ಬೆಂಗಳೂರು (ಮಾ, 21):  ಕಿರಿಕ್ ಪಾರ್ಟಿ ಸಾನ್ವಿಯಾಗಿ, ’ಯಜಮಾನ’ ನ ನಾಯಕಿಯಾಗಿ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಮಾತ್ರವಲ್ಲ ತೆಲುಗು ಸಿನಿ ರಸಿಕರ ಹಾಟ್ ಫೆವರೇಟ್ ನಟಿ. ’ಗೀತಾ ಗೋವಿಂದಂ’ ಯಶಸ್ಸಿನ ನಂತರ ಡಿಯರ್ ಕಾಮ್ರೆಡ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. 

ಬಿಗ್ ಬಾಸ್ ಧನರಾಜ್‌ ಇನ್ ಮಾಲ್ಗುಡಿ ಡೇಸ್!

’ಡಿಯರ್ ಕಾಮ್ರೆಡ್’ ಟೀಸರ್ ರಿಲೀಸಾಗಿದ್ದು ರಶ್ಮಿಕಾ- ವಿಜಯ್ ಲಿಪ್ ಲಾಕ್ ಸೀನ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಕಾಲೆಳೆಯಲಾಗುತ್ತಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಮಾಡಿರುವ ಟ್ವೀಟ್ ಗಮನ ಸೆಳೆದಿದೆ. 

’ನನ್ನ ಬೆಂಬಲಯಿಲ್ಲ’; ಮಂಡ್ಯ ಸ್ಪರ್ಧೆ ಬಗ್ಗೆ ಗಮನ ಸೆಳೆದಿದೆ ಪುನೀತ್ ಪತ್ರ

ನಿಜವಾದ ಪ್ರೀತಿಯನ್ನು ಪರೀಕ್ಷಿಸಲು ಇದು ಸೂಕ್ತ ಸಮಯ. ನಿಜವಾಗಿಯೂ ನಿಮ್ಮನ್ನು ಯಾರು ಪ್ರೀತಿಸುತ್ತಾರೆ, ಯಾರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಇಲ್ಲಿ ಅರ್ಥವಾಗುತ್ತದೆ. ಅವರು ನಿಮ್ಮೆಲ್ಲಾ ಪ್ರೀತಿ, ಕಾಳಜಿಗೆ ಅರ್ಹರು. ಯಾರು ನಿಮ್ಮನ್ನು ಪ್ರೀತಿಸುವುದಿಲ್ಲವೋ ಅವರು ಹಾಗೆ ಇರಲಿ. ಒಳ್ಳೆಯದಾಗಲಿ ಎಂದು ಹರಸಿ ಬಿಡಿ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. 

 

 

ರಶ್ಮಿಕಾರ ಈ ಟ್ವೀಟ್ ಗೆ ಸಾಕಷ್ಟು ಕಮೆಂಟ್ ಗಳ ಸುರಿಮಳೆಯೇ ಬಂದಿದ್ದರೂ ರಶ್ಮಿಕಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ದಿಢೀರನೇ ಪ್ರೀತಿ ಬಗ್ಗೆ ರಶ್ಮಿಕಾ ಹೀಗ್ಯಾಕೆ ಬರೆದರು ಅನ್ನೋದು ಯಾಕಂತ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ!