ಕಳೆದ ವರ್ಷ ಕೇರಳ, ಕೊಡಗು... ಈ ವರ್ಷ ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ಗುಡ್ಡ ಕುಸಿತ, ಪಶ್ಚಿಮ ಘಟ್ಟವಾಸಕ್ಕೆ ಅಪಾಯಕಾರಿಯೇ?| ಕಾಡು ಬೋಳಾಗಿ, ನೀರು ಹಿಡಿದಿಟ್ಟುಕೊಳ್ಳದ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿದೆ ಎಂಬ ಹಳೆಯ ವಾದವನ್ನು ಪುನಃ ಪರಿಶೀಲಿಸಬೇಕಿದೆ. ಈ ವರ್ಷ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಗಳಲ್ಲಿ ಮಾನವನ ಹಸ್ತಕ್ಷೇಪವೇ ಆಗಿಲ್ಲದ ಜಾಗಗಳು ಹೆಚ್ಚಿವೆ. ಹಾಗಿದ್ದರೆ ಪಶ್ಚಿಮ ಘಟ್ಟದ ಭೂತಳದಲ್ಲಿ ನೈಸರ್ಗಿಕವಾಗಿಯೇ ಏನಾದರೂ ವಿದ್ಯಮಾನ ಘಟಿಸುತ್ತಿದೆಯೇ? ಅಧ್ಯಯನ ನಡೆಯಬೇಕಿದೆ.
NEWS Sep 10, 2019, 4:32 PM IST
ಹಾಸನಕ್ಕೆ ಪ್ರವಾಹ ಪರಿಹಾರಕ್ಕೆ ಕೊಟ್ಟ 200 ಕೋಟಿ ಹಣ ಎಲ್ಲಿಯೂ ಸಾಲದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
Karnataka Districts Sep 10, 2019, 3:01 PM IST
ಮಡಿಕೇರಿಯಲ್ಲಿ ಮಳೆ ಮುಂದುವರಿದಿದ್ದು, ಭಾಗಮಂಡಲ ಪ್ರದೇಶ ಸೇರಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಜಿಲ್ಲೆಯಾದ್ಯಂತ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಭಾಗಮಂಡಲ ಸಮೀಪದ ಬ್ರಹ್ಮಗಿರಿ ಸುತ್ತಮುತ್ತ ಭಾನುವಾರ ರಾತ್ರಿ ಧಾರಾಕಾರ ಮಳೆಯಾದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ.
Karnataka Districts Sep 10, 2019, 2:09 PM IST
ಪ್ರವಾಹದಿಂದ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು, ಹೀಗೆ ಸಂಗ್ರಹವಾದ ಮರಳನ್ನು ಮಾರಾಟ ಮಾಡಬಹುದ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ. ಸರ್ಕಾರಕ್ಕೆ ನಿಗದಿತ ರಾಜಧನ ಪಾವತಿಸಿ ಅನುಮತಿ ಪಡೆಯಬೇಕೆಂದು ಹೇಳಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಈ ಸಂಬಂಧ ಆದೇಶ ಹೊರಬಿದ್ದಿದೆ ಎಂದಿದ್ದಾರೆ.
Karnataka Districts Sep 10, 2019, 1:17 PM IST
ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿಗಾಗಿ ಜಿಲ್ಲಾಡಳಿತ 249 ಎಕರೆ ಭೂಮಿಯನ್ನುಗುರುತಿಸಿದೆ. ಮೂಡಿಗೆರೆ ತಾಲೂಕಿನ ವಿವಿಧೆಡೆ ಸಂತ್ರಸ್ತರ ಗುರುತಿಸಿದೆ. ಇನ್ನಷ್ಟುಭೂಮಿ ಗುರುತಿಸುವ ಕೆಲಸ ನಡೆದಿದೆ. ಸಂತ್ರಸ್ತರಿಗೆ ಬಾಡಿಗೆ ಮನೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಇರಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
Karnataka Districts Sep 10, 2019, 12:36 PM IST
ಪ್ರವಾಹದಲ್ಲಿ ಸಿಕ್ಕಿದ್ದ ಪ್ರಾಣಿಯನ್ನು. ಹಸುವನ್ನು ರಕ್ಷಣೆ ಮಾಡಿದರು ಎಂಬ ಸುದ್ದಿಗಳನ್ನು ಕೇಳುತ್ತ ಇರುತ್ತವೆ. ಇಲ್ಲೊಂದಿಷ್ಟು ಜನರು 35 ಅಡಿ ಪಾಳು ಬಾವಿಗೆ ಬಿದ್ದು ದಿಕ್ಕು ಕಾಣದಾಗಿದ್ದ ಹಸುವನ್ನು ರಕ್ಷಣೆ ಮಾಡಿದ್ದಾರೆ.
Karnataka Districts Sep 9, 2019, 7:34 PM IST
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದೀಗ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
Karnataka Districts Sep 9, 2019, 9:26 AM IST
ಮತ್ತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಲೆಯಾಗುತ್ತಿದೆ. ಇದರಿಂದ ಉತ್ತರದ 5 ಜಿಲ್ಲೆಗಳ ಜನರಲ್ಲಿ ನಡುಕ ಶುರುವಾಗಿದೆ.
Karnataka Districts Sep 9, 2019, 7:30 AM IST
ಭಾರೀ ಮಳೆಯಿಂದ ಕೊಡಗಿನಲ್ಲಿ ಪ್ರವಾಹ ಬಂದ ಪ್ರದೇಶಗಳಲ್ಲಿ ಇದೀಗ ಜನ ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ. ಕೊಡಗಿನಲ್ಲಿ ಇನ್ನೂ ಮಳೆಯಾಗುತ್ತಿದ್ದು, ರೋಗ ಗುಣಮುಖವಾಗುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿ ಸಕಾಲದಲ್ಲಿ ವೈದ್ಯ ಸೇವೆ ದೊರೆಯದೆ ಜನ ತೊಂದರೆ ಪಡುವಂತಾಗಿದೆ.
Karnataka Districts Sep 8, 2019, 12:04 PM IST
ಮತ್ತೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ,ಮೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
Karnataka Districts Sep 8, 2019, 9:12 AM IST
ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬದುಕು ಬೀದಿಗೆ ಬಿದ್ದಿದೆ. ನೆರೆ ಸಂತ್ರಸ್ತರು ಸರ್ಕಾರದಿಂದ ಪರಿಹಾರ ಕೋರುತ್ತಿದ್ದಾರೆ. ಆದರೆ ಇಂದು ಚಿಕ್ಕೋಡಿಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ, ಪ್ರವಾಹ ಸಂತ್ರಸ್ತರ ಮೇಲೆ ಉದ್ದಟತನ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ಚಿಕ್ಕೋಡಿಯ ಯಡೂರು ಗ್ರಾಮದ ಜನರು ಈಶ್ವರಪ್ಪಗೆ ಹಿಗ್ಗಾಮುಗ್ಗಾ ಬೈಯ್ದು, ಮಂಗಳಾರತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ್ದಾರೆ. ಜನರ ಆಕ್ರೋಶ ನೋಡಿದ ಸಚಿವ ಈಶ್ವರಪ್ಪ ಚಿಕ್ಕೋಡಿಯಿಂದ ಕಾಲ್ಕಿತ್ತಿದ್ದಾರೆ.
Karnataka Districts Sep 7, 2019, 9:09 PM IST
ರಾಜ್ಯಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಉಂಟಾದ ಭೀಕರ ನೆರೆ ಪರಿಸ್ಥಿತಿ ಕುರಿತು ಚರ್ಚೆ ಮಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.
Karnataka Districts Sep 7, 2019, 8:41 PM IST
ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಪ್ರವಾಹ ಭೀತಿ ಆವರಿಸಿದೆ. ರಾಯಭಾಗ ತಾಲೂಕಿನ ಕುಡಚಿ-ಉಗಾರ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನತೆ ಪರದಾಡುವಂತಾಗಿದೆ.
Karnataka Districts Sep 7, 2019, 8:32 PM IST
ಚಿಕ್ಕಮಗಳೂರು(ಸೆ.07): ಕಳೆದ 3 ದಿನಗಳಿಂದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಜನರು ಆತಂಕಗೊಂಡಿದ್ದಾರೆ. ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಸತತ ಮಳೆಯಿಂದ ಜನರು ಹೊರಗೆ ಬರಲು ಸಾಧ್ಯವಾಗದೇ ಪರದಾಡುವಂತಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಮಳೆಯ ಆರ್ಭಟದ ವಿವರ ಇಲ್ಲಿದೆ.
NEWS Sep 7, 2019, 8:04 PM IST
ಕರ್ನಾಟಕ ನೆರೆ ಪ್ರವಾಹ ತಗ್ಗಿ ಮತ್ತೆ ಮಳೆ ಆರಂಭಗೊಂಡಿದೆ. ಆದರೆ ಕೇಂದ್ರದಿಂದ ಇನ್ನೂ ನೆರೆ ಪರಿಹಾರ ಮೊತ್ತ ಮಾತ್ರ ಇನ್ನೂ ಬಂದಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಶೀಘ್ರದಲ್ಲೇ ಕೇಂದ್ರದಿಂದ ನೆರ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ. ದೊಡ್ಡ ಪ್ರಮಾಣದಲ್ಲೇ ಮೊತ್ತ ಕರ್ನಾಟಕಕ್ಕೆ ಲಭ್ಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ.
NEWS Sep 7, 2019, 7:54 PM IST