ಸ್ಯಾಂಡಲ್ ವುಡ್ ಪ್ರತಿಭಾನ್ವಿತ, ಭರವಸೆಯ ನಟಿ ಶಾನ್ವಿ ಶ್ರೀ ವಾಸ್ತವ್. ಸ್ಯಾಂಡಲ್ ವುಡ್ ನ ಮೋಸ್ಟ್ ಫ್ಯಾಷನೆಬಲ್, ಟ್ರೆಂಡ್ ಸೆಟ್ ಮಾಡುವ ನಟಿ. ಇವರು ಮಾಡುವ ಫ್ಯಾಷನ್ ನ ಫಾಲೋ ಮಾಡುವವರ ಸಂಖ್ಯೆಯೂ ದೊಡ್ಡದಿದೆ.

ವಿಶೇಷವಾಗಿ ಸೀರೆಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾರೆ. ಜೀನ್ಸ್ ಮೇಲೆ ಸೀರೆ ಉಡುತ್ತಾರೆ. ಇವರಿಗೆ ಸೀರೆಯೆಂದರೆ ಸಿಕ್ಕಾಪಟ್ಟೆ ಇಷ್ಟ. ಹೆಚ್ಚಾಗಿ ಭಾರತೀಯ ಉಡುಗೆಯನ್ನೇ ಇಷ್ಟಪಡುತ್ತಾರೆ.

ಖ್ಯಾತ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲನ್ನು ಪ್ರಾರಂಭಿಸಿದ್ದಾರೆ. ಇಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ರನ್ನು ಎಕ್ಸ್ ಕ್ಲೂಸಿವ್ ಆಗಿ ಸಂದರ್ಶನ ಮಾಡಿದ್ದಾರೆ. ಇಲ್ಲಿ ಫ್ಯಾಷನ್ ಬಗ್ಗೆ ಶಾನ್ವಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.