'ಕಲಾಸಿಪಾಳ್ಯ' ಚಿತ್ರದಲ್ಲಿ 'ಸುಂಟರಗಾಳಿ ಸುಂಟರಗಾಳಿ' ಹಾಡಿಗೆ  ಹೆಜ್ಜೆ  ಹಾಕುವ ಮೂಲಕ ಕನ್ನಡ ಚಿತ್ರರಂಗದಲ್ಲೇ ಧೂಳ್ ಎಬ್ಬಿಸಿದ ನಟಿ ಕ್ರೇಜಿ ಕ್ವೀನ್‌ ರಕ್ಷಿತಾ ಇಂದು  36ರ ಹರೆಯಕ್ಕೆ ಕಾಲಿಡುತ್ತಿದ್ದಾರೆ.

2002ರಲ್ಲಿ 'ಅಪ್ಪು' ಚಿತ್ರದ ಮೂಲಕ ಪರಿಚಯವಾದ  ಶ್ವೇತಾ ಅಲಿಯಾಸ್‌ ರಕ್ಷಿತಾ ಖ್ಯಾತ ನಿರ್ದೇಶಕ ಕಮ್‌ ನಟ ಜೋಗಿ ಪ್ರೇಮ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ . ಅಲ್ಲದೇ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡುವ  ಮೂಲಕ ನಿರ್ಮಾಪಕಿಯಾಗಿ  ಗುರುತಿಸಿಕೊಂಡಿದ್ದಾರೆ. 

ಪತಿಯ ಹುಟ್ಟಹಬ್ಬದಂದು ಟೇಬಲ್ ಮೇಲೆ ಕುಣಿದು ಕುಪ್ಪಳಿಸಿದ ರಕ್ಷಿತಾ!

ಪ್ರತಿ ವರ್ಷವೂ ಹೊರಗಡೆ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿದ್ದರು ಆದರೆ ಕೊರೋನಾ ವೈರಸಿನಿಂದ ಇಡೀ ಭಾರತವೇ ಲಾಕ್‌ಡೌನ್‌ ಆದ ಪರಿಣಾಮ ರಕ್ಷಿತಾ ಕುಟುಂಬಸ್ಥರ ಜೊತೆ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.  ಇನ್ನು ವಿಶೇಷ ಏನಂದ್ರೆ  ಕ್ರೇಜಿ ಕ್ವೀನ್‌ ಬರ್ತಡೇಗೆ ಪತಿ  ಪ್ರೇಮ್ ಮೊದಲ ಬಾರಿಗೆ ಕೇಕ್‌ ತಯಾರಿಸಿದ್ದಾರೆ.  

 

' ಪ್ರತಿ ವರ್ಷ ಅವರ ಬರ್ತಡೇನಾ ಹೊರಗಡೆ ಸೆಲೆಬ್ರೇಟ್ ಮಾಡ್ತಿದ್ವಿ ಬಟ್‌ ಈ ವರ್ಷ #Stayhome #StaySafe ಅನ್ನೋ ಕಾರಣಕ್ಕೆ ಎಲ್ರೂ ಮನೆ ಒಳಗಿದ್ದೇ ಸೆಲೆಬ್ರೇಟ್‌ ಮಾಡ್ತಿದೀವಿ ಹಾಗೂ ಫರ್ಸ್ಟ್‌ ಟೈಂ ಅವರ ಬರ್ತಡೇಗೋಸ್ಕರ ನಾವ್‌ ಕೇಕ್‌ ಮಾಡೋದನ್ನು ಕಲ್ತ್ವಿ ಹಾಗಾಗಿ ಇದು ಇನ್ನೂ  ಸ್ಪೆಷಲ್ ಅಂತಾರೆ ಪ್ರೇಮ್ . 

ಎಣ್ಣೆ ಬಾಟಲಿ ಹಿಡ್ಕೊಂಡು ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ ಕ್ರೇಜಿ ಕ್ವೀನ್..!

ಮನೆಯಲ್ಲೇ ರಕ್ಷಿತಾಗೆ ಸರ್ಪ್ರೈಸ್‌ ಕೊಟ್ಟು ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾರೆ.