Asianet Suvarna News Asianet Suvarna News

ಉಪ್ಪಿ 'ಯುಐ'ನಲ್ಲಿ ಪಡ್ಡೆಗಳ ಪಾಪ್‌ಕಾರ್ನ್ ಸನ್ನಿ ಲಿಯೋನ್ ಇರೋದ್ ಕನ್ಫರ್ಮ್, ಸಾಕ್ಷಿ ಬೇಕಾ?

ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗಿಯೇ ಭಾರತದ ತುಂಬೆಲ್ಲಾ ನಿರೀಕ್ಷೆಯ ಮಹಾಪೂರವೇ ಸೃಷ್ಟಿಯಾಗುತ್ತದೆ. ಈ ಬಾರಿ ಅದು ಜಾಗತಿಕ ನಿರೀಕ್ಷೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ, ಈ ಸಿನಿಮಾ ಪ್ಯಾನ್ ಇಂಡಿಯಾ ಎನ್ನುವುದು ಒಂದು..

Sunny Leone acted in Kannada Real Star Upendra upcoming movie UI movie srb
Author
First Published Sep 12, 2024, 1:17 PM IST | Last Updated Sep 12, 2024, 1:19 PM IST

ನಟ-ನಿರ್ದೇಶಕ ಉಪೇಂದ್ರ (Real Star Upendra) ಮುಂಬರುವ ಚಿತ್ರ 'ಯು/ಐ' ದಲ್ಲಿ ಜಗದ್ವಿಖ್ಯಾತ ನಟಿ ಸನ್ನಿ ಲಿಯೋನ್ (sunny Leone) ಇರುವುದು ಪಕ್ಕಾ ಆಗಿದೆ. ಹಾಟ್ ನಟಿ ಸನ್ನಿ ಲಿಯೋನ್ ಅವರು (U/I) ಚಿತ್ರದಲ್ಲಿ ಸಾಂಗ್‌ಗೆ ಮಾತ್ರ ಸೀಮಿತ ಆಗಿದ್ದಾರಾ ಅಥವಾ ಸಿನಿಮಾದಲ್ಲೂ ನಟಿಸಿದ್ದಾರಾ ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಆದರೆ, ಇಷ್ಟು ದಿನ, ಸಾಂಗ್ ಶೂಟ್ ಮಾಡಿದ್ದರೂ ಕೂಡ, ಸಿನಿಮಾದಲ್ಲಿ ಈ ಹಾಡು ಇರೊತ್ತೋ ಇಲ್ವೋ ಎನ್ನುವುದು ಕನ್ಫರ್ಮ್ ಆಗಿರಲಿಲ್ಲ. ಕಾರಣ, ಅದೆಷ್ಟೂ ಹಾಡುಗಳು ಶೂಟ್ಆಗಿದ್ದರೂ ಸಿನಿಮಾದಲ್ಲಿ ಮಾಯವಾಗಿರುತ್ತವೆ. 

ಆದರೆ, ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ನಟನೆ-ನಿರ್ದೇಶನದ 'U/I' ಚಿತ್ರವು ಸದ್ಯದಲ್ಲೇ, ಅಂದರೆ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಉಪೇಂದ್ರ ಹೊರತುಪಡಿಸಿದರೆ ಯಾರೆಲ್ಲಾ ನಟಿಸಿದ್ದಾರೆ ಎಂಬುದು ಸಾಕಷ್ಟು ಸೀಕ್ರೆಟ್ ಆಗಿಯೇ ಉಳಿದಿತ್ತು. ಆದರೆ, ನಟಿ ಸನ್ನಿ ಲಿಯೋನ್ ಇರುವುದು ಈಗ ದೃಢವಾಗಿದೆ. ಆದರೆ, ಪಾತ್ರದಲ್ಲಿ ನಟಿಸಿ ಹಾಡಲ್ಲಿ ಇದ್ದಾರಾ ಅಥವಾ ಬರೀ ಹಾಡಲ್ಲಿ ಮಾತ್ರವೇ ಸನ್ನಿ ದರ್ಶನವೋ?! ಸದ್ಯಕ್ಕೆ ಹೇಳುವವರಿಲ್ಲ. 

ಹೀಗ್ ಆಗಿತ್ತಾ ದೇವ್ರೇ..; ಕಿರಿಕ್ ಪಾರ್ಟಿ ಟೈಮ್‌ನಲ್ಲಿ ನಡೆದ ಸೀಕ್ರೆಟ್ ಘಟನೆ ಹಂಚಿಕೊಂಡ ರಿಷಬ್ ಶೆಟ್ಟಿ!

ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಸಹಜವಾಗಿಯೇ ಭಾರತದ ತುಂಬೆಲ್ಲಾ ನಿರೀಕ್ಷೆಯ ಮಹಾಪೂರವೇ ಸೃಷ್ಟಿಯಾಗುತ್ತದೆ. ಈ ಬಾರಿ ಅದು ಜಾಗತಿಕ ನಿರೀಕ್ಷೆಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ, ಈ ಸಿನಿಮಾ ಪ್ಯಾನ್ ಇಂಡಿಯಾ ಎನ್ನುವುದು ಒಂದು ಕಡೆಯಾದರೆ, ಬಿಗ್ ಬಜೆಟ್ ಹಾಗು ಹಲವು ಭಾಷೆಗಳಲ್ಲಿ ಜಗತ್ತಿನ ತುಂಬೆಲ್ಲ ಬಿಡುಗಡೆ ಆಗುತ್ತಿರುವುದು ಮತ್ತೊಂದು ಕಾರಣ. ಒಟ್ಟಿನಲ್ಲಿ, ಈ ಚಿತ್ರದಲ್ಲಿ ಗ್ಲಾಮರಸ್ ಐಕಾನ್ ಸನ್ನಿ ಲಿಯೋನ್ ಸಹ ಇದ್ದಾರೆ ಎಂಬುದು ಪಡ್ಡೆಗಳಿಗಂತೂ ಪಾಪ್‌ಕಾರ್ನ್ ಸಿಕ್ಕಂತಾಗಿದೆ.

ಇನ್ನೇನು ಸೆಪ್ಟೆಂಬರ್ ಕಳೆದರೆ ಅಕ್ಟೋಬರ್‌ ತಾನೆ? ಉಪೇಂದ್ರ ಡೈರೆಕ್ಷನ್‌ನ ಯುಐ ಸಿನಿಮಾ ತೆರೆಗೆ ಬರಲು ಹೆಚ್ಚೇನೂ ಸಮಯವಿಲ್ಲ. ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕನ್ನಡದ ಸಿನಿಪ್ರೇಕ್ಷಕರು ಸೇರಿದಂತೆ ಎಲ್ಲರೂ ಕಾಯುತ್ತಿದ್ದಾರೆ. ಇದೀಗ ಸನ್ನಿ ಲಿಯೋನ್ ಈ ಚಿತ್ರದಲ್ಲಿ ಇರುವುದು ಕೂಡ ಖಾತ್ರಿ ಆಗಿದೆ. ಇನ್ನೇನು ಬೇಕು ಅಂತಿರೋರೇ ಜಾಸ್ತಿ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ. ಒಟ್ಟಿನಲ್ಲಿ, ನಟಿ ಸನ್ನಿ ಲಿಯೋನ್ ಅವರನ್ನು ಕುಣಿಸಿ ನಟ ಉಪೇಂದ್ರ ಕೋಟಿ ಕೋಟಿ ಕಾಸು ಸುರಿಸುತ್ತಾರಾ  ಎಂಬದನ್ನು ಕಾದು ನೋಡಬೇಕಿದೆ!

ಚೇತನ್ ಅಹಿಂಸಾ 'ಫೈರ್'ಗೆ ಉಗಿದು ಉಪ್ಪಿನಕಾಯಿ ಹಾಕಿದ ಸಾರಾ ಗೋವಿಂದು ಏನ್ ಹೇಳ್ಬಿಟ್ರು ನೋಡಿ!

Latest Videos
Follow Us:
Download App:
  • android
  • ios