ವಾಷಿಂಗ್ಟನ್ (ನ. 06):  ಸೌರ ಮಂಡಲ ಅಧ್ಯಯನಕ್ಕಾಗಿ 40 ವರ್ಷಗಳ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಉಡಾವಣೆ ಮಾಡಿದ್ದ ವೊಯೇಜರ್- 2 ನೌಕೆ ಇದೀಗ ನಿಗೂಢ ಸ್ಥಳವೊಂದನ್ನು ತಲುಪಿದೆ. ಅದು ಸೂರ್ಯನ ಸಾಮ್ರಾಜ್ಯದ ಅಂಚಿನ ಹೊರಭಾಗದಲ್ಲಿರುವ ಅಂತರ ತಾರಾ ಕ್ಷೇತ್ರದ (ಇಂಟರ್‌ಸ್ಟೆಲ್ಲರ್ ಸ್ಪೇಸ್) ಗಡಿ ಆರಂಭದಲ್ಲಿದೆ. ಇದು ಸೌರಮಂಡಲದ ಗಡಿ ಭಾಗದ ಪ್ರದೇಶವಾಗಿದೆ.

ಈ ನೌಕೆ ಸದ್ಯ ಭೂಮಿಯಿಂದ 18 ಶತಕೋಟಿ ಕಿ.ಮೀ. ಗಳ ದೂರದಲ್ಲಿದೆ. ಸೂರ್ಯನಿಂದ ಹೊರಬರುವ ಕಣಗಳು ಹಾಗೂ ಕಾಂತೀಯ ಕ್ಷೇತ್ರಗಳಿಂದ ರಕ್ಷಣೆ ಒದಗಿಸಲು ಗುಳ್ಳೆ ಆಕಾರದ ರಚನೆ ‘ಹೀಲಿಯೋಸ್ಫಿಯರ್’ ಇದೆ. ಅದರಾಚೆ ಎರಡು ತಾರೆಗಳ ನಡುವಣ ತಾಣವಾಗಿರುವ ಇಂಟರ್ ಸ್ಟೆಲ್ಲರ್ ಸ್ಪೆಸ್ ಇದೆ. ಅಲ್ಲಿಗೆ ವೊಯೇಜರ್ ಪ್ರವೇಶ ಪಡೆದಿದೆ ಎಂದು ಅಮೆರಿಕದ ಅಯೋವಾ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಇದು ಚೌಕ ಅಲ್ಲಲ್ಲ ಗೋಳ: ಶುರುವಾಗಿದೆ 'ವಿಶ್ವ'ಕ್ಕಾಗಿ ಜಗಳ!

2018 ರ ನ.5 ರಂದೇ ವೋಯಜರ್ ಈ ಸಾಧನೆ ಮಾಡಿದೆ ಎಂದು ಅಧ್ಯಯನ ವರದಿ ಹೇಳಿದೆ. ಈ ಸಾಧನೆ ಮಾಡಿದ 2 ನೇ ಮಾನವನಿರ್ಮಿತ ಉಪಕರಣ ಎಂಬ ಹಿರಿಮೆಗೆ ವೊಯೇಜರ್-2 ಪಾತ್ರವಾಗಿದೆ. 2012 ರಲ್ಲಿ ವೊಯೇಜರ್-1 ಕೂಡ ಇಂತಹುದೇ ಸಾಧನೆ ಮಾಡಿತ್ತು. 1977 ರಲ್ಲಿ ಕೆಲವೇ ವಾರಗಳ ಅಂತರದಲ್ಲಿ ಈ ಯಾನಗಳನ್ನು ನಾಸಾ ಕೈಗೆತ್ತಿಕೊಂಡಿತ್ತು.