Asianet Suvarna News Asianet Suvarna News

#WorkFromHome ಮಾಡಲಿಕ್ಕಾಗದವರ ಪಾಡೇನು?

ನಾವೇನೋ ಮನೆಯಿಂಧ ಕೆಲಸ ಮಾಡಬಹುದು. ಆದರೆ ನಮ್ಮನ್ನೇ ನಂಬಿ, ಮನೆಮನೆಗೆ ಹೋಗಿ ಅಥವಾ ಬೀದಿಗೆ ಬಂದೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾದವರು ತುಂಬಾ ಜನ ಇದ್ದಾರಲ್ಲವೇ? ಇಂಥ ಸೋಂಕು ರೋಗಗಳು ಬಂದು ಸಾರ್ವಜನಿಕ ಚಟುವಟಿಕೆಯೆಲ್ಲ ನಿಂತು ಹೋದರೆ ಮೊದಲ ಏಟು ತಿನ್ನುವವರೇ ಈ ಕೆಳ ವರ್ಗದವರು. ಇವರಿಗೆ ದಿನದ ಗಳಿಕೆ ನಿಂತುಹೋದರೆ ಅದನ್ನೇ ಅವಲಂಬಿಸಿದ ಒಂದು ಕುಟುಂಬದ ಆದಾಯಮೂಲವೇ ಬತ್ತಿ ಹೋಗುತ್ತದೆ.

What about unskilled workers who can not work form home
Author
Bengaluru, First Published Mar 18, 2020, 3:21 PM IST

ಕೊರೊನಾ ವೈರಸ್‌ ವ್ಯಕ್ತಿಯಿಂಧ ವ್ಯಕ್ತಿಗೆ ಬಲು ಸುಲಭವಾಗಿ ಹರಡುತ್ತದೆ ಎಂಬುದು ಗೊತ್ತಾದ ಬಳಿಕ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ತುಂಬ ಜನ ಸೇರುವ ಮಾಲ್‌, ಸಿನಿಮಾ ಥೇಟರ್‌ಗಳೆಲ್ಲ ಮುಚ್ಚಿವೆ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಆದರೆ ಕಚೇರಿಗಳು ಅನಿವಾರ್ಯವಾಗಿ ನಡೆಯುತ್ತಿವೆ. ಅಲ್ಲೂ ಕೂಡ, ತಮಗೆ ವರ್ಕ್‌ ಫ್ರಮ್ ಹೋಮ್‌ ಸೌಲಭ್ಯ ಕೊಡಬೇಕು ಎಂದು ವಾದಿಸುವವರು ಹೆಚ್ಚಾಗುತ್ತಿದ್ದಾರೆ. ಕಂಪನಿಗಳೇ ಸ್ವತಃ ತಮ್ಮ ಸಿಬ್ಬಂದಿಗಳಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಸೂಚಿಸಿವೆ. ಉಳಿದ ಕಡೆ ಸಿಬ್ಬಂದಿಗಳು, ಕಚೇರಿಗೆ ಬಂದರೆ ಸಹೋದ್ಯೋಗಿಗಳ ಜೊತೆ ಒಡನಾಡಬೇಕಾಗುತ್ತದೆ- ಅದರಿಂದ ಕೊರೊನಾ ಹಬ್ಬಿದರೂ ಹಬ್ಬಬಹುದು. ಆದ್ದರಿಂಧ ರಜೆ ಮಾಡುತ್ತಿದ್ದೇನೆ ಎಂದು ಹೇಳಿದವರೂ ಇದ್ದಾರೆ. ಹೀಗಾಗಿ ಸಾಧ್ಯವಿದ್ದ ಕಡೆಯೆಲ್ಲಾ ಕಂಪನಿಗಳು ವರ್ಕ್‌ ಫ್ರಮ್‌ ಹೋಮ್‌ ಸೌಲಭ್ಯ ನೀಡಿವೆ. ಹೆಚ್ಚಾಗಿ ಟೆಕ್ನಾಲಜಿ ಸಂಬಂಧಿಸಿದ ಐಟಿ ಮುಂತಾದ ಕಂಪನಿಗಳು.


ಆದರೆ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಇನ್ನೊಂದು ವರ್ಗವಿದೆ. ಅದು ಅಸಂಘಟಿತ ವಲಯದವರು. ಕಾರ್‌ ಡ್ರೈವರ್‌ಗಳು, ಮನೆ ಕೆಲಸದವರು, ಇತ್ಯಾದಿ ಮಂದಿ. ಉದಾಹರಣೆ ಗಮನಿಸಿ. ನೀವು ಮನೆಯಲ್ಲ್ಲೇ ಉಳಿದು ಕೆಲಸ ಮಾಡುವುದಾದರೆ, ಮನೆ ಕೆಲಸಗಳನ್ನೂ ತಾವೇ ಮಾಡಿಕೊಳ್ಳಬಹುದಲ್ಲ, ಅವರ ಸಂಬಳವನ್ನು ಉಳಿಸಬಹುದಲ್ಲ ಎಂದು ಯೋಚಿಸಿ ಮನೆಕೆಲಸ ನೀವೇ ಮಾಡಿಕೊಳ್ಳುತ್ತೀರಿ. ಆಗ ನಿಮ್ಮ ಮನೆ ಕೆಲಸದವಳಿಗೆ ಕೆಲಸ ಇರುವುದಿಲ್ಲ. ಇನ್ನು ನೀವು ಕಚೇರಿಗೆ ಹೋಗುವುದಿಲ್ಲ ಎಂದಾರೆ ಕಾರ್‌ ಚಾಲಕರಿಗೆ, ಕ್ಯಾಬ್‌ ಡ್ರೈವರ್‌ಗಳೂ ಕೆಲಸ ಕಳೆದುಕೊಳ್ಳುತ್ತಾರೆ. ಹೆಚ್ಚಿನ ಜನ ಹೊರಗಡೆ ಓಡಾಡುವುದು ನಿಂತಿದೆ. ಅವರೆಲ್ಲ ಮನೆಯಲ್ಲೇ ಉಳಿದಿದ್ದಾರೆ. ಹೊರಗೆ ತಿಂಡಿ ಸೇವಿಸುವವರು ಕಡಿಮೆಯಾಗಿದ್ದಾರೆ. ಅಂದರೆ ಬೀದಿಗಳಲ್ಲಿ ಆಹಾರ ಮಾರುವವರಿಗೂ ವ್ಯಾಪಾರ ಇಲ್ಲ. ಇದೆಲ್ಲವೂ ಒಂದು ಸರಪಳಿಯಂತೆ, ನಿಮ್ಮ ಚಟುವಟಿಕೆಗಳನ್ನೇ ಅವಲಂಬಿಸಿದವರೆಲ್ಲರೂ ನಿಮ್ಮ ಚಟುವಟಿಕೆ ನಿಂತುಹೋದರೆ ಕೆಲಸ ಕಳೆದುಕೊಳ್ಳುತ್ತಾರೆ. ನಾವೀಗ ಇವರ ಬಗ್ಗೆ ಯೋಚಿಸಬೇಕಾದ ಕಾಲ ಬಂದಿದೆ.

 

ಕೊರೋನಾಕ್ಕೆ ಕೇರಳ ಸವಾಲು, ಬ್ರೇಕ್ ದಿ ಚೈನ್..ನಾವಿರ್ತೇವೆ ಮಾಮೂಲು!...


ನಾವೇನೋ ಮನೆಯಿಂಧ ಕೆಲಸ ಮಾಡಬಹುದು. ಆದರೆ ನಮ್ಮನ್ನೇ ನಂಬಿ, ಮನೆಮನೆಗೆ ಹೋಗಿ ಅಥವಾ ಬೀದಿಗೆ ಬಂದೇ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾದವರು ತುಬ ಜನ ಇದ್ದಾರಲ್ಲವೇ. ಇಂಥ ಸೋಂಕು ರೋಗಗಳು ಬಂದು ಸಾರ್ವಜನಿಕ ಚಟುವಟಿಕೆಯೆಲ್ಲ ನಿಂತುಹೋದರೆ ಮೊದಲ ಏಟು ತಿನ್ನುವವರೇ ಈ ಕೆಳ ವರ್ಗದವರು. ಇವರಿಗೆ ದಿನದ ಗಳಿಕೆ ನಿಂತುಹೋದರೆ ಅದನ್ನೇ ಅವಲಂಬಿಸಿದ ಒಂದು ಕುಟುಂಬದ ಆದಾಯಮೂಲವೇ ಬತ್ತಿ ಹೋಗುತ್ತದೆ. ಕುಟುಂಬ ಹಸಿವಿನಿಂದ ಕಂಗಾಲಾಗಬೇಕಾದ ಪ್ರಮೇಯವೂ ಬಂದೀತು. ಇವರಿಗೆ ಕೊರೊನಾ ವೈರಸ್‌ ಬರಲಾರದು ಎಂಬ ಯಾವ ಗ್ಯಾರಂಟಿಯೂ ಇಲ್ಲ. ಆದರೆ ಹಣಕಾಸಿನ ಮೂಲವೂ ಉಳಿತಾಯವೂ ಇಲ್ಲದೆ ಇವರು ಟ್ರೀಟ್‌ಮೆಂಟ್‌ ಪಡೆಯುವುದಾದರೂ ಹೇಗೆ, ಎಲ್ಲಿ? ಬೇರೆ ಆರೋಗ್ಯ ಸಮಸ್ಯೆಗಳು ಕಂಡು ಬಂದರೆ ಏನು ಮಾಡಬೇಕು? ಹೊಟ್ಟೆಪಾಡಿಗೆ ಗತಿ ಏನು?
 

ಇವೆಲ್ಲವೂ ಈಗಲೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು. ಈ ಸಂದರ್ಭದಲ್ಲಿ ಒಟ್ಟಾರೆ ಸಾಮಾಜಿಕ ಸನ್ನಿವೇಶದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ. ಅದಕ್ಕಾಗಿ ನಾವು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಮಾಡಬೇಕು.

 

ಭಾರತೀಯ ಸೇನೆಯಲ್ಲಿ ಮೊದಲ ಕೊರೋನಾ ಸೋಂಕು ದೃಢ!...

 

- ಅನವಶ್ಯಕವಾಗಿ ವರ್ಕ್‌ ಫ್ರಂ ಹೋಮ್‌ ಮಾಡಬೇಕಿಲ್ಲ. ಕಚೇರಿಗೆ ನೀವು ಸಂಚರಿಸುವುದರಿಂಧ ಅನೇಕ ಕ್ಯಾಬ್‌ ಚಾಲಕರು ಜೀವನ ಕಂಡುಕೊಳ್ಳುತ್ತಾರೆ.

- ಮನೆ ಕೆಲಸದವರನ್ನು ಅನಗತ್ಯವಾಗಿ ಕೆಲಸಕ್ಕೆ ಬರಬೇಡಿ ಎಂದು ಹೇಳಬೇಡಿ, ನಿಮ್ಮ ಗಳಿಕೆಗೆ ಇದುವರೆಗೆ ತಡೆ ಬಿದ್ದಿಲ್ಲವಾದರೆ, ಅವರ ಗಳಿಕೆಗೆ ನಾವು ಕಲ್ಲು ಹಾಕುವುದೇಕೆ? ಈ ಹೊತ್ತಿನಲ್ಲಿ ನೀವು ಅವರನ್ನು ಕೆಲಸದಿಂದ ತೆಗೆದರೆ, ಅವರಿಗೆ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾದೀತು.

- ಮನೆಯಿಂದ ಮನೆಗೆ ಓಡಾಡಿ ತರಕಾರಿ, ಹಣ್ಣು ಮಾರುವವರಿಂದ ಅದನ್ನು ಕೊಂಡುಕೊಳ್ಳಿ. ದುಡಿದೇ ಬದುಕಬೇಕಾದ ಅವರೂ ತಮ್ಮ ಹೊಟ್ಟೆಪಾಡು ತಣ್ಣಗೆ ಮಾಡಿಕೊಳ್ಳಲಿ.

- ಇದೆಲ್ಲವನ್ನೂ ಮಾಡಿದರೂ, ನಿಮ್ಮ ಆರೋಗ್ಯದ ಜಾಗ್ರತೆಯನ್ನು ನೀವು ಮಾಡಿಕೊಳ್ಳಿ.

Follow Us:
Download App:
  • android
  • ios