ಶನಿ ಗ್ರಹದ ಬಳೆಗಳ ಮಧ್ಯೆ 5 ಪುಟಾಣಿ ಉಪಗ್ರಹಗಳು| ಶನಿಯ ಎನ್ಸಿಲಾಡಸ್ ಉಪಗ್ರಹದಿಂದ ಸಿಡಿದ ತುಣುಕುಗಳು| ನಾಸಾದ ಕ್ಯಾಸಿನಿ ನೌಕೆಯಿಂದ ಪಡೆದ ಮಾಹಿತಿ ಹೊರ ಹಾಕಿದ ನಾಸಾ| ಶನಿಯ F ಮತ್ತು E ರಿಂಗ್(ಬಳೆ)ಗಳ ಮಧ್ಯೆ ಸುತ್ತುತ್ತಿರುವ ಉಪಗ್ರಹಗಳು|

ವಾಷಿಂಗ್ಟನ್(ಏ.16): ಶನಿ ಗ್ರಹಕ್ಕೆ ಎಷ್ಟು ಚಂದ್ರ ಎಂದು ಕೇಳಿದರೆ 62 ಎಂದು ಪುಟಾಣಿ ಕೂಡ ಹೇಳಿ ಬಿಡುತ್ತೆ. ಆದರೆ ಶನಿ ಗ್ರಹದ ಬಳೆಗಳ ಮಧ್ಯೆ ಇನ್ನೂ ಐದು ಪುಟಾಣಿ ಚಂದ್ರರು ಮುಗುಳ್ನಗುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿ ಗ್ರಹದ ಯ ಬಳೆಗಳ ಮಧ್ಯೆ ಇನ್ನೂ ಐದು ಉಪಗ್ರಹಗಳನ್ನು ನಾಸಾ ಪತ್ತೆ ಹಚ್ಚಿದೆ. ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿರುವ ಈ ಉಪಗ್ರಹಗಳು ಶನಿಯ ಬಳೆಗಳ ಮಧ್ಯೆ ಇದ್ದು, ಗ್ರಹವನ್ನು ಅತ್ಯಂತ ಹತ್ತಿರದಿಂದ ಸುತ್ತುತ್ತಿವೆ.

Scroll to load tweet…

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ನಾಸಾ, ಶನಿಯ ಬಳೆಗಳ ಸುತ್ತುತ್ತಿರುವ ಈ ಪುಟಾಣಿ ಉಪಗ್ರಹಗಳು ಶನಿಯ ಎನ್ಸಿಲಾಡಸ್ ಉಪಗ್ರಹದಿಂದ ಸಿಡಿದ ತುಣುಕುಗಳಾಗಿವೆ ಎಂದು ಹೇಳಿದೆ.

ಬಹುತೇಕ ಮಂಜುಗಡ್ಡೆಯಿಂದ ಆವೃತ್ತವಾಗಿರುವ ಈ ಉಪಗ್ರಹಗಳು ಕುರಿತು, ಇತ್ತೀಚೆಗೆ ಶನಿ ಗ್ರಹಕ್ಕೆ ಡಿಕ್ಕಿ ಹೊಡೆದು ತನ್ನ ಪ್ರಯಾಣ ಅಂತ್ಯಗೊಳಿಸಿದ ನಾಸಾದ ಕ್ಯಾಸಿನಿ ನೌಕೆ ಮಾಹಿತಿ ನೀಡಿತ್ತು.

ಈ ಹಿಂದೆಯೇ ಈ ಉಪಗ್ರಹಗಳನ್ನು ಆವಿಷ್ಕರಿಸಲಾಗಿತ್ತಾದರೂ, ಇವುಗಳ ಕುರಿತಾದ ಆಳ ಅಧ್ಯಯನವನ್ನು ಕ್ಯಾಸಿನಿ ನೌಕೆ ಮಾಡಿದ್ದು ಈಗಷ್ಟೇ ಅದರ ಕುರಿತು ನಾಸಾ ಮಾಹಿತಿ ಬಿಡುಗಡೆ ಮಾಡಿದೆ.

 ಬಹುತೇಕ ಮಂಜುಗಡ್ಡೆಯಿಂದ ಆವೃತ್ತವಾದ ಈ 5 ಉಪಗ್ರಹಗಳು ಶನಿಯ F ಮತ್ತು E ರಿಂಗ್(ಬಳೆ)ಗಳ ಮಧ್ಯೆ ಸುತ್ತುತ್ತಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.