‘ಏಕ್‌ ಲವ್‌ ಯಾ ಚಿತ್ರದ್ದು ಕಾಲ್ಪ​ನಿಕ ಕತೆ​ಯಲ್ಲ. ಇದು ರಿಯಲ್ಲಾಗಿ ನಡೆದ ಕತೆ. ಪ್ರೇಮಿ​ಯೊ​ಬ್ಬನ ಜೀವ​ದಲ್ಲಿ ನಡೆದ ಒಂದು ರೋಚ​ಕ​ವಾದ ನೈಜ ಕತೆ​ಯನ್ನು ತೆಗೆ​ದು​ಕೊಂಡು ಈ ಸಿನಿಮಾ ಮಾಡಿ​ದ್ದೇನೆ. ಚಿತ್ರದ ಟೀಸರ್‌ ನೋಡಿ​ದ​ವ​ರಿಗೆ ಖಂಡಿತ ಅದರ ಗುಟ್ಟು ಗೊತ್ತಾ​ಗು​ತ್ತದೆ. ನೈಜ ಕತೆಗೆ ನಾನು ಒಂದಿಷ್ಟುಸಿನಿಮಾ ತಿರು​ವು​ಗ​ಳನ್ನು ಕೊಟ್ಟಿರುವೆ. ವಿಶೇಷ ಅಂದರೆ ಈ ನೈಜ ಕತೆಯ ಪ್ರೇಮಿ​ಗಳು ಇನ್ನೂ ಇದ್ದಾರೆ. ಅವರು ಸದ್ಯ ದುಬೈ​ನಲ್ಲಿ ವಾಸ ಮಾಡು​ತ್ತಿ​ದ್ದಾರೆ. ಸಿನಿಮಾ ಬಿಡು​ಗ​ಡೆಯ ಹೊತ್ತಿಗೆ ಅವ​ರನ್ನ ಇಲ್ಲಿಗೆ ಕರೆ​ಸು​ತ್ತೇನೆ. ಖಂಡಿತ ಯಾರೂ ಊಹೆ ಮಾಡದ ಒಂದು ಅನ್‌​ಟೋಲ್ಡ್‌ ಪ್ರೇಮ ಕತೆ​ಯಂತೂ ಈ ಚಿತ್ರ​ದಲ್ಲಿ ನೋಡ​ಬ​ಹುದು’ ಎನ್ನು​ತ್ತಾರೆ ನಿರ್ದೇ​ಶಕ ಪ್ರೇಮ್‌.

ಹೆಣ್ಮಕ್ಕಳು ಬಾರ್‌ಗೆ ಹೋಗ್ಬಾರ್ದು ಅಂತಾ ಬೋರ್ಡ್‌ ಹಾಕಿದ್ದಾರಾ? ರಚ್ಚು ಇದೇನಿದು!

ರಕ್ಷಿತಾ ಪ್ರೇಮ್‌ ನಿರ್ಮಾ​ಣದ ರಾಣಾ ನಾಯ​ಕ​ನಾಗಿ ಹಾಗೂ ರಚಿತಾ ರಾಮ್‌, ಗ್ರೀಷ್ಮಾ ನಾಣಯ್ಯ ನಾಯ​ಕಿ​ಯ​ರಾಗಿ ನಟಿ​ಸಿರುವ ಈ ಚಿತ್ರದ ಟೀಸರ್‌ ಪ್ರೇಮಿ​ಗಳ ದಿನದ ಅಂಗ​ವಾಗಿ ಬಂದಿದ್ದು, ಟೀಸ​ರ್‌ಗೆ ತುಂಬಾ ದೊಡ್ಡ ಮಟ್ಟ​ದಲ್ಲಿ ರೆಸ್ಪಾನ್ಸ್‌ ಬರು​ತ್ತಿ​ದೆ​ಯಂತೆ. ಎ2 ಯೂಟ್ಯೂಬ್‌ ಚಾನ​ಲ್‌​ನಲ್ಲಿ ಮೂರೇ ದಿನಕ್ಕೆ ನಾಲ್ಕು ಲಕ್ಷ ವೀಕ್ಷಣೆ ಪಡೆ​ದು​ಕೊಂಡಿದೆ.

ರಚಿತಾ ಕೈಗೆ ಸಿಗರೇಟ್, ರಕ್ಷಿತಾ ಕೈಗೆ ಎಣ್ಣೆ ಬಾಟ್ಲಿ, ಫ್ಯಾನ್ಸ್‌ ಕೈಯಲ್ಲಿ ಪ್ರೇಮ್!

ಮತ್ತೆ ಮುನಿ​ಸಿ​ಕೊಂಡ ರಚಿತಾ ರಾಮ್‌

ಅಂದ​ಹಾಗೆ ರಚಿತಾ ರಾಮ್‌ ಮತ್ತೆ ಮುನಿ​ಸಿ​ಕೊಂಡಿ​ದ್ದಾರೆ. ಈ ಬಾರಿಯೂ ಅವರ ಮುನಿ​ಸಿಗೆ ಕಾರಣ ಎಕ್ಸ್‌​ಪೋ​ಸಿಂಗ್‌. ಈ ಹಿಂದೆ ಆರ್‌ ಚಂದ್ರು ನಿರ್ದೇ​ಶ​ನದ ‘ಐ ಲವ್‌ ಯೂ’ ಚಿತ್ರ​ದಲ್ಲಿ ಹೀಗೆ ಎಕ್ಸ್‌​ಪೋಸ್‌ ಮಾಡಿ ವಿವಾದ ಮಾಡಿ​ಕೊಂಡಿ​ದ್ದ​ರು. ಅವರ ಹಸಿ​ಬಿಸಿ ದೃಶ್ಯ​ಗಳು ಟೀಸ​ರ್‌​ನಲ್ಲೇ ಕಂಡು ಒಂಚೂರು ಗರಂ ಆಗಿ​ದ್ದರು. ಉಪೇಂದ್ರ ಅವರೇ ಈ ದೃಶ್ಯ ನಿರ್ದೇ​ಶನ ಮಾಡಿ​ದರು ಎನ್ನುವ ಸುದ್ದಿ ಆಯ್ತು. ಪ್ರಿಯಾಂಕ ಉಪೇಂದ್ರ ಸಿಟ್ಟಾ​ದರು. ‘ನಾನು ಮುಂದೆ ಅಂಥ ದೃಶ್ಯ​ಗ​ಳಲ್ಲಿ ನಟಿ​ಸ​ಲ್ಲ’ ಎಂದು ಹೇಳಿ​ಕೊಂಡರು ರಚಿತಾ.

ಸೋಷಿಯಲ್ ಮೀಡಿಯಾದಲ್ಲಿ ರಚಿತಾ ರಾಮ್ ಫಾಲೋ ಮಾಡ್ತೀರಾ? ಈ ಖಾತೆಯಿಂದ ಮೋಸ!

ಈಗ ‘ಏಕ್‌ ಲವ್‌ ಯಾ’ ಟೀಸರ್‌ ನೋಡಿ​ದರು ಮತ್ತೆ ರಚಿತಾ ಅವ​ರಿಗೆ ಈ ಹಾಟ್‌ ಸೀನ್‌​ಗಳ ಬಗ್ಗೆಯೇ ಕೇಳ​ಲಾ​ರಂಭಿ​ಸಿ​ದ್ದಾರೆ. ಸ್ಮೋಕ್‌ ಮಾಡು​ವುದು, ನಾಯ​ಕನ ಮುಂದೆ ಸೀರೆ ಬಿಚ್ಚುವ ದೃಶ್ಯ, ಲಿಪ್‌ ಕಿಸ್‌... ಹೀಗೆ ಎಲ್ಲ ಘಾಟಿನ ದೃಶ್ಯ​ಗಳು ಟೀಸರ್‌ನಲ್ಲಿವೆ. ಮತ್ತೆ ‘ಐ ಲವ್‌ ಯೂ’ ಚಿತ್ರ​ದ ಸಮ​ಯ​ದಲ್ಲಿ ಕೇಳ​ಲಾದ ಪ್ರಶ್ನೆ​ಗಳೇ ಈಗಲೂ ಅವರ ಮುಂದೆ ಬಂದಿ​ವೆ. ‘ಟೀಸರ್‌ ನೋಡಿ ನನ್ನ ಬಗ್ಗೆ ಟ್ರೋಲ್‌ ಮಾಡು​ತ್ತಿ​ದ್ದಾರೆ. ಪಾಸಿ​ಟೀವ್‌ ಆದರೂ, ನಗೆ​ಟೀವ್‌ ಆದರೂ ನಾನು ಸುದ್ದಿ ಆಗು​ತ್ತೇನೆ. ನಾನು ಯಾಕೆ ಇಂಥ ಬೋಲ್ಡ್‌ ಪಾತ್ರ ಮಾಡಿ​ದ್ದೇನೆ ಎಂಬು​ದನ್ನು ಸಿನಿಮಾ ನೋಡಿ ತಿಳಿ​ದು​ಕೊ​ಳ್ಳಿ’ ಖಾರ​ವಾಗಿ ಪ್ರತಿ​ಕ್ರಿ​ಯಿ​ಸಿ​ದ್ದಾರೆ ಡಿಂಪಲ್‌ ಕ್ವೀನ್‌.