Asianet Suvarna News Asianet Suvarna News

ಎಕ್ಸ್ ಕ್ಯೂಸ್ ಮೀ ಹೀರೋ ಪುನಾರಾಗಮನಕ್ಕೆ ಕಾರಣ ;ತುರ್ತು ನಿರ್ಗಮನ

 ಡಿಫರೆಂಟ್ ಪಾತ್ರದೊಂದಿಗೆ ಸುನೀಲ್ ರಾವ್ ರಂಜಿಸಲಿದ್ದಾರೆ ನಿಮ್ಮನ್ನ. ತುರ್ತು ನಿರ್ಗಮನ ನೋಡಲು ರೆಡಿ ನಾ?

Sunil Rao comeback Thurthu Nirgamana film release on 24th june vcs
Author
Bangalore, First Published Jun 21, 2022, 12:50 PM IST

ತುರ್ತು ನಿರ್ಗಮನ ಸಿನಿಮಾ ಬಿಡುಗಡೆ ಹೊಸ್ತಿನಲ್ಲಿ ನಿಂತಿದೆ. ಇದೇ 24ರಂದು ಹೇಮಂತ್ ರಾವ್ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಚಿತ್ರ ಥಿಯೇಟರ್‌ಗೆ ಲಗ್ಗೆ ಇಡ್ತಿದೆ. ಎಲ್ಲಾ ರೀತಿಯಿಂದಲೂ ಕುತೂಹಲ ಹೆಚ್ಚಿಸಿರುವ ತುರ್ತು ನಿರ್ಗಮನ ಸಿನಿಮಾದಲ್ಲಿ ಅಪರೂಪದ ಕಥಾನಕವಿದೆ ಎಂಬ ನಂಬಿಕೆಯನ್ನು ಹುಟ್ಟುಹಾಕಿದೆ. ಕಥೆ ಮಾತ್ರವಲ್ಲ ಪಾತ್ರ ವರ್ಗದಲ್ಲಿಯೂ ಸಿನಿಮಾ ಸಾಕಷ್ಟು ಸುದ್ದಿಯಾಗಿದೆ. ಈ ಚಿತ್ರ ಇದೇ ತಿಂಗಳ 24ರಂದು ತೆರೆಗಾಣಲಿದೆ. ಹೇಮಂತ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ತುರ್ತು ನಿರ್ಗಮನ ಸಿನಿಮಾದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಜೊತೆಗೆ ತೆರೆಯಿಂದ ಮರೆಯಾಗಿದ್ದ ಪ್ರತಿಭಾನ್ವಿತ ನಾಯಕನ ಪುನರ್ ಆಗಮನನಕ್ಕೂ ತುರ್ತು ನಿರ್ಗಮನ ಕಾರಣವಾಗಿದೆ. ಇಷ್ಟು ಹೇಳಿದ ಮೇಲೆ ನಾವು ಯಾರ ಬಗ್ಗೆ ಹೇಳ್ತಿದ್ದೇವೆ ಅನ್ನೋದು ಗೊತ್ತಾಗಿರಬಹುದು. ಅವರೇ ಎಕ್ಸ್ ಕ್ಯೂಸ್ ಮೀ ಖ್ಯಾತಿಯ ಸುನೀಲ್ ರಾವ್.

ಸುನೀಲ್ ರಾವ್ ತುರ್ತು ನಿರ್ಗಮನ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಹತ್ತು ವರ್ಷದ ನಂತರ ಮತ್ತೆ ನಾಯಕನಾಗಿ ಚಿತ್ರರಸಿಕರನ್ನು ರಂಜಿಸಲು ಬರ್ತಿದ್ದಾರೆ. ಚಿತ್ರರಂಗದಲ್ಲಿ ಮಿಂಚುತ್ತಿದ್ದ ಸುನೀಲ್ ಏಕಾಏಕಿ ತೆರೆ ಮರೆಗೆ ಸರಿದುಬಿಟ್ಟರು. ಕೆಲ ಕಲಾವಿದರ ಬದುಕಲ್ಲಿ ಹೀಗೆ ಆಗುತ್ತದೆ. ಪ್ರತಿಭೆ ಹಾಗೂ ಅವಕಾಶ ಇದ್ದರೂ ಅನಿವಾರ್ಯತೆಯೋ ಏನೋ ಅವರನ್ನು ಈ ರೀತಿ ಮಾಡುವಂತೆ ಮಾಡುತ್ತದೆ. ಇಂತಹ ಕಲಾವಿದರನ್ನು ಚಿತ್ರರಂಗ ಸದಾ ಕಾಲ ನೆನಪಿಸಿಕೊಳ್ಳುತ್ತದೆ. ಸುನೀಲ್ ರಾವ್ ಕೂಡ ಚಿತ್ರರಂಗದಿಂದ ದೂರ ಸರಿದಾಗ ಅವರು ಎಲ್ಲಿ ಹೋದರು? ಯಾವಾಗಾ ಮತ್ತೆ ವಾಪಸ್ ಆಗ್ತಾರೆ? ಅಂತೆಲ್ಲಾ ಪ್ರಶ್ನೆಗಳು ಓಡಾಡಿದ್ದವು. ಈಗ ಸುನೀಲ್ ರಾವ್ ತುರ್ತುನಿರ್ಗಮನ ಚಿತ್ರದ ಮೂಲಕ ಮತ್ತೆ ಆಗಮಿಸಿದ್ದಾರೆ.

Sunil Rao comeback Thurthu Nirgamana film release on 24th june vcs

ಗ್ಯಾಪ್ ತೆಗೆದಕೊಂಡು ಮತ್ತೆ ನಾಯಕನಾಗಿ ಬರ್ತಿರುವ ಸುನೀಲ್ ಈ ಚಿತ್ರ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ ಈ ಸಿನಿಮಾದಲ್ಲಿ ಏನೋ ವಿಶೇಷತೆಯಂತೂ ಇದೆ. ಅದರಲ್ಲಿಯೂ ಸುನೀಲ್ ರಾವ್ ಪಾತ್ರ ಯಾವ ರೀತಿ ಮೂಡಿ ಬಂದಿದೆ ಎಂಬ ನಿರೀಕ್ಷೆಯಂತೂ ಸಹಜವಾಗಿ ಮೂಡುತ್ತದೆ. ಈ ಬಗ್ಗೆ ಚಿತ್ರತಂಡ ಕೆಲ ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟಿದೆ. ತುರ್ತು ನಿರ್ಗಮನ ಸಿನಿಮಾದಲ್ಲಿ ಸುನೀಲ್ ರಾವ್ ಬಹುತೇಕ ಗಂಡುಮಕ್ಕಳ ಬದುಕಿಗೆ ಹತ್ತಿರವಾದ ಪಾತ್ರವೊಂದನ್ನು
ನಿಭಾಯಿಸಿದ್ದಾರೆ. ತಾನು ಬುದ್ಧಿವಂತ ಅಂದುಕೊಂಡು ಸಾಧನೆಗೆ ರೆಡಿಯಾಗಿ ನಿಂತಿರುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ.

Thurthu Nirgamana ಚಿತ್ರದ ಪಾತ್ರಕ್ಕೆ ಬೆಚ್ಚಿಬಿದ್ದ ಸುಧಾರಾಣಿ!

ಚಿತ್ರರಂಗದಿಂದ ದೂರ ಉಳಿದಿದ್ದ ಸುನೀಲ್ ಅವರಿಗೆ ಈ ಪಾತ್ರ ಬ್ರೇಕ್ ಕೊಡಲಿದೆ ಎಂಬ ನಂಬಿಕೆ ಅವರಲ್ಲಿದೆ. ದಶಕದ ಹಿಂದೆ ಎಕ್ಸ್ ಕ್ಯೂಸ್ ಮೀ ಚಿತ್ರವನ್ನು ಚಿತ್ರಪ್ರೇಮಿಗಳು ಹೇಗೆ ಹೊತ್ತು ಮೆರೆಸಿದ್ದರೋ ಅದೇ ರೀತಿ ತುರ್ತುನಿರ್ಗಮನ ಚಿತ್ರ ದಾಖಲೆ ಮಾಡುವ ಭರವಸೆ ಚಿತ್ರರಂಗದಲ್ಲಿದೆ. ಇದೇ ತಿಂಗಳ 24ರಂದು ತುರ್ತುನಿರ್ಗಮನ ಸಿನಿಮಾ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ.

 

Follow Us:
Download App:
  • android
  • ios