Asianet Suvarna News

ಸೋನಿಯಾ ಅಳಿಯ ರಾಬರ್ಟ್ ವಾದ್ರಾ ರಾಜಕೀಯ ಪ್ರವೇಶ ಶೀಘ್ರ? ಹೇಳಿದ್ದೇನು?
ನವದೆಹಲಿ (ಏ.17): ನಾನೀಗ ಬಹುತೇಕ ಹೋರಾಟಗಾರನಂತಿದ್ದೇನೆ, 1999ರಿಂದ ಜನರ ಜತೆಗಿರುವ ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕ್‌ ಗಾಂಧಿ ಪತಿ, ಸೋನಿಯಾ ಗಾಂಧಿ ಅವರ ಅಳಿಯ ಉದ್ಯಮಿ ರಾಬರ್ಟ್‌ ವಾದ್ರಾ ಘೋಷಿಸಿದ್ದಾರೆ.

ಹರ್ಯಾಣದಲ್ಲಿ ಭೂಖರೀದಿ ಅಕ್ರಮಕ್ಕೆ ಸಂಬಂಧಿಸಿ ಎರಡನೇ ದಿನವಾದ ಬುಧವಾರವೂ ಜಾರಿ ನಿರ್ದೇಶನಾಲಯ(ಇ.ಡಿ)ದ ವಿಚಾರಣೆ ಎದುರಿಸಿದ ಅವರು, ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.

ನಾನು ಗಾಂಧಿ ಕುಟುಂಬಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ತನಿಖಾ ಸಂಸ್ಥೆಗಳು ನನ್ನನ್ನು ಗುರಿ ಮಾಡುತ್ತಿವೆ. ಒಂದು ವೇಳೆ ನಾನು ಬಿಜೆಪಿಯವನಾಗಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ನಾನೀಗ ಜನರ ದನಿಯಾಗಿದ್ದೇನೆ ಮತ್ತು ಜನರಿಗೋಸ್ಕರ ಹೋರಾಟ ಮುಂದುವರಿಸುತ್ತೇನೆ ಎಂದು ವಾದ್ರಾ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಒಡೆಯಲು ಕಾಂಗ್ರೆಸ್ ಪ್ಲಾನ್? ಬಿವೈ ವಿಜಯೇಂದ್ರ ಸ್ಫೋಟಕ ಹೇಳಿಕೆ

ನಾನು ರಾಜಕೀಯ ಪ್ರವೇಶಿಸಿದರೆ ಬದಲಾವಣೆ ತರಲು ಬಯಸುತ್ತೇನೆ. ನಾನು ರಾಜಕೀಯಕ್ಕೆ ಬರುವ ಕಾಲ ಬಂದೇ ಬರುತ್ತದೆ. ಸತ್ಯಕ್ಕೆ ಯಾವತ್ತೂ ಗೆಲುವಿದೆ ಎಂದ ಅವರು, ಮುಖ್ಯಮಂತ್ರಿಯಾಗಲು ಹೊರಟವರು ಅಥವಾ ರಾಜಕೀಯಕ್ಕೆ ಪ್ರವೇಶಿಸಬಯಸುವವರು ಬಿಜೆಪಿ ಸೇರದಿದ್ದರೆ ಇ.ಡಿ. ಕಿರುಕುಳ ನೀಡುತ್ತದೆ. ಆದರೆ, ಬಿಜೆಪಿಯ ಯಾವುದೇ ನಾಯಕ ಅಥವಾ ಸಚಿವರಿಗೆ ಇ.ಡಿ. ಸಮನ್ಸ್‌ ನೀಡಲ್ಲ ಎಂದು ಕಿಡಿಕಾರಿದರು.

ಭೂ ಖರೀದಿ ಪ್ರಕರಣದಲ್ಲಿ ಹರ್ಯಾಣ ಸರ್ಕಾರ ಕ್ಲೀನ್‌ ಚಿಟ್ ನೀಡಿದ್ದರೂ ಇ.ಡಿ. ವಿಚಾರಣೆ ನಡೆಸುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನನ್ನ ಮೇಲಷ್ಟೇ ಅಲ್ಲ, ನನ್ನ ಕುಟುಂಬವಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೂ ಚಾರ್ಚ್ ಶೀಟ್ ಹಾಕಿದ್ದಾರೆ. ಅವರು ನಮಗೆ ಎಷ್ಟು ಕಿರುಕುಳ ನೀಡುತ್ತಾರೋ ನಾವೂ ಅಷ್ಟೇ ಗಟ್ಟಿಯಾಗುತ್ತೇವೆ. ನಮ್ಮ ದಾರಿಗೆ ಬರುವ ಪ್ರತಿಯೊಂದು ಅಡ್ಡಿಯ ವಿರುದ್ಧವೂ ನಾವು ಹೋರಾಟ ನಡೆಸುತ್ತೇವೆ ಎಂದರು.

ಪತ್ನಿ ಜತೆಗೆ ಇ.ಡಿ. ಕಚೇರಿಗೆ ಭೇಟಿ:

ಎರಡನೇ ದಿನ ಬೆಳಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ಪತ್ನಿ ಪ್ರಿಯಾಂಕಾ ಗಾಂಧಿ ಜತೆಗೆ ಆಗಮಿಸಿದ ವಾದ್ರಾ ವಿಚಾರಣೆಗೆ ಒಳಗಾದರು.

ಹರ್ಯಾಣದ ಷಿಕೋಪುರ್‌ನಲ್ಲಿ 3.5 ಎಕ್ರೆ ಜಮೀನನ್ನು ವಾದ್ರಾ ಅವರ ಕಂಪನಿ ಕೇವಲ 7.5 ಕೋಟಿ ರು.ನೀಡಿ ಖರೀದಿಸಿತ್ತು. ಇದಾಗಿ ನಾಲ್ಕು ವರ್ಷಗಳ ಬಳಿಕ ಇದೇ ಜಾಗವನ್ನು ವಾದ್ರಾ ಅವರು ರಿಯಲ್‌ ಎಸ್ಟೇಟ್‌ ಸಂಸ್ಥೆ ಡಿಎಲ್‌ಎಫ್‌ಗೆ 58 ಕೋಟಿ ರು.ಗೆ ಮಾರಾಟ ಮಾಡಿದ್ದರು. ಈ ಕುರಿತು ಇ.ಡಿ. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ನೀವಿಬ್ಬರೂ ಒಗ್ಗಟ್ಟಾಗಿ ಇರದಿದ್ದರೆ ಮೋದಿ - ಶಾ ದಾಳಿ ಮಾಡ್ತಾರೆ: ಸಿದ್ದು, ಡಿಕೆಗೆ ಖರ್ಗೆ ಎಚ್ಚರಿಕೆ!

ವಾದ್ರಾ ವಿರುದ್ಧ ಶೀಘ್ರ ಮೂರು ಆರೋಪಪಟ್ಟಿ?

ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಮೂರು ಪ್ರಕರಣ ಸಂಬಂಧ ರಾಬರ್ಟ್‌ ವಾದ್ರಾ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶೀಘ್ರವೇ ಆರೋಪಪಟ್ಟಿ ಸಲ್ಲಿಸಲಿದೆ ಎನ್ನಲಾಗಿದೆ. ಹರ್ಯಾಣದಲ್ಲಿ ನಡೆದ ಭೂ ಖರೀದಿ ಅಕ್ರಮದ ಆರೋಪದ ಪ್ರಕರಣದಲ್ಲಿ ವಾದ್ರಾ ಅವರನ್ನು ಇ.ಡಿ. ಅಧಿಕಾರಿಗಳು ಸತತ 2 ದಿನ ವಿಚಾರಣೆ ನಡೆಸಿ, ಗುರುವಾರವೂ ವಿಚಾರಣೆಗೆ ಕರೆದಿದ್ದಾರೆ. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆಸಿದೆ.

ನಾಲ್ವರು ಸಹೋದರಿಯರು, ತಾಯಿಯ ಹತ್ಯೆಗೈದು ವಿಡಿಯೋ ಮಾಡಿದ ಯುವಕ ಸೆರೆ!
ಲಖನೌ(ಜ.01) ಹೊಸ ವರ್ಷ ಎಲ್ಲಾ ಸಂಕಷ್ಟಗಳು ದೂರವಾಗಿ ಹೊಸ ಹುರುಪು, ಹೊಸ ಬದುಕು ತರಲಿ ಎಂದು ಪ್ರಾರ್ಥಿಸುತ್ತಿದ್ದ ಕುಟುಂಬ ರಾತ್ರಿ ಬೆಳಗಾಗುವಷ್ಟರಲ್ಲಿ ಹೆಣವಾಗಿದೆ. ಯುವಕನೊಬ್ಬ ತನ್ನ ತಾಯಿ ಹಾಗೂ ನಾಲ್ವರು ಸಹೋದರಿಯರಿಗೆ ಅವರಿಗೆ ಗೊತ್ತಿಲ್ಲದಂತೆ ಅಮಲು ಆಹಾರ ನೀಡಿ ಹತ್ಯೆಗೈದ ಭೀಕರ ಘಟನೆ ಉತ್ತರ ಪ್ರದೇಶದ ಲಖೌನದಲ್ಲಿ ನಡೆದಿದೆ. ಖಾಸಗಿ ಹೊಟೆಲ್‌ನಲ್ಲಿ ತನ್ನದೇ ಕುಟುಂಬವನ್ನು ಹತ್ಯೆ ಮಾಡಿದ್ದಾನೆ. ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿದ್ದಾನೆ. ಈ ಘಟನೆ ಸಂಬಂಧ 24 ವರ್ಷ ಅರ್ಷದ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ತಾಯಿ ಹಾಗೂ ನಾಲ್ವರು ಸಹೋದರಿಯ ಹತ್ಯಾ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೆಂತಾ ಘಟನೆ ಎಂದು ಜನ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದರು. ಕಾರಣ ಅತ್ಯಂತ ಭೀಕರವಾಗಿ ಈ ಹತ್ಯೆ ನಡೆದಿತ್ತು. ಈ ಹತ್ಯೆಗೆ ಈತ ನೀಡಿದ ಕಾರಣಗಳು ಹೋಲಿಕೆಯಾಗುತ್ತಿಲ್ಲ. ಆದರೆ ಪೊಲೀಸ್ ತನಿಖೆ ಆರಂಭಗೊಂಡಿದೆ.ತನ್ನ ನೆರೆಹೊರೆಯವರು, ಸ್ಥಳೀಯ ಮುಸ್ಲಿಮರು ಕಿರುಕುಳದಿಂದ ಈ ರೀತಿ ಮಾಡಿದ್ದೇನೆ ಎಂದು ಅರ್ಷದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ತನ್ನ ಸಹೋದರಿಯನ್ನು ಹೈದರಾಬಾದ್‌ಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಜಮೀನಿನ ಮೇಲೆ ಹಲವು ಸ್ಥಳೀಯ ಮುಸ್ಲಿಮರು ಕಣ್ಣಿಟ್ಟಿದ್ದರು. ಇದರಿಂದ ಪ್ರತಿ ದಿನ ಕಿರುಕುಳ ಎದುರಿಸುವಂತಾಗಿತ್ತು. ಈ ಎಲ್ಲಾ ಸಮಸ್ಯೆಗೆ ಮುಕ್ತಿ ಹಾಡಲು  ಈ ಕೃತ್ಯ ಎಸಗಿರುವುದಾಗಿ ಅರ್ಷದ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಪೊಲೀಸರಿಗೆ ಈತನ ಹೇಳಿಕೆ ಹಾಗೂ ಕೃತ್ಯಕ್ಕೆ ಹೋಲಿಕೆ ಸಿಗುತ್ತಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಅಗ್ರಾ ನಿವಾಸಿಯಾಗಿರುವ ಅರ್ಷದ್ ತನ್ನ ಕುಟುಂಬವನ್ನೇ ಹತ್ಯೆಗೈದಿದ್ದಾನೆ. ಈ ಕೃತ್ಯದಲ್ಲಿ ಅರ್ಷದ್ ತಂದೆ ಬದರ್ ಕೂಡ ಭಾಗಿಯಾಗಿರುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಬದರ್ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹೀಗಾಗಿ ಇದು ನೆರೆಹೊರೆಯವರ ಕಿರುಕುಳ, ಜಮೀನು ವಿವಾದಕ್ಕೆ ಸೀಮಿತವಾಗಿಲ್ಲ ಅನ್ನೋ ಅನುಮಾನ ಪೊಲೀಸರನ್ನು ಬಲವಾಗಿ ಕಾಡುತ್ತಿದೆ. ಈತ ವಿಡಿಯೋದಲ್ಲಿ ಹಲವು ವಿಚಾರ ಹೇಳಿಕೊಂಡಿದ್ದಾನೆ. ಆಗ್ರಾದಲ್ಲಿರುವ ತಮ್ಮ ಆಸ್ತಿಯ ಮೇಲೆ ನೆರೆಹೊರೆಯವರು ಕಣ್ಣಿಟ್ಟಿದ್ದು, ತಂಗಿಯರನ್ನು ಹೈದರಾಬಾದ್‌ಗೆ ಮಾರಲು ಸಂಚು ರೂಪಿಸಿದ್ದರು. ಇದರಿಂದ ನೊಂದು ಅವರನ್ನೆಲ್ಲಾ ಕೊಂದೆ’ ಎಂದು ಹೇಳಿದ್ದಾನೆ. ನನ್ನ ಜಮೀನು ಕಬಳಿಸಲು ಹಲವರು ಸಂಚು ರೂಪಿಸಿದ್ದರು. ಹೀಗಾಗಿ ನಾವು ಹಿಂದೂ ಧರ್ಮಕ್ಕೆ ಮತಾಂತರವಾಗಿ, ಮನೆ ಜಾಗದಲ್ಲಿ ದೇಗುಲ ನಿರ್ಮಿಸಲು ಉದ್ದೇಶಿಸಿದ್ದೆವು ಎಂದು ಅರ್ಷದ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಅರ್ಷದ್ ಕೃತ್ಯಕ್ಕೆ ಅಮಾಯಕ ಐದು ಜೀವಗಳು ಬಲಿಯಾಗಿದೆ. ತಾಯಿ  ಆಸ್ಮಾ, ಸಹೋದರಿಯರಾದ ಆಲಿಯಾ (9), ಅಲಿಶಾ (19), ಅಕ್ಸಾ (16), ರಹಮೀನ್‌ (18) ಮೃತ ದುರ್ದೈವಿಗಳು. ಅರ್ಷದ್ ಬಂಧಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಕೆಲ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ. ಇದೀಗ ಪೊಲೀಸರ ಒಂದು ತಂಡ ಅರ್ಷದ್ ಆಗ್ರಾ ನಿವಾಸಕ್ಕೆ ತೆರಳಿದೆ. ಇಲ್ಲಿ ನಿಜಕ್ಕೂ ಜಮೀನು ವ್ಯಾಜ್ಯ ನಡೆದಿತ್ತಾ? ಸ್ಛಳೀಯ ಮುಸ್ಲಿಮರು ಕಿರುಕುಳ ನೀಡಿದ್ದರೇ? ಅನ್ನೋದು ಪರಿಶೀಲಿಸಲು ಮುಂದಾಗಿದ್ದಾರೆ.

ಈ ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅರ್ಶದ್ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ. ನೆರೆಹೊರೆಯವ ಕಿರುಕುಳ ಕುರಿತು ದೂರು ನೀಡಬೇಕಿತ್ತು. ಕುಟುಂಬವನ್ನು ರಕ್ಷಿಸಿಕೊಳ್ಳುವ ಬದಲು ಕುಟಂಬವನ್ನೇ ನಿರ್ನಾಮ ಮಾಡಿರುವುದು ಎಷ್ಟು ಸರಿ? ಇದು ಯಾವ ರೀತಿಯ ನ್ಯಾಯ ಎಂದು ಹಲವರು ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕೃತ್ಯಕ್ಕೆ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.

ಮೂರನೇ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೆಟ್ರೋಲ್ ಸುರಿದ ಪತ್ನಿಗೆ ಬೆಂಕಿ ಇಟ್ಟ ಗಂಡ

ಲಂಚ, ವಂಚನೆ ಆರೋಪ: ಅಮೆರಿಕ ಕೋರ್ಟ್ ಅರೆಸ್ಟ್ ವಾರೆಂಟ್ ಬೆನ್ನಲ್ಲೇ ಅದಾನಿಗೆ ಸೆಬಿ ಶಾಕ್!
ಮುಂಬೈ/ನವದೆಹಲಿ: ಸೌರ ವಿದ್ಯುತ್‌ ಖರೀದಿ ಒಪ್ಪಂದ ಕುದುರಿಸುವ ಸಂಬಂಧ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಿಲುಕಿರುವ ಹಾಗೂ ಈ ಬಗ್ಗೆ ಅಮೆರಿಕದಲ್ಲಿ ದೋಷಾರೋಪಕ್ಕೆ ಗುರಿ ಆಗಿ ಬಂಧನ ವಾರಂಟ್‌ ಎದುರಿಸುತ್ತಿರುವ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ ಅವರಿಗೆ ಈಗ ‘ಸೆಬಿ’ ಸಂಕಷ್ಟ ಎದುರಾಗಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಸೂಚನೆ ಮೇರೆಗೆ, ಅದಾನಿ ಕಂಪನಿಗೆ ಭಾರತದ ಷೇರು ಮಾರುಕಟ್ಟೆಗಳು ಸ್ಪಷ್ಟನೆ ಬಯಸಿ ನೋಟಿಸ್‌ ಜಾರಿ ಮಾಡಿವೆ.

ಷೇರುಪೇಟೆಯಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳು ತಮ್ಮ ವ್ಯವಹಾರದ ಬಗ್ಗೆ ನಿಯಮಿತವಾಗಿ ಪೇಟೆಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಆದರೆ, ಲಂಚ ಪ್ರಕರಣದ ತನಿಖೆ ಹಾಗೂ ವಿಚಾರಣೆ ಅಮೆರಿಕದಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಭಾರತದ ಷೇರುಪೇಟೆಗಳಿಗೆ ಅದಾನಿ ಕಂಪನಿ ಮಾಹಿತಿ ನೀಡಿರಲಿಲ್ಲ. ಇದು ಸೆಬಿಯ ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಸೆಬಿ ಸೂಚನೆ ಮೇರೆಗೆ ಅದಾನಿ ಸಮೂಹಕ್ಕೆ ಅವು ‘ಏಕೆ ಮಾಹಿತಿ ನೀಡಿಲ್ಲ?’ ಎಂದು ಸ್ಪಷ್ಟೀಕರಣ ಕೋರಿ ನೋಟಿಸ್‌ ನೀಡಿವೆ.

ಅದಾನಿ ಸರ್ಕಾರದ ಆಸ್ತಿ ಪಡೆದು, ಅವುಗಳನ್ನೇ ಅಡವಿಟ್ಟು ಬ್ಯಾಂಕ್ ಸಾಲ ಪಡೆಯುತ್ತಾರೆ; ಮಲ್ಲಿಕಾರ್ಜುನ ಖರ್ಗೆ

ಇದಕ್ಕೆ ಬರುವ ಉತ್ತರ ಆಧರಿಸಿ ತನಿಖೆ ಆರಂಭಿಸುವ ಬಗ್ಗೆ ನಿರ್ಧರಿಸಲಿವೆ ಎಂದು ಮೂಲಗಳು ಹೇಳಿವೆ.ಇದಲ್ಲದೆ, ‘ಕೀನ್ಯಾ ದೇಶವು ಏಕೆ ನಿಮ್ಮ ಜತೆ ಏರ್‌ಪೋರ್ಟ್‌ ವಿಸ್ತರಣೆ ಹಾಗೂ ವಿದ್ಯುತ್‌ ಒಪ್ಪಂದ ರದ್ದು ಮಾಡಿತು’ ಎಂಬ ಬಗ್ಗೆಯೂ ಸ್ಪಷ್ಟನೆ ಕೇಳಲಾಗಿದೆ ಎಂದು ಅವು ಹೇಳಿವೆ.ಈ ಹಿಂದೆ ಅದಾನಿ ಸಮೂಹವು ಷೇರುಪೇಟೆಯಲ್ಲಿ ಅಕ್ರಮ ಎಸಗಿದೆ ಎಂದು ಅಮೆರಿಕದ ‘ಹಿಂಡನ್‌ಬರ್ಗ್‌’ ಸಂಸ್ಥೆ ಆರೋಪಿಸಿತ್ತು. ಆಗಲೂ ಸೆಬಿ ಅದಾನಿ ವಿರುದ್ಧ ತನಿಖೆ ನಡೆಸಿತ್ತು ಹಾಗೂ ಬಳಿಕ ಕ್ಲೀನ್‌ಚಿಟ್‌ ನೀಡಿತ್ತು.

ಅದಾನಿಯನ್ನ ಇವತ್ತೇ ಬಂಧಿಸಬೇಕು, ಪ್ರಧಾನಿ ಮೋದಿ ರಕ್ಷಿಸುತ್ತಾರೆ: ರಾಹುಲ್ ಗಾಂಧಿ ಕಿಡಿ

- ಲಂಚ ಕೇಸ್‌ ವಿಚಾರಣೆ ಬಗ್ಗೆ ಏಕೆ ತಿಳಿಸಲಿಲ್ಲ? ಸ್ಪಷ್ಟನೆ ಕೊಡಿ- ಸೆಬಿ ಸೂಚನೆ ಮೇರೆಗೆ ಅದಾನಿ ಷೇರುಪೇಟೆಗಳ ನೋಟಿಸ್‌

ಸಂಸತ್‌ನಲ್ಲಿ ಪ್ರಸ್ತಾಪ ಮಾಡುತ್ತೇವೆ

ಗೌತಮ್‌ ಅದಾನಿ ಭ್ರಷ್ಟಾಚಾರದ ಬಗ್ಗೆ ನಾವು 5-6 ವರ್ಷದಿಂದ ಹೇಳುತ್ತಿದ್ದರೂ ಪ್ರಧಾನಮಂತ್ರಿ ಮೋದಿ ತುಟಿ ಬಿಚ್ಚಿರಲಿಲ್ಲ. ಇದೀಗ ಅವ್ಯವಹಾರ ವಿದೇಶದಲ್ಲೂ ಸಾಬೀತಾಗಿದ್ದು, ನಮ್ಮ ದೇಶದಲ್ಲೇ ಇರುವ ಅದಾನಿ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಸಂಸತ್‌ ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇವೆ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಅದಾನಿಯನ್ನೇಕೆ ಬಂಧಿಸ್ತಿಲ್ಲ?

ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ತಪ್ಪಿಸಿಕೊಳ್ಳಲು ಬಿಡಬೇಡಿ. ಅದಾನಿಯನ್ನು ಕೂಡಲೇ ಬಂಧಿಸಿ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಮತ ಹಾಕದಂತೆ ತಡೆದ 5 ಪೊಲೀಸರು ಸಸ್ಪೆಂಡ್; ಕೆಲವೆಡೆ ಕಲ್ಲು ತೂರಾಟ
ಲಖನೌ: ಉತ್ತರಪ್ರದೇಶದ ಮೀರಾಪುರ ಕ್ಷೇತ್ರದ ಕಾಕ್ರೋಲಿಯಲ್ಲಿ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದ ವೇಳೆ 2 ಗುಂಪುಗಳು ಹೊಡೆದಾಡಿಕೊಂಡು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಲಘು ಲಾಠಿಪ್ರಹಾರ ನಡೆಸಿ ಜನರನ್ನು ಚದುರಿಸಿ ಮತದಾನಕ್ಕೆ ಅನುವು ಮಾಡಿದ್ದಾರೆ. ಇದನ್ನು ವಿರೋಧಿಸಿರುವ ಎಐಎಂಐಎಂ ನಾಯಕ ಮೊಹಮ್ಮದ್‌ ಅರ್ಶದ್‌, ‘ಜನರು ಮನೆಯಿಂದ ಹೊರಬಂದು ಮತ ಚಲಾಯಿಸದಂತೆ ಪೊಲೀಸರು ತಡೆಯುತ್ತಿದ್ದಾರೆ. ಇದು ಜನರ ಚುನಾವಣೆಯಾಗುವ ಬದಲು ಸರ್ಕಾರದ ಚುನಾವಣೆಯಾಗಿದೆ’ ಎಂದು ಆರೋಪಿಸಿದ್ದಾರೆ.

ಮತ ಹಾಕದಂತೆ ತಡೆದ 5 ಪೊಲೀಸರು ಸಸ್ಪೆಂಡ್
ಉತ್ತರಪ್ರದೇಶದ ಉಪಚುನಾವಣೆ ವೇಳೆ ಮತ ಚಲಾಯಿಸಲು ಬಂದ ಮತದಾರರ ಚೀಟಿಗಳನ್ನು ಪರಿಶೀಲಿಸಿದ ಪೋಲಿಸರು ಕೆಲವರನ್ನು ಮತ ಚಲಾಯಿಸದಂತೆ ತಡೆದಿರುವ ಘಟನೆ ಮುಜಪ್ಫರ್‌ನಗರದಲ್ಲಿ ನಡೆದಿದೆ. ಹೀಗಾಗಿ ಈ ಕೃತ್ಯ ಎಸಗಿದ 5 ಪೊಲೀಸರನ್ನು ಚುನಾವಣಾ ಆಯೋಗ ಅಮಾನತು ಮಾಡಿದೆ. ಇವರಲ್ಲಿ ಇಬ್ಬರು ಸಬ್‌ ಇನ್ಸ್‌ಪೆಕ್ಟರ್‌ಗಳು, ಇಬ್ಬರು ಮುಖ್ಯ ಪೇದೆಗಳು ಹಾಗೂ ಇಬ್ಬರು ಪೇದೆಗಳಿದ್ದಾರೆ.

‘ನಮ್ಮ (ಎಸ್‌ಪಿ) ಪರವಾಗಿ ಮತ ಚಲಾಯಿಸುವ ಸಾಧ್ಯತೆಯಿದ್ದ ಮತದಾರರನ್ನು ತಡೆಯಲಾಗುತ್ತಿದೆ’ ಎಂದು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ವಿಡಿಯೋ ಸಾಕ್ಷಿ ಸಮೇತ ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿಗಳು, ಕೃತ್ಯದಲ್ಲಿ ತೊಡಗಿದ್ದ ಐವರು ಪೊಲೀಸರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.

ಗನ್‌ನಿಂದ ಪೊಲೀಸರ ಬೆದರಿಕೆ:
ಈ ನಡುವೆ ಪೊಲೀಸರು ಮುಜಫ್ಫರ್ ನಗರ ಜಿಲ್ಲೆಯ ಮೀರಾಪುರ ಕ್ಷೇತ್ರದ ಮಹಿಳಾ ಮತದಾರರನ್ನು ಗನ್‌ನಿಂದ ಬೆದರಿಸುತ್ತಿರುವ ವಿಡಿಯೋವನ್ನೂ ಅಖಿಲೇಶ್ ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ಇನ್ನೂ ಮೂರು ವರ್ಷ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಲ್ಲ: ಸಚಿವ ಈಶ್ವರ ಖಂಡ್ರೆ

ಗೋಣಿ ಚೀಲದಲ್ಲಿ ಮಹಿಳೆ ಶವ ಪತ್ತೆ
ಉತ್ತರ ಪ್ರದೇಶದ ಕರ್ಹಾಲ್‌ ಕ್ಷೇತ್ರದಲ್ಲಿ 23 ವರ್ಷದ ಮಹಿಳೆ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಬುಧವಾರ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಈ ಕೊಲೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

‘ಮಹಿಳೆಗೆ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಒತ್ತಡ ಹೇರುತ್ತಿದ್ದರು. 3 ದಿನಗಳ ಹಿಂದೆ ಎಸ್‌ಪಿ ಪಕ್ಷದ ಪ್ರಶಾಂತ್ ಯಾದವ್‌ ನಮ್ಮ ಮನೆಗೆ ಬಂದು ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗೆ ಮತ ಹಾಕುವಂತೆ ಕೇಳಿದ್ದರು. ಆದರೆ ನಮ್ಮ ಕುಟುಂಬಕ್ಕೆ ಪಿಎಂ ಆವಾಸ್‌ ಯೋಜನೆಯಡಿ ಮನೆ ದೊರೆತಿರುವುದರಿಂದ ಬಿಜೆಪಿ ಹಾಕುತ್ತೇವೆ ಎಂದು ಹೇಳಿದ್ದೆವು. ಈ ಕಾರಣಕ್ಕೆ ಕೊಲೆ ನಡೆದಿದೆ ’ ಎಂದು ಮೃತ ಮಹಿಳೆ ಕುಟುಂಬಸ್ಥರು ಹೇಳಿದ್ದಾರೆ.

ಮಹಿಳೆಯ ತಂದೆ ನೀಡಿದ ದೂರಿನನ್ವಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ನಡೆಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಮತ ಸಮರ ಅಂತ್ಯ; ಮಹಾರಾಷ್ಟ್ರದಲ್ಲಿ ಶೇಕಡಾ 4ರಷ್ಟು ಮತದಾನ ಹೆಚ್ಚಳ

ನಿಮ್ಮ ದೂರು ಯಾರೂ ಕೇಳಿಸದಿದ್ದರೆ ನೇರವಾಗಿ ಪ್ರಧಾನಿ ಮೋದಿಗೆ ನೀಡಿ, ಇಲ್ಲಿದೆ ಸುಲಭ ವಿಧಾನ!
ನವದೆಹಲಿ(ಮಾ.04) ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು, ಪರಿಹಾರ ಒದಗಿಸಲು ಸ್ಥಳೀಯ ಶಾಸಕರು, ಜಿಲ್ಲಾಡಳಿತ, ತಾಲೂಕು ಕಚೇರಿ, ಪಂಚಾಯತ್ ಸೇರಿದಂತೆ ಹಲವು ವ್ಯವಸ್ಥೆಗಳಿವೆ. ಪ್ರತಿ ಸಮಸ್ಯೆಗೂ ಇಲಾಖೆಗಳಿವೆ. ಸಿದ್ಧ ಸೂತ್ರಗಳಿವೆ. ಆದರೆ ಅದೆಷ್ಟೋ ಬಾರಿ ದೂರುಗಳನ್ನು ಸ್ವೀಕರಿಸುತ್ತಿಲ್ಲ, ದೂರು ನೀಡಿ ವರ್ಷಗಳೇ ಉರುಳಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ, ಕೆಲಸಗಳು ಆಗುತ್ತಿಲ್ಲ ಎಂದು ಹಲವರು ಅಳಲು ತೋಡಿಕೊಳ್ಳುತ್ತಾರೆ. ಇನ್ನೇನು ಮಾಡಲು ಸಾಧ್ಯ ಎಂದು ಕೈಚೆಲ್ಲುವ ಅಗತ್ಯವಿಲ್ಲ. ಕಾರಣ ನೀವು ನೇರವಾಗಿ ಪ್ರಧಾನಿಗೆ ದೂರು ನೀಡಲು ಸಾಧ್ಯವಿದೆ. ಇದು ಅತೀ ಸುಲಭ ಹಾಗೂ ಸರಳ ವಿಧಾನದ ಮೂಲಕ ದೂರು ನೀಡಿ ಪರಿಪಾರ ಪಡೆಯಲು ಸಾಧ್ಯವಿದೆ.

ಪ್ರಧಾನಿ ಮೋದಿಗೆ ನಿಮ್ಮ ಸಮಸ್ಯೆಗಳನ್ನು, ಪರಿಹಾರಕ್ಕಾಗಿ ದೂರು ನೀಡಲು ಕೆಲ ಆಯ್ಕೆಗಳಿವೆ. ಸುಲಭವಾಗಿ ಆನ್‌ಲೈನ್ ಮೂಲಕ ನೀಡಬಹುದು. ಇದನ್ನು ಹೊರತುಪಡಿಸಿದರೆ ಭಾರತೀಯ ಡಾಕ್ ಮೂಲಕ ಅಥವಾ ಫ್ಯಾಕ್ಸ್ ಮೂಲಕವೂ ದೂರು ನೀಡಲು ಸಾಧ್ಯವಿದೆ. ದೂರನ್ನು ಬರೆದು ಭಾರತೀಯ ಡಾಕ್ ಹಾಗೂ ಫ್ಯಾಕ್ಸ್ ಮೂಲಕ ಪ್ರಧಾನಿಗೆ ತಲುಪಿಸಬಹುದು. ಇನ್ನು ಪತ್ರ ಬರೆದು ಪ್ರಧಾನಿ ಮಂತ್ರಿಗಳ ಕಚೇರಿಗೆ ರವಾನಿಸಬಹುದು. ಆದರೆ ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ಪ್ರಧಾನಿಗೆ ದೂರು ನೀಡಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದು.

ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!

ಪ್ರಧಾನಿಗೆ ಆನ್‌ಲೈನ್ ಮೂಲಕ ದೂರು ನೀಡಲು ಅನುಸರಿಸಬೇಕಾದ ವಿಧಾನ
ಪ್ರಧಾನಿಗೆ ದೂರು ನೀಡಲು ಅಥವಾ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ಪಿಎಂ ಇಂಡಿಯಾ ವೆಬ್‌ಸೈಟ್ (https://www.pmindia.gov.in)  ಕ್ಲಿಕ್ ಮಾಡಬೇಕು.

ಅಧಿಕೃತ ವೆಬ್‌ಸೈಟ್ ತೆರೆದುಕೊಂಡ ಬಳಿಕ ಮೆನು ಕ್ಲಿಕ್ ಮಾಡಬೇಕು, ಇಲ್ಲಿ ನಿಮಗೆ ಮನ್ ಕಿ ಬಾತ್, ಪಿಎಂ ಫಂಡ್, ಲೈಬ್ರರಿ ಸೇರಿದಂತೆ ಹಲವು ಆಯ್ಕೆಗಳು ಲಭ್ಯವಾಗಲಿದೆ. ಈ ಪೈಕಿ ಇಂಟರಾಕ್ಟ್ ವಿಥ್ ಪಿಎಂ(Interact with PM) ಅನ್ನೋ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

Interact with PM ಕ್ಲಿಕ್ ಮಾಡಿದ ತಕ್ಷಣ ಪಿಎಂ ಗ್ರಿವೆನ್ಸ್ ಪೋರ್ಟಲ್ (PMO Grievance Portal) ತೆರೆದುಕೊಳ್ಳಲಿದೆ.

ಈ ಪೋರ್ಟಲ್‌ನಲ್ಲ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಉಲ್ಲೇಖಿಸಬೇಕು. ಈ ವೇಳೆ ಒಟಿಪಿ ಬರಲಿದೆ. ಈ ಒಟಿಪಿಯನ್ನು ನಮೂದಿಸಿದ ಬಳಿಕ ಅಲ್ಲೆ ನೀಡಿರುವ ಸೆಕ್ಯೂರಿಟಿ ಕೋಡ್ ಹಾಕಿದರೆ ಲಾಗಿನ್ ಆಗಲಿದೆ.

Modi guarantee: ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ಗೆ ಈವರೆಗೂ 56.67 ಕೋಟಿ ಜನ ಸೇರ್ಪಡೆ

ನಿಮ್ಮ ದೂರನ್ನು ಟೈಪ್ ಮಾಡಿ, ಸಂಬಂಧ ಪಟ್ಟ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ದೂರಿನ ವಿವರ ಸೇರಿದಂತೆ ಇತರ ಮಾಹಿತಿಗಳನ್ನು ನೀಡಿ ಸಬ್‌ಮಿಟ್ ಮಾಡಿದರೆ ನಿಮ್ಮ ದೂರು ಪ್ರಧಾನಿಗಳಿಗೆ ತಲುಪಲಿದೆ.

ಫ್ಯಾಕ್ಸ್, ಪತ್ರ, ಆನ್‌ಲೈನ್ ಮೂಲಕ  ಬಂದ ದೂರಗಳನ್ನು ಪರಿಶೀಲಿಸಿಲು ಪ್ರಧಾನಿ ಕಾರ್ಯಾಲಯದಲ್ಲಿ ಒಂದು ತಂಡವಿದೆ. ಈ ತಂಡ ಬಂದಿರುವ ದೂರಿನ ಕುರಿತು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಲಿದೆ.

Independence Day 2023: ಇದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ 76 ಅಥವಾ 77, ಯಾಕಿಷ್ಟು ಕನ್‌ಫ್ಯೂಶನ್‌!
ಭಾರತ ಇಂದು ದೇಶಾದ್ಯಂತ 2023ರ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಿಕೊಳ್ಳುತ್ತಿದೆ. ಆದರೆ ಇದು 76ನೇ ಸ್ವಾತಂತ್ರ್ಯೋತ್ಸವನಾ ಅಥವಾ 77ನೇ ಸ್ವಾತಂತ್ರ್ಯೋತ್ಸವನಾ ಅನ್ನೋ ಬಗ್ಗೆ ಹಲವರಿಗೆ ಗೊಂದಲವಿದೆ. ಆ ಬಗ್ಗೆ ಕ್ಲಾರಿಟಿ ಇಲ್ಲಿದೆ.

ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಈ ದಿನದಂದು ಜನರು ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ಅವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಗೌರವಿಸುತ್ತಾರೆ. ಭಾರತವು ಆಗಸ್ಟ್ 15, 1947ರಂದು ಸ್ವತಂತ್ರ ದೇಶವೆಂದು ಪರಿಗಣಿಸಲ್ಪಟ್ಟಿತು. 200-ಹಳೆಯ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಯಿತು.

ಬ್ರಿಟಿಷ್ ವಸಾಹತುಶಾಹಿಯಿಂದ ಭಾರತದ ಸ್ವಾತಂತ್ರ್ಯದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ನೆನಪಿಸುವುದರಿಂದ ಈ ದಿನವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನದಂದು, ರಾಷ್ಟ್ರದಾದ್ಯಂತ, ಮನೆಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು  ಹಾರಿಸಲಾಗುತ್ತದೆ. ಭಾರತವು ಈ ವರ್ಷ ತನ್ನ 76ನೇ ಅಥವಾ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆಯೇ ಎಂಬ ಬಗ್ಗೆ ಹಲವರು ಗೊಂದಲಕ್ಕೀಡಾಗಿದ್ದಾರೆ.

ಎಲ್ಲಾ ಸಕಾರಾತ್ಮಕ ಮತ್ತು ಸಂಭ್ರಮದ ವೈಬ್‌ಗಳ ನಡುವೆ, ದೇಶವು ತನ್ನ 76 ನೇ ಅಥವಾ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆಯೇ ಎಂಬ ಗೊಂದಲ ಮತ್ತು ಪ್ರಶ್ನೆ ಜನರ ಮನಸ್ಸಿನಲ್ಲಿ ಇದೆ. ಭಾರತವು ಆಗಸ್ಟ್ 15, 1947 ರಂದು ಸ್ವಾತಂತ್ರ್ಯವನ್ನು ಪಡೆದುಕೊಂಡಿತು.

ಆಗಸ್ಟ್ 15, 1947ರಂದು, ಭಾರತವು ತನ್ನ ಸ್ವಾತಂತ್ರ್ಯವನ್ನು ಪಡೆಯಿತು, ಸುಮಾರು 190 ವರ್ಷಗಳ ಬ್ರಿಟಿಷ್ ಆಳ್ವಿಕೆಯನ್ನು  ಕೊನೆಗೊಳಿಸಿತು ಮತ್ತು ನಿಯಂತ್ರಣದ ಅಧಿಕಾರವನ್ನು ದೇಶದ ನಾಯಕರಿಗೆ ಹಸ್ತಾಂತರಿಸಲಾಯಿತು.

ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15, 1948ರಂದು ಆಯೋಜಿಸಲಾಯಿತು. ಈ ತರ್ಕದೊಂದಿಗೆ, ಭಾರತವು ತನ್ನ ಸ್ವಾತಂತ್ರ್ಯದ 76ನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ.

ಆದರೆ, ಆಗಸ್ಟ್ 15, 1947 ಅನ್ನು ಭಾರತದ ಸ್ವಾತಂತ್ರ್ಯದ ಮೊದಲ ವರ್ಷವೆಂದು ನಾವು ಲೆಕ್ಕಹಾಕಿದರೆ 2023ರ ಆಗಸ್ಟ್ 15 ಅನ್ನು ಭಾರತದ 77 ನೇ ಸ್ವಾತಂತ್ರ್ಯ ದಿನವೆಂದು ಪರಿಗಣಿಸಲಾಗುತ್ತದೆ. ಎರಡೂ ವಾದಗಳು ಸರಿಯಾಗಿದ್ದರೂ, ಬಹುಮತದ ಅನುಮೋದನೆಯೊಂದಿಗೆ, ಭಾರತವು 2023ರಲ್ಲಿ 77 ನೇ ಸ್ವಾತಂತ್ರ್ಯ ವರ್ಷವೆಂದು ಹೇಳಲಾಗುತ್ತದೆ.

ಈ ವರ್ಷದ ಸ್ವಾತಂತ್ರ್ಯ ದಿನದ ಥೀಮ್ 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಅಡಿಯಲ್ಲಿ 'ರಾಷ್ಟ್ರ ಮೊದಲು, ಯಾವಾಗಲೂ ಮೊದಲು' ಎಂಬುದಾಗಿದೆ. ಭಾರತದ ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಶುಕ್ರವಾರ, ಆಗಸ್ಟ್ 11 ರಂದು ಪ್ರಗತಿ ಮೈದಾನದಿಂದ ಸಂಸದರೊಂದಿಗೆ ಬೈಕ್‌ನೊಂದಿಗೆ 'ಹರ್ ಘರ್ ತಿರ್ಗಂಗಾ' ಅಭಿಯಾನಕ್ಕೆ ಚಾಲನೆ ನೀಡಿದರು.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕೆಂಪು ಕೋಟೆಯಲ್ಲಿ 10ನೇ ಹಾಗೂ ಈ ಸರ್ಕಾರದ ಅವಧಿಯ ಕೊನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು.

ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ
ನವದೆಹಲಿ: ದೇಶ 77ನೇ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಂಪುಕೋಟೆಯಲ್ಲಿ 10ನೇ ಹಾಗೂ ಈ ಸರ್ಕಾರದ ಅವಧಿಯ ಕೊನೆಯ ಧ್ವಜಾರೋಹಣವನ್ನು ನೆರವೇರಿಸಿದರು. ಇದಕ್ಕೂ ಮೊದಲು ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಗೆ ನಮಸ್ಕರಿಸಿದರು.  ಬಳಿಕ ಮಾತನಾಡಿದ ಪ್ರಧಾನಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟವೆನಿಸಿರುವ ಭಾರತ ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂದಿದೆ. ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ ಎಲ್ಲಾ ಕೆಚ್ಚೆದೆಯ ಹೃದಯಗಳಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ದೆಹಲಿ ಮಾತ್ರ ಭಾರತದ ಕೇಂದ್ರವಾಗಿಲ್ಲ, ಭಾರತದ ಸಣ್ಣ ಸಣ್ಣ ಪಟ್ಟಣಗಳು ತಂತ್ರಜ್ಞಾನದಲ್ಲಿ ಮುಂದಿದೆ, ಜತೆಗೆ ಇಡೀ ಜಗತ್ತು ಇಂದು ಭಾರತದ ಮೇಲೆ ವಿಶ್ವಾಸವಿಟ್ಟಿದೆ. ಜಗತ್ತನೇ ಸೆಳೆಯುವಂತೆ ಭಾರತ ಬೆಳೆಯುತ್ತಿದೆ.  ಜಗತ್ತಿನ ಯಾವುದೇ ರೇಟಿಂಗ್ ಏಜೆನ್ಸಿಗೂ ಭಾರತದ ಬೆಳವಣಿಗೆ ತಡೆಯುವ ಶಕ್ತಿ ಇಲ್ಲ, ಇಂಥ ಅಮೃತ ಕಾಲದಲ್ಲಿ ನಾವಿರುವುದು ನಮ್ಮೆಲ್ಲರ ಅದೃಷ್ಟ,  ದೇಶದ ಯುವಕರಿಗೆ ಅವಕಾಶದ ಕೊರತೆ ಇಲ್ಲ, ಅವಕಾಶ ಆಕಾಶದಷ್ಟಿದೆ. ಚೆನ್ನಾಗಿ ಬಳಸಿಕೊಳ್ಳಿ ಎಂದು ಪ್ರಧಾನಿ ಹೇಳಿದರು.

ಇಂದು 77ನೇ ಸ್ವಾತಂತ್ರ್ಯ ಸಂಭ್ರಮ: 10ನೇ ಬಾರಿ ಧ್ವಜರೋಹಣ ನೆರವೇರಿಸಿದ ಪ್ರಧಾನಿ

ಮನುಷ್ಯತ್ವದಿಂದ ದೇಶ ಕೊರೋನಾ ಎದುರಿಸಿ ಬೇರೆ ದೇಶಗಳ ನೆರವಿಗೂ ಬಂತು, ಕೊರೋನಾ ಬಳಿಕ ದೇಶದ ಸ್ಥಾನಮಾನ ಬದಲಾಗಿದೆ. ಇಡೀ ಜಗತ್ತು ಭಾರತವನ್ನು ಮೆಚ್ಚುಗೆ ಹಾಗೂ ಅಚ್ಚರಿಯಿಂದ ನೋಡುತ್ತಿದೆ ಎಂದರು. ಇದೇ ವೇಳೆ ಮಣಿಪುರದ ಹಿಂಸಾಚಾರ ನೆನೆದ ಪ್ರಧಾನಿ, ಅಲ್ಲಿ ಅನೇಕ ಜನ ಜೀವ ಕಳೆದುಕೊಂಡಿದ್ದಾರೆ. ಆದಷ್ಟು ಶೀಘ್ರ ಅಲ್ಲಿನ ಜನ ಆ ಸಂಕಟದಿಂದ ಹೊರಬರಲಿ ಎಂದರು.

#WATCH | Prime Minister Narendra Modi hoists the National Flag at the Red Fort in Delhi, on #IndependenceDay pic.twitter.com/lO3SRCM7kZ
— ANI (@ANI) August 15, 2023

#WATCH | IAF helicopter showers flower petals after flag hoisting by PM Modi at Red Fort on the 77th Independence Day pic.twitter.com/XzDWx1CqPZ
— ANI (@ANI) August 15, 2023

ವಂಶ ರಾಜಕಾರಣದ ವೇಳೆಯೂ ಪ್ರಧಾನಿ  ವಾಗ್ದಾಳಿ

ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ವಂಶ ರಾಜಕಾರಣದ ಬಗ್ಗೆಯೂ ಮಾತನಾಡಿದ ಪ್ರಧಾನಿ, ಕುಟುಂಬ ರಾಜಕಾರಣ ನಮ್ಮ ದೇಶವನ್ನು ಹಾಳು ಮಾಡಿದೆ. ಒಂದು ರಾಜಕೀಯ ಪಕ್ಷವು ಕೇವಲ ಒಂದೇ ಕುಟುಂಬದ ಉಸ್ತುವಾರಿಯನ್ನು ಹೇಗೆ ಹೊಂದಲು ಸಾಧ್ಯ, ಅವರಿಗೆ ಕುಟುಂಬದ ಪಕ್ಷ  ಕುಟುಂಬದಿಂದ ಕುಟುಂಬಕ್ಕಾಗಿ ಎಂಬುದೇ ಅವರ ಜೀವ ಮಂತ್ರವಾಗಿದೆ ಎಂದು ಪ್ರಧಾನಿ ಟೀಕಿಸಿದರು.

ಇಂದು ತೆಗೆದುಕೊಳ್ಳುವ ನಿರ್ಧಾರ ದೇಶದ ಸಾವಿರ ವರ್ಷದ ಭವಿಷ್ಯ ನಿರ್ಧರಿಸುತ್ತದೆ.

ಇಂದು ತೆಗೆದುಕೊಂಡ ನಿರ್ಧಾರ ಹಾಗೂ ಮಾಡಿದ ಕೆಲಸಗಳು ದೇಶದ ಭವಿಷ್ಯದ ಸಾವಿರ ವರ್ಷ ಹೇಗಿರಲಿದೆ ಎಂಬುದನ್ನು ನಿರ್ಧರಿಸುತ್ತದೆ ಹಾಗೂ ಸಾವಿರ ವರ್ಷಗಳಿಗೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

#WATCH | PM Modi appeals for peace in Manipur from the ramparts of the Red Fort on 77th Independence Day

"The country stands with the people of Manipur...Resolution can be found through peace only. The Centre and the State government is making all efforts to find resolution." pic.twitter.com/TbQr0iopY6
— ANI (@ANI) August 15, 2023

ರಂಗೋಲಿ ಸ್ಪರ್ಧೆ: 76 ನಿಮಿಷದಲ್ಲಿ 76 ರಾಷ್ಟ್ರಧ್ವಜ -ಡಾ.ಭಾರತಿ ಮರವಂತೆ ವಿಶ್ವದಾಖಲೆ!
ಉಡುಪಿ (ಸೆ.21) : ತಮಿಳುನಾಡಿನ ಮಯಿಳದುತುರೈ ಜಿಲ್ಲೆಯಲ್ಲಿ ಜಾಕಿಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆಯವರು(ಜಾಕಿ ಕ್ರಿಯೇಶನ್ಸ್) ಆಯೋಜಿಸಿದ ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ರಂಗೋಲಿಯಲ್ಲಿ ಬಿಡಿಸುವ ದಾಖಲೆಯಲ್ಲಿ ರಂಗೋಲಿ ಕಲಾವಿದ ಡಾ.ಭಾರತಿ ಮರವಂತೆಯವರು ಯಶಸ್ವಿಯಾಗಿದ್ದಾರೆ.\

30 ಗಂಟೆಗಳಲ್ಲಿ ಲೇಹ್-ಟು-ಮನಾಲಿ ಸವಾರಿ, ಕಾಶ್ಮೀರಿ ಸೈಕ್ಲಿಸ್ಟ್ ವಿಶ್ವ ದಾಖಲೆ ಯತ್ನ

21-ಆಗಸ್ಟ್-2022ರಂದು ಅಂತರ್ಜಾಲ(Online)ದ ಮೂಲಕ ಡಾ.ಭಾರತಿ ಮರವಂತೆ(Dr.Bharati Maravante)ಯವರು ಸಂಸ್ಥೆಯವರು ಸೂಚಿಸಿದ ನಿರ್ಧಿಷ್ಟ ಸಮಯದಲ್ಲಿ 76 ನಿಮಿಷಗಳಲ್ಲಿ 76 ಭಾರತದ ರಾಷ್ಟ್ರಧ್ವಜಗಳನ್ನು ಅನನ್ಯ ಕೌಶಲದಿಂದ ಏಕವ್ಯಕ್ತಿಯಾಗಿ ರಚಿಸಿದ್ದರು. ಬೃಹತ್ ಗಾತ್ರದ(30 25 ಅಡಿ)ಲ್ಲಿ ಧ್ವಜದ ಪ್ರಮಾಣತೆಗೆ ಅನುಗುಣವಾಗಿ(2ಅನುಪಾತದಲ್ಲಿ ಮತ್ತು ತ್ರಿವರ್ಣ-ಚಕ್ರ( 24ಗೆರೆಗಳು ಚಿತ್ರದಲ್ಲಿ ನೋಡಬಹುದು)ವನ್ನು 76 ರಾಷ್ಟ್ರಧ್ವಜಗಳನ್ನು 76 ನಿಮಿಷಗಳ ಅವಧಿಗೆ ಮುಂಚಿತವಾಗಿ ಪೂರ್ಣಗೊಳಿಸಿ ವಿಶ್ವದಾಖಲೆ(World record) ನಿರ್ಮಿಸಿದ್ದಾರೆ.

ದೇಶಭಕ್ತಿ ಹುಟ್ಟಿಸುವ ಈ ಕಲಾ ಪ್ರದರ್ಶನದಲ್ಲಿ ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳ ಕಲಾವಿದರು. ವಿವಿಧ ಕೌಶಲ್ಯಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.ತಮಿಳುನಾಡಿ(Tamilnadu)ನ ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆ(Jockey Book of World Records Organization)ಯವರು ಪ್ರಮಾಣಪತ್ರ, ಟ್ರೋಪಿ, ಮೆಡಲ್, ಬ್ಯಾಡ್ಜ್, ಟಿಶರ್ಟ್ ಇತ್ಯಾದಿಗಳನ್ನು ನೀಡಿ ಡಾ.ಭಾರತಿ ಮರವಂತೆಯವರನ್ನು ಗೌರವಿಸಿದ್ದಾರೆ.

ತಮಿಳುನಾಡಿನ ನಿರ್ಧಿಷ್ಟ ಸ್ಥಳದಲ್ಲಿ ಮತ್ತು ಅಂತರ್ಜಾಲದಲ್ಲಿ ನಡೆದಿರುವ ಈ ಪ್ರದರ್ಶನದಲ್ಲಿ ಡಾ.ಭಾರತಿ ಮರವಂತೆಯವರು ಅಂತರ್ಜಾಲದ ಮೂಲಕ ರಂಗೋಲಿ ಕಲೆಯನ್ನು ಪ್ರದರ್ಶಿಸಿದ್ದರು. ಈ ಸಂದರ್ಭದ ಬೃಹತ್ ಗಾತ್ರದ ರಂಗೋಲಿ ಕಲಾಪ್ರದರ್ಶನವನ್ನು ವೀಡಿಯೋ ಛಾಯಾಚಿತ್ರಗಳ ಮೂಲಕ ಕಾಯ್ದಿರಿಸಲಾಗಿದೆ. ಭಾರತದ ಸಾಂಸ್ಕೃತಿಕ ಕಲೆಯ ಉಳಿವಿನ ಮತ್ತು ದೇಶಭಕ್ತಿ ಹುಟ್ಟಿಸುವ ವಿಷಯವಾಗಿರುವ ಈ ರಂಗೋಲಿ ಕಲಾಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಡಾ.ಭಾರತಿ ಮರವಂತೆ ಸಂಕ್ಷಿಪ್ತ ಪರಿಚಯ:

ಡಾ.ಭಾರತಿ ಮರವಂತ ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾಗಿದ್ದು 'ಕರಾವಳಿ ಕರ್ನಾಟಕದ ರಂಗೋಲಿ ಕಲೆ' ವಿಷಯಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ. `ಜನಪದ ಚಿತ್ತಾರಗಳು' ವಿಷಯದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕಿರು ಸಂಶೋಧನೆ, ಕನ್ನಡ ಜಾನಪದ ನಿಘಂಟು ಯೋಜನೆಯಲ್ಲಿ ಕೆಲಸ, ಆಫ್ರಿಕನ್ ಜಾನಪದ ವಿಶ್ವಕೋಶಕ್ಕೆ ಸಂಶೋಧನಾ ಬರವಣೆಗೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರಿಂದ `ರಂಗಭೂಮಿಯಲ್ಲಿ ಬಣ್ಣಗಾರಿಕೆ' ವಿಷಯದಲ್ಲಿ ಕಲಾವಿದರ ಫೆಲೋಶಿಪ್‌ ಭಾರತಿಯವರಿಗೆ ಲಭಿಸಿದೆ. ರಂಗೋಲಿ ಕಲಾ ಪರಿಷತ್ತಿನ ಸಂಸ್ಥಾಪಕಾರಾಗಿ ರಂಗೊಲಿ ಪತ್ರಿಕೆಯ ಸಂಪಾದಕರಾಗಿಯೂ 14 ಸಂಪುಟ ಹೊರ ತಂದಿದ್ದಾರೆ.

24 ಗಂಟೆಯಲ್ಲಿ 81 ಆನ್‌ಲೈನ್ ಕೋರ್ಸ್: ಹೊಸ ದಾಖಲೆ ಬರೆದ 'ಮಲ್ಲು ಕುಟ್ಟಿ'

5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಂಗೋಲಿ ತರಬೇತಿ, 13ಕ್ಕೂ ಹೆಚ್ಚು ಕೃತಿ ಓದುಗರಿಗೆ ತಲುಪಿವೆ. ನಾಡಿನಾದ್ಯಂತ ಸಾವಿರಕ್ಕೂ ಮಿಕ್ಕಿ ಬೃಹತ್ ರಂಗವಲ್ಲಿ ಪ್ರದರ್ಶನ, 75ಕ್ಕೂ ಹೆಚ್ಚು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ಜಾನಪದದ ವಿಷಯದ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ.

India@75: ಶ್ರೀ ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಡಾ. ಎಲ್‌ ಎಚ್‌ ಮಂಜನಾಥ್‌ ವಿಶೇಷ ಸಂದರ್ಶನ
ಬೆಂಗಳೂರು (ಸೆ. 13): ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಏಷ್ಯಾನೆಟ್‌ ಗ್ರೂಪ್‌ (Asianet Group) ಅಮೃತ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಈ India@75 ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಕೂಡ ಸಾಥ್‌ ಕೊಟ್ಟಿದೆ. ಈ ಕಾರ್ಯಕ್ರಮಕ್ಕೆ ಸಾಥ್‌ ಕೊಟ್ಟಂತಹ ಇವರ ಅನುಭವ ಏನು, ಅನಿಸಿಕೆ ಏನು? ಶ್ರೀ ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಡಾ. ಎಲ್‌ ಎಚ್‌ ಮಂಜನಾಥ್‌ ವಿಶೇಷ ಸಂದರ್ಶನ ಇಲ್ಲಿದೆ

Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
ವಿಜಯಪುರ (ಆ. 25):  75 ವರ್ಷದ ಬಳಿಕ ಕೊನೆಗೂ ವಿಜಯಪುರ ಜಿಲ್ಲಾಡಳಿತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಠವನ್ನ ಗುರುತಿಸಿ ಗೌರವ ಸಲ್ಲಿಸಿದೆ. ಚಡಚಣ ತಾಲೂಕಿನ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳು ಸ್ವಾತಂತ್ರ್ಯಕ್ಕಾಗಿ‌ ಬಂದೂಕು ಕಾರ್ಖಾನೆ ತೆರೆದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದರು. ಆದರೆ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಅತ್ಯುಗ್ರವಾಗಿ ಹೋರಾಡಿದ್ದ ಮಠವನ್ನೆ ಮರೆತು ಬಿಟ್ಟಿತ್ತು. ಸದ್ಯ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ವೇಳೆ ವಿಜಯಪುರ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ್‌ ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಹೋರಾಟವನ್ನ ಗುರುತಿಸಿ ಗೌರವಿಸಿ ಗೌರವ ಸಲ್ಲಿಸಿದ್ದಾರೆ.

ಇಂಚಗೇರಿ ಮಠದಲ್ಲಿಯೇ ಜಿಲ್ಲಾ ಮಟ್ಟದ ಆಜಾದಿ ಕಾ ಅಮೃತಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನ ಕೊಂಡಾಡುವ ಕೆಲಸ ಮಾಡಿದ್ದಾರೆ..ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ನಿರ್ದೇಶನದಂತೆ ಇಂಚಗೇರಿ ಮಠದಲ್ಲಿ ಅಮೃತ ಮಹೋತ್ಸವದ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜಿಸಲಾಯಿತು.

Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!

ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಟ ಮಾಡಿದ ಅಂದಿನ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಪ್ರಭೂಜಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶ್ರೀಗಳು ತ್ರಿವರ್ಣ ಧ್ವಜದ ಮೂಲಕ ಚಾಲನೆ ನೀಡಿದರು

ನವಭಾರತ ನಿರ್ಮಾಣಕ್ಕೆ ನವಚೈತನ್ಯ ತುಂಬುತ್ತಿರುವ ಐಎಚ್‌ಎಕ್ಸ್‌ಗೆ ಆಜಾದಿ ಕಾ ಅಮೃತ್‌ ಮಹೋತ್ಸವ ಯಾತ್ರೆ
ಬೆಂಗಳೂರು (ಆ.24): ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷವಾಗಿರುವ ಸಂದರ್ಭವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡ ಪ್ರಭ ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಿತ್ತು. ಎನ್‌ಸಿಸಿ ವಿದ್ಯಾರ್ಥಿಗಳೊಂದಿಗೆ ಜೊತೆಯಲ್ಲಿ ಸಾಗುತ್ತಿರುವ ಆಜಾದಿ ಕಿ ಅಮೃತ್‌ ಮಹೋತ್ಸವ ಯಾತ್ರೆ, ಈಗ ಸ್ಟಾರ್ಟ್‌ ಅಪ್‌ ಜಗತ್ತಿನಲ್ಲಿ ಗಮನಸೆಳೆಯುತ್ತಿರುವ ಐಎಚ್‌ಎಕ್ಸ್‌ ಕಂಪನಿಯ ಕಡೆಗೆ ಹೊರಟಿತ್ತು.

ತನ್ನ ಡಿಜಿಟಲ್‌ ಹೆಲ್ತಕೇರ್ ಹಾಗೂ ಡೇಟಾ ಫ್ಲಾಟ್‌ ಫಾರ್ಮ್‌ ಮೂಲಕ, ಆಸ್ಪತ್ರೆಗಳು, ಡಯಾಗ್ನೋಸ್ಟಿಕ್‌ ಸೆಂಟರ್‌, ನರ್ಸಿಂಗ್‌ ಹೋಮ್‌, ಕ್ಲಿನಿಕ್‌ ಹಾಗೂ ಇನ್ಶುರೆನ್ಸ್‌ ಕಂಪನಿಗಳೊಂದಿಗೆ ಬೆರೆಯುತ್ತಿರುವ ಕಂಪನಿ ಐಎಚ್‌ಎಕ್ಸ್‌. ಆರೋಗ್ಯ ಕ್ಷೇತ್ರದ ಸೇವೆಗಳು ಹೆಚ್ಚು ಸರಳ ಮತ್ತು ಉಪಯುಕ್ತವಾಗುವ ರೀತಿಯಲ್ಲಿ ಈ ಕಂಪನಿ ಶ್ರಮಿಸುತ್ತಿದೆ.

ಅಂತಿಮ ಹಂತಕ್ಕೆ ಪ್ರವೇಶಿಸಿದ ಎಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌-ಎನ್‌ಸಿಸಿ ವಜ್ರ ಜಯಂತಿ ಯಾತ್ರೆ

ತಮ್ಮ ಡೇಟಾ ಫ್ಲಾಟ್‌ ಫಾರ್ಮ್‌ ಕುರಿತಾಗಿ ಮಾಹಿತಿ ನೀಡುವ ಮುನ್ನ, ಈ ಕಂಪನಿಯ ಉದ್ದೇಶವೇನು, ಆರೋಗ್ಯ ಕ್ಷೇತ್ರದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿವರಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳಿಗೆ ನೀಡಿದರು. 'ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಇನ್ನೂ ತೀರಾ ಕೆಳಮಟ್ಟದಲ್ಲಿದೆ. ಹೊಸ ಯುಗದ ತಂತ್ರಜ್ಞಾನಗಳ ಸೂಕ್ತ ಬಳಕೆ ಹಾಗೂ ಇಡೀ ಕ್ಷೇತ್ರವನ್ನು ಬದಲಾವಣೆ ಮಾಡುವ ಬಯಕೆಯೊಂದಿಗೆ ಐಎಚ್‌ಎಕ್ಸ್‌ಅನ್ನು ಆರಂಭ ಮಾಡಿದ್ದಾಗಿ' ಕಂಪನಿಯ ಸಿಇಒ ಮಹೇಶ್‌ ನಾಗರಾಜ್‌ ಹೇಳಿದರು.

75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಮಠವನ್ನ ಗುರುತಿಸಿದ ಡಿಸಿ..!
ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಆ.24): ವಿಜಯಪುರ ಜಿಲ್ಲೆಯ ಅದೊಂದು ಜಾತ್ಯಾತೀತ ಮಠ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಟ ಮಾಡಿತ್ತು. ಆದ್ರೆ ವಿಪರ್ಯಾಸದ ಸಂಗತಿ ಅಂದ್ರೆ ಸರ್ಕಾರ ಸ್ವಾತಂತ್ರ್ಯ ತಂದು ಕೊಟ್ಟ ಮಠವನ್ನೇ ಮರೆತು ಬಿಟ್ಟಿತ್ತು. ಆದ್ರೆ ವಿಜಯಪುರ(Vijayapur) ಜಿಲ್ಲೆಗೆ ಬಂದ ಅದೊಬ್ಬ ಜಿಲ್ಲಾಧಿಕಾರಿಗಳು, ಹಿಂದಿನ ಯಾವ ಅಧಿಕಾರಿಯೂ ಮಾಡದ ಕಾರ್ಯವನ್ನ ಮಾಡಿದ್ದಾರೆ. ದೇಶಭಕ್ತಿಯ ಮಠಕ್ಕೆ ಗೌರವ ಸಲ್ಲಿಸೋ ಕೆಲಸ ಮಾಡುವ ಮೂಲಕ ದೇಶಭಕ್ತರ ಹರ್ಷಕ್ಕೆ ಕಾರಣರಾಗಿದ್ದಾರೆ. ಜಿಲ್ಲಾ ಮಟ್ಟದ ಅಜಾದಿ ಕಾ ಮಹೋತ್ಸವವನ್ನು ಅದೇ ಮಠದಲ್ಲಿ ಆಚರಿಸಿ ಶ್ರೀಮಠದ ಕಾರ್ಯವನ್ನ ಕೊಂಡಾಡಿದ್ದಾರೆ.

ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ

75 ವರ್ಷದ ಬಳಿಕ ಕೊನೆಗೂ ವಿಜಯಪುರ ಜಿಲ್ಲಾಡಳಿತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಠವನ್ನ ಗುರುತಿಸಿ ಗೌರವ ಸಲ್ಲಿಸಿದೆ. ಚಡಚಣ(Chadachana) ತಾಲೂಕಿನ ಇಂಚಗೇರಿ(Inchageri) ಮಠದ ಮಾಧವಾನಂದ ಪ್ರಭುಜೀ(Madhavananda Prabhuji)ಗಳು ಸ್ವಾತಂತ್ರ್ಯಕ್ಕಾಗಿ‌ ಬಂದೂಕು ಕಾರ್ಖಾನೆ(gun factory) ತೆರೆದು ಬ್ರಿಟಿಷ(British)ರ ವಿರುದ್ಧ ಹೋರಾಟ ಮಾಡಿದ್ದರು. ಆದ್ರೆ ಸರ್ಕಾರ ಸ್ವಾತಂತ್ರ್ಯಕ್ಕಾಗಿ ಅತ್ಯುಗ್ರವಾಗಿ ಹೋರಾಡಿದ್ದ ಮಠವನ್ನೆ ಮರೆತು ಬಿಟ್ಟಿತ್ತು.

ಸದ್ಯ 75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ(Amrit Mahotsava)ದ ವೇಳೆ ವಿಜಯಪುರ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರ್‌(Vijaya Mahantesh Danammanavar) ಇಂಚಗೇರಿ ಮಠದ ಮಾಧವಾನಂದ ಶ್ರೀಗಳ ಹೋರಾಟವನ್ನ ಗುರುತಿಸಿ ಗೌರವಿಸಿ ಗೌರವ ಸಲ್ಲಿಸಿದ್ದಾರೆ. ಇಂಚಗೇರಿ ಮಠದಲ್ಲಿಯೇ ಜಿಲ್ಲಾಮಟ್ಟದ "ಆಜಾದಿ ಕಾ ಅಮೃತಮಹೋತ್ಸ"ವ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳನ್ನ ಕೊಂಡಾಡುವ ಕೆಲಸ ಮಾಡಿದ್ದಾರೆ..

ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ನಿರ್ದೇಶನದಂತೆ ಇಂಚಗೇರಿ ಮಠದಲ್ಲಿ ಅಮೃತ ಮಹೋತ್ಸವದ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಯೋಜಿಸಲಾಯಿತು. ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಟ ಮಾಡಿದ ಅಂದಿನ ಮಠದ ಪೀಠಾಧಿಕಾರಿಗಳಾಗಿದ್ದ ಮಾಧವಾನಂದ ಪ್ರಭುಜಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಮಠದ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶ್ರೀಗಳು(Revanasiddeshwar) ತ್ರಿವರ್ಣ ಧ್ವಜದ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಂಡ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಡೊಳ್ಳು ಬಾರಿಸಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿದರು. ರೇವಣಸಿದ್ದೇಶ್ವರ ಶ್ರೀಗಳು ಡೊಳ್ಳು ಬಾರಿಸಿ ಸಾಥ್ ನೀಡಿದರು. ಸ್ವಾತಂತ್ರ್ಯಕ್ಕಾಗಿ ಇಂಚಗೇರಿ ಮಠ ಬ್ರೀಟಿಷರ ವಿರುದ್ಧ ಹೋರಾಡಿದ ಪರಿಯನ್ನ ಕೊಂಡಾಡಿದರು. ಹುಬ್ಬಳ್ಳಿ ಮಹಾದೇವಪ್ಪ ಕರೆಯಿಸಿಕೊಳ್ತಿದ್ದ ಮಾಧವಾನಂದ ಶ್ರೀಗಳು ಬ್ರಿಟಿಷರನ್ನ ಹೆದರಿಸಲು ನಡೆಸಿದ ನಾನಾ ತಂತ್ರಗಳನ್ನ, ಸಶಸ್ತ್ರ ಹೋರಾಟವನ್ನ ಸ್ಮರಿಸಿದರು. ಮಠದ ಬಗ್ಗೆ ನಮಗೆ ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್‌ ನಲ್ಲಿ ಪ್ರಸಾರವಾದ ಹಲವು ದೃಶ್ಯ ವರದಿ,  ವೆಬ್‌ ವರದಿಗಳಿಂದ ಮಾಹಿತಿ ಸಿಕ್ಕಿತು. ಸ್ವಾತಂತ್ರ್ಯಕ್ಕಾಗಿ ಜೀವವನ್ನೆ ಪಣವಾಗಿಟ್ಟು ಹೋರಾಡಿದ ಶ್ರೀಮಠ ಹಾಗೂ ಮಾಧವಾನಂದ ಶ್ರೀಗಳಿಗೆ ಗೌರವಿಸಿದ ತೃಪ್ತಿ ಈಗ ನನಗೆ ಸಿಕ್ಕಿತು ಎಂದರು..

ಇನ್ನು ಕಳೆದ ಜೂನ್‌ ನಲ್ಲಿ ಬಿಡುಗಡೆಯಾದ "ಆಜಾದಿ ಕಾ ಅಮೃತ ಮಹೋತ್ಸವ"ದ ಸರ್ಕಾರಿ ಪಟ್ಟಿಯಲ್ಲೂ ಇಂಚಗೇರಿ ಮಠದ ಹೆಸರು ಇರಲಿಲ್ಲ. ಈ ಬಗ್ಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಸುದ್ದಿಗಳನ್ನ ಬಿತ್ತರಿಸುತ್ತಲೇ ಬಂದಿತ್ತು. ಸತತ ವರದಿಗಳನ್ನ ಗಮನಿಸಿದ ಜಿಲ್ಲಾಧಿಕಾರಿಗಳು ಮಠದ ಹೋರಾಟವನ್ನ ಗುರುತಿಸಿ ಗೌರವಿಸಲು ನಿರ್ಧರಿಸಿದ್ದರು. ಅದರಂತೆ ಇಂಚಗೇರಿ ಮಠದಲ್ಲೇ ಜಿಲ್ಲಾ ಮಟ್ಟದ ಕಾರ್ಯಕ್ರಮ ನಡೆಸಿ ಮಠಕ್ಕೆ ಸಲ್ಲಬೇಕಿದ್ದ ಸರ್ಕಾರಿ ಗೌರವವನ್ನ ನೀಡಿದ್ದಾರೆ. ಹೀಗಾಗಿ ಮಠದ ಲಕ್ಷಾಂತರ ಭಕ್ತರು ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಅವರಿಗೆ ಮಠದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

Vijayapura: ಶಾಲಾ ಪಠ್ಯದಲ್ಲಿ ಇಂಚಗೇರಿ ಮಠದ ಇತಿಹಾಸ ಸೇರಿಸಲು ಒತ್ತಾಯ!

ಒಟ್ಟಿನಲ್ಲಿ 75 ವರ್ಷಗಳಿಂದ ಸರ್ಕಾರ ಸ್ವಾತಂತ್ಯಕ್ಕಾಗಿ ಹೋರಾಡಿದ್ದ ಇಂಚಗೇರಿ ಮಠವನ್ನ ಮರೆತು ಬಿಟ್ಟಿತ್ತು. ಆದ್ರೆ ಕೊನೆಗೂ ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಮಠಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..
ವಿಜಯಪುರದಿಂದ ಕ್ಯಾಮರಾಮೆನ್‌ ಲಿಂಗರಾಜ್‌ ಜೊತೆಗೆ ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ
ಭಾರತದ ಸ್ವಾತಂತ್ರ್ಯದ 75 ವರ್ಷದ ಸಂಭ್ರವನ್ನು ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಅಮೃತ ಮಹೋತ್ಸವ ಯಾತ್ರೆ ಆರಂಭಿಸಿದೆ. ಇದೀಗ ಈ ಯಾತ್ರೆ ವಿಶ್ವದ ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್‌ಗೆ ಭೇಟಿ ನೀಡಿದೆ. ಎನ್‌ಸಿಸಿ ಕೆಡೆಟ್‌ ತಂಡ ಬೆಂಗಳೂರಿನ ಇನ್ಫೋಸಿಸ್ ಕೇಂದ್ರ ಕಚೇರಿಗೆ ಭೇಟಿ ನೀಡಿತು. ಈ ವೇಳೆ ಎನ್‌ಸಿಡಿ ಕೆಡೆಟ್‌ಗಳಲ್ಲಿ ಇನ್ಫೋಸಿಸ್ ಕ್ಯಾಂಪಸ್ ಸುತ್ತಾಡಿಸಿ ಪ್ರತಿಯೊಂದು ಮಾಹಿತಿ ನೀಡಲಾಯಿತು. ಈ ವೇಳೆ ಎನ್‌ಸಿಸಿ ಕೆಡೆಟ್‌ಗಳ ಹಲವು ಪ್ರಶ್ನೆಗಳಿಗೆ ಇನ್ಫೋಸಿಸ್ ಕೇಂದ್ರದ ಮುಖ್ಯಸ್ಥರು, ಅಧಿಕಾರಿಗಳು ಉತ್ತರ ನೀಡಿದರು. ಈ ಮೂಲಕ ನಮ್ಮ ಅಮೃತ ಮಹೋತ್ಸವದ ಇಂದಿನ ಯಾತ್ರೆ ಅಂತ್ಯಗೊಂಡಿತು.

ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಶೋಧನೆಯ ಸಂಸ್ಥೆಯಾದ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್  ಭೇಟಿ ನೀಡಲಾಯಿತು.  ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್‍ರವರು  1948ರಲ್ಲಿ  ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಖಗೋಳ ವಿಜ್ಞಾನ ಮತ್ತು  ಭೌತವಿಜ್ಞಾನ ಸೇರಿ ವಿವಿಧ ಬಗ್ಗೆ ಇಲ್ಲಿ ಸಂಶೋಧನೆಗಳು ನಡೆಯುತ್ತದೆ.  ಭಾರತೀಯ ವಿಜ್ಞಾನ ಮಂದಿರದ ಹುದ್ದೆಯಿಂದ 1948ರಲ್ಲಿ ರಾಮನ್‍ ಅವರು ನಿವೃತ್ತಿಯಾಗುವವರಿದ್ದರು. ನಿವೃತ್ತಿ ಬಳಿಕ ಅವರು ಬೆಂಗಳೂರಿನಲ್ಲಿಯೇ ನೆಲೆಸಿ ಸ್ವತಂತ್ರ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ ಸಂಶೋಧನೆಯನ್ನು ಮುಂದುವರೆಸುವ ಇರಾದೆ ಹೊಂದಿದ್ದರು, ಇವರ ಆಸಕ್ತಿಯನ್ನು ಅರಿತಿದ್ದ  ಮೈಸೂರಿನ ಮಹಾರಾಜರಾ ನಾಲ್ಕನೇ ಕೃಷ್ಣರಾಜ ಒಡೆಯರ್ ಭಾರತೀಯ ವಿಜ್ಞಾನ ಮಂದಿರದ ಬಳಿಯೇ 10 ಎಕರೆ ಜಾಗವನ್ನು 1938ರಲ್ಲಿ ಕೊಡುಗಡೆಯಾಗಿ ನೀಡಿದರು. ಹೀಗಾಗಿ 1943 ರಲ್ಲಿ ಭಾರತೀಯ ವಿಜ್ಞಾನ ಮಂದಿರ ಮತ್ತು ರಾಮನ್ ನಡುವೆ ಒಪ್ಪಂದವಾಗಿ ಸಂಸ್ಥೆ ಕಟ್ಟಲು ಆರಂಭವಾಯ್ತು. 1948ರಲ್ಲಿ ಇದು ಪೂರ್ಣಗೊಂಡಿತು.

ಭಾರತದ ಪ್ರತಿಷ್ಠಿತ ಸಂಸ್ಥೆ IISc ಕಡೆ ಅಮೃತ ಮಹೋತ್ಸವ ಯಾತ್ರೆ
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಇಂಡಿಯನ್ ಇನ್ಸಿಟ್ಯೂಟ್ ಆಫ್‌ ಸೈಯನ್ಸ್‌ಗೆ ಭೇಟಿ ನೀಡಲಾಯಿತು. ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಸಹಾಯಕ ಸಂಪಾದಕರಾದ ವಿನೋದಕುಮಾರ್ ಬಿ.ನಾಯ್ಕ್‌ ಜೊತೆಯಲ್ಲಿದ್ದು ಕೆಡೆಟ್ಸ್‌ಗೆ ಮಾರ್ಗರ್ಶನ ನೀಡಿದರು. ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್‌ ಸೈಯನ್ಸ್‌ ಸಂಸ್ಥೆಯ ಕೊಡುಗೆ ಅಪಾರವಾದುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ

ಐಐಎಸ್‌ಸಿಯ ಡೆಪ್ಯುಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗೆ ಹಲವು ಮಾಹಿತಿಗಳನ್ನು ತಿಳಿಸಿಕೊಟ್ಟರು. ಆ ಬಳಿಕ ಕೆಡೆಟ್ಸ್‌ಗಳು ಐಐಎಸ್‌ಸಿ ಸಂಸ್ಥಾಪಕರಾದ ಜೆ.ಎನ್ ಟಾಟಾ ಅವರ ಪ್ರತಿಮೆಗೆ ಕೃತಜ್ಞತೆಯಿಂದ ವಂದಿಸಿದರು. ಬಳಿಕ ವಿಮಾನ ಮತ್ತು ಉಡಾವಣಾ ವಾಹನಗಳ ಮೇಲೆ ವಾಯುಒತ್ತಡ ಉಂಟು ಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡುವ ಓಪನ್ ಸರ್ಕ್ಯೂಟ್ ವಿಂಡ್‌ ಟನಲ್‌ಗೆ ಭೇಟಿ ನೀಡಿದರು. ಇಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್‌ನ ಅಸೋಸಿಯೇಟ್ ಪ್ರೊಫೆಸರ್ ಫ್ರೊ.ಸೌರವ್ ದಿವಾನ್ ಕೆಡೆಟ್ಸ್‌ಗೆ ವಿಂಡ್‌ ಟನಲ್‌ ಬಗ್ಗೆ ಮಾಹಿತಿ ನೀಡಿದರು. ಬಳಿಕ ಹಲವು ವಿಭಾಗಗಳ ಪ್ರೊಫೆಸರ್ಸ್ ಹಲವು ಉಪಕರಣಗಳ ಬಗ್ಗೆ ಕೆಡೆಟ್ಸ್‌ಗಳಿಗೆ ತಿಳಿಸಿಕೊಟ್ಟರು.

ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋಗೆ ಭೇಟಿ ನೀಡಲಾಯಿತು. ಭಾರತ ದೇಶ ನಿರ್ಮಾಣದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರವನ್ನು ಸ್ಥಾನ ವಹಿಸಬಲ್ಲದು ಎಂಬ ಗಟ್ಟಿ ನಂಬಿಕೆಯನ್ನು ಹೊಂದಿದ್ದ ವಿಜ್ಞಾನಿ ವಿಕ್ರಂ ಸಾರಾಭಾಯಿ. ತಮ್ಮ ದೂರದೃಷ್ಟಿಯಿಂದ ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಗಟ್ಟಿ ಅಡಿಪಾಯವನ್ನು ಹಾಕಿದರೆ, ಪ್ರೊಫೆಸರ್ ಯು.ಆರ್ ರಾವ್ ನೇತೃತ್ವದಲ್ಲಿ ತಯಾರಾದ ಭಾರತದ ಮೊದಲ ಉಪಗ್ರಹ ಆರ್ಯಭಟ 1975ರಲ್ಲಿ ಯಶಸ್ವಿಯಾಗಿ ಉಡಾವಣೆಯಾಗುವ ಮೂಲಕ ಬಾಹ್ಯಾಕಾಶ ಸಂಶೋಧನೆ ಭಾರತದ ಪ್ರಮುಖ ಆದ್ಯತೆಯಾಗಿ ಬದಲಾಗುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು.

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ

ಇಸ್ರೋ ಈವರೆಗೆ 116 ಉಪಗ್ರಹಗಳನ್ನು 84 ಉಡಾವಣಾ ವಾಹನಗಳನ್ನು ನಿರ್ಮಿಸಿ, ತನ್ನ ಅನನ್ಯ ವಿಜ್ಞಾನಿಗಳು ಮತ್ತು ತಂತ್ರಜ್ಞಾನದ ಬಲದಿಂದ ಈವರೆಗೆ 34 ವಿವಿಧ ದೇಶಗಳ ಒಟ್ಟು 342 ವಿದೇಶಿ ಉಪಗ್ರಹಗಳಿಗೆ ಉಡಾವಣೆಗಳಿಗೆ ಬೆನ್ನೆಲುಬಾಗಿದೆ. ಆ ಮೂಲಕ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರ 50 ವರ್ಷ ಪೂರೈಸಿ ಸ್ವರ್ಣ ಮಹೋತ್ಸವ ಆಚರಿಸಿಕೊಂಡಿದೆ.

ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆಯ ಬಳಗ ಇಸ್ರೋದ ಐ ಸೈಟ್ ಕ್ಯಾಂಪಸ್‌ಗೆ ತೆರಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು. ಎನ್‌ಸಿಸಿ ವಿದ್ಯಾರ್ಥಿಗಳು ಸಂಸ್ಥೆಯ ಅಧ್ಯಕ್ಷರಾದ ಸೋಮನಾಥ್ ಅವರೊಂದಿಗೆ ಸಂವಾದ ನಡೆಸಿದರು. ಆಸ್ಟ್ರೋ ಬಯೋಲಾಜಿ, ಉಪಗ್ರಹ ಉಡಾವಣೆ, ಬಾಹ್ಯಾಕಾಶದಲ್ಲಿ ಜೀವ ಸೃಷ್ಟಿ ಸಾಧ್ಯವೇ ಮೊದಲಾದ ವಿಚಾರಗಳ ಕುರಿತು ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿಗಳ ನಿರ್ದೇಶನ: ಆಗಸ್ಟ್‌ 22ರಂದು ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ
ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.19): ಮೊನ್ನೆಯಷ್ಟೇ 75ನೇ ಸ್ವಾತಂತ್ರ್ಯ ಮಹೋತ್ಸವ ಅದ್ದೂರಿಯಾಗಿ ಜರುಗಿತು. ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನ ಗೌರವಿಸುವ ಕಾರ್ಯ ಮುಂದುವರೆದಿದ್ದು, ಆಗಸ್ಟ್‌ 22ರಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.

ಬ್ರಿಟಿಷರ ಹೋರಾಡಿದ ಮಠವನ್ನೆ ಮರೆತಿದ್ದರು: ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿತ್ತು. ಅಂದು ಮಠದ ಪೀಠಾಧಿಕಾರಿಯಾಗಿದ್ದ ಮಾಧವಾನಂದ ಪ್ರಭುಜಿಗಳು ಸ್ವತಃ ಬಂದೂಕು ಕಾರ್ಖಾನೆ ತೆರೆದು ಬ್ರಿಟಿಷರ ಹುಟ್ಟಡಗಿಸಿದ್ದರು. ಆದ್ರೆ ವಿಪರ್ಯಾಸ ಅಂದ್ರೆ ಸರ್ಕಾರ ಹಾಗೂ ಜಿಲ್ಲಾಡಳಿತ ಈ ವಿಚಾರವನ್ನೆ ಮರೆತು ಬಿಟ್ಟಿತ್ತು. ಅದ್ಯಾವ ಮಟ್ಟಿಗೆ ಎಂದರೆ ಪ್ರತಿ ವರ್ಷ ಆಗಸ್ಟ್‌ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಸೌಜನ್ಯಕ್ಕು ಮಠದ ಹೆಸ್ರು ಅಥವಾ ಮಾಧವಾನಂದ ಪ್ರಭುಜಿಗಳ ಹೆಸ್ರು ಪ್ರಸ್ತಾಪವಾಗುತ್ತಲೇ ಇರಲಿಲ್ಲ. ಆದ್ರೆ ಈ ಬಾರಿ ವಿಜಯಪುರ ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿಗಳು ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಹಾಗೂ ಮಾಧವಾನಂದ ಪ್ರಭುಜಿಗಳಿಗೆ ಗೌರವಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಜಿಲ್ಲಾಧಿಕಾರಿಗಳ ಸ್ಪಂದನೆ, ಶ್ರೀಮಠಕ್ಕೆ ಗೌರವಿಸಲು ನಿರ್ಧಾರ: ಸ್ವಾತಂತ್ರ್ಯಕ್ಕಾಗಿ ಸಶಸ್ತ್ರವಾಗಿ ಹೋರಾಡಿದ್ದ ಮಠವನ್ನೆ ಮರೆತಿದ್ದ ಜಿಲ್ಲಾಡಳಿತ ಹಾಗೂ ಸರ್ಕಾರವನ್ನ ಎಚ್ಚರಿಸುವ ಕೆಲಸವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಡಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ asianetsuvarnanews.com ವೆಬ್‌ನಲ್ಲು ಸರಣಿಯಲ್ಲಿ ವರದಿಗಳು ಪ್ರಕಟವಾಗಿದ್ದವು. ಇನ್ನು ವಿಜಯಪುರ ಜಿಲ್ಲೆಗೆ ನೂತನವಾಗಿ ನೇಮಕಗೊಂಡ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್‌ ಈ ವಿಚಾರವನ್ನ ಗಮನಿಸಿ ತುರ್ತಾಗಿ ಕ್ರಮಕ್ಕೆ ಸೂಚನೆ ನೀಡಿದರು. ಪರಿಣಾಮ ಮೊನ್ನೆ ನಡೆದ ಸ್ವಾತಂತ್ರ್ಯೋತ್ಸವದ ದಿನ ವೇದಿಕೆ ಭಾಷಣದಲ್ಲು ಇಂಚಗೇರಿ ಮಠದ ಮಾಧವಾನಂದ ಪ್ರಭುಜಿಗಳ ಹೆಸ್ರು ಪ್ರಸ್ತಾಪವಾಗಿದೆ.

22 ರಂದು ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆ: ಬರುವ ದಿನಾಂಕ 22 ರಂದು ವಿಜಯಪುರ ಜಿಲ್ಲಾಡಳಿತ ಇಂಚಗೇರಿ ಮಠದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಇಂಚಗೇರಿ ಮಠ ಹಾಗೂ ಮಾಧವಾನಂದ ಪ್ರಭುಜಿಗಳಿಗೆ ಗೌರವ ಸಲ್ಲಿಸುವ ಕೆಲಸ ಮಾಡ್ತಿದೆ. ಅಂದು ಸಾಯಂಕಾಲ 4ಗಂಟೆ ಸುಮಾರಿಗೆ ನಡೆಯಲಿರುವ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಸಾನಿಧ್ಯವನ್ನ ಶ್ರೀಮಠದ ರೇವಣಸಿದ್ದೇಶ್ವ ಮಹಾರಾಜರು ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌, ನಾಗಠಾಣ ಶಾಸಕ ದೇವಾನಂದ ಚೌಹಾಣ, ಮುದ್ದೇಬಿಹಾಳ ಶಾಸಕ ಎ ಎಸ್‌ ಪಾಟೀಲ್‌ ನಡಹಳ್ಳಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಸೇರಿದಂತೆ ಜಿಲ್ಲೆಯ ಶಾಸಕರುಗಳು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನಾಗರಾಜ್‌ ಭಾಗವಹಿಸಲಿದ್ದಾರೆ.

ಇಂಚಗೇರಿ ಗ್ರಾಮದಲ್ಲಿ ಭವ್ಯ ಮೆರವಣಿಗೆ: ಇಂಚಗೇರಿ ಮಠದಿಂದ ಗ್ರಾಮ ಪಂಚಾಯ್ತಿವರೆಗೆ ಮಾಧವಾನಂದ ಪ್ರಭುಜಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಈ ವೇಳೆ ಹಲವು ಕಲಾ ತಂಡಗಳು ಪಾಲ್ಗೊಳ್ಳಲಿವೆ. ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗೀತೆಗಳು, ಸಂಗೋಳ್ಳಿ ರಾಯಣ್ಣ ನಾಟಕ ಪ್ರದರ್ಶನವಾಗಲಿದೆ.

ಭೀಮಾತೀರದಲ್ಲಿ ಆತಂಕ ಸೃಷ್ಟಿಸಿದ ಆಯಿಲ್‌ ಗ್ಯಾಂಗ್: ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್!

ಭಕ್ತರಿಂದ ಜಿಲ್ಲಾಧಿಕಾರಿಗಳಿಗೆ ಧನ್ಯವಾದ: ಇಂಚಗೇರಿ ಮಠದ ಸ್ವಾತಂತ್ರ್ಯ ಹೋರಾಟವನ್ನ ಗುರುತಿಸಿ ಗೌರವ ಸಲ್ಲಿಸುತ್ತಿರುವ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌ ಅವರಿಗೆ ಮಠ ಭಕ್ತರು ಧನ್ಯವಾದ ಹೇಳಿದ್ದಾರೆ. ಮಠದ ಹೋರಾಟಕ್ಕೆ ಗೌರವಿಸುತ್ತಿರುವುದನ್ನ ಸ್ವಾಗತಿಸುತ್ತಿದ್ದೇವೆ. ಪ್ರತಿ ವರ್ಷವು ಸ್ವಾತಂತ್ರ್ಯ ದಿನೋತ್ಸವದಂದು ಮಾಧವಾನಂದ ಪ್ರಭುಜಿಗಳ ಹೋರಾಟವನ್ನ ಸ್ಮರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಅಮೃತ ಮಹೋತ್ಸವ ಯಾತ್ರೆ; ಹುತಾತ್ಮ ಯೋಧರ ನೆನಪಿನಲ್ಲಿ ಕಣ್ಣೀರಾದ ನಿವೃತ್ತ ಸೇನಾಧಿಕಾರಿ
ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯಶಸ್ವಿಯಾಗಿದೆ. ಉತ್ಸಾಹಿ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಭೇಟಿ ನೀಡಲಾಯಿತು. ಈ ಸ್ಮಾರಕ ಕರ್ನಾಟಕ ನಾಗರೀಕರು ಮತ್ತು ನಮ್ಮ ಪ್ರತಿನಿಧಿಯಾದ ಸರ್ಕಾರ ನಮ್ಮೆಲ್ಲರ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರಕ್ಷಣಾ ಪಡೆಗಳ ಯೋಧರು ಮತ್ತು ಅವರ ಕುಟುಂಬಗಳ ತ್ಯಾಗವನ್ನು ಗೌರವಿಸುವ ನಮ್ಮ ಬದ್ಧತೆಯ ಸಂಕೇತವಾಗಿ ನಿರ್ಮಿಸಲ್ಪಟ್ಟಿದೆ. ಇಂಥಾ ಅನನ್ಯ ಸ್ಮಾರಕಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಜಂಟಿಯಾಗಿ ಆಯೋಜಿಸಿದ ಭಾರತ ಅಮೃತಮಹೋತ್ಸವ ಯಾತ್ರೆ ಯುವ ಉತ್ಸಾಹಿ ಕೆಡೆಟ್‌ಗಳೊಂದಿಗೆ ತಲುಪಿದಾಗ ಸ್ಮಾರಕದ ರೂವಾರಿ ನಿವೃತ್ತ ಏರ್‌ ಕಮಾಂಡರ್ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಮಾರ್ಗದರ್ಶನಕ್ಕೆ ಆಗಮಿಸಿದ್ದರು

ಸ್ವಾತಂತ್ರ್ಯೋತ್ಸವ ಭಾರತದ ಮೊದಲ ಸೈನಿಕ ಸ್ಮಾರಕ ಎಂಬ ಹೆಗ್ಗಳಿಕೆ ಪಡೆದ ರಾಷ್ಟ್ರೀಯ ಸೈನಿಕ ಸ್ಮಾರಕವನ್ನು ಅದರ ರೂವಾರಿ ಮತ್ತು ಭಾರತೀಯ ವಾಯುಪಡೆಯ ನಿವೃತ್ತ  ಪೈಲೆಟ್ ಆದ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಮಾರ್ಗದರ್ಶನದಲ್ಲಿ ವೀಕ್ಷಿಸಲಾಯಿತು. ಏರ್ ಕಮಾಂಡರ್ ಎಂ.ಕೆ ಚಂದ್ರಶೇಖರ್ ಹುತಾತ್ಮ ಸೈನಿಕರಿಗೆ ಪುಷ್ಪ ಸಮರ್ಪಣೆ ಮಾಡಿದರು. 7.5 ಎಕರೆ ವಿಸ್ತೀರ್ಣದಲ್ಲಿರುವ ಹಬ್ಬಿರುವ ಈ ರಾಷ್ಟ್ರೀಯ ಸ್ಮಾರಕ ತನ್ನ ಕೇಂದ್ರದಲ್ಲಿ ದೇಶದಲ್ಲಿ ಎರಡನೇ ಅತಿ ಎತ್ತರದ ಧ್ವಜ ಸ್ತಂಭ ಎಂಬ ಗೌರವ ಪಡೆದ 213 ಅಡಿ ಎತ್ತರದ ಸ್ತಂಭದ ಮೇಲೆ ಎಪ್ಪತ್ತೆರಡು ಅಡಿ ಅಗಲ, ನಲವತ್ತೆಂಟು ಅಡಿ ಎತ್ತರದ ರಾಷ್ಟ್ರಧ್ವಜವನ್ನು ಹೊತ್ತು ನಿಂತಿದೆ.

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ

ನಿವೃತ್ತ ಏರ್‌ ಕಮಾಂಡರ್ ಎಂ.ಕೆ ಚಂದ್ರಶೇಖರ್ (ವಿಎಂ.ವಿಎಸ್‌ಎಂ) ಹುತಾತ್ಮ ಯೋಧರ ಬಗ್ಗೆ ಮಾತನಾಡುತ್ತಾ ಕಣ್ಣೀರಾದರು. ದೇಶಕ್ಕಾಗಿ ಪ್ರತಿ ಯೋಧರ ತ್ಯಾಗವೂ ಸ್ಮರಿಸುವಂಥದ್ದು ಎಂದು ಕೊಂಡಾಡಿದರು.  ಯುವ ಉತ್ಸಾಹಿ ಕೆಡೆಟ್‌ಗಳಿಗೆ ಶುಭ ಹಾರೈಸಿದರು.

ಭಾರತದ ಹಿರಿಮೆಯನ್ನು ಯುವಪೀಳಿಗೆಯಲ್ಲಿ ಬಿತ್ತುವ ಅಮೃತ ಮಹೋತ್ಸವ ಯಾತ್ರೆ!
ಭಾರತದ ಸ್ವಾತಂತ್ರ್ಯ ದಿನಾಚರಣೆ 75ನೇ ವರ್ಷ ಸಂಭ್ರಮದಲ್ಲಿ ಅಮೃತ ಮಹೋತ್ಸವ ಯಾತ್ರೆಯೆ ಮೂಲಕ  ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ಮಾಧ್ಯಮ ಲೋಕದಲ್ಲಿಹೊಸ ಅಧ್ಯಾಯ ಬರೆದಿದೆ. ಭಾರತ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್, ಇಸ್ರೋ, ರಾಷ್ಟ್ರೀಯ ಮಿಲಿಟರಿ ಮೇಮೋರಿಯಲ್ ಸೇರಿದಂತೆ ಕೆಲ ಪ್ರಮುಖ ಸಂಸ್ಥೆಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಹಾಗೂ ಭಾರತವನ್ನು ಮತ್ತಷ್ಟು ತಿಳಿದುಕೊಳ್ಳುವ ವಿಶೇಷ ಅಮೃತ ಮಹೋತ್ಸವ ಯಾತ್ರೆ ಇದಾಗಿದೆ. ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದ ಈ ವಿಶೇಷ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ.

India@75: ಇತಿಹಾಸ ಸೃಷ್ಟಿಸಿದ AS ಪಾಟೀಲ್ ನಡಹಳ್ಳಿಯವರ ಯುವಜನ ಸಂಕಲ್ಪ ನಡಿಗೆ
ವಿಜಯಪುರ(ಆ.17):  75 ನೇ ಸ್ವಾತಂತ್ರ್ಯೋತ್ಸವನ್ನ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್‌ ನಡಹಳ್ಳಿ ವಿಶಿಷ್ಟವಾಗಿ ಆಚರಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ. ಇಡೀ ರಾಜ್ಯದಲ್ಲಿಯೇ ಯಾರೂ ಮಾಡದ್ದನ್ನ ಶಾಸಕ ನಡಹಳ್ಳಿ ಮಾಡಿ ತೋರಿಸಿದ್ದಾರೆ. ಅಮೃತ ಮಹೋತ್ಸವದ ಮೂಲಕ ದೇಶಪ್ರೇಮವನ್ನ ಪಸರಿಸಿದ್ದಾರೆ. ನಡಹಳ್ಳಿ ಹಮ್ಮಿಕೊಂಡ ಯುವಸಂಕಲ್ಪ ನಡಿಗೆ ಇಡೀ ರಾಜ್ಯವನ್ನೇ ತಿರುಗಿ ನೋಡುವಂತೆ ಮಾಡಿದೆ. ಇದೆಲ್ಲದ ಕಂಪ್ಲೀಟ್‌ ಮಾಹಿತಿ ಇಂದಿನ ಸುದ್ದಿಯಲ್ಲಿದೆ.

Har Ghar Tiranga : 20 ದಿನದಲ್ಲಿ 500 ಕೋಟಿ ರೂ. ಧ್ವಜ ಮಾರಾಟ!

India@75: ಏಷ್ಯಾನೆಟ್ ನ್ಯೂಸ್‌ನ ಅಮೃತ ಮಹೋತ್ಸವ ಯಾತ್ರೆ ಕಾರ್ಗಿಲ್‌ನಲ್ಲಿ ಮುಕ್ತಾಯ
ಬೆಂಗಳೂರು(ಆ.17):  ಏಷ್ಯಾನೆಟ್ ಸುವರ್ಣ ನ್ಯೂಸ್ ನೆಟವರ್ಕ್ ಹಮ್ಮಿಕೊಂಡಿದ್ದ ಇಂಡಿಯಾ@75 ಅಮೃತ ಮಹೋತ್ಸವ ಯಾತ್ರೆ ಮುಕ್ತಾಯಗೊಂಡಿದೆ. ಕಾರ್ಗಿಲ್ ಜಿಲ್ಲೆಯ ಡ್ರಾಂಗ್ ಡ್ರುಂಗ್‌ನಲ್ಲಿ ಸೋಮವಾರ ತ್ರಿವರ್ಣ ಧ್ವಜಾರೋಹಣದೊಂದಿಗೆ ಅಂತಿಮವಾಗಿದೆ. ಇದರೊಂದಿಗೆ 9 ದಿನಗಳ ಹಿಂದೆ ಬೆಂಗಳೂರಿನಲ್ಲಿ ಆರಂಭವಾಗಿದ್ದ ಯಾತ್ರೆ ಸಮಾಪನಗೊಂಡಿದೆ. ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಇಂಡಿಯಾ@75 ಯಾತ್ರೆಯು ಕೇರಳ, ಕರ್ನಾಟಕ ಚರಣ ಪೂರೈಸಿ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿ, ಚಂಡೀಗಢ, ಹಿಮಾಚಲ ಪ್ರದೇಶದ ಮಾರ್ಗವಾಗಿ ಲಡಾಖ್ ತಲುಪಿ ರವಿಶಂಕರ್ ಭಟ್ ನೇತೃತ್ವದಲ್ಲಿ ಮುಕ್ತಾಯಗೊಂಡಿದೆ.

Har Ghar Tiranga : 20 ದಿನದಲ್ಲಿ 500 ಕೋಟಿ ರೂ. ಧ್ವಜ ಮಾರಾಟ!

Har Ghar Tiranga : 20 ದಿನದಲ್ಲಿ 500 ಕೋಟಿ ರೂ. ಧ್ವಜ ಮಾರಾಟ!
ನವದೆಹಲಿ (ಆ.15): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ‘ಹರ್‌ ಘರ್‌ ತಿರಂಗಾ’ (ಮನೆಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದಿಂದಾಗಿ ರಾಷ್ಟ್ರ ಧ್ವಜ ಮಾರಾಟದಲ್ಲಿ ಭರ್ಜರಿ ವಹಿವಾಟು ನಡೆದಿದೆ. ಕೇವಲ 20 ದಿನಗಳ ಅವಧಿಯಲ್ಲಿ 30 ಕೋಟಿ ಧ್ವಜಗಳು ಮಾರಾಟವಾಗಿದ್ದು, 500 ಕೋಟಿ ರು. ವ್ಯಾಪಾರವಾಗಿದೆ. ಹಿಂದಿನ ಯಾವುದೇ ವರ್ಷದಲ್ಲೂ ಇಷ್ಟೊಂದು ವಹಿವಾಟು ನಡೆದಿರಲಿಲ್ಲ ಎಂಬುದು ಗಮನಾರ್ಹ.

ಭಾರತೀಯರ ಹೃದಯ ಜೋಡಿಸಿದ ಹರ್‌ ಘರ್‌ ತಿರಂಗಾ, ಹುಲ್ಲಿನ ಮನೆ ಮೇಲೆ ಅರಳಿದ ರಾಷ್ಟ್ರಧ್ವಜ!

‘ಸ್ವಾತಂತ್ರ್ಯ ದಿನಾಚರಣೆ(Independence Day)ಯ ಸಂದರ್ಭದಲ್ಲಿ ಹೆಚ್ಚೆಂದರೆ 150ರಿಂದ 200 ಕೋಟಿ ರು. ಮೌಲ್ಯದ ತ್ರಿವರ್ಣ ಧ್ವಜಗಳ ವಹಿವಾಟು ನಡೆಯುತ್ತಿತ್ತು. ಆದರೆ ಹರ್‌ ಘರ್‌ ತಿರಂಗಾ ಅಭಿಯಾನದಿಂದ ಈ ಬಾರಿ ಭರ್ಜರಿ ವ್ಯಾಪಾರವಾಗಿದೆ’ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಬಿ.ಸಿ. ಭಾರತೀಯ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್‌ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ.13ರಿಂದ ಆ.15ರವರೆಗೆ ಹರ್‌ ಘರ್‌ ತಿರಂಗಾ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜು.22ರಂದು ಘೋಷಣೆ ಮಾಡಿದ್ದರು. ಅಭಿಯಾನ ಆರಂಭವಾಗಲು ಕೇವಲ 20 ದಿನಗಳು ಮಾತ್ರವೇ ಇದ್ದರೂ ಭಾರತೀಯ ಉದ್ಯಮಿಗಳು 30 ಕೋಟಿ ಧ್ವಜವನ್ನು ಉತ್ಪಾದಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜ.26ರ ಗಣರಾಜ್ಯೋತ್ಸವ, ಆ.15ರ ಸ್ವಾತಂತ್ರ್ಯೋತ್ಸವ ಹಾಗೂ ಅ.2ರ ಗಾಂಧಿ ಜಯಂತಿಯ ದಿನ ರಾಷ್ಟ್ರಧ್ವಜಗಳು ಮಾರಾಟವಾಗುತ್ತವೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್‌ ಇದ್ದ ಕಾರಣದಿಂದ ರಾಷ್ಟ್ರ ಧ್ವಜಗಳು ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗಿರಲಿಲ್ಲ. ಆಗ ಉಳಿದಿದ್ದ ಸರಕು ಕೂಡ ಈಗ ಖಾಲಿಯಾಗಿದೆ ಎಂದು ಸಂಘ ತಿಳಿಸಿದೆ.

ಹರ್ ಘರ್ ತಿರಂಗ ಅಭಿಯಾನಕ್ಕೆ ಭರ್ಜರಿ ಸ್ಪಂದನೆ, ಪ್ರಧಾನಿ ಮೋದಿ ಸಂತಸ!

ಕೇಂದ್ರದಿಂದಲೂ ಖರೀದಿ: ಇದೇ ವೇಳೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಇ-ಕಾಮರ್ಸ್‌ ತಾಣ ‘ಜೆಮ್‌’ ಪೋರ್ಟಲ್‌ನಿಂದ ಜು.1ರಿಂದ ಆ.15ರ ಅವಧಿಯಲ್ಲಿ 60 ಕೋಟಿ ರು. ಮೌಲ್ಯದ 2.36 ಕೋಟಿ ಧ್ವಜಗಳನ್ನು ಖರೀದಿ ಮಾಡಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಗಾಂಧಿ ಹಂತಕರೇ ದೇಶ ವಿಭಜನೆಗೆ ಕಾರಣ: ಎಚ್‌ಡಿಕೆ
ಬೆಂಗಳೂರು (ಆ.17) :ಇಂದು ದೇಶ ಪ್ರೇಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಶಕ್ತಿಗಳೇ ಸ್ವಾತಂತ್ರ್ಯಾ ನಂತರ ದೇಶ ವಿಭಜನೆಗೆ ಕಾರಣವಾದವು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಹೆಚ್ ಡಿಕೆ ವಿರುದ್ದ ಧಿಕ್ಕಾರ ಕೂಗಿ ಕೈ-ಕಮಲ ಸದಸ್ಯರ ಆಕ್ರೋಶ

ಸೋಮವಾರ ಜೆಡಿಎಸ್‌ ಕಚೇರಿ(JDS Office)ಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ(75th Independence Day) ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಮಾನವೀಯತೆ, ಮಾನವನ ಬದುಕಿನ ಬಗ್ಗೆ ಚಿಂತಿಸುವ ಅಗತ್ಯವಿದ್ದು, ಸರ್ವರಿಗೂ ಸಮಬಾಳು, ಸಮಪಾಲು ಕೊಡಲು ಪ್ರಾಮಾಣಿಕವಾಗಿ ಸ್ಪಂದಿಸಿದಾಗ ಮಾತ್ರ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಬಡತನ ನಿವಾರಣೆಯಾಗಿಲ್ಲ. ಶತಮಾನೋತ್ಸವ ಆಚರಿಸುವ ವೇಳೆಗಾದರೂ ದೇಶದ ಜನರು ಸಂಘರ್ಷರಹಿತ, ಶಾಂತಿ ಮತ್ತು ಸಹಬಾಳ್ವೆಯಿಂದ ಬಾಳುವಂತಹ ವಾತಾವರಣ ಸೃಷ್ಟಿಸಬೇಕಿದೆ ಎಂದು ಹೇಳಿದರು.

ಒಂದು ಕಡೆ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು(Jawaharlal Nehru) ಭಾವಚಿತ್ರ ಕಣ್ಮರೆ ಮಾಡುತ್ತಾರೆ. ಮತ್ತೊಂದು ಕಡೆ ನೆಹರು ರಾಷ್ಟ್ರವಿಭಜನೆ ಆಗಲು ಕಾರಣ ಎನ್ನುವ ನೆಪ ಹೇಳುತ್ತಾರೆ. ಅಂದು ಗಾಂಧೀಜಿ ಅವರನ್ನು ಕೊಲೆ ಮಾಡಿದವರೇ ದೇಶ ವಿಭಜನೆಯಾಗಲು ಕಾರಣ. ಅಂದು ನಿಮ್ಮ (ಬಿಜೆಪಿ) ಸಂಕುಚಿತ ಮನೋಭಾವವೇ ದೇಶ ವಿಭಜನೆಯಾಗಲು ಕಾರಣ. ಈಗ ನೋಡಿದರೆ ನೆಹರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಜಾಹೀರಾತುಗಳ ಮೇಲೆ ನಡೆಯುತ್ತಿರುವ, ಟೈಂ ಪಾಸ್‌ ಸರ್ಕಾರ: ಎಚ್‌ಡಿಕೆ

75 ವರ್ಷದ ಸವಿನೆನಪಿಗಾಗಿ ಬಿಜೆಪಿ ಹರ್‌ಘರ್‌ ತಿರಂಗ(Har Ghar Tiranga) ಎಂಬ ಕಾರ್ಯಕ್ರಮ ಮಾಡಿದೆ. ಕಾಂಗ್ರೆಸ್‌ ನಡಿಗೆ ಕಾರ್ಯಕ್ರಮ ಮಾಡಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಜನರಿಗೆ ಮಂಕುಬೂದಿ ಎರಚುತ್ತಿವೆ. ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್‌ ಬೇರೆ. ಇಂದು ಕಾಂಗ್ರೆಸ್‌ ಹೆಸರು ಹೇಳಿ ರಾಜಕೀಯ ಮಾಡುವವರು ನಕಲಿ ಕಾಂಗ್ರೆಸ್ಸಿಗರು. ನೆಹರು ಭಾವಚಿತ್ರ ವಿಚಾರದಲ್ಲಿ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ನೋಡಿದ್ದೇನೆ. ಅದು ನಾವೆಲ್ಲರೂ ತಲೆ ತಗ್ಗಿಸುವ ಕೆಲಸವಾಗಿದೆ ಎಂಬುದು ನನ್ನ ಅಭಿಪ್ರಾಯ. ನೆಹರು ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಹೇಗೆ ಭಾಗವಹಿಸಿತ್ತು, ಅವರ ಕೊಡುಗೆ ಏನೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ಹೇಳಿದರು.

Independence Day: ಉಪನ್ಯಾಸಕನಿಂದ ಯುವಜನತೆಗೆ ವಿಭಿನ್ನ ಸಂದೇಶ
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಆ.16) : ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಇಡೀ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ(Independence Amrit Maohotsav)ದ ಸಂಭ್ರಮದಲ್ಲಿದೆ.ಇಡೀ ದೇಶದಾಧ್ಯಂತ ಸಂಭ್ರಮ ಮನೆ ಮಾಡಿದೆ,ಆದರೆ ಇಲ್ಲೊಬ್ಬ ಉಪನ್ಯಾಸಕ ಮಾತ್ರ ಇದೇ ಸಂದರ್ಭವನ್ನು ಬಳಸಿಕೊಂಡು ದೇಶದ ಯುವ ಜನತೆಗೆ ವಿಭಿನ್ನ ಸಂದೇಶ ಕೊಡಲು ವಿಭಿನ್ನ ಪ್ರಯತ್ನ ಮಾಡಿದ್ದಾರೆ.ಏನದು ವಿಭಿನ್ನ ಪ್ರಯತ್ನ ಮುಂದೆ ಓದಿ..

Kolara; ದೇಶ ವಿಭಜನೆಯ ಘೋರ ಘಟನೆಗಳ ನೆನಪು ಇಂದಿಗೂ ಅಚ್ಚಳಿಯದಂತೆ ಉಳಿದಿದೆ

ಒಡೆದ ಬಾಟೆಲ್(Bottle)​ ಚೂರುಗಳನ್ನು ಬಾಯಲ್ಲಿ ಕಚ್ಚಿಕೊಂಡು ಭಾರತದ ಭೂಪಟಕ್ಕೆ ಅಂಟಿಸುತ್ತಿರುವ ಉಪನ್ಯಾಸಕ,ತನ್ನ ಎರಡೂ ಕೈಗಳಲ್ಲಿ 7.5 ಕೆಜಿಯ ಡಂಬಲ್ಸ್​ಗಳನ್ನು ಹಿಡಿದು ಗಾಜಿನಲ್ಲಿ ದೇಶದ ಭೂಪಟವನ್ನು ಬಿಡಿಸುತ್ತಿರುವ ಸಾಧಕ,ಅದನ್ನು ಕುತೂಹಲದಿಂದ ವೀಕ್ಷಣೆ ಮಾಡುತ್ತಿರುವ ವಿದ್ಯಾರ್ಥಿಗಳು ಇಂಥದ್ದೊಂದು ದೃಶ್ಯ ನಮಗೆ ಕಂಡು ಬಂದಿದ್ದು ಕೋಲಾರ(kolar) ಇಲ್ಲೆ ಕೆಜಿಎಫ್​ ನಲ್ಲಿ. ಹೌದು ಕೆಜಿಎಫ್​(KGF)ನ ಚಿನ್ನದ ಗಣಿ ಕಾಲೇಜಿ((Gold mines Collage)ನಲ್ಲಿ ಅರಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಪ್ರತಾಪ್​ ಕುಮಾರ್ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶದ ಯುವಜನತಗೆ ಏನಾದರೂ ಒಂದು ಸಂದೇಶ ಕೊಡಬೇಕು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹಾಳಾಗುತ್ತಿರುವ ಯುವ ಜನತೆಯನ್ನು ಏನಾದರೂ ಮಾಡಿ ಸರಿದಾರಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ವಿಭಿನ್ನವಾಗಿ ಸಂದೇಶವೊಂದನ್ನು ರವಾನೆ ಮಾಡುತ್ತಿದ್ದಾರೆ.ಅದಕ್ಕಾಗಿ ಪ್ರತಾಪ್​ ಕುಮಾರ್​ ಮದ್ಯದ ಬಾಟಲಿ ಗಳನ್ನು ಸಂಗ್ರಹಿಸಿ ಅದರ ಗಾಜಿನ 75 ಚೂರುಗಳನ್ನು ಮಾಡಿಕೊಂಡು,ಎರಡೂ ಕೈಗಳಲ್ಲಿ 7.5 ಕೆಜಿಯ ಡಂಬಲ್ಸ್​ ಹಿಡಿದುಕೊಂಡು ಭಾರತದ ಭೂಪಟಕ್ಕೆ ಒಡೆದ ಗಾಜಿನ ಚೂರುಗಳನ್ನು ಬಾಯಿಯಿಂದ ಅಂಟಿಸುವ ಮೂಲಕ ವಿಭಿನ್ನ ಸಾಧನೆಯೊಂದನ್ನು ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನರಗುಂದ ರೈತರಿಗೆ ಬಂಪರ್ ಗಿಫ್ಟ್

ಇಂತಹ ವಿಭಿನ್ನ ಸಾಧನೆ ಮಾಡಲು ಉಪನ್ಯಾಸಕ ಪ್ರತಾಪ್​ ಕಳೆದ ಒಂದು ವಾರದಿಂದ ತರಬೇತಿ ಮಾಡಿದ್ದಾರೆ. ನಂತರ ಹಲವೆಡೆ ಹೋಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದಾರೆ. ನಂತರ ಈ ರೀತಿ ಗಾಜಿನ ಚೂರುಗಳನ್ನು ಕೈಯಲ್ಲಿ ಮುಟ್ಟದ ಬಾಯಿಯಲ್ಲಿ ಅದನ್ನು ಕಚ್ಚಿಕೊಂಡು ಭಾರತದ ಭೂಪಟದ ಚಿತ್ರಕ್ಕೆ ಅಂಟಿಸುವ ಮೂಲಕ ನೂಡುಗರೆ ಮೈ ಜುಂ ಎನ್ನಿಸುವ ಸಾಧನೆ ಮಾಡಿದ್ದಾರೆ.

ಅಷ್ಟಕ್ಕೂ ಈ ಉಪನ್ಯಾಸಕ ಈ ರೀತಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಒಡೆದು ಗಾಜಿನ ಚೂರುಗಳನ್ನು ಭಾರತದ ಭೂಪಟಕ್ಕೆ ಅಂಟಿಸಿದ್ದಾದ್ರು ಯಾಕೆ ಅನ್ನೋದರೆ ಹಿಂದೆ ಒಂದು ಸಂದೇಶವಿದೆ.ಈಗಿನ ಯುವಕ ಯುವತಿಯರು ಮದ್ಯ, ಡ್ರಗ್ಸ್​, ಬೀಡಿ ಸಿಗರೇಟು ಕುಡಿತದ ಚಟಕ್ಕೆ ಬಿದ್ದು ತಮ್ಮ ಜೀವನವನ್ನು ತಮ್ಮ ಕೈಯಾರೆ ತಾವು ಹಾಳು ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ದೇಶ ಶಕ್ತಿಯಾದ ಯುವಕರು 30-40 ವಯಸ್ಸಿಗೆ ಹಲವು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಹೀಗೆ ಯುವಕರು ಅಡ್ಡದಾರಿ ಹಿಡಿದರೆ ದೇಶದ ಭವಿಷ್ಯ ಹೀಗೆ ಒಡೆದ ಗಾಜಿನ ಚೂರಿನಂತಾಗುತ್ತದೆ. ಅದಕ್ಕಾಗಿ ಯುವಕರು ಈ ರೀತಿ ಚಟಗಳಿಗೆ ಬಲಿ ಯಾಗದೆ, ಆರೋಗ್ಯದ ಕಡೆ, ವಿವಿದ ಸಾಂಸ್ಕ್ರುತಿಕ ಚಟುವಟಿಕೆ, ಯೋಗ, ಕಸರತ್ತು ಮಾಡಿ ಹೆಲ್ತಿ ಇಂಡಿಯಾ ನಿರ್ಮಾಣ ಮಾಡಬೇಕು ಎಂದು ಸ್ವತ: ಜಿಮ್​ ಟ್ರೈನರ್​ ಕೂಡಾ ಆಗಿರುವ ಉಪನ್ಯಾಸಕ ಪ್ರತಾಪ್​ ಕುಮಾರ್ ಕಠಿಣ ಪ್ರಯತ್ನ ಮಾಡಿ ಸ್ವತಂತ್ರ್ಯೋತ್ಸವಕ್ಕೆ ಈರೀತಿ ಸಂದೇಶ ರವಾನಿಸುತ್ತಿದ್ದಾರೆ ನನ್ನನ್ನು ನೋಡಿದ ಬೆರಳೆಣಿಕೆಯಷ್ಟು ಜನರಾದರೂ ಬದಲಾದರೆ ನನಗೆ ಅದೇ ತೃಪ್ತಿ ಎನ್ನುತ್ತಾರೆ ಪ್ರತಾಪ್​.ಈ ಹಿಂದೆಯೂ ಹೀಗೆ ಸಾಮಾಜಿಕ ಕಳಕಳಿ ತೋರಿಸಿ ಹಲವು ಗಿನ್ನಿಸ್​ ಹಾಗೂ ವರ್ಡ್​ ರೆಕಾರ್ಡ್​ ಮಾಡಿರುವ ಪ್ರತಾಪ್​ ಈ ಬಾರಿ ಇದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಒಟ್ಟಾರೆ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಇಡೀ ದೇಶ ಸಂಭ್ರಮಿಸುತ್ತಿದ್ದಾರೆ ಈ ಶಿಕ್ಷಕ ಈ ಸಂಭ್ರಮದಲ್ಲೂ ಕೂಡಾ ದೇಶಕ್ಕೊಂದು,ದೇಶದ ಯುವ ಜನತೆಗೊಂದು ವಿಭಿನ್ನ ಸಂದೇಶ ಕೊಡಲು ಕಠಿಣ ಕಸರತ್ತು ಮಾಡುತ್ತಿದ್ದಾರೆ.ಇವರ ಉದ್ದೇಶ ನಿಜಕ್ಕೂ ಎಲ್ಲರೂ ಕೂಡಾ ಒಪ್ಪುವಂತದ್ದು, ಇವರಿಗೆ ದೇಶದ ಮೇಲಿರುವ ಕಾಳಜಿಗೆ ನಮ್ಮದೊಂದು ಸಲಾಂ..

ಸ್ವಾತಂತ್ರ್ಯದ ರಾತ್ರಿ ಮಣಿಪಾಲ ಕಂಡ ರೀತಿ: ಡ್ರೋಣ್‌ನಲ್ಲಿ ಸುಂದರ ದೃಶ್ಯ ಸೆರೆ
ಉಡುಪಿ: ಈ ಬಾರಿಯ ಸ್ವಾತಂತ್ರ ದಿನಾಚರಣೆ ಇದುವರೆಗಿನ ಸ್ವಾತಂತ್ರ ದಿನದ ಆಚರಣೆಗಳಿಗಿಂತ ತುಂಬಾ ವಿಭಿನ್ನವಾಗಿತ್ತು. ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಗಿತ್ತು. ಹರ್‌ ಘರ್‌ ತಿರಂಗಾ ಎಂದು ಕರೆ ನೀಡಿದ ಪ್ರಧಾನಿಯವರ ಆಶಯದಂತೆ ಈ ಬಾರಿ ದೇಶದ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಲ್ಪಟ್ಟಿದ್ದವು. ಅಲ್ಲದೇ ದೇಶದ ಬಹುತೇಕ ನಗರಗಳಲ್ಲಿ ಪ್ರಮುಖ ಕಟ್ಟಡಗಳನ್ನು ತ್ರಿವರ್ಣ ಧ್ವಜದ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಅದೇ ರೀತಿ ರಾಜ್ಯದ ಉಡುಪಿ ಜಿಲ್ಲೆಯ ಮಣಿಪಾಲ ಸಿಟಿ ಸ್ವಾತಂತ್ರ್ಯೋತ್ಸವ ದಿನದಂದು ಕಂಗೊಳಿಸುತ್ತಿರುವ ದೃಶ್ಯದ ಮನ ಮೋಹಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಣ್ಮನ ಸೆಳೆಯುತ್ತಿದೆ.

ಉಡುಪಿ ಜಿಲ್ಲೆಯ ಪ್ರಮುಖ ನಗರವಾಗಿರುವ ಮಣಿಪಾಲ ಒಂದು ರೀತಿ ಹಲವು ಶಿಕ್ಷಣ ಸಂಸ್ಥೆಗಳಿಂದಾಗಿ ಶಿಕ್ಷಣ ಕಾಶಿ ಎನಿಸಿದೆ. ದೇಶ ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯಲು ಆಗಮಿಸುತ್ತಿದ್ದು, ಒಂದು ರೀತಿಯ ಮಿನಿ ಫಾರಿನ್ ಎನಿಸಿರುವ ಮಣಿಪಾಲ ಕಡಲ ಸಮೀಪ ಇರುವ ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಪುಟ್ಟ ನಗರಿ. ಇಂತಹ ನಗರಿ ಸ್ವಾತಂತ್ರ್ಯದ ದಿನದಂದು ಸಂಪೂರ್ಣ ತ್ರಿವರ್ಣಮಯವಾಗಿ ಕಂಗೊಳಿಸಿದೆ. ಗಗನಚುಂಬಿ ಕಟ್ಟಡಗಳ ಮೇಲೆ ಒಂದು ಕಡೆ ರಾಷ್ಟ್ರಧ್ವಜ ಹಾರುತ್ತಿದ್ದರೆ, ಮತ್ತೊಂದೆಡೆ ದೊಡ್ಡ ದೊಡ್ಡ ಕಟ್ಟಡಗಳು ತ್ರಿವರ್ಣದಿಂದ ಹೊಳೆಯುತ್ತಿವೆ. ರಸ್ತೆಯಲ್ಲಿ ಸಂಚರಿಸುವ ವಾಹನಗಳು ಬೆಳಕು ಒಂದು ಕಡೆಯಾದರೆ ಮತ್ತೊಂದೆಡೆ ಕಟ್ಟಡಗಳ ಅಲಂಕಾರ ಈ ಎಲ್ಲ ಕಣ್ಮನ ಸೆಳೆಯುವ ದೃಶ್ಯವನ್ನು ಡ್ರೋಣ್‌ ಕ್ಯಾಮರಾ ಸೆರೆ ಹಿಡಿದಿದ್ದು ಮನಮೋಹಕವಾಗಿದೆ.

ಮಣಿಪಾಲದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ!@VisitUdupi @BJP4Udupi #AzadiKaAmritMahotsav #Manipal #Udupi pic.twitter.com/DgoFXSFlKQ
— Raghupathi Bhat (@RaghupathiBhat) August 16, 2022

ಉಡುಪಿ ಶಾಸಕ ರಘುಪತಿ ಭಟ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಡುಪಿಯ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಸಮೂಹ ಸಂಸ್ಥೆಗಳು, ಪೋರ್ಚುನ್ ಕಟ್ಟಡ ಹೀಗೆ ಮಣಿಪಾಲದ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ.

ಗರ್ಭಗುಡಿಯಲ್ಲಿ ತ್ರಿವರ್ಣ ರಂಗು, ವೈದ್ಯನಾಥನ ಸನ್ನಿಧಿಯಲ್ಲಿ ಅಮೃತ ಮಹೋತ್ಸವ!

ಅಮೃತ ಮಹೋತ್ಸವದ ಭಾಗವಾಗಿ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಮತ್ತು ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಈ ವರ್ಷ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಳೆದ ತಿಂಗಳೇ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಿದೆ. ಜೊತೆಗೆ ಆಗಸ್ಟ್ 2 ಮತ್ತು ಆಗಸ್ಟ್ 15 ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ತಿರಂಗಾ' ವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಬೇಕೆಂದು ಪ್ರಧಾನಿ ದೇಶದ ನಾಗರಿಕರಿಗೆ ಕರೆ ನೀಡಿದ್ದರು. ಅದೇ ರೀತಿ ದೇಶದ ಬಹುತೇಕ ನಾಗರಿಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೋಗಳಲ್ಲಿ ತ್ರಿವರ್ಣಧ್ವಜ ಬಳಸಿದ್ದರು.

ಕಲಘಟಗಿಯಲ್ಲಿ 9KM ಉದ್ದದ ಬೃಹತ್ ತ್ರಿವರ್ಣ ಧ್ವಜ ಜಾಥಾ: ಸಾಗರದಂತೆ ಸೇರಿದ ಜನ

ಅಲ್ಲದೇ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ನಾಗರಿಕರು ತಮ್ಮದೇ ರೀತಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ಚಿತ್ರ ತಾರೆಯರು ಸಾಮಾಜದ ಗಣ್ಯರು ತಮ್ಮ ಮನೆಯಲ್ಲೇ ಧ್ವಜಗಳನ್ನು ಹಾರಿಸಿ ನಮನ ಸಲ್ಲಿಸಿದ್ದಾರೆ. ಕೆಲವು ಹೊಟೇಲ್‌ಗಳಲ್ಲಿ ತಯಾರಿಸಿದ ತಿನಿಸಿಗೆ ತ್ರಿವರ್ಣದ ರಂಗು ನೀಡಲಾಗಿತ್ತು. ರಾಜ್ಯದ ವಿವಿಧ ಪ್ರವಾಸಿ ತಾಣಗಳನ್ನು ಹಾಗೂ ಜಲಾಶಯಗಳನ್ನು ತ್ರಿವರ್ಣದಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಅಷ್ಟೇ ಅಲ್ಲದೇ ವಿವಿಧ ದೇವಾಲಯಗಳಲ್ಲಿ ದೇವರನ್ನು ತ್ರಿವರ್ಣದ ಹೂಗಳಿಂದ ಅಲಂಕರಿಸಲಾಗಿತ್ತು.

ಸಿಎಂ ಬೊಮ್ಮಾಯಿ ಪಂಚ ಉಡುಗೊರೆ: ರಾಜ್ಯಕ್ಕೆ ಅಮೃತೋತ್ಸವದ ಕೊಡುಗೆ
ಬೆಂಗಳೂರು (ಆ.16): ಸೇವಾವಧಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿಯೊಂದಿಗೆ 25 ಲಕ್ಷ ರು. ಪರಿಹಾರ, ಕುಶಲಕರ್ಮಿಗಳಿಗೆ 50 ಸಾವಿರ ರು.ವರೆಗೆ ಸರ್ಕಾರದಿಂದ ಸಾಲ- ಸಹಾಯಧನ, ಒಂದು ವರ್ಷದ ಅವಧಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ, ಹೊಸದಾಗಿ 4050 ಅಂಗನವಾಡಿಗಳ ಆರಂಭ, ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾ ಸಿರಿ ಯೋಜನೆ ವಿಸ್ತರಣೆ. ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ನೀಡಿದ ಕೊಡುಗೆಗಳಿವು.

ಬೆಂಗಳೂರಿನ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸೋಮವಾರ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸೈನಿಕರು ಸೇವಾವಧಿಯಲ್ಲಿ ಹುತಾತ್ಮರಾದರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡುವುದರ ಜತೆಗೆ, 25 ಲಕ್ಷ ರು. ನೀಡಲಾಗುವುದು. 77ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಿಸುವ ಉದ್ದೇಶದಿಂದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರು. ವೆಚ್ಚ ಮಾಡಲಾಗುವುದು. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿಹೆಣೆಯುವವರು, ವಿಶ್ವಕರ್ಮರು, ಮಾದರು ಸೇರಿ ಎಲ್ಲ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರು. ವರೆಗೆ ಸಾಲ-ಸಹಾಯಧನ ಯೋಜನೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ: ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

ಅಲ್ಲದೆ, ರೈತ ವಿದ್ಯಾನಿಧಿ ಯೋಜನೆಯ ಮೂಲಕ ರೈತರ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗುವುದು. ಜತೆಗೆ, ಭೂ ರಹಿತ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಹೊಸ 4,050 ಅಂಗನವಾಡಿ ಆರಂಭಿಸಲಾಗುವುದು. ಈ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ ನೀಡುವ ಯೋಜನೆ ರೂಪಿಸಲಾಗಿದೆ. ಇದರಿಂದ 8,100 ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಿದರು.

ಸ್ವತಂತ್ರ ಭಾರತಕ್ಕೆ 75 ವರ್ಷಗಳಾಗಿದ್ದು, ಹಿಂದಿರುಗಿ ನೋಡಬೇಕು. ನಡೆದು ಬಂದ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳನ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ. ಜತೆಗೆ, ಈ ಅನುಭವ ಮುಂದೆ ನಡೆಯಬೇಕಾಗಿರುವ ದಾರಿಯ ಕುರಿತು ದಿಕ್ಸೂಚಿ ಹಾಕಿಕೊಳ್ಳಲು ಅಮೃತ ಕಾಲವಾಗಿದೆ ಎಂದರು.

ನಮ್ಮಲ್ಲಿ ಸಂಕಲ್ಪ, ಛಲ, ದೂರದೃಷ್ಟಿಇದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣದ ದೃಢ ಹೆಜ್ಜೆಗಳನ್ನಿಡುತ್ತಿದ್ದೇವೆ. ಆರ್ಥಿಕತೆ ಎಂದರೆ ದುಡ್ಡಲ್ಲ, ಜನರ ದುಡಿಮೆ ಎಂದು ಅರಿತಿದ್ದೇವೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಟಾರ್ಚ್‌ ಅಪ್‌, ಯೂನಿಕಾರ್ನ್‌, ಡೆಕಾಕಾರ್ನ್‌ಗಳಿವೆ. ತಂತ್ರಜ್ಞಾನದಲ್ಲಿ ನಂ.1 ರಾಜ್ಯವಾಗಿದೆ. ತಲಾವಾರು ಆದಾಯದಲ್ಲಿ ಇಡೀ ದೇಶದಲ್ಲಿ 3ನೇ ಸ್ಥಾನದಲ್ಲಿದೆ. ಜಿಡಿಪಿ ಶೇ.9ರಷ್ಟುಬೆಳೆಯುತ್ತಿದೆ. ದೇಶದ ಶೇ.38ರಷ್ಟುವಿದೇಶಿ ನೇರ ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕಳೆದ ವರ್ಷ 75ನೇ ಸ್ವಾತಂತ್ರ್ಯೋತ್ಸವದ ವೇದಿಕೆಯಲ್ಲಿ ಘೋಷಿಸಿದ 750 ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ, 7,500 ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ, 324 ರೈತ ಉತ್ಪಾದಕರ ಸಂಘ ಸ್ಥಾಪಿಸುವ ಯೋಜನೆ, ಗ್ರಾ.ಪಂ.ಗಳಿಗೆ ಮೂಲಸೌಕರ್ಯ ಒದಗಿಸುವ ಯೋಜನೆ ಸೇರಿದಂತೆ 11 ಅಮೃತ ಯೋಜನೆಗಳನ್ನು ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ ಎಂದು ಹೇಳಿದರು.

ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ ಅತಿವೃಷ್ಟಿಪರಿಹಾರ ಮೊತ್ತವನ್ನು ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತ ಹೆಚ್ಚುವರಿಯಾಗಿ ವಿತರಿಸಲಾಗಿದೆ. ಯಶಸ್ವಿನಿ ಯೋಜನೆ ಮರು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. 8,101 ಸರ್ಕಾರಿ ಶಾಲಾ ಕೊಠಡಿಗಳನ್ನು 1,412 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ. ರಾಜ್ಯದ ಆರು ಎಂಜಿನಿಯರ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ರಾಜ್ಯದ ಐದು ನಗರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಟ್ಟುತ್ತಿದ್ದೇವೆ. ನೀರಾವರಿ ಯೋಜನೆಗಳನ್ನು ಸಮಯದಲ್ಲಿ ಪೂರ್ಣ ಮಾಡಿ, ಪ್ರತಿ ಹನಿ ನೀರನ್ನು ಸಮರ್ಪಕವಾಗಿ ಬಳಸಲು ಸಂಕಲ್ಪ ಮಾಡಲಾಗಿದೆ. ವಿದ್ಯುಚ್ಛಕ್ತಿ, ನೀರಾವರಿಯಲ್ಲಿ ಕ್ಷಮತೆ ಕಾಯ್ದುಕೊಳ್ಳಲಾಗಿದೆ. ಜನರಿಗೆ ಸೌಲಭ್ಯಗಳನ್ನು ರೂಪಿಸುವುದರೊಂದಿಗೆ ನೇರವಾಗಿ ತಲುಪಿಸುವುದಕ್ಕೂ ಸರ್ಕಾರ ಆದ್ಯತೆ ನೀಡಿದೆ. ನೆಲ, ಜಲ, ಭಾಷೆಯ ವಿಚಾರದಲ್ಲಿ ನಾಡಿನ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಮಾಂಸ ಉತ್ಪಾದನಾ ಒಕ್ಕೂಟವಾಗಿ ಕುರಿ ನಿಗಮ ಪರಿವರ್ತನೆ: ಸಿಎಂ ಬೊಮ್ಮಾಯಿ

ಅಮೃತ ಕಾಲದ ಆತ್ಮಾವಲೋಕನ ನಡೆದು ಬಂದ ದಾರಿಯಲ್ಲಿನ ಕೊರತೆಗಳನ್ನು ಸರಿಪಡಿಸಿಕೊಂಡು ಅಮೃತ ಕಾಲಕ್ಕೆ ಕೊರತೆಗಳನ್ನು ನೀಗಿಸಿ ಮುಂದೆ ಹೋಗಲು ಸಿಂಹಾವಲೋಕನ, ಆತ್ಮಾವಲೋಕನದ ಅವಶ್ಯಕತೆ ಇದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ರಾಜ್ಯಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ
ಬೆಂಗಳೂರು (ಆ.16): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ರಾಜ್ಯಾದ್ಯಂತ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಎಲ್ಲ ಸರ್ಕಾರಿ, ಖಾಸಗಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಿತು. ಅದೇ ರೀತಿ ಪ್ರಧಾನಿ ಮೋದಿಯ ‘ಹರ್‌ ಘರ್‌ ತಿರಂಗಾ’ ಕರೆಯಂತೆ ಸೋಮವಾರದಂದೂ ಜನ ತಮ್ಮ ತಮ್ಮ ಮನೆಗಳಲ್ಲಿ ಭಾವುಟ ಹಾರಿಸಿ ಸಂಭ್ರಮಿಸಿದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಉಕ್ಕಿಸುವ ನೃತ್ಯ, ದೇಶದ ಸಮಗ್ರತೆ ಸಾರುವ ರೂಪಕಗಳು, ಭಾಷಣ, ದೇಶಭಕ್ತಿ ಗೀತೆ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಶಿಸ್ತಿನ ಕವಾಯತುಗಳು ನಡೆದವು.

ಎಲ್ಲೆಡೆ ರಾಷ್ಟ್ರಭಕ್ತಿ ವಿಜೃಂಭಿಸಿತು. ಅನೇಕ ಕಡೆಗಳಲ್ಲಿ ಮೆರವಣಿಗೆ, ಬೈಕ್‌ ರ್ಯಾಲಿಗಳು ನಡೆದವು. ರಾಜ್ಯ ರಾಜಧಾನಿ ಬೆಂಗಳೂರಿನ ಫೀ.ಮಾ.ಮಾಣಿಕ್‌ ಶಾ ಪರೇಡ್‌ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಇನ್ನು ಜಿಲ್ಲಾಕೇಂದ್ರಗಳಲ್ಲಿ ನಡೆದ ಸಮಾರಂಭಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ನೆರವೇರಿಸಿದರು.

ದೇಶದ ಅತಿದೊಡ್ಡ ಧ್ವಜಸ್ತಂಭದ ಮೇಲೆ ಧ್ವಜಾರೋಹಣ: ಹೊಸ ದಾಖಲೆ ಬರೆದ ವಿಜಯನಗರ

ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ, ಬಾಗಲಕೋಟೆಯಲ್ಲಿ ಸಚಿವ ಸಿ.ಸಿ.ಪಾಟೀಲ, ವಿಜಯಪುರ ಉಮೇಶ ಕತ್ತಿ, ಮಡಿಕೇರಿ ನಾಗೇಶ್‌, ಉಡುಪಿ ಅಂಗಾರ, ಮಂಗಳೂರು ಸುನಿಲ್‌ ಕುಮಾರ್‌, ಧಾರವಾಡ ಹಾಲಪ್ಪ ಆಚಾರ್‌, ಹಾವೇರಿ ಶಿವರಾಮ್‌ ಹೆಬ್ಬಾರ್‌, ಬಳ್ಳಾರಿ ಶ್ರೀರಾಮುಲು, ವಿಜಯನಗರ ಆನಂದ್‌ ಸಿಂಗ್‌, ಕೊಪ್ಪಳ ಶಶಿಕಲಾ ಜೊಲ್ಲೆ, ಕಾರವಾರ ಕೋಟ ಶ್ರೀನಿವಾಸ ಪೂಜಾರಿ, ತುಮಕೂರು ಆರಗ, ಮಂಡ್ಯ ಆರ್‌.ಅಶೋಕ್‌, ಶಿವಮೊಗ್ಗ ನಾರಾಯಣಗೌಡ, ರಾಮನಗರ ಡಾ.ಅಶ್ವತ್ಥ್‌ ನಾರಾಯಣ್‌, ಚಿಕ್ಕಬಳ್ಳಾಪುರ ಎಂ.ಟಿ.ಬಿ.ನಾಗರಾಜ್‌, ಕೋಲಾರ ಮುನಿರತ್ನ, ಮೈಸೂರು ಎಸ್‌.ಎಸ್‌.ಸೋಮಶೇಖರ್‌, ಚಾಮರಾಜನಗರ ವಿ.ಸೋಮಣ್ಣ, ದಾವಣಗೆರೆ ಭೈರತಿ ಬಸವರಾಜ್‌, ಯಾದಗಿರಿ ಪ್ರಭು ಚವ್ಹಾಣ್‌, ಚಿತ್ರದುರ್ಗ ಬಿ.ಸಿ.ಪಾಟೀಲ್‌ ಧ್ವಜಾರೋಹಣ ಮಾಡಿದರೆ, ಗದಗದಲ್ಲಿ ಜಿಲ್ಲಾಧಿಕಾರಿ ವೈಶಾಲಿ, ಬೀದರ್‌ನಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಧ್ವಜಾರೋಹಣ ನೆರವೇರಿಸಿದರು.

Chitradurga: ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್

ತಾಲೂಕು ಕೇಂದ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರು ಮತ್ತು ತಹಸೀಲ್ದಾರ್‌ ನೇತೃತ್ವದಲ್ಲಿ ಧ್ವಜಾರೋಹಣ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಚ್‌ ನ್ಯಾಯಾಧೀಶ ಅಬ್ದುಲ್‌ ನಝೀರ್‌ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಸಭಾ ಸದಸ್ಯರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದರು.

Chitradurga: ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಆ.15): 'ಸಬ್ ಕಾ ಸಾತ್ ಸಬ್ ಕಾ ವಿಕಾಸ್ ' , 'ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ' ಮತ್ತು 'ಸಬ್ ಕಾ ವಿಶ್ವಾಸ್ ಸಬ್ ಕ ಪ್ರಯಾಸ್ ' ತತ್ತ್ವಗಳಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ ಹಾಗೂ ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ ಎಂದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಕೇಂದ್ರ ಸರ್ಕಾರ ಮೂಲ ಸೌಲಭ್ಯಗಳ ನಿರ್ಮಾಣಕ್ಕಾಗಿ ಒತ್ತು ಕೊಟ್ಟು ಗತಿ ಶಕ್ತಿ ಯೋಜನೆ , ಉದ್ಯೋಗ ಮತ್ತು ಸಂಪತ್ತು ಸೃಷ್ಟಿಗಾಗಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದೆ.

ಕೃಷಿ , ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ವರ್ಷ ಪೂರ್ತಿ, ಅಂದರೆ ಬರುವ ಆಗಸ್ಟ್ 15 , 2023 ರವರೆಗೆ ನಿರಂತರವಾಗಿ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿ ಕೃಷಿ ಕ್ರಾಂತಿಯ ಪರಿಣಾಮವಾಗಿ ಜನರು ಹಸಿವು ಮುಕ್ತರಾಗಿದ್ದಾರೆ. ಹೊರ ದೇಶಗಳಿಂದ ಆಹಾರ ಆಮದು ಮಾಡಕೊಳ್ಳುವ ಪರಿಸ್ಥಿತಿಯಿಂದ ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ.  ಚಿತ್ರದುರ್ಗ ಜಿಲ್ಲೆಯಲ್ಲಿ ರೂ.259 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ದೇಶದಲ್ಲೆ ಪ್ರಥಮ ಬಾರಿಗೆ ರಾಜ್ಯದಲ್ಲಿ ರೈತ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ.

Chitradurga; ತುರುವನೂರು ಗ್ರಾಮದಲ್ಲಿದೆ ಮಹಾತ್ಮ ಗಾಂಧೀಜಿ ದೇವಾಲಯ

ಇದರ ಅಡಿಯಲ್ಲಿ 5 ಎಕರೆ ವರೆಗೆ ಜಮೀನು ಹೊಂದಿದವರಿಗೆ ರೂ.1250 ಗಳ‌ನ್ನು ಇಂಧನ ವೆಚ್ಚವಾಗಿ ನೀಡಲಾಗುತ್ತಿದೆ. ರಾಜ್ಯದಲ್ಲಿ ರೈತ ವಿದ್ಯಾನಿಧಿ ಜಾರಿ ಮಾಡಿ ಪ್ರಸಕ್ತ ಸಾಲಿನಲ್ಲಿ 25,559 ವಿದ್ಯಾರ್ಥಿಗಳಿಗೆ ರೂ.9.12 ಕೋಟಿ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಲಾಗಿದೆ.‌ ಕೃಷಿ ವಿ.ವಿ.ಗಳಲ್ಲಿ ರೈತರ ಮಕ್ಕಳಿಗೆ ಶೇ.50% ಸೀಟುಗಳನ್ನು ಮೀಸಲು ಇಡಲಾಗಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ . ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ.

ಸಾಮರಸ್ಯದ ನಡೆಗೆ ಪ್ರೇರಣೆಯಾಗಿದೆ. ಜಗತ್ತಿನ ಜನ ಹುಬ್ಬೇರಿಸುವಂತೆ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಅದು ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ. ನವದೆಹಲಿಯ ಐತಿಹಾಸಿಕ ಕಲ್ಲಿಕೋಟೆಯ ಮೇಲೆ ಮೊದಲ ಸ್ವಾತಂತ್ರೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ, ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ. ಸ್ವಾತಂತ್ರ್ಯ ಹೋರಾಟದ ಕಾಲಗತಿಯಲ್ಲಿ ಹುತಾತ್ಮ, ಮಹಾತ್ಮರುಗಳು ಮಾಡಿರುವ ತ್ಯಾಗ ಬಲಿದಾನಗಳು ಜನಮಾನಸದಿಂದ ಮರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಸ್ವಾತಂತ್ರ್ಯ ಬಂದಾಗ ನಮ್ಮ ದೇಶದ ಒಟ್ಟು ಜನಸಂಖ್ಯೆ ಸರಿಸುಮಾರು ಮೂವತ್ತೆಂಟು ಕೋಟಿ . ಇವತ್ತು ಅದಕ್ಕೆ ಒಂದು ನೂರು ಕೋಟಿಯಷ್ಟು ಜನಸಂಖ್ಯೆ ಸೇರಿ ನೂರಾ ಮೂವತ್ತೆಂಟು ಕೋಟಿ ಆಗಿದೆ. ಭಾರತೀಯರಾದ ನಮಗೆ ಇದೊಂದು ಬಹುದೊಡ್ಡ ಸವಾಲು ಮತ್ತು ಆ ಸವಾಲನ್ನು ಮೀರಿ ಬೆಳೆಯುವ ಅವಕಾಶ , ಭೂ ವಿಸ್ತಾರದಲ್ಲಿ ಯಾವುದೇ ಹೆಚ್ಚಳವಿಲ್ಲದೆ , ಈ ಒಂದು ನೂರು ಕೋಟಿಯಷ್ಟು ಹೆಚ್ಚುವರಿ ಜನಸಂಖ್ಯೆಗೆ ಅನ್ನ , ನೀರು , ವಸತಿ , ಆರೋಗ್ಯ , ನಾಗರಿಕ ಸೌಲಭ್ಯಗಳು ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಕೆಲಸ ಸಾಮಾನ್ಯ ಸಾಧನೆಯಲ್ಲ . ಜಗತ್ತಿನ ಇತರ ರಾಷ್ಟ್ರಗಳ ಜನರ ಜನಜೀವನ ಮಟ್ಟಕ್ಕಿಂತ ಕಡಿಮೆಯಾಗದಂತೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಸುಲಭದ ಮಾತಲ್ಲ.

ಕಳೆದ ಏಳೂವರೆ ದಶಕಗಳಲ್ಲಿ ರಾಷ್ಟ್ರೀಯ ವರಮಾನ ಹಲವು ಪಟ್ಟು ಹೆಚ್ಚಾಗಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯಾಗಿದೆ. ಆರ್ಥಿಕ ಅಭಿವೃದ್ಧಿಗೆ ಬೇಕಾದ ಮೂಲ ಸೌಲಭ್ಯಗಳು ಜನಸಂಖ್ಯಾ ಏರಿಕೆಯ ದರಕ್ಕಿಂತ ಹಲವು ಪಟ್ಟು ಹೆಚ್ಚಾಗುತ್ತಾ ಬಂದಿದೆ . ಬಡತನ , ನಿರುದ್ಯೋಗ , ಅಸಮಾನತೆಗಳು ಕಡಿಮೆಯಾಗಿವೆ. ಜೀವಿತದ ಸರಾಸರಿ ಅವಧಿ ಗಣನೀಯವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ಹಳ್ಳಿಗಳಿಗೂ ಸಾರಿಗೆ ಸಂಪರ್ಕ ಸುವ್ಯವಸ್ಥಿತವಾಗಿ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆ ಸುಸ್ಥಿರವಾಗಿದೆ. ಆಹಾರ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದೇವೆ.

ಜಾತಿ ವ್ಯವಸ್ಥೆ ಮೂಲದ ಶೋಷಣೆಯ ತೀವ್ರತೆ ಕಡಿಮೆಯಾಗಿದೆ. ಇದೆಲ್ಲವನ್ನ ಮಷೀಕರಿಸುವಂತೆ, ಇವತ್ತು ಕೋವಿಡ್ -19ರ ಮಹಾ ದುಃಸ್ಥಿತಿಯನ್ನು ಹೆಚ್ಚಿನ ಸಾವು ನೋವುಗಳಿಲ್ಲದೆ ನಿರ್ವಹಿಸುವಂತಹ ಶಕ್ತಿ ನಮಗೆ ಬಂದಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೂರದೃಷ್ಟಿ, ಸಂಶೋಧನಾ ಸಾಮರ್ಥ್ , ಸಾಮಾಜಿಕ ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನ. ಜೊತೆಗೆ, ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಸಮೂಹ ಮಾಧ್ಯಮ ಕ್ಷೇತ್ರ ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಅತ್ಯಂತ ಕ್ರಿಯಾಶೀಲವಾಗಿರುವುದು . ಜನಸಾಮಾನ್ಯರ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಜನಮಾನಸಕ್ಕೆ ಮುಟ್ಟಿಸುವ ಕೆಲಸವನ್ನು ಅವು ತಮ್ಮ ಹೊಣೆಗಾರಿಕೆಯನ್ನರಿತು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿವೆ.

ಇದರಿಂದ ಶಾಸಕಾಂಗ ಮತ್ತು ಕಾರ್ಯಾಂಗಗಳು ದಾರಿ ತಪ್ಪದಂತೆ, ಎಚ್ಚರಿಕೆಯ ಹೆಜ್ಜೆಗಳನ್ನಿಡುವಂತಾಗಿದೆ. ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ ಮತ್ತು ಸಾರ್ವಜನಿಕ ಆಡಳಿತದ ಸರಿದಾರಿ, ಮುಂದುವರಿದು ಹೇಳುವುದಾದರೆ, ಪ್ರಸ್ತುತ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಈ ಅಮೃತ ಮಹೋತ್ಸವವನ್ನು ಆಚರಿಸುವ ಅವಕಾಶವೇ ಒಂದು ಸುದೈವವೆಂದು ಭಾವಿಸಿದ್ದೇವೆ. ಇದರ ಸವಿ ನೆನಪಿಗಾಗಿ ರಾಷ್ಟ್ರದ ಏಕತೆ , ಸಮಗ್ರತೆ ಮತ್ತು ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಹಲವು ಹತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Chitradurga: ತಿರಂಗಾ ಯಾತ್ರೆಗೆ ಬಿಜೆಪಿಯಿಂದ ಭರ್ಜರಿ ಬೈಕ್‌ ರ್ಯಾಲಿ

ಈ ಮಹೋತ್ಸವದ ಮಹತ್ವವನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವ ಮೂಲಕ ಅವರಲ್ಲಿ ದೇಶಾಭಿಮಾನ ಮತ್ತು ಪರಿಪೂರ್ಣ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಉದ್ದೇಶ ನಮ್ಮದಾಗಿದೆ. ಬರುವ ದಶಕಗಳಲ್ಲಿ ಭಾರತವನ್ನು ' ವಿಶ್ವಗುರುವನ್ನಾಗಿಸುವ ಮಹಾತ್ವಾಕಾಂಕ್ಷೆ ಹೊಂದಿದ್ದೇವೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬಹುತೇಕ ಎಲ್ಲ ಇಲಾಖೆಗಳ ಮೂಲಕ ಹಲವಾರು ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿರ್ದೇಶನದಂತೆ ' ಹರ್ ಫರ್ ತಿರಂಗಾ' ಕಾರ್ಯಕ್ರಮದ ಪ್ರಕಾರ ರಾಜ್ಯದ ಎಲ್ಲ ಮನೆಗಳ , ಶಾಲಾ ಕಾಲೇಜುಗಳ, ಅಂಗಡಿ ಮುಂಗಟ್ಟುಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮವಹಿಸಲಾಗಿದೆ.

ದೇಶದ ಎಲ್ಲ ನಾಗರಿಕರನ್ನು ದೇಶಾಭಿಮಾನದ ಕಡೆಗೆ ಭಾವನಾತ್ಮಕವಾಗಿ ಸ್ಪಂಧಿಸುವಂತೆ ಮಾಡಲು ಮತ್ತು ಸನಾತನ ಭಾರತದ ಸಾಹಿತ್ಯ , ಕಲೆ , ವಾಸ್ತುಶಿಲ್ಪ ಮುಂತಾದ ಐತಿಹಾಸಿಕ ಸ್ಮಾರಕಗಳ ಪ್ರಾಮುಖ್ಯತೆಯನ್ನರಿಯಲು ಅನುಕೂಲವಾಗುವಂತೆ, ಈ ಸ್ಥಳಗಳನ್ನು ವಿದುದ್ದೀಪಾಲಂಕಾರಗಳಿಂದ ಸಜ್ಜುಗೊಳಿಸಿ ಯಾವುದೇ ಪ್ರವೇಶ ಶುಲ್ಕವಿಲ್ಲದಂತೆ ಸಾರ್ವಜನಿಕರಿಗೆ ಇದೇ 5ನೇ ತಾರೀಖಿನಿಂದ 17 ನೇ ತಾರೀಖಿನವರೆಗೆ ಮುಕ್ತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಯಶಸ್ವೀ ಕಾರ್ಯಕ್ರಮವಾಗಿ ಜಾರಿಯಾಗಿದ್ದು, ಪ್ರತಿದಿನ ಸಹಸ್ರಾರು ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಿರುವುದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಪ್ರಶಂಸೆಗೆ ಭಾಜನವಾಗಿರುವುದು ಜಿಲ್ಲಾಡಳಿತದ ಪ್ರಯತ್ನಗಳಿಗೆ ಸಂದ ಗೌರವವಾಗಿದೆ. ಅದರಲ್ಲೂ ಚಿತ್ರದುರ್ಗದ ಕೋಟೆಯ ಸೌಂದರ್ಯ ಮನಮೋಹಕವಾಗಿದೆ.

ದೇಶದ ಅತಿದೊಡ್ಡ ಧ್ವಜಸ್ತಂಭದ ಮೇಲೆ ಧ್ವಜಾರೋಹಣ: ಹೊಸ ದಾಖಲೆ ಬರೆದ ವಿಜಯನಗರ
ವರದಿ: ನರಸಿಂಹ ‌ಮೂರ್ತಿ‌ ಕುಲಕರ್ಣಿ

ವಿಜಯನಗರ (ಆ.15): ದೇಶದ ಅತಿ ಎತ್ತರದ 405 ಅಡಿ  ಧ್ವಜಸ್ತಂಭದ ಮೇಲೆ ಧ್ವಜಾರೋಹಣ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ‌ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪನೆ ಮಾಡಲಾಗಿದೆ. ಭಾರತದ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿರುವ ಈ ಶುಭ ಸಂದರ್ಭದಲ್ಲಿ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಹೊಸಪೇಟೆ ನಗರದ ಜಿಲ್ಲೆ ಕ್ರೀಡಾಂಗಣದಲ್ಲಿ 6 ಕೋಟಿ ವೆಚ್ಚದಲ್ಲಿ ಭಾರತದಲ್ಲಿಯೇ ಅತಿ ಎತ್ತರದ ಅಂದ್ರೇ 405 ಅಡಿ  ಎತ್ತರದ ಧ್ವಜ ಸ್ಥಂಭವನ್ನು ಸ್ಥಾಪಿಸಿ ಅದರ ಮೇಲೆ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಗಿದೆ.  ಪ್ರವಾಸೋದ್ಯಮ ಇಲಾಖೆ  ಮತ್ತು ಆನಂದ ಸಿಂಗ್ ಅವರ ವಯಕ್ತಿಕ ಅನುದಾನದಲ್ಲಿ ಬೃಹತ್ ಸ್ಥಂಭ ನಿರ್ಮಾಣ ಮಾಡಲಾಗಿದೆ.

ಧ್ವಜಾರೋಹಣ ‌ಮಾಡಲು‌ ಹರಸಾಹಸ: ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ಥಂಬವನ್ನೇನು‌ ನಿರ್ಮಾಣ ಮಾಡಲಾಯಿತು. ಆದರೆ ಆದರ ಮೇಲೆ ಧ್ವಜಾರೋಹಣ ಮಾಡೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಕಳೆದೊಂದು ತಿಂಗಳಿಂದ ಪುನಾ ಮೂಲದ ಬಜಾಜ್ ಎಲೆಕ್ಟ್ರಾನಿಕ್ ಕಂಪನಿಯ ತಂತ್ರಜ್ಞಾನ ಸಿಬ್ಬಂದಿ ಹರಸಾಹಸ ಪಟ್ಟು ಧ್ವಜವನ್ನು ನಿರ್ಮಾಣ ಮಾಡಿದರು. ವೇಗವಾಗಿ ಇರೋ ಗಾಳಿಯ ಜೊತೆಗೆ ಗುದ್ದಾಡಿ ಧ್ವಜ ಏರಿಸೋದೇ ದೊಡ್ಡ ಸವಲಾಗಿತ್ತು. ಆಗಸ್ಟ್ ಹದಿನಾಲ್ಕರ ಇಡೀ ರಾತ್ರಿ ತಾಂತ್ರಿಕ ಸಿಬ್ಬಂದಿ ಜೊತೆಗೆ ಸ್ವತಃ ಸಚಿವ ಆನಂದ ಸಿಂಗ್ ಹರಸಾಹಸ ಪಟ್ಟು ಧ್ವಜಾರೋಹಣ ಮಾಡಿದರು.

ಹಂಪಿಯ ಸ್ಮಾರಕಗಳಲ್ಲಿ ಕಣ್ಮನ ಸೆಳೆಯುವ ತ್ರಿವರ್ಣ ಬೆಳಕಿನ ಚಿತ್ತಾರ

ಸ್ವಾತಂತ್ರ್ಯೋವದ ಸಂಭ್ರಮಾಚರಣೆ: ಒಂದು ಕಡೆ ಅತಿ ಎತ್ತರದ ಧ್ವಜಸ್ಥಂಬದಲ್ಲಿ ಧ್ವಜಾರೋಹಣ ಮಾಡಿತ್ತಿದ್ದಂತೆ ಮತ್ತೊಂದು ಕಡೆ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 76ನೇ ಸ್ವಾತಂತ್ರೋತ್ಸವ ದಿನಾಚರಣೆ ಸಂಭ್ರಮಾಚರಣೆ ಕಳೆಗಟ್ಟಿತ್ತು. ವಿಜಯನಗರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತಂಡಗಳ ಪಥಸಂಚಲನ ವೀಕ್ಷಿಸಿ ಗೌರವ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಸ್ವಾತಂತ್ರೋತ್ಸವದ ‘ಅಜಾದಿ ಕಾ ಅಮೃತ ಮಹೋತ್ಸವ ’ದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ ಎಂದರು. ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರ ಕಪಿಮುಷ್ಟಿಯಿಂದ ಹೋರಾಟದ ಮುಖಾಂತರ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ ಎಂದರು.

ಸ್ವಾತಂತ್ರ್ಯ ನಮಗೆ ಸುಮ್ಮನೆ ಸಿಕ್ಕಲ್ಲ: ಅಂದಿನ ಅನೇಕ ಸ್ವಾತಂತ್ರ್ಯ ಹೋರಾಟಗಾರ ಹೋರಾಟದ ಫಲವನ್ನು ಇಂದು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರ್ದಾರ್ ವಲ್ಲಬಾಯಿ ಪಟೇಲ್, ನೆಹರು, ಸುಭಾಸ್‍ಚಂದ್ರ ಭೋಸ್, ದಾದಾಬಾಯಿ ನವರೋಜಿ, ವೀರ ಸಾವರ್ಕರ್ , ಮೌಲಾನ ಅಬ್ದುಲ್ ಕಲಾಂ ಆಜಾದ್, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‍ಸಿಂಗ್, ಚಂದ್ರಶೇಖರ ಅಜಾದ್, ರಾಜ್‍ಗುರು, ಸುಖದೇವ್, ಮಂಗಲ್‍ಪಾಂಡೆ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಮೊದಲ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಹಲವರು  ನಮ್ಮನ್ನು ಅಗಲಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು ಸಲ್ಲಿಸೋಣ ಈ ವೇಳೆ ಆನಂದ ಸಿಂಗ್ ಹೇಳಿದರು.

ಹೊಸಪೇಟೆಯಲ್ಲಿ ದೇಶದ ಅತಿ ಎತ್ತರದ ಧ್ವಜಸ್ತಂಭ ನಿರ್ಮಾಣ

ಯಾವುದೇ ಫಲಾಪೇಕ್ಷೆ ಇಲ್ಲದೇ ಹೋರಾಟ ಮಾಡಿದ್ರು: ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಮನೋಭಾವದಿಂದ ದೇಶ ಪ್ರೇಮದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರು ಜಾತಿ-ಮತ- ಧರ್ಮಗಳ ಬೇಧವನ್ನು ಮರೆತು ಒಂದುಗೂಡಿ ಹೋರಾಡಿದರು. ಈ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಿಂದ ಇಂದಿನ ಪೀಳಿಗೆಯು ಮುಖ್ಯವಾಗಿ ಯುವಕರು, ವಿದ್ಯಾರ್ಥಿಗಳು ರಾಷ್ಟ್ರಪ್ರೇಮದ ಬಗ್ಗೆ ಪ್ರೇರಣೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ವಿಜಯನಗರ ರಾಜ್ಯವು ಯಾವುದೋ ಒಂದು ಸಣ್ಣ ರಾಜ್ಯವಲ್ಲ, ರಾಜರ ಆಳ್ವಿಕೆ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಜಗತ್ತಿನಲ್ಲೇ ರೋಮ್ ಸಾಮ್ರಾಜ್ಯದ ನಂತರದ ಅತಿದೊಡ್ಡ ಸಾಮ್ರಾಜ್ಯವಾಗಿದ್ದು, ಆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹೊಸಪೇಟೆಯ ಹಂಪಿಯಾಗಿದ್ದು, ಅದು ನಾವು ಹೆಮ್ಮೆಯ ವಿಷಯಾಗಿದೆ. ವಿಜಯನಗರ ಸಾಮ್ರಾಜ್ಯವನ್ನು 15ನೇ ಶತಮಾನದಿಂದ ಅನೇಕ ರಾಜರು ಆಳ್ವಿಕೆ ಮಾಡಿಕೊಂಡು ಬಂದಿದ್ದರೂ, ಶ್ರೀ ಕೃಷ್ಣದೇವರಾಯ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯವು ಸಮೃದ್ಧಿಯಾಗಿ ಬೆಳೆದಿತ್ತು‌ ಎಂದು ಇತಿಹಾಸದ ಪುಟಗಳನ್ನು ಸಚಿವ ಆನಂದ ಸಿಂಗ್ ‌ಮೆಲುಕು ಹಾಕಿದರು.

ಸಾಧಕರಿಗೆ ಸನ್ಮಾನ: ಇನ್ನೂ ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು  ಸನ್ಮಾನಿಸಲಾಯಿತು. ನಂತರ ನಡೆದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಹಿರಿಯ ದಂಪತಿಯ ಧ್ವಜಾರೋಹಣ ಫೋಟೋ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್
ದೇಶ ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅಲ್ಲದೆ, ಆಗಸ್ಟ್‌ 13 ರಿಂದ 3 ದಿನಗಳ ಹರ್‌ ಘರ್ ತಿರಂಗಾ ಅಭಿಯಾನವನ್ನೂ ಆಯೋಜಿಸಲಾಗಿದೆ. ಈ ಹಿನ್ನೆಲೆ ದೇಶದ ಬಹುತೇಕ ಜನರು ಶನಿವಾರವೇ ತಮ್ಮ ಮನೆಗಳಲ್ಲಿ ಬಾವುಟ ಹಾರಿಸಿದ್ದರು. ಕೇಂದ್ರ ಸರ್ಕಾರದ ಹರ್‌ ಘರ್ ತಿರಂಗಾ ಅಭಿಯಾನ ಹಿನ್ನೆಲೆ ಉದ್ಯಮಿ ಆನಂದ್‌ ಮಹೀಂದ್ರಾ ಹಿರಿಯ ದಂಪತಿ ಬಾವುಟ ಹಾರಿಸುತ್ತಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ಆನಂದ್‌ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಫೋಟೋ ವೈರಲ್‌ ಆಗಿದ್ದು, ಇದಕ್ಕೆ ಲಕ್ಷಾಂತರ ಲೈಕ್ಸ್‌ಗಳು ಸಿಕ್ಕಿದ್ದು, ಹಾಗೂ ಹತ್ತಾರು ಸಾವಿರ ರೀಟ್ವೀಟ್‌ಗಳನ್ನು ಗಳಿಸಿದೆ. ಈ ಫೋಟೋದಲ್ಲಿ ನೋಡುವಂತೆ ವಯಸ್ಸಾದ ಅಜ್ಜಿ ಡ್ರಮ್‌ ಮೇಲೆ ನಿಂತುಕೊಂಡು ತಿರಂಗಾ ಧ್ವಜವನ್ನು ಹಾರಿಸುವ ಯತ್ನ ಮಾಡುತ್ತಾರೆ. ಇನ್ನೊಂದೆಡೆ, ಡ್ರಮ್‌ ಮೇಲೆ ನಿಂತುಕೊಂಡಿರುವ ಅಜ್ಜಿ ಕೆಳಗೆ ಬೀಳದಂತೆ ಅವರ ಪತಿ ಡ್ರಮ್‌ ಅನ್ನು ಹಿಡಿದುಕೊಂಡಿದ್ದು, ಧ್ವಜ ಹಾರಿಸಲು ಪತ್ನಿಯನ್ನು ಸಪೋರ್ಟ್‌ ಮಾಡಿದ್ದಾರೆ.

ಇದನ್ನು ಓದಿ: ಭ್ರಷ್ಟಾಚಾರ, ಕುಟುಂಬ ರಾಜಕಾರಣ ಭಾರತದ 2 ದೊಡ್ಡ ಸವಾಲುಗಳು: ಪ್ರಧಾನಿ ಮೋದಿ

ವೈರಲ್‌ ಆಗಿರುವ ಆನಂದ್ ಮಹೀಂದ್ರಾ ಟ್ವೀಟ್‌ನಲ್ಲಿ ಏನಿದೆ..?

ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ, ‘’ಸ್ವಾತಂತ್ರ್ಯ ದಿನದ ಕುರಿತು ಏಕಿಷ್ಟು ಗದ್ದಲ ಎಂದು ನೀವು ಯಾವಾಗಲೂ ಗೊಂದಲಕ್ಕೊಳಗಾಗಿದ್ದರೆ, ನೀವು ಇವರಿಬ್ಬರನ್ನು ಕೇಳಿ. ಯಾವ ಉಪನ್ಯಾಸಕ್ಕಿಂತಲೂ ಚೆನ್ನಾಗಿ ಇವರು ವಿವರಿಸುತ್ತಾರೆ. ಜೈ ಹಿಂದ್’’ ಎಂದು ಅವರು ಟ್ವೀಟ್‌ ಮಾಡಿದ್ದು, ಹಿರಿಯ ದಂಪತಿ ಧ್ವಜ ಹಾರಿಸುತ್ತಿರುವ ಆ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಟ್ವೀಟ್‌ ಇಲ್ಲಿದೆ ನೋಡಿ..

If you ever were wondering why such a fuss over Independence Day, just ask these two people. They will explain it better than any lecture can. Jai Hind. 🇮🇳 pic.twitter.com/t6Loy9vjkQ
— anand mahindra (@anandmahindra) August 14, 2022

ಭಾರತದ ಖ್ಯಾತ ಉದ್ಯಮಿಯ ಈ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ, ಹಲವು ನೆಟ್ಟಿಗರು ‘ಹರ್ ಘರ್‌ ತಿರಂಗಾ’ ಅಭಿಯಾನದ ಕುರಿತ ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿದ್ದಾರೆ.

‘ಹರ್ ಘರ್ ತಿರಂಗಾ’ ಅಭಿಯಾನದಡಿ ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ದೇಶಾದ್ಯಂತ 20 ಕೋಟಿಗೂ ಅಧಿಕ ಮನೆಗಳಲ್ಲಿ ತಿರಂಗಾ ಧ್ವಜವನ್ನು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.. ಸರ್ಕಾರಿ ಹಾಗೂ ಸಾರ್ವಜನಿಕ ಸೆಕ್ಟರ್‌ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಸ್ಥೆಗಳು, ಎನ್‌ಜಿಒ, ರೆಸ್ಟೋರೆಂಟ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಟೋಲ್ ಪ್ಲಾಜಾಗಳು ಮತ್ತು ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ: ಪ್ರಧಾನಿ ಮೋದಿ

ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಸಕ್ರಿಯರಾಗಿರುವ ಆನಂದ್‌ ಮಹೀಂದ್ರಾ 96 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ 47 ವರ್ಷಗಳ ಹಿಂದೆ ಅಂದರೆ 1975 ರಲ್ಲಿ ತೆಗೆದ ಸ್ಪೇನ್‌ನ ಟೊಲೆಡೋ ಚಿತ್ರವನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದರು. ವಿದ್ಯಾರ್ಥಿ ಪೋಟೋಗ್ರಫಿ ಪ್ರಾಜೆಕ್ಟ್‌ ಮಾಡುವ ವೇಳೆ ಈ ಚಿತ್ರ ತೆಗೆಯಲಾಗಿತ್ತು ಎಂಬ ಕ್ಯಾಪ್ಷನ್‌ ಅನ್ನು ಸಹ ಅವರು ನೀಡಿದ್ದರು. ಅವರ ಈ ಫೋಟೋ ಸಹ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಶನಿವಾರ ಹಂಚಿಕೊಂಡ ಈ ಪೋಸ್ಟ್‌ಗೆ ಹಲವು ನೆಟ್ಟಿಗರು ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದರು. ಹಾಗೂ, ಈ ಫೋಟೋಗೆ ಸಾವಿರಾರು ಲೈಕ್‌ಗಳು ಹಾಗೂ ನೂರಾರು ಕಮೆಂಟ್‌ಗಳು ಸಹ ಬಂದಿದ್ದವು. ಹಲವು ನೆಟ್ಟಿಗರು ಈ ರೀತಿ ಫೊಟೋ ತೆಗೆಯಬಹುದಾಗಿತ್ತು ಎಂದು ತಮ್ಮ ಬಿಟ್ಟಿ ಸಲಹೆಗಳನ್ನು ಸಹ ನೀಡಿದ್ದಾರೆ.