Asianet Suvarna News Asianet Suvarna News

ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್‌ 2 ಟೀಂನಿಂದ ಹೊಸ ಸುದ್ದಿ!

ಕೆಜಿಎಫ್ 2 ಚಿತ್ರತಂಡ ಯಶ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದೆ. ಇದೇ ಡಿಸಂಬರ್ 21 ರಂದು ಫಸ್ಟ್ ಲುಕ್ ರಿಲೀಸ್ ಆಗಲಿದೆ. 

Kannada actor Yash KGF 2 first look will be release on december 21
Author
Bengaluru, First Published Dec 14, 2019, 12:00 PM IST

ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್.  ಸ್ಯಾಂಡಲ್‌ವುಡ್‌ನಲ್ಲಿ ಐತಿಹಾಸಿಕ ದಾಖಲೆಯನ್ನೇ ಬರೆದಿದೆ.  ಯಶ್ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಾತಾದರು. ಇದೀಗ ಈ ಚಿತ್ರದ ಚಾಪ್ಟರ್ - 2 ತೆರೆಗೆ ಬರುತ್ತಿದೆ. ಸಹಜವಾಗಿ ನಿರೀಕ್ಷೆ ಹೆಚ್ಚಾಗಿದೆ. 

'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

ಈಗ ಕೆಜಿಎಫ್ ಚಾಪ್ಟರ್- 2 ಶೂಟಿಂಗ್ ಶುರುವಾಗಿದೆ.  ಈಗಾಗಲೇ ಸಂಜಯ್ ದತ್, ರವೀನಾ ಟಂಡನ್ ಕೂಡಾ ಭಾಗಿಯಾಗುತ್ತಿದ್ದಾರೆ. ಯಶ್ ಪಾತ್ರದ ಬಗ್ಗೆ ಸಹಜ ಕುತೂಹಲ ಹೆಚ್ಚಾಗಿದೆ.  ಕೆಜಿಎಫ್ -2 ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

 

ಕೆಜಿಎಫ್- 2 ಚಿತ್ರದ ಫಸ್ಟ್ ಲುಕ್ ಡಿಸಂಬರ್ 21 ರ ಸಂಜೆ 5.45 ಕ್ಕೆ ರಿಲೀಸ್ ಆಗಲಿದೆ.  ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಭಾಷೆಯಲ್ಲಿ ರಿಲೀಸ್ ಆಗಲಿದೆ. 

ಕೆಜಿಎಫ್ ತಂಡ ಡಿಸಂಬರ್ 21 ರಂದೇ ಫಸ್ಟ್ ಲುಕ್ ರಿಲೀಸ್ ಮಾಡಲು ಕಾರಣವಿದೆ. ಕೆಜಿಎಫ್ ಚಾಪ್ಟರ್ 1 ಇದೇ ದಿನ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಅದೇ ರೀತಿ ಇದೂ ಕೂಡಾ ಸಕ್ಸಸ್ ಆಗಲಿ ಎಂದು ಡಿಸಂಬರ್ 21 ರಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. 

 

Follow Us:
Download App:
  • android
  • ios