆರೋಗ್ಯವಾಗಿರುವಂತೆ ಎಚ್ಚರ ವಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 

 • Indian Star striker SV Sunil retires from international hockey kvnIndian Star striker SV Sunil retires from international hockey kvn

  HockeyOct 2, 2021, 11:18 AM IST

  ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ ವಿ ಸುನಿಲ್‌ ಗುಡ್‌ಬೈ

  2012, 2016ರ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದ ಸುನಿಲ್‌, 2011ರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿನ್ನ, 2012ರಲ್ಲಿ ಇದೇ ಟೂರ್ನಿಯಲ್ಲಿ ಬೆಳ್ಳಿ ಗೆದ್ದ ಭಾರತ ತಂಡದಲ್ಲಿದ್ದರು. 

 • Tokyo Olympics hero Rupinder Pal Singh retires from Indian hockey team kvnTokyo Olympics hero Rupinder Pal Singh retires from Indian hockey team kvn

  HockeySep 30, 2021, 6:07 PM IST

  ಹಾಕಿಗೆ ಗುಡ್‌ ಬೈ ಹೇಳಿದ ಒಲಿಂಪಿಕ್ಸ್‌ ಹೀರೋ ರೂಪಿಂದರ್ ಪಾಲ್ ಸಿಂಗ್

  30 ವರ್ಷದ ರೂಪಿಂದರ್ ಪಾಲ್‌ ಸಿಂಗ್ ಭಾರತ ಹಾಕಿ ಕಂಡಂತಹ ಶ್ರೇಷ್ಠ ಡ್ರ್ಯಾಗ್‌ ಫ್ಲಿಕ್ಕರ್‌ಗಳಲ್ಲಿ ಒಬ್ಬರು ಎನಿಸಿದ್ದರು. ಭಾರತ ಪರ 223 ಪಂದ್ಯಗಳನ್ನಾಡಿ ದೇಶಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 'ಬಾಬ್‌' ಎನ್ನುವ ನಿಕ್‌ನೇಮ್‌ ಹೊಂದಿದ್ದ ರೂಪಿಂದರ್ ಪಾಲ್ ಸಿಂಗ್ 4 ಮಹತ್ವದ ಗೋಲುಗಳನ್ನು ದಾಖಲಿಸಿದ್ದರು. ಅದರಲ್ಲಿ ಜರ್ಮನಿ ವಿರುದ್ದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿನ ಪೆನಾಲ್ಟಿ ಸ್ಟ್ರೋಕ್ ಗೋಲು ಕೂಡಾ ಒಂದೆನಿಸಿದೆ.

 • Odisha to host FIH Hockey Junior World Cup 2021 kvnOdisha to host FIH Hockey Junior World Cup 2021 kvn

  HockeySep 24, 2021, 11:32 AM IST

  Junior Hockey World Cup: ಕಿರಿಯರ ಹಾಕಿ ವಿಶ್ವಕಪ್‌ಗೆ ಈ ಬಾರಿ ಒಡಿಶಾ ಆತಿಥ್ಯ

  ಜೂನಿಯರ್‌ ವಿಶ್ವಕಪ್‌ಗೆ ನೆರವು ನೀಡುವಂತೆ ಹಾಕಿ ಇಂಡಿಯಾ ಇತ್ತೀಚೆಗೆ ಕೇಳಿಕೊಂಡಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ, ಕೊರೋನಾದಂತಹ ಕಾಲದಲ್ಲಿ ಇಷ್ಟು ದೊಡ್ಡ ಪಂದ್ಯಾವಳಿಗೆ ಸಿದ್ಧತೆ ನಡೆಸುವುದು ಸವಾಲಿನ ಕೆಲಸ. ದೇಶದ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಇದಕ್ಕೆ ಸಮ್ಮತಿ ನೀಡಿಲಾಯಿತು ಎಂದಿದ್ದಾರೆ.

 • Hockey Karnataka Felicitate Coach Ankita and Umpire Raghu in Bengaluru kvnHockey Karnataka Felicitate Coach Ankita and Umpire Raghu in Bengaluru kvn

  HockeySep 16, 2021, 8:53 AM IST

  ಹಾಕಿ ಕೋಚ್‌ ಅಂಕಿತಾ, ಅಂಪೈರ್‌ ರಘುಗೆ ಹಾಕಿ ಕರ್ನಾಟಕದಿಂದ ಸನ್ಮಾನ

  ಇದೇ ವೇಳೆ ಹಿರಿಯ ಹಾಕಿ ಆಟಗಾರ ಎಸ್‌.ವಿ.ಸುನಿಲ್‌ ಹಾಗೂ ಪುರುಷರ ಕಿರಿಯರ ತಂಡದ ಕೋಚ್‌ ಬಿ.ಜೆ.ಕಾರ್ಯಪ್ಪ ಅವರನ್ನು ಸನ್ಮಾನ ಮಾಡಲಾಯಿತು. ಇಬ್ಬರಿಗೂ ಕ್ರಮವಾಗಿ 2 ಲಕ್ಷ ರು. ಹಾಗೂ 1 ಲಕ್ಷ ರು. ನಗದು ಬಹುಮಾನ ಹಸ್ತಾಂತರಿಸಲಾಯಿತು. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಕ್ರೀಡಾ ಸಾಧಕರನ್ನು ಸನ್ಮಾನಿಸಿದರು.

 • Indian hockey teams unlikely to compete in Birmingham Commonwealth Games 2022 Says Narinder Batra kvnIndian hockey teams unlikely to compete in Birmingham Commonwealth Games 2022 Says Narinder Batra kvn

  HockeySep 4, 2021, 1:52 PM IST

  ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

  2022ರ ಏಷ್ಯನ್‌ ಗೇಮ್ಸ್‌ನ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಕಾರಣ, ಅಲ್ಲಿ ಉತ್ತಮ ಪ್ರದರ್ಶನ ತೋರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಮುಖ್ಯಸ್ಥರೂ ಅಗಿರುವ ಬಾತ್ರಾ ಹೇಳಿದ್ದಾರೆ. 

 • Indian Womens Hockey Team Assistant Coach Ankita Suresh Shares Tokyo Olympic Journey kvnIndian Womens Hockey Team Assistant Coach Ankita Suresh Shares Tokyo Olympic Journey kvn
  Video Icon

  HockeyAug 26, 2021, 4:24 PM IST

  ಟೋಕಿಯೋ 2020: 'ರಾಣಿ ಪಡೆ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ರೋಮಾಂಚಕ ಅನುಭವ'

  ಗ್ರೇಟ್ ಬ್ರಿಟನ್ ವಿರುದ್ದದ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ನಮ್ಮ ತಂಡಕ್ಕೆ ಪದಕ ಗೆಲ್ಲುವ ಅವಕಾಶ ಹೆಚ್ಚಿತ್ತು. ಆದರೆ ಅದೃಷ್ಟ ಅವರ ಪರವಾಗಿತ್ತು. ಗ್ರೇಟ್ ಬ್ರಿಟನ್ ತಂಡದವರು ನಮ್ಮನ್ನು ಸಮಾಧಾನ ಮಾಡುವಾಗ ನಮಗೆ ಹೆಮ್ಮೆ ಅನ್ನಿಸ್ತು ಎಂದು ಅಂಕಿತಾ ಸುರೇಶ್‌ ಹೇಳಿದ್ದಾರೆ. ಅಂಕಿತಾ ಸುರೇಶ್ ಸಂಪೂರ್ಣ ಸಂದರ್ಶನ ಇಲ್ಲಿದೆ.

 • Tokyo 2020 PR Sreejesh to Savita Punia Many Indian Hockey Stars Nominated for FIH awards kvnTokyo 2020 PR Sreejesh to Savita Punia Many Indian Hockey Stars Nominated for FIH awards kvn

  HockeyAug 24, 2021, 12:42 PM IST

  ಟೋಕಿಯೋ 2020: ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ?

  ಪಿ.ಆರ್‌.ಶ್ರಿಜೇಶ್‌ ಹಾಗೂ ಸವಿತಾ ಪೂನಿಯಾರನ್ನು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ತಂಡದ ವರ್ಷದ ಗೋಲ್‌ಕೀಪರ್‌ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಪುರುಷರ ತಂಡದ ಕೋಚ್‌ ಗ್ರಹಂ ರೀಡ್‌, ಮಹಿಳಾ ತಂಡದ ಮಾಜಿ ಕೋಚ್‌ ಸೋರ್ಡ್‌ ಮರಿನೆ ಹೆಸರು ವರ್ಷದ ಕೋಚ್‌ ಪ್ರಶಸ್ತಿಗೆ, ಮಹಿಳಾ ತಂಡದ ಆಟಗಾರ್ತಿ ಶರ್ಮಿಲಾ ದೇವಿ ಹೆಸರು ಉದಯೋನ್ಮುಖ ತಾರೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
   

 • Tokyo 2020 Punjab renames 10 government schools after Olympics India hockey Players kvnTokyo 2020 Punjab renames 10 government schools after Olympics India hockey Players kvn

  HockeyAug 23, 2021, 3:58 PM IST

  ಟೋಕಿಯೋ 2020: ಪಂಜಾಬಿನ 10 ಸರ್ಕಾರಿ ಶಾಲೆಗಳಿಗೆ ಹಾಕಿ ಆಟಗಾರರ ಹೆಸರು..!

  1980ರ ಬಳಿಕ ಅಂದರೆ ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿತ್ತು. ಒಲಿಂಪಿಕ್ಸ್‌ನಲ್ಲಿ 8 ಚಿನ್ನದ ಪದಕಗಳನ್ನು ಜಯಿಸಿದ ಸಾಧನೆ ಮಾಡಿದ್ದ ಭಾರತೀಯ ಹಾಕಿ ತಂಡವು ಕಳೆದ 4 ದಶಕಗಳಿಂದ ಪದಕ ಗೆಲ್ಲಲು ವಿಫಲವಾಗಿತ್ತು.

 • Odisha CM Naveen Patnaik Announces to another 10 years sponsor Indian hockey teams kvnOdisha CM Naveen Patnaik Announces to another 10 years sponsor Indian hockey teams kvn

  HockeyAug 19, 2021, 10:51 AM IST

  ಭಾರತ ಹಾಕಿಗೆ ಇನ್ನೂ 10 ವರ್ಷ ಒಡಿಶಾ ಸರ್ಕಾರ ಪ್ರಾಯೋಜಕತ್ವ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಹಾಕಿ ಆಟಗಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ತಲಾ 10 ಲಕ್ಷ ರು. ಬಹುಮಾನ ನೀಡಿದ ಅವರು, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಿಸಿದರು.

 • Tokyo 2020 PR Sreejesh Happy After Dhyan Chand Khel Ratna Award by PM Modi kvnTokyo 2020 PR Sreejesh Happy After Dhyan Chand Khel Ratna Award by PM Modi kvn
  Video Icon

  OTHER SPORTSAug 17, 2021, 6:00 PM IST

  ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್‌ ಚಂದ್ ಹೆಸರಿಟ್ಟಿರುವುದು ಖುಷಿಕೊಟ್ಟಿದೆ: ಶ್ರೀಜೇಶ್

  ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜತೆ ಮುಕ್ತವಾಗಿ, ಆಪ್ತವಾಗಿ ಮಾತನಾಡಿದರು. ಇಡೀ ದೇಶವೇ ನಿಮ್ಮ ಸಾಧನೆಯನ್ನು ಹೆಮ್ಮೆಪಡುತ್ತಿದೆ ಎಂದಾಗ ನಮಗೆಲ್ಲರಿಗೂ ಖುಷಿಯಾಯಿತು ಎಂದು ಶ್ರೀಜೇಶ್ ಹೇಳಿದ್ದಾರೆ. ಬರೋಬ್ಬರಿ 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಸಾಧನೆ ಮಾಡಿದೆ.
   

 • Karnataka CM Basavaraj Bommai Felicitate Indian Womens Hockey Assistant Coach Ankita Suresh in Bengaluru kvnKarnataka CM Basavaraj Bommai Felicitate Indian Womens Hockey Assistant Coach Ankita Suresh in Bengaluru kvn

  HockeyAug 14, 2021, 12:58 PM IST

  ಮಹಿಳಾ ಹಾಕಿ ಕೋಚ್‌ ಅಂಕಿತಾ ಸುರೇಶ್‌ಗೆ ಸಿಎಂ ಬೊಮ್ಮಾಯಿ ಸನ್ಮಾನ

  ಟೋಕಿಯೋ ಒಲಿಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದೆ. ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ಹಾಕಿ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ.

 • Tokyo 2020 Meet the 16 Women Who Scripted Indian Womens Hockey Team New Height in Olympics kvnTokyo 2020 Meet the 16 Women Who Scripted Indian Womens Hockey Team New Height in Olympics kvn

  OlympicsAug 7, 2021, 3:06 PM IST

  ಟೋಕಿಯೋ 2020: ಬಡತನ, ಅವಮಾನ ಮೀರಿ ಹಾಕಿ ತಾರೆಯರಾದ 16 ಸಾಧಕಿಯರು!

  ತಂಡದಲ್ಲಿರುವ ಎಲ್ಲಾ 16 ಆಟಗಾರ್ತಿಯರು ತಮ್ಮ ಜೀವನದುದ್ದಕ್ಕೂ ಬಡತನ, ಅವಮಾನ, ಸಂಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. 2012ರ ವರೆಗೂ ಆಟಗಾರ್ತಿಯರು ಸರ್ಕಾರಿ ನೌಕರಿ, ಕ್ವಾಟ್ರಸ್‌ಗಾಗಿ ಅಷ್ಟೇ ಹಾಕಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. 2012ರ ನಂತರವೇ ಮಹಿಳಾ ಹಾಕಿಗೆ ಮಹತ್ವ ಸಿಕ್ಕಿದ್ದು.

 • Tokyo Olympics Exclusive Interview with Indian Womens Hockey Assistance Coach Ankita Suresh kvnTokyo Olympics Exclusive Interview with Indian Womens Hockey Assistance Coach Ankita Suresh kvn

  OlympicsAug 7, 2021, 1:11 PM IST

  ಹಾಕಿ ಸಹಾಯಕ ಕೋಚ್ ಸಂದರ್ಶನ: ಜಗತ್ತಿನೆದುರು ನಮ್ಮ ಶಕ್ತಿ, ಸಾಮರ್ಥ್ಯ ಅನಾವರಣಗೊಳಿಸಿದ್ದೇವೆ..!

  ತಂಡದ ಸಹಾಯಕ ಕೋಚ್‌ ಆಗಿದ್ದವರು, ಕರ್ನಾಟಕದ ಕೊಡಗು ಜಿಲ್ಲೆಯ ಅಂಕಿತಾ ಸುರೇಶ್‌. ಅವರು ಟೋಕಿಯೋದಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.