ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರ ಇದೀಗ ಅಮೆಜಾನ್‌ ಪ್ರೈಮ್‌ಗೆ ಬಂದಿದೆ. ಹಾಗೆಯೇ ಪುನೀತ್‌ ರಾಜ್‌ ಕುಮಾರ್‌ ನಿರ್ಮಾಣದ ‘ಮಾಯಾ ಬಜಾರ್‌’ ಕೂಡ ಅಮೆಜಾನ್‌ನಲ್ಲಿ ಲಭ್ಯವಿದೆ. ಎರಡರಲ್ಲೂ ವಸಿಷ್ಠ ಸಿಂಹ ನಾಯಕ. ಈ ಮೂಲಕ ಓಟಿಟಿ ಫ್ಲಾಟ್‌ಫಾಮ್‌ರ್‍ನಲ್ಲಿ ಈಗ ಸಿನಿಮಾ ನೋಡುವವರಿಗೆ ನಿಜಕ್ಕೂ ಸುಗ್ಗಿ ಶುರುವಾಗಿದೆ.

‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಚಿತ್ರಕ್ಕೆ ಈಗಾಗಲೇ ಅಮೆರಿಕಾ, ಇಂಗ್ಲೆಂಡ್‌ನಲ್ಲಿರುವ ಅನಿವಾಸಿ ಕನ್ನಡಿಗರು ಸೇರಿದಂತೆ ರಾಜ್ಯದ ಸಿನಿಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ನಮ್ಮ ದೇಶದಲ್ಲೂ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸುತ್ತಿದೆ’ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌.

ಚಿತ್ರ ವಿಮರ್ಶೆ: ಇಂಡಿಯಾ ವರ್ಸಸ್‌ ಇಂಗ್ಲೆಂಡ್‌

ಇಂಗ್ಲೆಂಡ್‌ ಜತೆಗೆ ಭಾರತದುದ್ದಗಲಕ್ಕೂ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ವಸಿಷ್ಠ ಸಿಂಹ, ಮಾನ್ವಿತಾ, ಪ್ರಕಾಶ್‌ ಬೆಳವಾಡಿ, ಅನಂತ ನಾಗ್‌, ಸಾಧು ಕೋಕಿಲಾ, ಸುಮಲತಾ ಅಂಬರೀಷ್‌ ಅವರನ್ನೊಳಗೊಂಡ ಅದ್ದೂರಿ ತಾರಾಗಣವಿದೆ.

ಅಪನಗದೀಕರಣದ ಸಂದರ್ಭದಲ್ಲಿ ಕೆಲವರ ಬದುಕು ಹೇಗೆಲ್ಲ ಬದಲಾಯಿತು ಎನ್ನುವುದನ್ನು ‘ಮಾಯಾ ಬಜಾರ್‌’ ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ರಾಧಾಕೃಷ್ಣ ರೆಡ್ಡಿ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಜೊತೆಗೆ ಪ್ರಕಾಶ್‌ ರೈ, ಸಾಧುಕೋಕಿಲ, ಸುಧಾರಾಣಿ ಮತ್ತಿತರರಿದ್ದಾರೆ.

ಚಿತ್ರ ವಿಮರ್ಶೆ: ಮಾಯಾಬಜಾರ್‌

ಲಾಕ್‌ಡೌನ್‌ ಟೈಮ್‌ನಲ್ಲಿ ಓಟಿಟಿ ಫ್ಲಾಟ್‌ಫಾಮ್‌ರ್‍ನಲ್ಲಿ ಹೊಸ ಚಿತ್ರಗಳ ಸುರಿಮಳೆ. ಮನೆಮಂದಿಗೆ ಜೊತೆಯಲ್ಲೇ ಇವನ್ನೆಲ್ಲ ಕಣ್ತುಂಬಿಕೊಳ್ಳಲು ಇದು ಕರೆಕ್ಟ್ ಟೈಮ್‌.