Asianet Suvarna News Asianet Suvarna News

ಗೂಗಲ್‌ಗೂ ಗೊತ್ತಾಯ್ತು ಕಾಂತಾರ 1 ಸಿನಿಮಾ ಗಮ್ಮತ್ತು: ಟೀಸರ್ ನೋಡಿ ವಾ...ವ್... ಎಂದು ಪೋಸ್ಟ್!

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರ 1 ಟೀಸರ್ ನೋಡಿದ ಗೂಗಲ್ ವಾ...ವ್... 2024  ರೋಮಾಂಚನಕಾರಿಯಾಗಿದೆ ಎಂದು  ಪೋಸ್ಟ್ ಮಾಡಿಕೊಂಡಿದೆ.

google excitement tweet about Rishab Shetty kantara chapter 1 teaser sat
Author
First Published Nov 28, 2023, 3:57 PM IST

ಬೆಂಗಳೂರು (ನ.28): ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಾಂತಾರ 1 ಸಿನಿಮಾದ ಟೀಸರ್ ಬಿಡುಗಡೆಯಾಗಿ ಒಂದು ದಿನದೊಳಗಾಗಿ 13 ಮಿಲಿಯನ್ ವೀಕ್ಷಣೆಯಾಗಿದೆ. ಈಗ ಕಾಂತಾರ 1 ಸಿನಿಮಾದ ಟೀಸರ್ ವೀಕ್ಷಣೆಯ ಬಗ್ಗೆಯೇ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಟ ಮಾಡಲಾಗಿದೆ. ಆದ್ದರಿಂದ ಗೂಗಲ್‌ನಿಂದಲೂ ಕಾಂತಾರ ಟೀಸರ್ ವೀಕ್ಷಣೆ ಮಾಡಲಾಗಿದ್ದು, 2024 ಭಾರೀ ರೋಮಾಂಚನಕಾರಿಯಾಗಿದೆ. ಕಾಂತಾರ ಟೀಸರ್ ನೋಡಿ ವಾ..ವ್ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ.

ಕಳೆದೊಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಕಾಂತಾರ ಚಾಪ್ಟರ್ ಒನ್ (Kantara Chapter-1) ಸಿನಿಮಾದ ಫಸ್ಟ್ ಲುಕ್ ಟೀಸರ್ ಸಖತ್‌ ವೈರಲ್‌ ಆಗಿದ್ದು, ಟ್ರೆಂಡಿಂಗ್ ಸೃಷ್ಟಿಸಿದೆ. ಯಾವುದೇ ಸಾಮಾಜಿಕ ಜಾಲತಾಣವನ್ನು ತೆರೆದರೂ ಅಲ್ಲಿ ಕಾಂತಾರ 1 ಚಿತ್ರದ ಪೋಸ್ಟರ್‌ (Poster) ಅಬ್ಬರವೇ ಎದ್ದು ಕಾಣಿಸುತ್ತಿದೆ. ಯುಟ್ಯೂಟ್‌ನಲ್ಲೂ ಈ ಸಿನಿಮಾದ ಟೀಸರ್ ಹವಾ ಜೋರಾಗಿದ್ದು, ಕೇವಲ 24 ಗಂಟೆಗಲಲ್ಲಿ 13 ಮಿಲಿಯನ್‌ (1.3 ಕೋಟಿಗೂ ಅಧಿಕ) ವೀಕ್ಷಕರ ಸಂಖ್ಯೆಯಾಗಿದೆ. ಇನ್ನು ಗೂಗಲ್‌ನಲ್ಲಿ ಕಾಂತಾರ 1 ಸಿನಿಮಾ ಬಿಡುಗಡೆ ದಿನಾಂಕವನ್ನು 77 ಲಕ್ಷಕ್ಕೂ ಅಧಿಕ ಜನರು ಹುಡುಕಾಡಿದ್ದಾರೆ. ಇನ್ನು ಕಾಂತಾರ 1 ಸಿನಿಮಾದ ಟೀಸರ್ ವೀಕ್ಷಣೆ ಮಾಡಿದ ಗೂಗಲ್ '2024 got more exciting. saw the ಕಾಂತಾರ teaser, and just want to say wooooooaaaah' (2024 ಹೆಚ್ಚು ರೋಮಾಂಚನಕಾರಿಯಾಗಿದೆ. ಕಾಂತಾರ ಟೀಸರ್ ನೋಡಿದೆ, ಮತ್ತು ಕೇವಲ ವಾ....ವ್ ಎಂದು ಹೇಳಲು ಬಯಸುತ್ತೇನೆ) ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದೆ.

ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್; ರಿಷಬ್ ಶೆಟ್ಟಿ ಅವತಾರಕ್ಕೆ ಉಘೇ ಎಂದ ಸಿನಿ ರಸಿಕರು!

ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿವೀಲ್ ಆಗಿರುವ ವಿಡಿಯೋದ ಆರಂಭದಲ್ಲಿ ರಿಷಬ್ ಶೆಟ್ಟಿ ಬೆಳಕು ಹಿಡಿದು ಕಾಡಿನೊಳಗೆ ಓಡಿ ಹೋಗುತ್ತಾರೆ. ಆಗ ಇಂಗ್ಲಿಷ್‌ನಲ್ಲಿ "light.....Eveything is visibal in light. But this is just not light. Its a vision. Vision that choses what was, what is and what will be tomorrow..and you see' ಎಂದು ರಿಷಬ್ ಹೇಳುವುದನ್ನು ಕೇಳಬಹುದು. ಒಂದ ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ. 

'ಇದು ಬರಿ ಬೆಳಕಲ್ಲ, ದರ್ಶನ': Kantara 2 ಫಸ್ಟ್ ಲುಕ್​ ರಿಲೀಸ್​​ ಡೇಟ್ ಅನೌನ್ಸ್ ಮಾಡಿದ ರಿಷಬ್!

ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಈ ಹಿಂದೆ ಸೂಪರ್ ಹಿಟ್ ಆದ ಕಾಂತಾ ಸಿನಿಮಾ ಮುಹೂರ್ತವನ್ನು ಕೂಡ ಇದೇ ಕೆರಾಡಿಯ ಆನೆಗುಡ್ಡ ದೇವಸ್ಥಾನದಲ್ಲಿ ನೆರವೇರಿತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ಕಾಂತಾರ 1 ಸಿನಿಮಾದ ಜ್ವರ ಆರಂಭವಾಗಿದೆ ಎಂದೇ ಹೆಳಬಹುದು. ಇನ್ನು ಗೂಗಲ್‌ನಲ್ಲಿ 0.28 ಸೆಕೆಂಡ್‌ಗೆ ಒಬ್ಬರಂತೆ ಕಾಂತಾರ-1 ಸಿನಿಮಾದ ಬಿಉಡುಗಡೆ ದಿನಾಂಕವನ್ನು ಹುಡುಕುತ್ತಿದ್ದಾರೆ.

Follow Us:
Download App:
  • android
  • ios