ಕಳೆದ 10 ವರ್ಷಗಳಲ್ಲಿ ಪ್ರಧಾನಿಗೆ ರೈತರ ಆರ್ತನಾದ ಕೇಳಿಸಿಲ್ಲ. ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ವರದಿ ಜಾರಿಗೊಳಿಸಿದ್ದರೇ ರೈತರು ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಗುಳೇ ಬರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿಡಿಕಾರಿದರು.
Politics Apr 19, 2024, 6:03 AM IST
ಗಂಟೆಗೆ 250 ಕಿ.ಮೀ. ವೇಗದಲ್ಲಿ ಸಂಚರಿಸುವ ಸ್ವದೇಶಿ ಬುಲೆಟ್ ರೈಲು ಅಭಿವೃದ್ಧಿಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆ ಪ್ರಾರಂಭಿಸಿದೆ. ದೇಶದಲ್ಲಿ ಸದ್ಯ ಯಾವ ರೈಲು ಕೂಡ ಇಷ್ಟು ವೇಗವನ್ನು ಹೊಂದಿಲ್ಲ.
India Apr 19, 2024, 4:22 AM IST
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಮೇಲೆ ಇಡಿ ಕಣ್ಣಿಟ್ಟಿದ್ದು, ಈಗ ಈ ದಂಪತಿಗೆ ಸೇರಿದ 97ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ವರದಿ ಆಗಿದೆ.
Cine World Apr 18, 2024, 12:34 PM IST
ಯಾವೊಂದು ಸಾಕ್ಷ್ಯವಿಲ್ಲದಿದ್ದರೂ ಅನೈತಿಕ ಸಂಬಂಧ ಬೆಳೆಸಿದ ಅನುಮಾನದ ಮೇಲೆ ಮಹಿಳೆಯೊಬ್ಬಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ ಎಂಟು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದ ಒಂದೇ ಕುಟುಂಬದ ಮೂವರಿಗೆ ಹೈಕೋರ್ಟ್ ಬಿಡುಗಡೆ ಭಾಗ್ಯ ಕಲ್ಪಿಸಿದೆ.
state Apr 18, 2024, 11:52 AM IST
ಬಹುತೇಕರು ಹಗಲಿನ ವೇಳೆಯಲ್ಲಿ ನಿದ್ದೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಈ ನಿದ್ದೆ ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹಗಲಿನ ವೇಳೆ ಮಾಡೋ ನಿದ್ದೆ ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
Health Apr 17, 2024, 4:27 PM IST
ಒಂದು ವೇಳೆ ಇರಾನ್ ಮತ್ತು ಇಸ್ರೇಲ್ ನಡುವೆ ನೇರ ಯುದ್ಧವೇನಾದರೂ ಸಂಭವಿಸಿದರೆ, ಅದರಿಂದಾಗಿ ಪಾಕಿಸ್ತಾನದ ಮೇಲೆ ತೀವ್ರ ಆರ್ಥಿಕ ಪರಿಣಾಮ ಉಂಟಾಗಲಿದೆ ಎಂದು ಅಧಿಕಾರಿಗಳ ವಲಯವೂ ಒಪ್ಪಿಕೊಂಡಿದೆ.
International Apr 17, 2024, 2:04 PM IST
'ಹಮ್ ಘರ್ ಮೇ ಗುಸ್ ಕೆ ಮಾರೇಂಗೆ' ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಈ ಹೇಳಿಕೆ ಇತ್ತೀಚೆಗಷ್ಟೇ ಸಾಕಷ್ಟು ಸದ್ದು ಮಾಡುತ್ತಿದ್ದು, ಈಗ ಈ ಹೇಳಿಕೆಗೆ ಅಮೆರಿಕಾ ಪ್ರತಿಕ್ರಿಯಿಸಿದೆ.
International Apr 17, 2024, 11:31 AM IST
ಬೆಂಗಳೂರಿನಲ್ಲಿ ಈ ಬಾರಿ ಮಳೆ ಕಾಣದಾಗಿದ್ದು, IMD ಪ್ರಕಾರ ಬೆಂಗಳೂರು ನಗರವು ಮಳೆಯಿಲ್ಲದ ಸತತ 146 ದಿನಗಳ ಸುದೀರ್ಘ ಸಮಯವನ್ನು ಕಳೆದಿದೆ.
state Apr 16, 2024, 11:22 AM IST
ಬಿಸಿಲಿನ ಬೇಗೆಯಲ್ಲಿ ಬಂದಿರುವ ಜನರಿಗೆ ಹವಾಮಾನ ಇಲಾಖೆ ಮುನ್ಸೂಚನೆ ಒಂದಿಷ್ಟು ತಂಪೆರಿದಿದೆ. ಈ ಬಾರಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇದರ ಜೊತೆಗೆ ನೀಡಿರುವ ಕೆಲ ಮಹತ್ವದ ಸೂಚನೆ ಆತಂಕ ಹೆಚ್ಚಿಸಿದೆ.
India Apr 15, 2024, 5:50 PM IST
ಜೀವನ ನಿರ್ವಹಣೆಗೆ ಪಾಕಿಸ್ತಾನ ಏಷ್ಯಾದಲ್ಲೇ ಅತ್ಯಂತ ದುಬಾರಿ ರಾಷ್ಟ್ರವಾಗಿದೆ. ಇಲ್ಲಿ ಹಣದುಬ್ಬರ ಕೂಡ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಎಡಿಬಿ ವರದಿ ತಿಳಿಸಿದೆ.
BUSINESS Apr 13, 2024, 5:30 PM IST
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಎಂಆರ್‌ಸಿಎಐ ವಿದ್ಯಾರ್ಥಿನಿಲಯದ ಇಬ್ಬರು ಮಾತ್ರವಲ್ಲದೆ ವಿದ್ಯಾರ್ಥಿನಿಯರಿಗೆ ಎಚ್.ಎಸ್.ಆರ್ ಬಡಾವಣೆಯ ಜಗದೀಶ್ ಎಂಬುವ ವರಿಗೂ ಕಾಲರಾ ದೃಢಪಟ್ಟಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ 10 ರಿಂದ 13ಕ್ಕೆ ಏರಿಕೆಯಾಗಿದೆ. ಇನ್ನು ಜನವರಿಯಲ್ಲಿ ರಾಮನಗರದಲ್ಲಿ ವರದಿಯಾದ ಪ್ರಕರಣ ಸೇರಿ ಪ್ರಸಕ್ತ ವರ್ಷ ರಾಜ್ಯದಲ್ಲಿ 14 ಪ್ರಕರಣ ವರದಿಯಾದಂತಾಗಿದೆ.
Karnataka Districts Apr 9, 2024, 9:42 AM IST
2019 ಹಾಗೂ 2021ರ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಹಸ್ತಕ್ಷೇಪ ಮಾಡಿವೆ ಎಂದು ಅಲ್ಲಿನ ಗುಪ್ತಚರ ಸಂಸ್ಥೆ ನಡೆಸಿದ ತನಿಖಾ ವರದಿ ಆರೋಪಿಸಿದೆ.
International Apr 8, 2024, 10:45 AM IST
ಮೋದಿ ಹ್ಯಾಟ್ರಿಕ್ ಗೆಲುವು ತಡೆಯಲು ಚೀನಾ ಸಂಚು
ಚೀನಾ ಷ್ಯಡ್ಯಂತ್ರದ ಎಚ್ಚರಿಕೆ ಕೊಟ್ಟ ಮೈಕ್ರೋಸಾಫ್ಟ್
AI ಮೂಲಕ ಬ್ಯಾಡ್ ವೈರಸ್ ಹರಡಿಸಲು ಚೀನಾ ಸಂಚು
India Apr 8, 2024, 10:09 AM IST
ಬಿ.ಪ್ಯಾಕ್ ಸಂಸ್ಥೆ ಬೆಂಗಳೂರಿನ ಮೂವರು ಸಂಸದರು ಸಂಸತ್ ಅಧಿವೇಶನಗಳಲ್ಲಿ ಭಾಗವಹಿಸಿದ್ದ ಅವಧಿ ಮತ್ತು ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅನುದಾನ ಬಳಕೆ ಕುರಿತ ವರದಿಯನ್ನು ಶನಿವಾರ ಬಿಡುಗಡೆ ಮಾಡಿದೆ.
Politics Apr 7, 2024, 11:12 AM IST
ಉತ್ತರ ಕೊರಿಯಾದ ಬೆಂಬಲದೊಂದಿಗೆ ಚೀನಾ ಬೆಂಬಲಿತ ಸೈಬರ್ ಗ್ರೂಪ್‌ಗಳು, ಭಾರತ, ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಮೇಲೆ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿದೆ ಎಂದು ಮೈಕ್ರೋಸಾಫ್ಟ್ ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ.
India Apr 6, 2024, 4:43 PM IST