ಕೊರೋನಾ ವೈರಸಿನಿಂದ ಚಿತ್ರೀಕರಣವಿಲ್ಲದೇ, ಕಾರ್ಯಕ್ರಮಗಳು ರದ್ದಾದ ಕಾರಣ ಸಿನಿಮಾ ತಾರೆಯರಿಗೆ ಮನೆಯಲ್ಲಿ ಕುಟುಂಬದವರ ಜೊತೆ ಸಮಯ ಕಳೆಯವುದಕ್ಕೆ ಹಾಗೂ ಯೋಧರಂತೆ ಮನೆಯಲ್ಲೇ ಇದ್ದು ವೈರಸ್‌ ವಿರುದ್ಧ ಹೋರಾಡಲು ಇದು ಸರಿಯಾದ ಸಮಯ.

50 ಲಕ್ಷ ರೂ. ನೀಡಿ ಹಿರಿಯ ಕಲಾವಿದನನ್ನು ಕಾಪಾಡಿದ ಪ್ರಕಾಶ್‌ ರಾಜ್!

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೂಡ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ತಮ್ಮ ಮುದ್ದು ಮಗನಿಗೆ ರಾಷ್ಟ್ರ ಗೀತೆ ಹೇಳಿಕೊಡುತ್ತಿರುವ ವಿಡಿಯೋವನ್ನು ಟ್ಟಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. '#Covid2019india #Kuchkarona ಕೊರೋನ ವೈರಸ್‌ ಹರಡುವುದಿಲ್ಲ. ನಾವು ಜನರು ಅದನ್ನು ಹರಡಿಸುವುದು. ಮನೆಯಲ್ಲೇ ಇರಿ ನಿಮ್ಮ ಸುತ್ತಲಿರುವವರಿಗೆ ಸಹಾಯ ಮಾಡಿ. ಈಗ ನನ್ನ ಮಗನಿಗೆ ಪಾಠ. ಅವರ ಭವಿಷ್ಯದ ಬಗ್ಗೆ ಚಿಂತಿಸಿ' ಎಂದು ಬರೆದುಕೊಂಡಿದ್ದಾರೆ.

 

ಮಾರ್ಚ್‌ 22ರಂದು ಪ್ರಧಾನಿ ಮೋದಿ ನೀಡಿದ ಜನತಾ ಕರ್ಫ್ಯೂಗೆ ಪ್ರಕಾಶ್ ರಾಜ್‌ ಸಾಥ್‌ ನೀಡಿದ್ದರೂ, ಜನರು ತಟ್ಟೆ ಜಾಗಟೆ ಹಿಡಿದು ಗುಂಪು ಮಾಡುತ್ತಾ ಸ್ಪಂದಿಸಿದ ರೀತಿಗೆ 'ಯಥಾ ರಾಜಾ ತಥಾ ಪ್ರಜಾ ಅಥವಾ ಇದು ಉಲ್ಟಾನಾ?' ಎಂದು ಟೀಕೆ ಮಾಡುತ್ತಾ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದರು. 

ಇನ್ನು ಲಾಕ್‌ಡೌನ್‌ನಿಂದ ದಿನಗೂಲಿ ಕಾರ್ಮಿಕರು ಭೀಕರ ಪರಿಣಾಮ ಎದುರಿಸುತ್ತಿದ್ದು, ಅವರಿಗೆ ಪ್ರಕಾಶ್‌ ರಾಜ್‌ ಸಹಾಯ ಮಾಡುವುದಾಗಿ ಹೇಳಿದ್ದಾರೆ.