ಕೊರೋನಾ ಭೀತಿಯಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದ್ದ 5ನೇ ಆವೃತ್ತಿಯ ಪಿಎಸ್ಎಲ್ ಲೀಗ್ ಟೂರ್ನಿಯು ಶನಿವಾರ(ನ.14)ದಿಂದ ಆರಂಭವಾಯಿತು. ಮೊದಲ ಪ್ಲೇ ಆಫ್ ಪಂದ್ಯ ಆರಂಭಕ್ಕೂ ಮುನ್ನ ಕಳೆದ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಖ್ಯಾತ ವೀಕ್ಷಕ ವಿವರಣೆಗಾರ ಡೀನೋಗೆ ಕರಾಚಿ ಕಿಂಗ್ಸ್ ಹಾಗೂ ಮುಲ್ತಾನ್ ಸುಲ್ತಾನ್ಸ್ ತಂಡಗಳು 'D' ಆಕಾರದಲ್ಲಿ ನಿಂತು ಗೌರವ ಸಲ್ಲಿಸಿದವು. ಈ ವರ್ಷಾರಂಭದಲ್ಲಿ ಡೀನೋ ಕರಾಚಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
Cricket Nov 15, 2020, 11:51 AM IST
ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಮಂಗಳವಾರ(ಸೆ.22)ರಂದು ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದರು. ಮುಂಬೈನ ಹೋಟೆಲ್ನಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ಡೀನ್ ಝೋನ್ಸ್ ಹೃದಯಸ್ತಂಭನಕ್ಕೆ ಒಳಗಾದ ವೇಳೆ ಅದೇ ಹೋಟೆಲ್ನಲ್ಲಿ ಪಕ್ಕದಲ್ಲೇ ಇದ್ದ ಆಸೀಸ್ ಮಾಜಿ ಕ್ರಿಕೆಟಿಗ ಬ್ರೆಟ್ ಲೀ, ಡೀನ್ ಜೋನ್ಸ್ ಅವರ ಜೀವ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ.
IPL Sep 26, 2020, 2:47 PM IST
ಬೆಂಗಳೂರು(ಸೆ.24): ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಗುರುವಾರ(ಸೆ.24) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೃದಯಘಾತದಿಂದಾಗಿ ಡೀನ್ ಜೋನ್ಸ್ ಇಹಲೋಕ ಯಾತ್ರೆ ಮುಗಿಸಿದ್ದಾರೆ. 2020ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೀಕ್ಷಕ ವಿವರಣೆಗಾರ ಪ್ಯಾನಲ್ನಲ್ಲಿದ್ದ ಡೀನ್ ಜೋನ್ಸ್ ಮುಂಬೈನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ 2020ರ ಕರಾಳ ಅಧ್ಯಾಯಕ್ಕೆ ಮತ್ತೊಂದು ಸೇರ್ಪಡೆಯಾದಂತೆ ಆಗಿದೆ. ಡೀನ್ ನಿಧನಕ್ಕೆ ಕ್ರಿಕೆಟ್ ಜಗತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕಂಬನಿ ಮಿಡಿದಿದೆ.
Cricket Sep 24, 2020, 6:51 PM IST
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಐಪಿಎಲ್ ಕಾಮೆಂಟೇಟರಿ ಮಾಡುತ್ತಿದ್ದ ಡೀನ್ ಜೋನ್ಸ್ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. 1984ರಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಜೋನ್ಸ್ 52 ಟೆಸ್ಟ್ ಹಾಗೂ 192 ಏಕದಿನ ಪಂದ್ಯಗಳನ್ನಾಡಿ 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
Cricket Sep 24, 2020, 4:41 PM IST
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ಸಂಜೆ 7.29 ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು. 16 ವರ್ಷಗಳ ಭಾರತ ತಂಡದ ಆಧಾರಸ್ತಂಭವಾಗಿದ್ದ ಧೋನಿ ಹಲವಾರು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ.
ಧೋನಿ ಬರೀ ಆಟಗಾರನ್ನಲ್ಲ. ಅವರಲ್ಲೊಬ್ಬ ಕೆಚ್ಚೆದೆಯ ನಾಯಕನಿದ್ದ, ಸ್ಪೋಟಕ ಬ್ಯಾಟ್ಸ್ಮನ್ ಇದ್ದ, ಚಾಣಾಕ್ಷ ವಿಕೆಟ್ ಕೀಪರ್ ಇದ್ದ. ಈ ಎಲ್ಲಾ ಕೌಶಲ್ಯಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಧೋನಿ ಇಂದು ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ಆದರೆ ಧೋನಿ ನಿವೃತ್ತಿಯಾದ ದಿನ ಟೀಂ ಇಂಡಿಯಾದ ಇಬ್ಬರು ಆಟಗಾರರು ಕೊನೆಗೂ ನಿಟ್ಟುಸಿರು ಬಿಟ್ಟರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೇಳಿದ್ದಾರೆ. ಯಾರು ಆ ಆಟಗಾರರು? ಯಾಕೆ ಹೀಗಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket Aug 19, 2020, 3:24 PM IST
Sep 19, 2017, 4:35 PM IST