Asianet Suvarna News Asianet Suvarna News

ನಾಳೆ, ನಾಡಿದ್ದು ಆಗಸದಲ್ಲಿ ವಿಸ್ಮಯ: ಮಿಸ್‌ ಮಾಡ್ದೆ ನೋಡಿ..!

ಸೆಕುಂಡಿಗೊಂದರಂತೆ ಉಲ್ಕೆಗಳು ಕಾಣುವ ಅಪೂರ್ವ ವಿದ್ಯಮಾನ| ಪ್ರತಿಯೊಬ್ಬರು ಈ ವಿದ್ಯಮಾನ ನೋಡಿ ಆನಂದಿಸಬೇಕು| ಉಲ್ಕೆಗಳ ಮಳೆಯಲ್ಲಿ ಸುಮಾರು 120 ರಷ್ಟು ಉಲ್ಕೆಗಳು ಗೋಚರ| 

Meteor Shower Visible on Sky grg
Author
Bengaluru, First Published Dec 12, 2020, 10:14 AM IST

ಉಡುಪಿ(ಡಿ.12): ಖಗೋಳಾಸಕ್ತರಿಗೆ ಭಾನುವಾರ ಮತ್ತು ಸೋಮವಾರ ಪೂರ್ವಾಕಾಶದಲ್ಲಿ ನೂರಾರು ಉಲ್ಕೆಗಳನ್ನು ನೋಡುವ ಅವಕಾಶ ಇದೆ. ಇದನ್ನು ಜೆಮಿನಿಡ್‌ ಉಲ್ಕಾವೃಷ್ಟಿ ಎಂದು ಕರೆಯಲಾಗುತಿದ್ದು, ಸೆಕುಂಡಿಗೊಂದರಂತೆ ಉಲ್ಕೆಗಳು ಕಾಣುವ ಅಪೂರ್ವ ವಿದ್ಯಮಾನವಾಗಿದೆ ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್‌ ಭಟ್‌ ಹೇಳಿದ್ದಾರೆ.

ಜೆಮಿನಿಡ್‌ ಉಲ್ಕಾವೃಷ್ಟಿಯು 3200 ಫೆಥನ್‌ ಎಂಬ ಕ್ಷುದ್ರ ಗ್ರಹದಿಂದ ಉದ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಉಲ್ಕೆಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಉಲ್ಕಾವೃಷ್ಟಿ(ಉಲ್ಕೆಗಳ ಮಳೆ)ಯಲ್ಲಿ ಸುಮಾರು 120 ರಷ್ಟು ಉಲ್ಕೆಗಳು ಗೋಚರಿಸಲಿವೆ.

ಇಂದು ರಾತ್ರಿಯಾಗುತ್ತೆ ಉಲ್ಕಾಪಾತ: 27 ವರ್ಷದ ಬಳಿಕ ಆಗಸದಲ್ಲಿ ಬೆಳಕಿನಾಟ!

ಈ ದಿನಗಳಲ್ಲಿ ರಾತ್ರಿ ಸುಮಾರು 8.30ರ ಹೊತ್ತಿಗೆ ಪೂರ್ವಾಕಾಶದಲ್ಲಿ ಮಿಥುನ ರಾಶಿಯು ಉದಯವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿಯ ವಿಜಯಸಾರಥಿ ನಕ್ಷತ್ರ ಪುಂಜ ಕಾಣಿತ್ತದೆ. ಈ ನಕ್ಷತ್ರಪುಂಜದಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರವೇ ಬ್ರಹ್ಮಹೃದಯ. ಇದರ ಕೆಳಗಡೆ ಮಿಥುನ ರಾಶಿಯಲ್ಲಿ ಜೆಮಿನಿಡ್‌ ಉಲ್ಕಾವೃಷ್ಟಿಉದ್ಭವಿಸುವುದನ್ನು ಸೂರ್ಯೋದಯದವರೆಗೆ ಕಾಣಬಹುದು. ರಾತ್ರಿ 1ರಿಂದ ಮುಂಜಾನೆ 4 ಗಂಟೆಯವರೆಗಿನ ಅವಧಿ ಈ ಈ ಉಲ್ಕೆಗಳ ವೀಕ್ಷಣೆಗೆ ಪ್ರಶಸ್ತ ಸಮಯ ಎಂದವರು ಹೇಳಿದ್ದಾರೆ. ನಮ್ಮ ಖಗೋಳದ ಬಗ್ಗೆ ಆಸಕ್ತವುಳ್ಳ ಪ್ರತಿಯೊಬ್ಬರು ಈ ವಿದ್ಯಮಾನವನ್ನು ನೋಡಿ ಆನಂದಿಸಬೇಕೆಂದವರು ಆಶಿಸಿದ್ದಾರೆ.

ಏನಿದು ಉಲ್ಕೆಗಳ ಮಳೆ?:

ಸಾಮಾನ್ಯವಾಗಿ ಸೂರ್ಯನ ಸುತ್ತ ಧೂಮಕೇತು ಹಾದು ಹೋಗುವಾಗ ಅವಶೇಷಗಳ ಉಳಿದುಕೊಳ್ಳುತ್ತವೆ. ಈ ಅವಶೇಷಗಳು ಭೂಮಿಯ ಕಕ್ಷೆಯೊಳಗೆ ಬಂದರೆ ಉಲ್ಕೆಗಳಾಗುತ್ತವೆ. ಆದರೆ ಜೆಮಿನೆಡ್‌ ಉಲ್ಕಾವೃಷ್ಟಿ ಧೂಮಕೇತುವಿನಿಂದ ಸೃಷ್ಟಿಯಾಗುವುದಿಲ್ಲ, ಅವು ಮಿಥುನ ರಾಶಿಯಲ್ಲಿರುವ ಕ್ಷುದ್ರಗ್ರಹದ ಅವಶೇಷಗಳಿಂದ ಹುಟ್ಟಿಕೊಳ್ಳುತ್ತವೆ.
 

Follow Us:
Download App:
  • android
  • ios