ಸ್ಯಾಂಡಲ್‌ವುಡ್‌ ಉದಯೋನ್ಮುಖ ಪ್ರತಿಭೆ, 'ಜಾಗ್ವಾರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರ್‌ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಂಡಿರುವ ನಿಖಿಲ್‌, ಚಿತ್ರರಂಗದಲ್ಲಿ ಮಾತ್ರವಲ್ಲದೇ ರಾಜಕೀಯದಲ್ಲೂ ಹೆಸರು ಮಾಡಿದವರು. 

ಡಿಫರೆಂಟ್‌ ಆಗಿ ಕಾಣಿಸಿಕೊಂಡ ನಿಖಿಲ್‌- ರೇವತಿ; ರಿವೀಲ್‌ ಆಯ್ತು 10 ಫೋಟೋ!

ಇತ್ತೀಚಿಗೆ ಬೆಂಗಳೂರಿನ ತಾಜ್‌ ವೆಸ್ಟೆಂಡ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ನಿಖಿಲ್‌, ರೇವತಿ ಏಪ್ರಿಲ್‌ 17ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಕುಮಾರಸ್ವಾಮಿ ಅವರಿಗೆ ಮರು ಜನ್ಮನೀಡಿ, ಪುಣ್ಯ ಭೂಮಿ ಎಂದೇ ಭಾವಿಸಿರುವ ರಾಮನಗರದಲ್ಲಿ ಪುತ್ರನ ಮದುವೆ ಆಗಬೇಕೆಂಬುವುದು ದೊಡ್ಡ ಗೌಡರ ಮಗನ ಆಶಯ. ರಾಮನಗರ-ಚನ್ನಪಟ್ಟಣ ಮಧ್ಯೆ ಇರುವ 'ಜಾನಪದ ಲೋಕ'ದ ಬಳಿ ಅದ್ಧೂರಿಯಾಗಿ ಮದುವೆ ನಡೆಯಲಿದ್ದು, ಸಿದ್ದತೆಗಳು ಈಗಾಗಲೆ ಶುರುವಾಗಿದೆ. 

  

ರಾಮನಗರ ಜನತೆಗೆ 'ನಿಮ್ಮ ಪ್ರೀತಿಯ ಕುಮಾರಣ್ಣ' ಎಂದು ಪತ್ರ ಬರೆದು ಮನೆ-ಮನೆಗೂ ಆಮಂತ್ರಣ ಪತ್ರಿಕೆಯನ್ನು ಹಂಚಿದ್ದಾರೆ, ಎಂಬೊಂದು ಸುದ್ದಿ ಹರಿದಾಡುತ್ತಿದೆ. ಇದು ಫೇಕ್ ಪತ್ರಿಕೆ, ಅಲ್ಲದೇ ಕುಮಾರಸ್ವಾಮಿ ಅವರ ಸಹಿ ಇರುವ ಪತ್ರವೂ ಫೇಕ್ ಎಂದು ಹೇಳಲಾಗುತ್ತಿದೆ.