Asianet Suvarna News Asianet Suvarna News

ದೇಶಕ್ಕೆ ಕೊರೋನಾ ಚಿಂತೆ, ಪ್ರಿಯಾ ವಾರಿಯರ್‌ಗೆ ಸಿನಿಮಾ ಚಿಂತೆ; ನೆಟ್ಟಿಗರು ಫುಲ್‌ ಕ್ಲಾಸ್

ಕಣ್ಣನ್ಸೆಯಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾ ವಾರಿಯರ್‌ ತಮ್ಮ ಮೊದಲ ಕನ್ನಡ ಚಿತ್ರಕ್ಕೆ ಸಾಥ್‌ ನೀಡಲು ಕನ್ನಡ ಸಿನಿ ಪ್ರೇಮಿಗಳಲ್ಲಿ ಕನ್ನಡದಲ್ಲಿಯೇ ಮನವಿ ಮಾಡಿಕೊಂಡಿದ್ದಾರೆ.

Mollywood Priya Prakash Varrier kannada message to fans
Author
Bangalore, First Published Apr 2, 2020, 11:37 AM IST

'ಓರು ಆಡಾರ್‌ ಲವ್' ಚಿತ್ರದ ಟ್ರೈಲರ್‌ ಮೂಲಕ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ಮಾಲಿವುಡ್‌ ಬೆಡಗಿ ಪ್ರಿಯಾ ವಾರಿಯರ್‌. ಈಗ ಕನ್ನಡ ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಅದುವೇ ವಿಷ್ಣುಪ್ರಿಯಾ ಚಿತ್ರದ ಮೂಲಕ.

ಹೌದು! 'ಪಡ್ಡೆಹುಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಜರ್ನಿ ಆರಂಭಿಸಿ ಶ್ರೇಯಸ್‌ ಮಂಜುಗೆ ಜೋಡಿಯಾಗಿ ಪ್ರಿಯಾ ಮಿಂಚಲಿದ್ದಾರೆ. ವಿಕೆ ಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದು, ಕೆ.ಮಂಜು ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದ ಅಫೀಶಿಯಲ್‌ ಪೋಸ್ಟರ್‌ ಅನ್ನು ಏಪ್ರಿಲ್‌ 5ರಂದು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಇದಕ್ಕೆ ಸಾಥ್‌ ನೀಡಿ ಪ್ರೋತ್ಸಾಯಿಸಬೇಕೆಂದು ಪ್ರಿಯಾ ವಾರಿಯರ್‌ ಇನ್‌ಸ್ಟಾಗ್ರಾಂನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಟ್ಯಾಟೂ ಮೂಲಕ ಗಮನ ಸೆಳೆಯುತ್ತಿದ್ದಾರೆ ಪ್ರಿಯಾ ವಾರಿಯರ್

'ನನ್ನ ಎಲ್ಲಾ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ಪ್ರಿಯಾ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ  'ವಿಷ್ಣುಪ್ರಿಯ'ದ ಫರ್ಸ್ಟ್‌ ಲುಕ್‌ ಏಪ್ರಿಲ್‌ 5ಕ್ಕೆ ಬಿಡುಗಡೆ ಆಗಲಿದೆ. ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್‌ ಮಾಡಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನನ್ನ ಸಿನಿಮಾ ತಂಡದ ಮೇಲೆ ಇರಲಿ...' ಎಂದು ಬರೆದು ಕೊಂಡಿದ್ದಾರೆ.

 

 
 
 
 
 
 
 
 
 
 
 
 
 

ನನ್ನ ಎಲ್ಲಾ ಕನ್ನಡದ ಪ್ರೀತಿಯ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡದ ಸಿನಿಮಾ " ವಿಷ್ಣು ಪ್ರಿಯ" ದ ಫಸ್ಟ್ ಲುಕ್ ಏಪ್ರಿಲ್ 5 ಕ್ಕೆ ಬಿಡುಗಡೆ ಆಗಲಿದೆ, ಎಲ್ಲರೂ ದಯವಿಟ್ಟು ಶೇರ್ ಮಾಡಿ ಹಾಗೂ ಸಪೋರ್ಟ್ ಮಾಡಿ....ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದ ಸದಾ ನನ್ನ ಮೇಲೆ ಮತ್ತು ನಮ್ಮ ಸಿನಿಮಾ ತಂಡದ ಮೇಲೆ ಇರಲಿ ..🙏🤍 I’m more than happy to share this exciting news with all of you.Yes,finally the official poster is going to be out on April 5th. I’d like to seek all your blessings and prayers on behalf of the whole team. A @vkprakash61 movie. @avinodbharathi @gopisundar__official @shreyaskmanju5 #kmanjucinemaas Ps:Stay indoors.Stay safe.♥️

A post shared by Priya Prakash Varrier💫 (@priya.p.varrier) on Mar 31, 2020 at 8:10am PDT

ಸಿನಿಮಾ ವಿಚಾರ ಮಾತ್ರ ಕನ್ನಡದಲ್ಲಿದೆ. ಆದರೆ ಕೊರೋನಾ ವೈರಸ್‌ ಬಗ್ಗೆ ಕಾಳಜಿ ವಹಿಸಿ ಎಂದು ಕರ್ನಾಟಕದ ಜನತೆಗೆ ಯಾಕೆ ನೀವು ಹೇಳಿಲ್ಲ, ಎಂದು ನೆಟ್ಟಿಗರು ಗರಂ ಆಗಿದ್ದಾರೆ.  ಈ ಹಿಂದೆ ಒಕ್ಕಲಿಗ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾ ಪ್ರಕಾಶ್‌ ವಿರುದ್ಧ ನವರಸ  ನಾಯಕ ಜಗ್ಗೇಶ್‌ ಕೂಡ ಗರಂ ಆಗಿದ್ದರು.

ಕನ್ನಡ ಚಿತ್ರರಂಗದಲ್ಲಿ ಮಿಂಚಲು ಹಾಗೂ ಹೆಸರು ಮಾಡಲು ಬರುವ ಪರ ಭಾಷಾ ನಟ-ನಟಿಯರು ಕನ್ನಡ ಸಿನಿ ಪ್ರೇಮಿಗಳು ಎಂದೂ ಕೈ ಬಿಟ್ಟಿಲ್ಲ. ಆದರೆ, ಕರುನಾಡ ಸಂಸ್ಕೃತಿ ಹಾಗೂ ಭಾಷೆಗೆ ಅನ್ಯ ಭಾಷೆಯರು ಹೊಂದಿಕೊಳ್ಳಲಿ ಎಂಬುವುದು ಕನ್ನಡಿಗರ ಆಶ್ಚಯ.

Follow Us:
Download App:
  • android
  • ios