Ramya ಅಭಿಮಾನಿಗಳಿಗೆ ಬೇಸರದ ಸುದ್ದಿ; ಸಿನಿಮಾದಿಂದ ಹೊರ ಬಂದ ರಮ್ಯಾ?
ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಿಂದ ಹೊರ ಬಂದ ರಮ್ಯಾ. ಆರ್‌ಜೆ ಸಿರಿ ಆಯ್ಕೆ ಆಗಲು ಕಾರಣವೇನು?
ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಮೋಹಕ ತಾರೆ ರಮ್ಯಾ 2022ರ ವಿಜಯ ದಶಮಿ ಹಬ್ಬದಂದು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಹಲವು ವರ್ಷಗಳ ನಂತರ ರಮ್ಯಾ ಸಿನಿಮಾ ಮಾಡುತ್ತಿದ್ದಾರೆ ಅನ್ನೋದೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಿತ್ತು ಅದೇ ಗುಡ್ ನ್ಯೂಸ್‌ನಲ್ಲಿ ತೇಲುತ್ತಿರುವ ಫ್ಯಾನ್ಸ್‌ಗೆ ಇಂದು ಬೇಸರದ ಸುದ್ದಿ ಹೊರ ಬಂದಿದೆ.. ಅದುವೇ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಿಂದ ಹೊರ ಬಂದಿದ್ದಾರಂತೆ.
'ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾ ತಂಡಕ್ಕೆ ಸೇರಿರುವ ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರಿಗೆ ಹೃದಯ ಪೂರ್ವಕ ಸ್ವಾಗತ' ಎಂದು ಆಪಲ್‌ಬಾಕ್ಸ್ ಸ್ಟುಡಿಯೋ ಟ್ವೀಟ್ ಮಾಡಿತ್ತು. ಈ ಟ್ವೀಟ್ ರೀ-ಶೇರ್ ಮಾಡಿದ ರಮ್ಯಾ 'ಇಂಥ ಅದ್ಭುತ ಕಲಾವಿದರನ್ನು ತಂಡಕ್ಕೆ ಬರ ಮಾಡಿಕೊಳ್ಳಲು ತುಂಬಾನೇ ಖುಷಿಯಾಗುತ್ತಿದೆ' ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ದಾವಣಗೆರೆ ಬೆಣ್ಣೆ ದೋಸೆ ಸವಿದ ರಮ್ಯಾ; ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್
ಸ್ವಾತಿ ಮುತ್ತಿನ ಮಳೆಹನಿಯೇ ತಂಡದಲ್ಲಿರು ಇನ್ನಿತ್ತರ ಕಲಾವಿದರನ್ನು ರಮ್ಯಾ ತಬ್ಬಿಕೊಂಡು ಸ್ವಾಗತ ಮಾಡಿಕೊಂಡಿದ್ದಾರೆ, ಮೋಹಕ ತಾರೆ ಟ್ವೀಟ್‌ನ ಅರ್ಥ ಕೂಡ ಇಷ್ಟೆ ಆದರೆ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಖಾಸಗಿ ವೆಬ್‌ಗಳಲ್ಲಿ ಹರಿದಾಡುತ್ತಿರುವ ವಿಚಾರ ಏನೆಂದರೆ ರಮ್ಯಾ ಸಿನಿಮಾದಿಂದ ಹೊರ ಬಂದಿದ್ದಾರೆ ರಮ್ಯಾ ಸ್ಥಾನಕ್ಕೆ ಆರ್‌ಜೆ ಸಿರಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಆರ್‌ಜೆ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ನಿರೂಪಕಿ ಸಿರಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠಿ, ರೇಖಾ, ಶ್ರದ್ಧಾ, ಪ್ರಕಾಶ್ ಮತ್ತು ಸ್ನೇಹಾ ಶರ್ಮಾ ಅಭಿನಯಿಸುತ್ತಿದ್ದಾರೆ.
ರಮ್ಯಾ ಫುಲ್ ಬ್ಯುಸಿ:
ಸಿನಿಮಾ ರಂಗ ಮತ್ತು ರಾಜಕೀಯದಿಂದ ರಮ್ಯಾ ದೂರ ಉಳಿದಿದ್ದರು. ಅಭಿಮಾನಿಗಳು ಒತ್ತಾಯಕ್ಕೆ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂಗೆ ಕಾಲಿಟ್ಟರು. ಇನ್‌ಸ್ಟಾಗ್ರಾಂಗೆ ಕಾಲಿಟ್ಟ ಆರಂಭದಿಂದಲ್ಲೂ ಹೊಸ ಕಲಾವಿದರೆಗೆ ರಮ್ಯಾ ಸಪೋರ್ಟ್ ಮಾಡುತ್ತಿದ್ದಾರೆ. ಸಿನಿಮಾ ಆಗಿರಲಿ, ಶಾರ್ಟ್ ಫಿಲ್ಮಂ ಅಗಿರಲಿ ರಮ್ಯಾ ಟ್ವೀಟ್ ಮಾಡಿ ಪೋಸ್ಟ್ ಮಾಡಿ ರಿಲೀಸ್ ಮಾಡಿದರೆ ತಂಡಕ್ಕೆ ಸಿಗುವ ಸಪೋರ್ಟ್ ದೊಡ್ಡದ್ದು. ಕೆಲವು ದಿನಗಳ ಹಿಂದೆ ರಮ್ಯಾ ದಾವಣಗೆರೆಯಲ್ಲಿ ಹೆಡ್‌ಬುಷ್ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅಲ್ಲಿನ ಜನರ ಜೊತೆ ಮಾತನಾಡಿ ಸೆಲ್ಫಿಗೆ ಪೋಸ್ ಕೊಟ್ಟು ಸೆಲೆಬ್ರಿಟಿ ಲೈಫ್‌ನ ಮತ್ತೆ ಸಂಭ್ರಮಿಸಿದ್ದರು.
ಸೋಷಿಯಲ್ ಮೀಡಿಯಾ ನಿಂದಕರಿಗೆ ಬುದ್ದಿ ಕಲಿಸಲು ಮುಂದಾದ ರಮ್ಯಾ
ನನ್ನ soulmate ಸತ್ತುಹೋಗಿರಬಹುದು:
ರಮ್ಯಾ ಲೈಮ್ ಲೈಟ್‌ನಿಂದ ದೂರ ಉಳಿಯುತ್ತಿದ್ದಂತೆ ಮದುವೆ ಅಗಿದ್ದಾರೆ, ಬಾಯ್‌ಫ್ರೆಂಡ್ ಇದ್ದಾರೆ ಅಂತೆಲ್ಲಾ ಗಾಸಿಪ್ ಶುರು ಮಾಡಿದ್ದರು. ಆದರೆ ರಮ್ಯಾ ಸಿಂಗಲ್ ಆಗಿರುವುದಾಗಿ ಎಷ್ಟು ಸಲ ಹೇಳಿದ್ದರೂ ಯಾರೂ ನಂಬುತ್ತಿರಲಿಲ್ಲ ಹೀಗಾಗಿ ಇಂಗ್ಲಿಷ್ ಸಾಂಗ್ ಮೂಲಕ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
ಖ್ಯಾತ ಗಾಯಕ Iamnotshane ಬರೆದಿರುವ 'My be my soulmate died. I dont know. My be i dont have a soul. What if I saw you on the train last night and I just walked on by What if I never let you in And now you're with somebody who did All of this miscommunication, indecisiveness, be patient' ಹಾಡನ್ನು ರಮ್ಯಾ ಹಾಡಿದ್ದಾರೆ. ಅಲ್ಲದೆ 'ಯಾಕೆ ನೀನು ಇನ್ನೂ ಮದ್ವೆ ಆಗಿಲ್ಲ? ಬಹುಷ ನನ್ನ ಸೋಲ್‌ಮೆಟ್ ಸತ್ತಿರಬೇಕು' ಎಂದು ಬರೆದುಕೊಂಡಿದ್ದಾರೆ.