Asianet Suvarna News Asianet Suvarna News

ಬ್ಯಾಕ್‌ಲೆಸ್ ಪೋಸ್​ ಕೊಟ್ಟ ಚೈತ್ರಾ: ಫ್ರೆಂಟ್ ಮಾತ್ರವಲ್ಲ ಬ್ಯಾಕ್‌ನಿಂದಲೂ ಸುಂದ್ರೀರು ಈ ನಟಿಯರು!

ಚೈತ್ರಾ ಜೆ ಆಚಾರ್​ ನಟನೆ ಬಗ್ಗೆ ಯಾರು ತುಟಿ ಬಿಚ್ಚಲ್ಲ. ಅಷ್ಟೆ ಅಲ್ಲ ಸಿಂಗಿಂಗ್​ನಲ್ಲೂ ಚೈತ್ರಾಗೆ ಸ್ಯಾಂಡಲ್​ವುಡ್​ ನಟಿಯರಲ್ಲಿ ಸರಿ ಸಟಿ ಯಾರಿಲ್ಲ. ಚೈತ್ರಾ ಜೆ ಆಚಾರ್.. ತಣ್ಣಗೆ ಮೈ ಸೋಕಿಸೋ ವಯ್ಯಾರದ ಗೊಂಬೆ. 
 

chaitra achar in a backless pose Do you know who has given a backless pose in Sandalwood gvd
Author
First Published Sep 15, 2024, 7:23 PM IST | Last Updated Sep 16, 2024, 4:41 PM IST

ಸ್ಯಾಂಡಲ್​ವುಡ್​ನ ಸಿಂಗಾರ ಸಿರಿ ಚೈತ್ರಾ ಜೆ ಆಚಾರ್​. ಅಭಿನಯದಲ್ಲಿ ಎಷ್ಟು ಪರ್ಫೆಕ್ಟೋ.. ಹಾಟ್​ ಪೋಸ್​ ಕೊಟ್ಟು ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಹಲ್​ಚೆಲ್​​ ಎಬ್ಬಿಸೋದ್ರಲ್ಲೂ ಈಕೆಯೇ ಟಾಪರ್. ಎಷ್ಟೇ ಬ್ಯಾಡ್ ಕಮೆಂಟ್ ಬಂದ್ರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಚೈತ್ರಾ ಈಗ ಬ್ಯಾಕ್​ಲೆಸ್​ ಫೋಟೋ ಶೂಟ್ ಮಾಡಿ ಸ್ಯಾಂಡಲ್​ವುಡ್​​ ತುಂಬೆಲ್ಲಾ ಭಾರಿ ಗುಲ್ಲೆಬ್ಬಿಸಿದ್ದಾರೆ. ಹಾಗಾದ್ರೆ ಚೈತ್ರಾ ಬ್ಯಾಕ್​ ಲೆಸ್ ಕಥೆ ಏನು..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ಚೈತ್ರಾ ಜೆ ಆಚಾರ್.. ಸ್ಯಾಂಡಲ್​ವುಡ್​ನಲ್ಲಿ ಟ್ರೆಂಡಿಂಗ್​ನಲ್ಲಿರೋ ಕೆಲವೇ ಕೆಲವು ಹೀರೋಯಿನ್​ಗಳಲ್ಲಿ ಒಬ್ರು.. ಅಭಿನಯ ಅಂತ ಬಂದ್ರೆ ಚೈತ್ರಾ ಜೆ ಆಚಾರ್​ ಮಹರಾಣಿಯೇ ಸರಿ. 

ಎಂಥಾ ರೋಲ್ ಆದ್ರು ಜೀವ ತುಂಬಿ ಮನಸ್ಸು ತುಂಬಿ ನಟಿಸುತ್ತಾರೆ. ಮಹಿರಾ, ಆ ದೃಶ್ಯ, ಟೋಬಿ, ಸಪ್ತ ಸಾಗರದಾಚೆ ಎಲ್ಲೋ, ತಲೆದಂಡ, ಬ್ಲಿಂಕ್ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಚೈತ್ರಾ ಜೆ ಆಚಾರ್​ ನಟನೆ ಬಗ್ಗೆ ಯಾರು ತುಟಿ ಬಿಚ್ಚಲ್ಲ. ಅಷ್ಟೆ ಅಲ್ಲ ಸಿಂಗಿಂಗ್​ನಲ್ಲೂ ಚೈತ್ರಾಗೆ ಸ್ಯಾಂಡಲ್​ವುಡ್​ ನಟಿಯರಲ್ಲಿ ಸರಿ ಸಟಿ ಯಾರಿಲ್ಲ. ಚೈತ್ರಾ ಜೆ ಆಚಾರ್.. ತಣ್ಣಗೆ ಮೈ ಸೋಕಿಸೋ ವಯ್ಯಾರದ ಗೊಂಬೆ. ಸಪ್ತ ಸಾಗರದಿಂದ ಎದ್ದು ಬಂದ ಮತ್ಸ್ಯಕನ್ಯೆ. ಆಕೆಯ ಅಂದಕ್ಕೆ ಆ ಮೈ ಮಾಟಕ್ಕೆ ಎಂಥವರೂ ಕೂಡ ಫಿದಾ. ಚೈತ್ರಾ ಜೆ ಆಚಾರ್ ತೆರೆ ಮೇಲೆ ಡಿ ಗ್ಲಾಮರ್​ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. 

ಆದ್ರೆ ಈಕೆಯ ಸೋಷಿಯಲ್ ಮೀಡಿಯಾಗೆ ಬಂದ್ರೆ ಹಾಟ್​ ಪೋಟೋಗಳದ್ದೇ ಹಬ್ಬ. ಇದೀಗ ನಟಿ ಚೈತ್ರಾ ಜೆ ಆಚಾರ್​, ಬೆನ್ನು ತೋರಿಸೋ ಹಾಟ್ ಫೋಟೋ ಹರಿ ಬಿಟ್ಟು ಕಿಕ್ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಕನ್ನಡದ ಹೀರೋಯಿನ್ಸ್ ಹಾಟ್ ಅನ್ನೋ ಪದಕ್ಕೆ ಹೆದರಿ ಬಿಡುತ್ತಾರೆ. ಪಕ್ಕದ ಮನೆ ಹುಡುಗಿಯಾಗಿ ಕಾಣಿಸಿಕೊಳ್ಳೋಕೆ ಇಷ್ಟ ಪಡುತ್ತಾರೆ. ಭಟ್ ಚೈತ್ರಾ ಜೆ ಆಚಾರ್ ಹಾಗಲ್ಲ. ಯಾವುದಕ್ಕೂ ಡೋಂಟ್ ಕೇರ್ ನಿಲುವು. ಬಾಲಿವುಡ್​ ಬೆಡಗಿರಯಂತೆ ಬಿನ್ನಾಣ. ಸೌಂಧರ್ಯವನ್ನ ಬಿಚ್ಚಿ ತೋರಿಸೋದರಲ್ಲಿ ಹಾಲಿವುಡ್ ನಟಿಯರಿಗೆ ಪೈಪೋಟಿ ಕೊಡ್ತಾರೆ ಚೈತ್ರಾ ಜೆ ಆಚಾರ್​. 

ತಿಂಗಳಿಗೆ ಎರಡು ಮೂರು ಸಲ ಹಾಟ್​ ಪೋಟೋ ಶೂಟ್ ಮಾಡೋ ಚೈತ್ರಾ ಇದೀಗ ಮೈ ತುಂಬಾ ಸೀರೆ ಉಟ್ರು ಬ್ಯಾಕ್​ಲೆಸ್ ಪೋಸ್​ ಕೊಟ್ಟು ಪಟ್ಟೆ ಹುಡುಗರ ಸೆಂಟರ್​ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಹಾಗಂತ ಚೈತ್ರಾ ಇಂತಹ ಫೋಟೋ ಹಾಕೋದ್ರಿಂದ ಬ್ಯಾಡ್​ ಕಮೆಂಟ್​ಗಳ ಕಿರಿ ಕಿರಿ ಅನುಭವಿಸಲ್ವಾ ಅಂತ ಕೇಳ್ಬೇಡಿ. ಅದು ಮಾಮೂಲಿ. ಚೈತ್ರಾ ಹಾಕೋ ಒಂದೊಂದು ಫೋಟೋಗೆ ಬರೋ ಕಮೆಂಟ್​ಗಳನ್ನ ಈ ಬಾಯಿಂದ ಓದೋದು ಕಷ್ಟ. ಬಟ್ ಚೈತ್ರಾ ಇದರ ಬಗ್ಗೆ ಒಂದ್ ಚೂರು ತಲೆ ಕೆಡಿಸಿಕೊಳ್ಳಲ್ಲ. ಇವರದ್ದೇನಿದ್ರು ಡೋಂಟ್ ಕೇರ್ ವ್ಯಕ್ತಿತ್ವ. 

ಅಕ್ಟೋಬರ್‌ನಲ್ಲಿ ಶುರು ಸ್ಯಾಂಡಲ್‌ವುಡ್ ಸಿನಿಜಾತ್ರೆ: ಮಾರ್ಟಿನ್, UI, ಬಘೀರ.. ಯಾರಿಗೆ ವಿಜಯ ಮಾಲೆ!

ಮಿಸ್‌ ಮಲ್ಲಿಗೆ ಚಿತ್ರದಲ್ಲಿ ರೂಪಾ ನಟರಾಜ್ಬೆನ್ನು ತೋರಿಸಿದ ರೀತಿಗೆ ಇಡೀ ಸ್ಯಾಂಡಲ್ವುಡ್‌ ಬೆಚ್ಚಿ ಬಿದ್ದಿತ್ತು. ಅದರಲ್ಲೂ 'ದಂಡುಪಾಳ್ಯ' ಸಿನಿಮಾಗಾಗಿ ಪೂಜಾ ಗಾಂಧಿ ಟಾಪ್ಲೆಸ್ನಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೂ ಕಾರಣವಾಗಿತ್ತು. ನಂತರ ಈ ಸರಣಿಯನ್ನು ಮುಂದುವರೆಸಿಕೊಂಡು ಹೋಗಿದ್ದು ಅನಿತಾ ಭಟ್. ತುಳು ಸಿನಿಮಾವೊಂದರಲ್ಲಿ ಅರೆಬೆತ್ತಲೆಯಾಗಿ ನಟಿಸಿದರು. 'ಕಡ್ಡಿಪುಡಿ' ಚಿತ್ರದಲ್ಲಿ ಐಂದ್ರಿತಾ ರೇ ಶೃಂಗಾರ ಥೀಮ್ಉಳ್ಳ ಹಾಡಿನಲ್ಲಿ ಬೆನ್ನು ತೋರಿಸಿ ಪಡ್ಡೆಗಳ ಹಾರ್ಟ್​​​ಗೆ ಕಿಕ್ ಕೊಟ್ಟಿದ್ರು. ರಚಿತಾ ರಾಮ್​​ ಐ ಲವ್ ಯು ಸಿನಿಮಾದಲ್ಲಿ ಉಪ್ಪಿ ಜೊತೆ ಬೆನ್ನು ತೋರಿಸಿದ್ರು. ಅದ್ ಬಿಟ್ರೆ ಮತ್ತಿನ್ಯಾವ ನಟಿಯರು ಅಂಥ ಧೈರ್ಯ ಮಾಡದ್ಲಿಲ್ಲ.

Latest Videos
Follow Us:
Download App:
  • android
  • ios