ಶಿವರಾತ್ರಿಗೆ ಬೈಕ್ ಏರಿ ಬರ್ತಿದ್ದಾನೆ 'ಕೋಟಿಗೊಬ್ಬ'; ಟೀಸರ್ ಮಿಸ್ ಮಾಡ್ಬೇಡಿ!
ಶಿವರಾತ್ರಿ ಹಬ್ಬವನ್ನು ಕಿಚ್ಚನ ಅಭಿಮಾನಿಗಳು ಈ ಬಾರಿ ಒಂಚೂರು ಗ್ರ್ಯಾಂಡ್ ಆಗಿಯೇ ಆಚರಣೆ ಮಾಡಬಹುದು. ಯಾಕೆಂದರೆ ಹಬ್ಬದಂದೇ ಸುದೀಪ್ ಅವರ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ.
ಶಿವಕಾರ್ತಿಕ್ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ಬಹು ನಿರೀಕ್ಷೆಯ ‘ಕೋಟಿಗೊಬ್ಬ 3’ ಚಿತ್ರದ ಬೈಕ್ ಟೀಸರ್ ಫೆ.21ರಂದು ಮಧ್ಯಾಹ್ನ 12ಗಂಟೆಗೆ ಬಿಡುಗಡೆ ಆಗುತ್ತಿದೆ. ಬೈಕ್ ರೇಸರ್ನಂತೆ ಬೈಕ್ ಮೇಲೆ ಕೂತು ಟೀಸರ್ನಲ್ಲಿ ಸುದೀಪ್ ಎಂಟ್ರಿ ಆಗುವುದು ವಿಶೇಷ ಎನ್ನುತ್ತಾರೆ ನಿರ್ದೇಶಕರು.
ಸ್ಟಾರ್ಸ್ ವಾರ್ಗೆ ಬಿತ್ತು ಬ್ರೇಕ್, ದಚ್ಚು- ಕಿಚ್ಚಗೆ ಗ್ರೀನ್ ಸಿಗ್ನಲ್ ಕೊಟ್ಟ ಧ್ರುವ
ಚಿತ್ರದಲ್ಲಿ ಸುದೀಪ್ ಅವರಿಗೆ ಮಲಯಾಳಿ ಬೆಡಗಿ ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನ ಶ್ರದ್ಧಾ ದಾಸ್ ಬಹು ಮುಖ್ಯವಾದ ಪಾತ್ರ ಮಾಡಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಚಿತ್ರೀಕರಣ ಮಾಡಿದ್ದು, ಶೂಟಿಂಗ್ ಮುಕ್ತಾಯಗೊಂಡಿದೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಹೇಗಿರುತ್ತದೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.
ಹರೀಶ್ ರಾಜ್ಗೂ ಸಿಗ್ತು ಕಿಚ್ಚನಿಂದ ದುಬಾರಿ ಗಿಫ್ಟ್?
ಕಿಚ್ಚನ ಅಭಿಮಾನಿಗಳ ಈ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ದೇಶಕ ಶಿವಕಾರ್ತಿಕ್ ಟೀಸರ್ ರೂಪಿಸುತ್ತಿದ್ದಾರಂತೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಶಿವರಾತ್ರಿಯಂದು ಟೀಸರ್ ಅನಾವರಣಗೊಳ್ಳಲಿದೆ.
"