Asianet Suvarna News Asianet Suvarna News
2331 results for "

ಪ್ರವಾಹ

"
Protection of more than 15 monkeys in Badami in Bagalkot DistrictProtection of more than 15 monkeys in Badami in Bagalkot District

ಬಾದಾಮಿ: ಪ್ರವಾಹದಲ್ಲಿ ಸಿಲುಕಿದ್ದ 15ಕ್ಕೂ ಹೆಚ್ಚು ಕೋತಿಗಳ ರಕ್ಷಣೆ

ಮಂಗಳವಾರ ರಾತ್ರಿಯಿಂದ ಮಲಪ್ರಭಾ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದ ಸುಮಾರು 15ಕ್ಕೂ ಹೆಚ್ಚು ಕೋತಿಗಳನ್ನು (ಮಂಗ) ರಕ್ಷಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
 

Karnataka Districts Aug 20, 2020, 1:39 PM IST

China floods Evacuated as waters reach giant Buddha StatueChina floods Evacuated as waters reach giant Buddha Statue
Video Icon

ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಾಕ್ಷಿಯಾಯ್ತು ಚೀನಾ; ಬುದ್ಧನ ವಿಗ್ರಹವೂ ಜಲಾಮಯ!

ಶತಮಾನಗಳಲ್ಲಿ ಎಂದೂ ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದೆ ಚೀನಾ. ಪ್ರವಾಹದಿಂದ ಇಲ್ಲಿನ ಎತ್ತರದ ಬುದ್ದನ ವಿಗ್ರಹ ಕೂಡಾ ಮುಳುಗಡೆಯಾಗಿದೆ. ಬುದ್ಧನನ್ನು ನೋಡಲು ಬಂದ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಣಾ ಪಡೆಗಳು ರಕ್ಷಿಸಿವೆ. ಬುದ್ಧನ ಆಶ್ರಯದಾಯ ಮೌಂಟ್ ಎಮಾಯ್ ಬೆಟ್ಟ ಕುಸಿಯುವ ಭೀತಿಯಲ್ಲಿದೆ. ನಾಲ್ಕು ನಗರಗಳೇ ಪ್ರವಾಹದಬ್ಬರಕ್ಕೆ ಕಣ್ಮರೆಯಾಗಿ ಬಿಟ್ಟಿದೆ. ಅಲ್ಲಿ ಜನ ವಾಸವಿದ್ದರು ಎಂಬ ಕುರೂಹನ್ನೇ ಅಳಿಸಿ ಬಿಟ್ಟಿದೆ ಮಹಾ ಪ್ರವಾಹ. ಪ್ರವಾಹದ ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!

International Aug 20, 2020, 12:38 PM IST

Plight of New Mothers in Relief Camp in BelagaviPlight of New Mothers in Relief Camp in Belagavi
Video Icon

ಪ್ರವಾಹಕ್ಕೆ ತತ್ತರಿಸಿದ ಗೋಕಾಕ್; ಪರಿಹಾರ ಕೇಂದ್ರದಲ್ಲಿ ಬಾಣಂತಿ ಪರದಾಟ

ಕಳೆದ ಬಾರಿ ಪ್ರವಾಹ ಎಬ್ಬಿಸಿದ ಅವಾಂತರಗಳು, ಕರಾಳ ನೆನಪುಗಳು ಮಾಸುವ ಮುನ್ನ ಮತ್ತದೇ ಸ್ಥಿತಿ ಮರುಕಳುಹಿಸಿದೆ. ಗೋಕಾಕ್‌ನ ಮೆಳವಂಕಿ ಗ್ರಾಮಕ್ಕೆ ಘಟಪ್ರಭಾ ನೀರು ನುಗ್ಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಜನರನ್ನು ಪ್ರವಾಹ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಬಾಣಂತಿಯರು, ಹಸುಗೂಸುಗಳ ಗೋಳು ನೋಡತೀರದಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಿಟಕಿಗೆ ಸೀರೆ ಕಟ್ಟಿ ಹಸುಗೂಸನ್ನು ಮಲಗಿಸಲಾಗುತ್ತದೆ. ಬಾಣಂತಿಗೆ ಪೌಷ್ಠಿಕ ಆಹಾರವೂ ಸಿಗದೇ ಒದ್ದಾಡುತ್ತಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ನಿಮಗೆ ಅರ್ಥವಾಗುತ್ತದೆ ನೋಡಿ..!
 

state Aug 20, 2020, 10:49 AM IST

Flood Situation Controlled In MaharashtraFlood Situation Controlled In Maharashtra

ಬೆಳಗಾವಿ ಸೇರಿ ಕೃಷ್ಣಾ ತೀರದ ಜಿಲ್ಲೆಗಳ ಜನರು ನಿರಾಳ

ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು ಇದರಿಂದ ಕೃಷ್ಣ ನದಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೃಷ್ಣಾ ತೀರದ ಜನರು ನಿರಾಳರಾಗಿದ್ದಾರೆ.

Karnataka Districts Aug 20, 2020, 7:39 AM IST

Drowning Peacock Rescued by Bagalkot VillagersDrowning Peacock Rescued by Bagalkot Villagers
Video Icon

ಮಲಪ್ರಭೆ ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದ್ದ ನವಿಲು ರಕ್ಷಣೆ

ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗ್ತಿದ್ದ ರಾಷ್ಟ್ರಪಕ್ಷಿ ನವಿಲು ರಕ್ಷಣೆ ಮಾಡಲಾಗಿದೆ.  ಬಾಗಲಕೋಟೆ ಜಿಲ್ಲೆಯ ಚೊಳಚಗುಡ್ಡ ಸೇತುವೆ ಬಳಿ ಘಟನೆ ನಡೆದಿದೆ. 

Karnataka Districts Aug 19, 2020, 6:31 PM IST

Dog Swims Across Flood Water Saves Its Life in GadagDog Swims Across Flood Water Saves Its Life in Gadag
Video Icon

ಮಲಪ್ರಭಾ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಶ್ವಾನ ಪಾರು

ಮಲಪ್ರಭಾ ನದಿ ಪ್ರವಾಹದಲ್ಲಿ ಶ್ವಾನವೊಂದು ಸಿಲುಕಿದ್ದು, ಕೊನೆಗೆ ಅದೇ ಈಜಿಕೊಂಡು ಬಂದು ದಡ ಸೇರಿದೆ. ನರಗುಂದ ತಾಲೂಕಿನ ಸೇತುವೆಯೊಂದರ ಬಳಿ ಈ ಘಟನೆ ನಡೆದಿದೆ. 
 

Karnataka Districts Aug 19, 2020, 5:11 PM IST

1 lakh cusec Water Released From Tungabhadra Dam in Munirabad1 lakh cusec Water Released From Tungabhadra Dam in Munirabad

ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

ಕೊಪ್ಪಳ(ಆ.19): ಭಾರೀ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಡ್ಯಾಂನಿಂದ  ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾಗೆ ಇಂದೂ ಕೂಡ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

Karnataka Districts Aug 19, 2020, 3:27 PM IST

Evacuation of Five People From the Island During Flood in Lingsugur in Raichur DistrictEvacuation of Five People From the Island During Flood in Lingsugur in Raichur District

ಲಿಂಗಸುಗೂರು: ಕೃಷ್ಣಾ ನದಿಯಲ್ಲಿ ಪ್ರವಾಹ ಪರಸ್ಥಿತಿ, ದ್ವೀಪದಿಂದ ಐವರ ಸ್ಥಳಾಂತರ

ಕೃಷ್ಣಾ ನದಿಯಲ್ಲಿ ಪ್ರವಾಹ ಪರಸ್ಥಿತಿ ನಿರ್ಮಾಣಗೊಂಡಿದ್ದು ನದಿ ನಡುಗಡ್ಡೆಯ ದ್ವೀಪದಲ್ಲಿ ವಾಸ ಮಾಡುವ ಐವರನ್ನು ಪೊಲೀಸ್‌, ಅಗ್ನಿಶಾಮಕ ದಳ ಸಿಬ್ಬಂದಿಗಳು ಯಾಂತ್ರಿಕ ದೋಣಿ ಮೂಲಕ ಮಂಗಳವಾರ ಸ್ಥಳಾಂತರಿಸಿದೆ. ಉಳಿದವರ ಕರೆತರುವ ಕಾರ್ಯಾಚರಣೆ ಮುಂದುವರೆದಿದ್ದು ಆದರೆ ದ್ವೀಪದಲ್ಲಿದ್ದ ಜನರು ಹೊರ ಬರಲು ಒಪ್ಪುತ್ತಿಲ್ಲ.
 

Karnataka Districts Aug 19, 2020, 3:11 PM IST

Drunken Man Crossing the bridge During Flood in Devadurga in Raichur DistrictDrunken Man Crossing the bridge During Flood in Devadurga in Raichur District

ದೇವದುರ್ಗ: ಹೆಂಡ್ತಿ ಬೈದಿದ್ದಕ್ಕೆ ಕಂಠಪೂರ್ತಿ ಕುಡಿದು ಪ್ರವಾಹ ಲೆಕ್ಕಿಸದೆ ಸೇತುವೆ ದಾಟಿದ ಭೂಪ..!

ಕೃಷ್ಣಾ ನೆರೆಯಿಂದ ಮುಳುಗಿರುವ ತಾಲೂಕಿನ ಹೂವಿನಹೆಡಗಿ ಸೇತುವೆಯನ್ನು ಕುಡಿದ ಮತ್ತಿನಲ್ಲಿ ದಾಟಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ನಿಂಡೋಜಿ ಗ್ರಾಮ ಚಂದ್ರಶೇಖರ (30) ಕುಡಿದ ಮತ್ತಿನಲ್ಲಿ ಮುಳಿಗಿದ ಸೇತುವೆ ಮೇಲೆ ಕೈಯಲ್ಲಿ ಕಟ್ಟಿಗೆ ಹಿಡಿದು ನೀರಿನಲ್ಲಿದ್ದ ಕಸವನ್ನು ಸ್ವಚ್ಛಮಾಡುತ್ತಾ ನಡೆದುಕೊಂಡು ಬಂದಿದ್ದಾನೆ. 
 

Karnataka Districts Aug 19, 2020, 2:00 PM IST

22000 cusec of water Realsed From Sonna Dam22000 cusec of water Realsed From Sonna Dam

ಯಾದಗಿರಿ: ಸೊನ್ನ ಡ್ಯಾಂನಿಂದ ನೀರು ಬಿಡುಗಡೆ, ಭೀಮಾ ಪಾತ್ರದಲ್ಲೂ ಪ್ರವಾಹ ಭೀತಿ

ನಾರಾಯಣಪೂರದ ಬಸವಸಾಗರದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ, ಕೃಷ್ಣಾ ನದಿಪಾತ್ರದಲ್ಲಿ ಪ್ರವಾಹದ ನಂತರ, ಇದೀಗ ಭೀಮಾ ನದಿ ಪತ್ರದಲ್ಲೂ ನೆರೆಯ ಆತಂಕ ಎದುರಾಗಿದೆ.
 

Karnataka Districts Aug 19, 2020, 1:29 PM IST

3500 hectares of crop damage due to Flood in Haveri District3500 hectares of crop damage due to Flood in Haveri District

ಹಾವೇರಿ: ಅತಿವೃಷ್ಟಿಗೆ 3500 ಹೆಕ್ಟೇರ್‌ ಬೆಳೆಹಾನಿ

ಈ ತಿಂಗಳ ಮೊದಲ ವಾರದಲ್ಲಿ ಆದ ಅತಿವೃಷ್ಟಿ ಹಾಗೂ ನದಿಪಾತ್ರದಲ್ಲಿ ನೆರೆಯಿಂದ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ 3511 ಹೆಕ್ಟೇರ್‌ ಬೆಳೆಹಾನಿಯಾಗಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಕೋಟ್ಯಂತರ ರು. ಆರ್ಥಿಕ ನಷ್ಟವಾಗಿದೆ.
 

Karnataka Districts Aug 19, 2020, 12:17 PM IST

73508 Cusec Water Released From Tungabhadra Dam in Munirabad73508 Cusec Water Released From Tungabhadra Dam in Munirabad

ಕೊಪ್ಪಳ: 20 ಗೇಟ್‌ಗಳಿಂದ ನದಿಗೆ 73508 ಕ್ಯುಸೆಕ್‌ ನೀರು, ನದಿ ಪಾತ್ರದಲ್ಲಿ ಪ್ರವಾಹ

ಮಂಗಳವಾರ ಮಧ್ಯಾಹ್ನದಿಂದ ತುಂಗಭದ್ರಾ ಜಲಾಶಯದ 22 ಗೇಟ್‌ಗಳ ಮೂಲಕ ನದಿಗೆ 73508 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ. ಜಲಾಶಯದ 22 ಗೇಟ್‌ಗಳನ್ನು 2 ಅಡಿ ಎತ್ತರಕ್ಕೆ ತೆಗೆದು ನದಿಗೆ ನೀರನ್ನು ಹರಿಸಲಾಗುತ್ತಿದೆ. ಜಲಾಶಯಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
 

Karnataka Districts Aug 19, 2020, 11:54 AM IST

MP Ananth Kumar Kumar Hegde Don't Care About Farmers in Flood Hit AreaMP Ananth Kumar Kumar Hegde Don't Care About Farmers in Flood Hit Area

ಕಾರಲ್ಲೇ ಕೂತು ಪ್ರವಾಹ ವೀಕ್ಷಿಸಿದ ಅನಂತ್ : ರೈತರ ಮನವಿಗೆ ಡೋಂಡ್ ಕೇರ್

ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ್ದ ವೇಳೆ ರೈತರ ಮನವಿಗೂ ಡೋಂಟ್ ಕೇರ್ ಎಂದು ಕಾರಲ್ಲೆ ಕುಳಿತು ತೆರಳುತ್ತಿದ್ದ ಸಂಸದ ಅನಂತ್ ಕುಮಾರ್ ಹೆಗಡೆಗೆ ತೀವ್ರ ತರಾಟೆ ತೆಗೆದುಕೊಳ್ಳಲಾಗಿದೆ.

Karnataka Districts Aug 19, 2020, 8:23 AM IST

monsoon rain madikeri people aware about flood situationmonsoon rain madikeri people aware about flood situation

ಕೊಡಗು : ಮುನ್ನೆಚ್ಚರಿಕೆಯಿಂದ ತಪ್ಪಿತು ಭಾರೀ ಹಾನಿ

ಕಳೆದ ಎರಡು ವರ್ಷಗಳಲ್ಲಿ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಜನತೆ ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸಿದ್ದು,ಅಪಾರ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಂಡಿದ್ದಾರೆ.

Karnataka Districts Aug 18, 2020, 4:16 PM IST

Suvarna Special  Floods of India 20 Shocking VideosSuvarna Special  Floods of India 20 Shocking Videos
Video Icon

ಜಲಪ್ರಳಯದ 20 ಭಯಾನಕ ದೃಶ್ಯಗಳು ಇವು!

ದೇಶದ ದಶ ದಿಕ್ಕುಗಳಲ್ಲೂ ಪ್ರವಾಹ ರುದ್ರ ತಾಂಡವವಾಡುತ್ತಿದೆ. ಅತ್ತ ವರುಣನ ಅಬ್ಬರ ಹೆಚ್ಚುತ್ತಿದ್ದು, ಮಳೆಯೂ ಎಗ್ಗಿಲ್ಲದೇ ಸುರಿಯುತ್ತಿದೆ. ಹೀಗಿರುವಾಗ ಜಲದೇವತೆಯೂ ಕೆರಳುತ್ತಿದ್ದು, ಭಾರತದ ಹಲವೆಡೆ ಜಲ ರಾಕ್ಷಸ ಎಲ್ಲವನ್ನೂ ನುಂಗಿ ಹಾಕಿದ್ದಾನೆ. ಇಂತಹ ಭಯಾನಕ ಇಪ್ಪತ್ತು ದೃಶ್ಯಗಳು ಇಲ್ಲಿವೆ ನೋಡಿ

India Aug 18, 2020, 1:28 PM IST