Asianet Suvarna News Asianet Suvarna News

#Lockdown ಆಹಾರ ತಯಾರಿಸಿ ವಿತರಿಸುತ್ತಿರುವ ದರ್ಶನ್‌ ಅಭಿಮಾನಿಗಳು!

ಕೊರೋನಾ ವೈರಸ್‌ನಿಂದ ವಿಶ್ವವೇ ಸ್ತಬ್ಧವಾದ ಕಾರಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಅಭಿಮಾನಿಗಳು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಆ ಮೂಲಕ ಇಂಥ ಕಾರ್ಯಕ್ಕೆ ಅಭಿಮಾನಿಗಳು ಈ ಸಂದರ್ಭದಲ್ಲಿ ಏನು ಮಾಡಬಹುದು ಎಂಬುದನ್ನು ತೋರಿಸಿದ್ದಾರೆ. 

Actor darshan helps daily wagers with food and water in mysore
Author
Bangalore, First Published Mar 27, 2020, 12:31 PM IST

ಸಿನಿಮಾ ತಾರೆಯರು, ಉದ್ಯಮಿಗಳು ಹಾಗೂ ಕ್ರೀಡಾಪಟುಗಳು ಕೊರೋನಾ ವೈರಸ್‌ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.  ಈಗ ತಮ್ಮ ಸ್ಟಾರ್‌ ನಟರ ಹಾದಿಯಲ್ಲೇ ಅಭಿಮಾನಿಗಳು ಸಾಗುತ್ತಿದ್ದಾರೆ.

ಸಾಮಾಜ ಸೇವೆಯಲ್ಲಿ ಹಾಗೂ ಪ್ರಾಣಿಗಳನ್ನು ದತ್ತು ಪಡೆಯುವುದರಲ್ಲಿ ಸದಾ ಮಂಚೂಣಿಯಲ್ಲಿರುವ ದರ್ಶನ್‌ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ನೀಡಿದ ದವಸ ಧಾನ್ಯಗಳನ್ನು ಆಶ್ರಮಕ್ಕೆ ನೀಡಿ ಸಹಾಯ ಮಾಡಿದ್ದರು. ಈಗ ಅದೇ ಅಭಿಮಾನಿಗಳು ಭಾರತ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ದಿನಗೂಲಿ ನೌಕರರು ಹಾಗೂ ಕಷ್ಟದಲ್ಲಿರುವ ನಿರ್ಗತಿಕರ ನೆರವಿಗೆ ಧಾವಿಸಿದ್ದಾರೆ. 

ಪಂಚೆ ಆ್ಯಡಲ್ಲಿ ದರ್ಶನ್; ಮರೆಯಾಗದ ಸಾಮಾಜಿಕ ಕಾಳಜಿ!

ಹೌದು! ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಅಭಿಮಾನಿ ಸಂಘ 'ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್‌ ಅಭಿಮಾನಿಗಳ ಸಂಘ ಮೈಸೂರು' ಇವರ ವತಿಯಿಂದ ಮೈಸೂರಿನ ಕೋವಿಡ್‌-19 ಲಾಕ್‌ಡೌನ್‌ನಿಂದ ಕೂಲಿ ಇಲ್ಲದೆ  ಕಷ್ಟದಲ್ಲಿರುವ ಜನರಿಗೆ ಆಹಾರ ವಿತರಿಸಿದ್ದಾರೆ. ಟೋಮ್ಯಾಟೋ ಬಾತ್‌, ಮೊಸರನ್ನ ಹಾಗೂ ಕುಡಿಯುವ ನೀರನ್ನೂ ಪೂರೈಸಿದ್ದಾರೆ. ಮತ್ತೊಂದು ತಂಡವಾದ  ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಅಭಿಮಾನಿಗಳು ಚೆಲುವಾಂಬ ಆಸ್ಪತ್ರೆ ಮುಂಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಉಚಿತ ಮಾಸ್ಕ್‌ ಹಾಗೂ ನೀರು ವಿತರಿಸಿದ್ದಾರೆ.

 

ಕೆಲವು ದಿನಗಳ ಹಿಂದೆ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾಲಿವುಡ್‌ ನಟ ಸೂರ್ಯ ಹಾಗೂ ಕಾರ್ತಿ 10 ಲಕ್ಷ ರೂ ನೀಡುವ ಮೂಲಕ ಸಹಾಯ ಮಾಡಿದ್ದರು. ಅಲ್ಲದೇ ಟಾಲಿವುಡ್‌ನಲ್ಲಿ ಅನೇಕ ಸ್ಟಾರ್ ನಟರು ತಮ್ಮ ಕೈಲದಾ ಆರ್ಥಿಕ ಸಹಾಯ ಮಾಡಿ, ಈ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಮುಂದಾಗಿದ್ದಾರೆ.

Follow Us:
Download App:
  • android
  • ios