Asianet Suvarna News Asianet Suvarna News

ಸ್ವದೇಶಿ ಆಂದೋಲನ ಆರಂಭಿಸಿ ಭಾರತವನ್ನು ಬೆಳೆಸೋಣ; ಸಿಹಿ ಕಹಿ ಚಂದ್ರು

ಕೊರೋನಾ ವೈರಸ್‌ನಿಂದ ಭಾರತಕ್ಕೆ ಆಗುತ್ತಿರುವ ನಷ್ಟವನ್ನು ಸುಧಾರಿಸಲು ಹಾಗೂ ವೃದ್ಧಿಸಲು ಸ್ವದೇಶಿ ಸಾಮಾಗ್ರಿಗಳನ್ನು  ಖರೀದಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ  ಚಂದ್ರು.
 

actor Sihi Kahi Chandru request all to buy swadeshi products
Author
Bangalore, First Published Apr 9, 2020, 4:33 PM IST

ಕನ್ನಡ ಸಿನಿ ರಸಿಕರ ಹಾಗೂ ಕಿರುತೆರೆ ಪ್ರೇಮಿಗಳ ಸ್ವೀಟ್‌ ಅfಯಂಡ್‌ ಬಿಟರ್ ಮ್ಯಾನ್‌ ಚಂದ್ರು ಕೊರೋನಾ ವೈರಸ್‌ನಿಂದ ಭಾರತಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಭಾರತದ ವಸ್ತುಗಳನ್ನೇ  ಖರೀದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

ಲಾಕ್‌ಡೌನ್‌ನಿಂದ ಜನರು ಹೊರ ಬಂದ ನಂತರ ತಮಗೆ  ಬೇಕಾದ ಸಾಮಾನುಗಳನ್ನ ಹಾಗೂ ಬಯಸುವ ಸ್ಥಳಕ್ಕೆ ಪಯಣ ಮಾಡಲು ಆರಂಭಿಸುತ್ತಾರೆ. ವಿದೇಶಕ್ಕೆ ಹೋಗಿ ಅಲ್ಲಿನ ಆರ್ಥಿಕತೆ ಹೆಚ್ಚಿಸುವ ಬದಲು ಭಾರತದಲ್ಲೇ ಅದನ್ನು ಮಾಡಬೇಕು.

'ಕೊರೋನಾ ವೈರಸ್‌ ನಮ್ಮಿಂದ ಸಂಪೂರ್ಣವಾಗಿ ದೂರವಾದಾಗ ನಾವು ನಮ್ಮ ದೇಶದ ಪರವಾಗಿ ನಿಲ್ಲೋಣ. ನಮ್ಮ ರಜೆಗಳನ್ನು ಭಾರತದಲ್ಲೇ ಕಳೆಯೋಣ, ಇಂಡಿಯನ್‌ ಲೋಕಲ್‌ ಹೋಟೆಲ್‌ನಲ್ಲಿ ಆಹಾರ ಸೇವಿಸೋಣ ,  ಇಲ್ಲಿಯದೇ ಬ್ರ್ಯಾಂಡ್‌ ಬಟ್ಟೆಗಳನ್ನು ಖರೀದಿಸೋಣ ಇದರಿಂದ ನಮ್ಮ ಲೋಕಲ್‌ನವರಿಗೆ ವ್ಯಾಪಾರ ಹೆಚ್ಚಾಗುತ್ತದೆ. ಇಲ್ಲವಾದರೆ ಜೀವನ ನಡೆಸುವುದಕ್ಕೂ ಇವರುಗಳು ಕಷ್ಟ ಪಡಬೇಕಾದ ಪರಿಸ್ಥಿತಿ  ಎದುರಾಗುತ್ತದೆ. ಈಗಾಗಲೇ  ಸಾಕಷ್ಟು ನಷ್ಟವನ್ನು ಎದುರಿಸುತ್ತಿದ್ದಾರೆ. ಈ ರೀತಿಯಲ್ಲಾದರೂ  ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಭಾರತವನ್ನು ಆ ದೇವರೇ ಕಾಪಾಡಬೇಕು. ಬನ್ನಿ  ಸ್ವದೇಶಿ  ಆಂದೋಲನ ಶುರು ಮಾಡೋಣ ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

We need to go back to our roots. No more globalisation only nationalisation

A post shared by sihikahichandru (@sihikahichandru) on Apr 8, 2020 at 4:19am PDT

Follow Us:
Download App:
  • android
  • ios