ಹೊಸವರ್ಷದಂದು ಕುಡುಕರನ್ನು ಚುಡಾಯಿಸಲು ಹೋಗಿ ವಿದ್ಯಾರ್ಥಿಗಳು ಅವಾಂತರ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ಈ ಘಟನೆ ನಡೆದಿದೆ. ಕೋಪಗೊಂಡ ಕುಡುಕರ ಗ್ಯಾಂಗ್ ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿದೆ.
Karnataka Districts Jan 6, 2024, 3:28 PM IST
IIT Bombay Placement 2023-24: 63 ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಜಾಬ್ ಆಫರ್‌ಗಳನ್ನು ಸ್ವೀಕರಿಸಿದ್ದಾರೆ. ಈ ಸಂಸ್ಥೆಯು ಈ ವರ್ಷ ಸರಾಸರಿ ವೇತನ ಪ್ಯಾಕೇಜ್‌ನಲ್ಲಿ ಭಾರೀ ಹೆಚ್ಚಳವಾಗಿದೆ.
Jobs Jan 5, 2024, 2:34 PM IST
ಇಂಥ ಪರಿಸ್ಥಿತಿಯನ್ನು ತಾಲೂಕಿನ ಬೂದುಗುಂಪಾ ಗ್ರಾಮದ ಹೊರವಲಯದ ಸರ್ಕಾರಿ ಪ್ರೌಢಶಾಲೆ ಮಕ್ಕಳನ್ನು ಕಾಡುತ್ತಿದೆ. ಮಕ್ಕಳು ದಿನಂಪತ್ರಿ ಬೆಳಗ್ಗೆ ಪ್ರಾರ್ಥನೆ, ತರಗತಿ ಪ್ರಾರಂಭಕ್ಕೂ ಮುನ್ನ ಖಾಲಿ ಬಾಟಲಿ, ದೇಸೀ ಮದ್ಯದ ಟೆಟ್ರಾ ಪಾಕೇಟ್, ನೀರಿನ ಬಾಟಲಿಗಳನ್ನು ಆರಿಸಿ, ಗೂಡಿಸಬೇಕಾಗಿದೆ.
Education Jan 5, 2024, 3:00 AM IST
ರಾಜ್ಯದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಹಣವನ್ನು ಶುಲ್ಕ ಏರಿಕೆ ಮೂಲಕ ವಸೂಲಿ ಮಾಡಲು ಮುಂದಾಗಿದೆ.
Education Jan 3, 2024, 7:04 PM IST
ಚಾರಣಕ್ಕೆ ಹೋಗಿ ದಾರಿ ಕಾಣದೆ ದಟ್ಟ ಕಾಡಿನಲ್ಲಿ ಕಣ್ಮರೆಯಾಗಿದ್ದ 9 ಕಾಲೇಜು ವಿದ್ಯಾರ್ಥಿಗಳನ್ನು ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ರಕ್ಷಣೆ ಮಾಡಿದ್ದಾರೆ.
state Dec 30, 2023, 3:43 PM IST
ಸೇವಾದಳ ದೇಶದ ದೊಡ್ಡ ಸಂಘಟನೆಯಾಗಿದೆ. ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಬೇಕು ಎಂದು ವಿದಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಕರೆ ನೀಡಿದರು.
Karnataka Districts Dec 30, 2023, 12:30 AM IST
ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜ.16ರಿಂದ ಜ.30ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸೂಚನೆ ನೀಡಿದೆ.
Education Dec 28, 2023, 10:51 PM IST
ತರಗತಿ ನಡೆಯುತ್ತಿದ್ದ ವೇಳೆ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ತಾಲೂಕಿನ ಅರಸಿಗೇರಾ ಗ್ರಾಮದ ಸರ್ಕಾರ ಶಾಲೆಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಓರ್ವ ಬಾಲಕಿ ಗಂಭೀರ ಗಾಯಗೊಂಡಿದ್ದು, ಮೂವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.
CRIME Dec 28, 2023, 5:44 PM IST
ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯುವುದಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಇರಬೇಕೆಂಬ ದೃಷ್ಟಿಯಲ್ಲಿ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬರುವುದು ಶಿಕ್ಷಣಕ್ಕೆ. ಇಲ್ಲಿ ಜಾತಿ, ಮತ, ಧರ್ಮಗಳು ಮುಖ್ಯವಲ್ಲ, ಶಾಲೆಯೊಳಗೆ ಹಿಜಾಬ್ ಹಾಕಿಕೊಂಡು ಬಂದು ಧರ್ಮ ತರಬೇಡಿ ಎಂದು ಆಗ್ರಹಿಸಿದ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್
Karnataka Districts Dec 26, 2023, 5:37 AM IST
ಜಾಗತಿಕವಾಗಿ ಅಗ್ರ 50 ವಿಶ್ವವಿದ್ಯಾನಿಲಯಗಳಲ್ಲಿ ಶ್ರೇಯಾಂಕ ಗಳಿಸುವ ಐಐಟಿ ಬಾಂಬೆಯ ಮಹತ್ವಾಕಾಂಕ್ಷೆಯ 2030 ರ ದೃಷ್ಟಿಯಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶ್ರೇಷ್ಠತೆಯ ಪರಂಪರೆಯನ್ನು ಸ್ಥಾಪಿಸಲು ಈ ನಿಧಿಗಳು ಕೊಡುಗೆ ನೀಡುತ್ತವೆ.
Education Dec 25, 2023, 2:53 PM IST
ವಿದ್ಯಾರ್ಥಿಗಳಿಂದ ಶಾಲೆಯ ಟಾಯ್ಲೆಟ್ ಮತ್ತು ಮಲಗುಂಡಿ ಸ್ವಚ್ಛಗೊಳಿಸಿದ ಬೆಂಗಳೂರಿನ ಅಂದ್ರಳ್ಳಿ ಮತ್ತು ಕೋಲಾರದ ಮಾಲೂರಿನಲ್ಲಿ ನಡೆದ ಘಟನೆಗಳಿಗೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
Politics Dec 24, 2023, 1:54 PM IST
ರೋಡ್ ಬ್ರೇಕ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ವಾಹನ ಪಲ್ಟಿಯಾಗಿದೆ. ಬಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು ಹೊರಟ್ಟಿದ್ದರು. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ.
Karnataka Districts Dec 24, 2023, 4:26 AM IST
ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಭರವಸೆ ನೀಡಿದಂತೆ ಸರ್ಕಾರ ನುಡಿದಂತೆ ನಡೆದುʼ ನಮ್ಮ ಸೇವೆ ಪರಿಗಣಿಸಿ ಎಲ್ಲಾ ಬೇಡಿಕೆಗಳು ಈಡೇರಿಸಬೇಕು. ಸರ್ಕಾರ ನಮ್ಮ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವರೆಗೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಅತಿಥಿ ಉಪನ್ಯಾಸಕರು.
Education Dec 23, 2023, 11:30 PM IST
ಶಾಲಾ ಕಾಲೇಜುಗಳಲ್ಲಿ ಅದರದೇ ಆದ ಡ್ರೆಸ್ ಕೋಡ್ ಇರುತ್ತದೆ. ಎಲ್ಲ ವಿದ್ಯಾರ್ಥಿಗಳು ಅದನ್ನು ಪಾಲಿಸಬೇಕು. ಪಾಲಿಸಲ್ಲ ಎಂದರೆ ಏನರ್ಥ? ಇವೆಲ್ಲ ತಿಳಿಯದಷ್ಟು ಸಿಎಂ ತಿಳಿವಳಿಕೆ ಇಲ್ಲದವರೇನಲ್ಲ. ಹಿಜಾಬ್ ನಿಷೇಧ ವಾಪಸ್ ಮಾಡುವುದಾಗಿ ಘೋಷಣೆ ಮಾಡಿರುವ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
state Dec 23, 2023, 1:20 PM IST
ನೀರಿನ ಅಗತ್ಯತೆಯನ್ನು ಪಕ್ಕದ ಹೊಲದ ಬೋರ್‌ವೆಲ್‌ನಿಂದ ಪೂರೈಸಲಾಗುತ್ತಿದೆ. ನೀರಿನ ಸವಲತ್ತಿಲ್ಲದೆ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಜೊತೆಗೇ ಆಟದ ಮೈದಾನವೂ ಇಲ್ಲಿಲ್ಲ. ಶಾಲೆಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಪಟ್ಟಿ ಮಾಡಿಕೊಟ್ಟರೂ ಪರಿಹಾರದೊರೆತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
Education Dec 20, 2023, 10:00 PM IST