ಬೆಂಗಳೂರು(ಮಾ. 19)  ಲಘುಹೃದಯಾಘಾತಕ್ಕೆ ಒಳಗಾಗಿದ್ದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಏಕ್ ಲವ್ ಯಾ ಚಿತ್ರದ ಮ್ಯೂಸಿಕ್ ಕಂಪೋಸ್ ಮಾಡೋ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

ಈ ವಿಚಾರವನ್ನು ನಿರ್ದೇಶಕ ಜೋಗಿ ಪ್ರೇಮ್ ಸೋಶಿಯಲ್ ಮೀಡಿಯಾ ಮುಖೆನ ಹಂಚಿಕೊಂಡಿದ್ದಾರೆ.  ಮ್ಯೂಸಿಕ್ ಬೀಟ್ಸ್ ಇರೋವರ್ಗೂ ನಮ್ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ ನಮ್ ಅರ್ಜುನ್ ಜನ್ಯಾ..

ಕೋರೋನ ಬಗ್ಗೆ ಸುಳ್ಳು ವದಂತಿಗಳನ್ನ ನಂಬಿ ಹೆದುರ್ಕೊಂಡು ಕೂತಿದ್ರೆ ಯಾವತ್ತಾದ್ರೂ ಒಂದಿನ ಸಾಯೋ ನಾವ್ಗಳು ಇವತ್ತೇ ಸಾಯೋದ್ರಲ್ಲಿ ಸಂಶಯನೇ ಇಲ್ಲ...ಸರಿಯಾದ ಮಾಹಿತಿಯನ್ನ ತಿಳ್ಕೋಳಿ ಮುನ್ನೆಚ್ಚರಿಕೆ ವಹಿಸಿ ಪ್ರತಿಯೊಬ್ಬರು ಸುರಕ್ಷಿತವಾಗಿರಿ ಎಂದು ಪ್ರೇಮ್ ಬರೆದುಕೊಂಡಿದ್ದಾರೆ.

ನೂರು ಸಿನಿಮಾಗಳ ಸಂಗೀತ ಸರದಾರ ಅರ್ಜುನ್‌ ಜನ್ಯಾ !

ಸಂಗೀತ ಲೋಕದ ಮಾಂತ್ರಿಕ ಅರ್ಜುನ್ ಜನ್ಯಾಗೆ ಲಘು ಹೃದಯಾಘಾತ ಸಂಭವಿಸಿತ್ತು. ಚಿಕಿತ್ಸೆಗಾಗಿ ಮೈಸೂರಿನ  ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಜನ್ಯಾಗೆ ಆಂಜಿಯೋಪ್ಲ್ಯಾಸ್ಟಿ ಹಾಗೂ ಆಂಜಿಯೋಗ್ರಾಂ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆಗೆ ಸ್ಪಂದಿಸಿದ ಮ್ಯೂಸಿಕ್ ಮಾಂತ್ರಿಕ ಮತ್ತೆ ಕೆಲಸಕ್ಕೆ ಹಾಜರ್ ಆಗಿದ್ದಾರೆ. ಅವರ ಮುಂದಿನ ಪಯಣಕ್ಕೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸೊಣ..