ಸ್ಯಾಂಡಲ್‌ವುಡ್‌ ಕಾಮಿಡಿ ಕಿಂಗ್ ಎಂದೇ ಗುರುತಿಸಿಕೊಂಡಿರುವ ಬುಲೆಟ್‌ ಮ್ಯಾನ್‌ ಪ್ರಕಾಶ್, ತಮ್ಮ ಹಾಸ್ಯ ಚಟಾಕಿಯನ್ನು ಅಂತ್ಯಗೊಳಿಸಿದ್ದಾರೆ. ಆ ಮೂಲಕ ಕನ್ನಡ ಸಿನಿ ಪ್ರೇಮಿಗಳು ಹಾಸ್ಯದಿಂದ ದೂರವಾಗುವಂತಾಗಿದೆ.  ಲಿವರ್‌ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟೀಸ್‌ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 44 ವರ್ಷ ವಯಸ್ಸಾಗಿತ್ತು.

ಕೆಲವು ದಿನಗಳಿಂದ ಗ್ಯಾಸ್ಟ್ರಿಕ್‌ ಹೆಚ್ಚಾದ ಕಾರಣ ಡಾ. ತೇಜಸ್ವಿ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಪ್ರಕಾಶ್.  ಆದರೆ ಪರೀಕ್ಷೆ ವೇಳೆ ಅವರ ಕಿಡ್ನಿ ಹಾಗೂ ಲಿವರ್‌ ವೈಫಲ್ಯಗೊಂಡಿರುವುದು ಗಮನಕ್ಕೆ ಬಂದಿತ್ತು. ಎಲ್ಲವಕ್ಕೂ ತಜ್ಞರು ಒಟ್ಟಾಗಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 

ಅನಾರೋಗ್ಯ: ಕನ್ನಡದ ಹಾಸ್ಯ ನಟ ಬುಲೆಟ್‌ ಪ್ರಕಾಶ್ ಆಸ್ಪತ್ರೆ ದಾಖಲು!

ಬುಲೆಟ್‌ ಪ್ರಕಾಶ್‌ ಪತ್ನಿ ಹಾಗೂ ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಜತೆಗೆ ಕನ್ನಡದ ಅಪಾರ ಸಿನಿ ಅಭಿಮಾನಿಗಳಿಂದಲೂ ದೂರವಾಗಿದ್ದಾರೆ. ದೇಹದ ತೂಕ ಇಳಿಸಿಕೊಳ್ಳಬೇಕೆಂದು ನಾನಾ ರೀತಿಯ ಸಾಹಸ ಮಾಡಿದ್ದ ಬುಲೆಟ್‌, ಅದಕ್ಕೆ ಚಿಕಿತ್ಸೆಯನ್ನೂ ಪಡೆದಿದ್ದರು. ಆಗಲೇ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು.  ಬುಲೆಟ್‌ ಅಂತಿಮ ಕಾರ್ಯಗಳ ಬಗ್ಗೆ ಕುಟುಂಬಸ್ಥರು ಏನೂ ಹೇಳಿಲ್ಲ. 

ಬುಲೆಟ್‌ ಚಲಾಯಿಸುತ್ತಿದ್ದ ಕಾರಣ ಪ್ರಕಾಶ್ ಅವರಿಗೆ  ಬುಲೆಟ್‌ ಎಂಬ ಅನ್ವರ್ಥ ನಾಮ ಸೇರಿಕೊಂಡಿತ್ತು. ರಂಗಭೂಮಿಯಿಂದ ಚಿತ್ರರಂಗ ಪ್ರವೇಶಿಸಿದ ಬುಲೆಟ್‌, ಸ್ಯಾಂಡಲ್‌ವುಡ್‌ ಹೆಸರಾಂತ ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ.  ಬಿಗ್ ಬಾಸ್‌ ಸೀಸನ್‌-2ರಲ್ಲಿ 8 ದಿನಗಳ ಕಾಲ ವೈಲ್ಡ್ ಕಾರ್ಡ್‌ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಬುಲೆಟ್‌ ಪ್ರಕಾಶ್‌ ಸ್ಥಿತಿ ಗಂಭೀರ: ವೆಂಟಿಲೇಟರ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಟ!

ಎರಡು ವರ್ಷಗಳ ಹಿಂದೆ  ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ  ಮಾಡಿಸಿಕೊಂಡ ನಂತರ ಬುಲೆಟ್‌ ಪ್ರಕಾಶ್‌ ಜಾಂಡೀಸ್‌ನಿಂದ ಬಳಲುತ್ತಿದ್ದರು, ಸರಿಯಾಗಿ ಚಿಕಿತ್ಸೆ ಪಡೆಯದ ಕಾರಣ ಆರೋಗ್ಯದಲ್ಲಿ ಇನ್ನಷ್ಟು ಏರು-ಪೇರು ಕಾಣಿಸಿಕೊಂಡಿತ್ತು.  ದಿನೇ ದಿನೇ ಆರೋಗ್ಯ ಸಮಸ್ಯೆಗಳು ಹೆಚ್ಚಾದ ಕಾರಣ ಚಿತ್ರರಂಗದಲ್ಲಿ ನಟಿಸುವ ಅವಕಾಶ ಕಳೆದುಕೊಂಡರು. ಇದರ ಪರಿಣಾಮ ಮಾನಸಿಕವಾಗಿಯೂ ಜರ್ಜರಿತರರಾಗಿದ್ದರು ಎನ್ನಲಾಗಿದೆ.

2002ರಲ್ಲಿ 'ಧ್ರುವ' ಚಿತ್ರದಲ್ಲಿ ಅಭಿನಯಿಸಿದ್ದಾರೆ, ಚಿತ್ರರಂಗದಲ್ಲಿ ಸಾಧು ಸೋಕಿಲ ಹಾಗೂ ಬುಲೆಟ್‌ ಪ್ರಕಾಶ್‌ ಜೋಡಿ ಕ್ಲಿಕ್ ತಂದುಕೊಟ್ಟಿತ್ತು. ಸ್ಯಾಂಡಲ್‌ವುಡ್‌ನ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.  ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಕೊನೆ ಉಸಿರೆಲ್ಲೂ ಒಮ್ಮೆ ನಟ ದರ್ಶನ್‌ ಜೊತೆ ನಟಿಸಬೇಕೆಂದು ಹೇಳಿಕೊಂಡಿದ್ದಾರಂತೆ.