ಸಾಂಗ್, ಟೀಸರ್ ಬಿಡುಗಡೆ ಬಳಿಕ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ​ ಅಬ್ಬರ ಜೋರಾಗಿದೆ. ಇದರ ಬೆನ್ನಲ್ಲೇ ದರ್ಶನ್ ಮುಂಬರುವ  ಚಿತ್ರ 'ರಾಬರ್ಟ್' ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 

ರಾಬರ್ಟ್ ಚಿತ್ರೀಕರಣ  ಮುಕ್ತಾಯಗೊಂಡಿದ್ದು, ಇದೇ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ. ಈಗಂತಾ ನಾವ್ ಹೇಳ್ತಿಲ್ಲ. ಸ್ವತಃ ಡಿ ಬಾಸ್ ದಶರ್ಶನ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ಇಂದು [ಗುರುವಾರ] ರಾಬರ್ಟ್ ಶುಟಿಂಗ್ ಮುಗಿದಿದ್ದು, ಏಪ್ರಿಲ್ ತಿಂಗಳಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ ಎಂದು ದಾಸ ಟ್ವೀಟ್ ಮಾಡಿದ್ದಾರೆ.

ರಾಬರ್ಟ್‌ ಪೋಸ್ಟರ್‌ ಒಳಗಿರುವ ಈ ರಹಸ್ಯವನ್ನು ನೀವು ಗಮನಿಸಿದ್ರಾ?

ಇದೇ ಫೆಬ್ರವರಿ 16ರಂದು ದರ್ಶನ್ ಅವರ 43ನೇ ಹುಟ್ಟುಹಬ್ಬದಂದು "ರಾಬರ್ಟ್" ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈಗ ದರ್ಶನ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಪ್ರಕಾರ ಇದೇ ಇನ್ನೊಂದು ತಿಂಗಳಲ್ಲಿ ರಾಬರ್ಟ್ ರಿಲೀಸ್ ಆಗಲಿದೆ.

'ರಾಬರ್ಟ್‌' ದರ್ಶನ್‌ ನಟನೆಯ 53ನೇ ಚಿತ್ರ ರಾಬರ್ಟ್ ಗೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದು,  ಟೈಟಲ್ ಪೋಸ್ಟರ್​ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಕ್ರೇಜ್ ಹುಟ್ಟುಹಾಕಿರುವ  ದರ್ಶನ್​  ಅವರ ಈ ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ.

ರಿಲೀಸ್‌ಗೂ ಮುನ್ನವೇ ಈ ಪಾಟಿ ಹವಾನಾ! 35 ಕೋಟಿ ರೂ. ಗಳಿಸಿದ 'ರಾಬರ್ಟ್'?

ಮತ್ತೊಂದೆಡೆ ಸ್ಯಾಂಡಲ್​ವುಡ್​​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ರಾಬರ್ಟ್​​ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.