ಹಕ್ಕಿಮರಿಯನ್ನು ಮನುಷ್ಯರು ಮುಟ್ಟಿದ್ರೆ ಅದನ್ನು ಮತ್ತೆ ಪಕ್ಷಿಗಳ ಗುಂಪಲ್ಲಿ ಸೇರಿಸೋಲ್ಲ, ಮದುವೆಮನೆ ಅಕ್ಕಿ ಕಾಳು ತಿಂದ್ರೆ ಹಕ್ಕಿಗಲು ಸಾಯ್ತಾವೆ, ಕೆಂಪು ಬಣ್ಣ ನೋಡಿದ್ರೆ ಗೂಳಿಗಲು ಕೆರಳ್ತಾವೆ ಎಂದೆಲ್ಲ ಚಿಕ್ಕಂದಿನಿಂದಲೂ ನಾವು ಕೇಳ್ತಾನೇ ಬಂದಿದೀವಿ. ಇಂಥ ಹತ್ತು ಹಲವು ಪ್ರಾಣಿಗಳ ನಡುವಳಿಕೆಗಳ ಬಗ್ಗೆ ಬಾಲ್ಯದಿಂದಲೇ ನಮ್ಮಲ್ಲಿ ಕೆಲ ನಂಬಿಕೆಗಳನ್ನು ಬಿತ್ತಲಾಗಿದೆ. ಆದರೆ ಅವೆಲ್ಲ ಖಂಡಿತವಾಗಿಯೂ ನಿಜನಾ? ಅಥವಾ ಕಪೋಲಕಲ್ಪಿತನಾ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾತ್ರ ನಮ್ಮಲ್ಲಿ ಹಲವರು ಮಾಡಿರುವುದಿಲ್ಲ. ಇಂಥ ಕೆಲವೊಂದಿಷ್ಟು ನಂಬಿಕೆಗಳು ಹಾಗೂ ಅವುಗಳ ಸತ್ಯಾಸತ್ಯತೆ ಕುರಿತು ಇಲ್ಲಿದೆ ನೋಡಿ.

ನಂಬಿಕೆ 1: ಹಕ್ಕಿಮರಿಯನ್ನು ಮನುಷ್ಯರು ಮುಟ್ಟಿದ್ರೆ ಅದನ್ನು ತಾಯಿ ಹಕ್ಕಿ ಹತ್ತಿರ ಸೇರಿಸೋಲ್ಲ.

ಸತ್ಯ: ಹಕ್ಕಿ ಮರಿಗಳನ್ನು ಮನುಷ್ಯರು ಮುಟ್ಟುವುದರಿಂದ ಅವರ ವಾಸನೆ ಮರಿಗಳಿಗೆ ತಟ್ಟಿ, ಸ್ವಂತ ಮರಿಯನ್ನೇ ತಾಯಿ ಹಕ್ಕಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅದು ಮರಿಯನ್ನು ತನ್ನದಲ್ಲವೆಂದು ಹತ್ತಿರ ಸೇರಿಸುವುದಿಲ್ಲ ಎಂದು ದೊಡ್ಡವರು ಹೇಳಿದ್ದನ್ನು ಕೇಳಿದ್ದೇವೆ. ಇದು ಖಂಡಿತಾ ಸುಳ್ಳು. ನಿಜವೆಂದರೆ ಹಕ್ಕಿಗಳ ವಾಸನಾ ಗ್ರಹಿಕೆಯೇ ಸ್ಟ್ರಾಂಗ್ ಆಗಿಲ್ಲ. ಆದರೆ, ಹಕ್ಕಿಮರಿಗಳನ್ನು ಅವುಗಳ ಪಾಡಿಗೆ ಅವನ್ನು ಬಿಡುವುದು ಉತ್ತಮ. ಚಿಕ್ಕಮಕ್ಕಳು ಕೈಗೆ ಸಿಕ್ಕ ಹಕ್ಕಿಮರಿಗಳಿಗೆ ತೊಂದರೆ ಕೊಡಬಾರದೆಂದು ಹಿರಿಯರು ಹೀಗೆ ಹೆದರಿಸಲು ಆರಂಭಿಸಿರಬೇಕು. ಅದೇ ಮುಂದೆ ನಂಬಿಕೆಯಾಗಿ ಬೆಳೆದುಬಂದಿರಬೇಕು. 

ಆಹಾರ ಬಗ್ಗೆ ನೀವು ನಂಬಿರುವ ಈ ವಿಷಯಗಳೆಲ್ಲ ನಿಜವಲ್ಲ!

ನಂಬಿಕೆ 2: ಅಕ್ಷತೆಕಾಳು ತಿಂದ ಹಕ್ಕಿಗಳು ಸಾಯುತ್ತವೆ

ಸತ್ಯ: ಅಕ್ಷತೆಕಾಳು ತಿಂದ ಹಕ್ಕಿಗಳು ಸಾಯುತ್ತವೆಂಬುದನ್ನು ಕೇಳಿ,  ಆಧುನಿಕ ವಿವಾಹ ಯೋಜಕರು ಕ್ರಿಶ್ಚಿಯನ್ ಮದುವೆಗಳಲ್ಲಿ ಅಕ್ಕಿಯ ಬದಲಿಗೆ ನೀರ್ಗುಳ್ಳೆಗಳನ್ನು ಹಾರಿಸುವುದನ್ನು ಕಾಣಬಹುದು. ಆದರೆ, ಅಕ್ಕಿ ಕಾಲು ತಿಂದ ಹಕ್ಕಿಗಳು ಖಂಡಿತಾ ಸಾಯುವುದಿಲ್ಲ. ಹಿಂದೂಗಳ ಮದುವೆಯಲ್ಲಿ ಬಳಸುವ ಅಕ್ಷತೆಕಾಳಿಗೆ ಬಣ್ಣ ಮಿಕ್ಸ್ ಆಗಿರುತ್ತಾದ್ದರಿಂದ ಹಕ್ಕಿಗಳ ಹೊಟ್ಟೆಗೆ ಕೆಮಿಕಲ್ಸ್  ಸೇರುತ್ತದೆ ಎಂಬ ಕಾಳಜಿ ಈ ನಂಬಿಕೆಯಲ್ಲಿರಬಹುದು. ಆದರೆ, ಅಕ್ಕಿಯು ಇತರೆ ಕಾಳುಗಳಂತೆ ಹಕ್ಕಿಗಳಿಗೆ ಆಹಾರವೇ ಹೊರತು ವಿಷವಲ್ಲ. 

ನಂಬಿಕೆ 3: ಬಾವಲಿಗಳು ಸಂಪೂರ್ಣ  ಕುರುಡು

ಸತ್ಯ: ಬಾವಲಿಗಳಿಗೆ ಕಣ್ಣಿರುವುದೇ ದೃಷ್ಟಿಗಾಗಿ. ಎಲ್ಲ ಬಾವಲಿಗಳಿಗೂ ಕಣ್ಣು ಚೆನ್ನಾಗಿಯೇ ಕಾಣಿಸುತ್ತದೆ. ಅವು ಸೋನಾರ್ ಸೈಟ್ ಬಳಸುವುದರಿಂದ ಮನುಷ್ಯರಿಗಿಂತ ಹೆಚ್ಚು ಸ್ಪಷ್ಟವಾಗಿ ಏನನ್ನಾದರೂ ನೋಡಬಲ್ಲವು. ಅಷ್ಟಲ್ಲದೆ ಕತ್ತಲೆಯಲ್ಲೂ ಅವು ಕೀಟಗಳನ್ನು ಗುರುತಿಸಿ ಹಿಡಿಯಲು ಸಾಧ್ಯವಿರುತ್ತಿತ್ತೇ?

ಹಾರ್ಟ್ ಅಟ್ಯಾಕ್ ಆದಾಗ ಎದೆನೋವು ಬಂದೇ ಬರುತ್ತಾ?

ನಂಬಿಕೆ 4: ಪಿಟ್ ಬುಲ್ಸ್ ಶ್ವಾನ ಪ್ರಬೇಧವು ಎಲ್ಲಕ್ಕಿಂತ  ಹೆಚ್ಚು ಅಪಾಯಕಾರಿ,

ಸತ್ಯ: ಯಾವುದೇ ನಾಯಿ ಕೂಡಾ ಮನುಷ್ಯನ ಮೇಲೆ ಅಟ್ಯಾಕ್ ಮಾಡಲು ಶಕ್ತವಾಗಿರುತ್ತದೆ. ಪಿಟ್ ಬುಲ್ಸ್ ಕೂಡಾ ಇದಕ್ಕೆ ಹೊರತಲ್ಲ. ಇಷ್ಟಕ್ಕೂ ಅನುವಂಶೀಯವಾಗಿ ನೋಡಿದರೆ ಪಿಟ್ ಬುಲ್ಸ್ ಜೆರ್ಮನ್ ಶೆಫರ್ಡ್ಸ್, ರೊಟ್ವೀಲ್ಡರ್ಸ್, ಡಾಬರ್‌ಮನ್ಸ್‌ಗಳಿಗಿಂತ ಬಹಳ ಪಾಪದವೇ. ಆದರೆ, ಅವನ್ನು ಫೈಟ್ ಮಾಡುವಂತೆ, ಅಪಾಯಕಾರಿಯಾಗಿರುವಂತೆ ತರಬೇತಿ ನೀಡಿದಾಗ ಮಾತ್ರ ಅವು ಕ್ರೂರವಾಗಿ  ವರ್ತಿಸಬಲ್ಲವು.

ನಂಬಿಕೆ 5: ಕಪ್ಪೆ ಮುಟ್ಟಿದ್ರೆ ಮೈಲಿ ಗಂಟಾಗುತ್ತದೆ

ಸತ್ಯ: ಇದೊಂದು ಶುದ್ಧ ಸುಳ್ಳು. ಬಹುಷಃ ಮಕ್ಕಳು ಯಾವುಯಾವುದೋ ಪ್ರಾಣಿಗಳನ್ನು ಮುಟ್ಟಿ ಅವುಗಳಲ್ಲಿ ಏನಾದರೂ ಕಾಯಿಲೆಯಿದ್ದು ಅದು ಮಕ್ಕಳಿಗೆ ಹರಡಿದರೆ ಎಂಬ ಭಯದಿಂದ ತಾಯಂದಿರು ಇಂಥ ಸುಳ್ಳನ್ನು ಹಬ್ಬಿಸಿರಬೇಕು. ಯಾವುದೇ ರೀತಿಯ ಕಪ್ಪೆಯೂ ಗಂಟುಗಳನ್ನು ನೀಡುವುದಿಲ್ಲ. 

ಕೇವಲ ಜಿಮ್‌ನಿಂದ ಇರುತ್ತಾ ದೇಹ ಫಿಟ್?

ನಂಬಿಕೆ 6: ಗೋಲ್ಡ್‌ಫಿಶ್‌ಗೆ ನೆನಪಿನ ಶಕ್ತಿ ಇಲ್ಲ

ಸತ್ಯ: ಗೋಲ್ಡ್‌ಫಿಶ್‌ಗೆ ನೆನಪಿರುವುದಿಲ್ಲ ಎಂಬುದು ಖಂಡಿತಾ ಸುಳ್ಳು. ಅವು ಸುಮಾರು 5 ತಿಂಗಳ ಕಾಲದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬಲ್ಲವು. ದಿನದ ಯಾವ ಸಮಯದಲ್ಲಿ ತಮಗೆ ಆಹಾರ ನೀಡುತ್ತಿದ್ದರು ಎಂಬುದು ಐದು ತಿಂಗಳ ಬಳಿಕವೂ ನೆನಪಿಟ್ಟುಕೊಂಡು ಅದಕ್ಕಾಗಿ ಹಂಬಲಿಸುವ ಗೋಲ್ಡ್‌ಫಿಶ್‌ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. 

ನಂಬಿಕೆ 7: ಗೂಳಿಗಳಿಗೆ ಕೆಂಪು ಬಣ್ಣ ಕಂಡರಾಗುವುದಿಲ್ಲ

ಸತ್ಯ: ಕೆಂಪು ಬಣ್ಣ ಕಂಡರೆ ಗೂಳಿಗಳು ದಾಳಿ ಮಾಡುವುದು ಅದೆಷ್ಟು ಸಹಜವಾಗಿ ಎಲ್ಲೆಡೆ ಹಬ್ಬಿದೆ ಎಂದರೆ ಹಲವಾರು ಚಲನಚಿತ್ರಗಳಲ್ಲಿ ಈ ನಂಬಿಕೆಗನುಗುಣವಾಗಿ ಕತೆ ಇರುವುದನ್ನು ನಾವು ಕಂಡಿದ್ದೇವೆ. 1700ರ ಸಮಯದಲ್ಲಿ ಗೂಳಿಕಾಳಗ ಆರಂಭಿಸುವ ಸೂಚನೆಯಾಗಿ ಕೆಂಪು ಬಟ್ಟೆ ಬೀಸುವ ಅಭ್ಯಾಸ ಬೆಳೆದು ಬಂದಾಗಿನಿಂದ ಈ ನಂಬಿಕೆ ಜನಸಾಮಾನ್ಯರಲ್ಲಿ ಬೆಳೆದುಬಂದಿದೆ. ಆದರೆ ಗೂಳಿಗಳು ನೀಲಿ, ಬಿಳಿ ಸೇರಿದಂತೆ ಯಾವುದೇ ಬಣ್ಣದ ಬಟ್ಟೆ ಬೀಸಿದರೂ ದಾಳಿಗೆ ಸಜ್ಜಾಗುತ್ತವೆ. ಬಟ್ಟೆಯ ಬಣ್ಣವಲ್ಲ, ಗಾತ್ರ ಅವನ್ನು ಕೆರಳಿಸುತ್ತದೆ. 

ನಂಬಿಕೆ 8: ಒಂಟೆಗಳು ತಮ್ಮ ದಿಬ್ಬದಲ್ಲಿ ನೀರನ್ನು ಶೇಖರಿಸಿಟ್ಟುಕೊಳ್ಳುತ್ತವೆ.

ಸತ್ಯ: ಮರುಭೂಮಿಯಲ್ಲಿ ಓಡಾಡುವ ಒಂಟೆಗಳಿಗೆ ಅದೆಷ್ಟು ಬಾಯಾರಿಕೆಯಾಗಬೇಡ? ಇದನ್ನು ನೀಗಿಸಿಕೊಳ್ಳೋಕೆ ಅವು ತಮ್ಮ ಕತ್ತಿನ ಹಿಂಭಾಗದಲ್ಲಿರುವ ಡುಬ್ಬದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿರುತ್ತವೆ ಎಂದು ತಿಳಿದಿದ್ದೀರಿ ಅಲ್ಲವೇ? ಆದರೆ, ಇದು ನಿಜವಲ್ಲ. ಒಂಟೆಯು ಏಳು ದಿನಗಳ ಕಾಲ ನೀರಿಲ್ಲದೆ ಬದುಕಬಲ್ಲದು. ಆ ಡುಬ್ಬವು ಫ್ಯಾಟಿ ಟಿಶ್ಯೂವಾಗಿದ್ದು, ಆಹಾರ ಸಿಗದಿದ್ದಾಗ ಅದು ಕ್ಯಾಲೋರಿಯಾಗಿ ಕರಗಬಲ್ಲದು ಅಷ್ಟೇ. ಹಾಗಾದರೆ ಏಳು ದಿನಗಳ ಕಾಲ ಒಂಟೆಯು ನೀರಿಲ್ಲದೆ ಇರಲು ಸಾಧ್ಯವಾಗುವುದಾದರೂ ಹೆೇಗೆ ಎಂದ್ರಾ? ಆ ಕೆಲಸವನ್ನು ಅವುಗಳ ಕಿಡ್ನಿಯು ಮಾಡುತ್ತದೆ. 

 ನವೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ