Asianet Suvarna News Asianet Suvarna News

ನಟ ಚೇತನ್ ಚಂದ್ರ ಪುತ್ರಿ ನಾಮಕರಣ! ಸಂಭ್ರಮ ಹೇಗಿತ್ತು ನೋಡಿ...

ಸ್ಯಾಂಡಲ್‌ವುಡ್ ನಟ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ಮುದ್ದು ಮಗಳ ನಾಮಕರಣ ಮಾಡಿದ್ದಾರೆ.
 

Actor Chethan chandra daughter naming ceremony in Shivamogga
Author
Bangalore, First Published Jan 28, 2020, 12:01 PM IST

'ಪಿಯುಸಿ', 'ರಾಜಧಾನಿ' ಹಾಗೂ 'ಕುಂಭ ರಾಶಿ' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತ ನಟ ಚೇತನ್ ಚಂದ್ರ ಹಾಗೂ ರಚನಾ ಹೆಗಡೆ ಏಪ್ರಿಲ್‌ 17,2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮನೆಗೆ ಮುದ್ದಾದ ಮಗುವೊಂದನ್ನು ಬರ ಮಾಡಿಕೊಂಡು, ಅದಕ್ಕೆ ಮುದ್ದಾದ ಹೆಸರನ್ನೂ ಇಟ್ಟಿದ್ದಾರೆ.

ಶೆಟ್ರು ಕುಟುಂಬದಲ್ಲಿ ಸಂಭ್ರಮ; 'ಕೃಷ್ಣ'ನ ನಾಮಕರಣಕ್ಕೆ ಬಂದ 'ನಾರಾಯಣ'!

ಆಗಸ್ಟ್‌ 23, 2019ರಲ್ಲಿ ತಮ್ಮ ಕುಟುಂಬಕ್ಕೆ ಮಗಳು ಮಹಾರಾಣಿಯನ್ನು ಬರ ಮಾಡಿಕೊಂಡ ಚೇತನ್‌ ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ನಾಮಕರಣ ಮಾಡಿದ್ದಾರೆ. 5 ತಿಂಗಳ ಕಂದಮ್ಮನಿಗೆ 'ಸ್ಮಯ' ಎಂದು ಹೆಸರಿಟ್ಟಿದ್ದಾರೆ. 

ಶೃತಿ ಹರಿಹರನ್ ಮಗಳಿಗೆ ನಾಮಕರಣ ಸಂಭ್ರಮ; ಮಗಳಿಗಿಟ್ರು ಪೌರಾಣಿಕ ಹೆಸರು!

'ನೇಮಿಂಗ್ ಸೆರ್ಮನಿ, ನಮ್ಮ ಮಗಳಿಗೆ 'ಸ್ಮಯ' ಎಂದು ಹಸರಿಟ್ಟಿದೀವಿ' ಎಂದು ಬರೆದುಕೊಂಡು ಹಾಗೂ ಅಮೂಲ್ಯ ಕ್ಷಣದ ಪೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಸ್ಮಯ ಹೆಸರಿನ ಅರ್ಥ 'Smile'ಎಂದು.

Follow Us:
Download App:
  • android
  • ios