Asianet Suvarna News Asianet Suvarna News

ಮಲೈಕಾ ಎಕ್ಸ್‌ ಬಾಯ್‌ಫ್ರೆಂಡ್‌ ಮೇಲೆ ಉರ್ಫಿಗೆ ಕ್ರಶ್ ಆಗಿದ್ಯಂತೆ..!

ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ ಅವರು ತಮ್ಮ ಹೊಸ ರಿಯಾಲಿಟಿ ಶೋ 'ಫಾಲೋ ಕರ್ಲೊ ಯಾರ್‌' ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂಟರ್‌ನೆಟ್ ಸೆನ್ಸೇಷನ್ ಆಗಿರುವ ಉರ್ಫಿ ಜಾವೇದ್‌ ಇತ್ತೀಚೆಗೆ ಗಲತ್ ಇಂಡಿಯಾ ಜೊತೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ತಮ್ಮ ಕ್ರಶ್‌ ಬಗ್ಗೆ ಮಾತನಾಡಿದ್ದಾರೆ.  

Uorfi Javed has a crush on Jhanvi Kapoor brother and Malaika Arora's ex boyfriend Arjun Kapoor akb
Author
First Published Aug 28, 2024, 12:19 PM IST | Last Updated Aug 28, 2024, 1:36 PM IST

ಮುಂಬೈ: ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್‌ ಅವರು ತಮ್ಮ ಹೊಸ ರಿಯಾಲಿಟಿ ಶೋ 'ಫಾಲೋ ಕರ್ಲೊ ಯಾರ್‌' ನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂಟರ್‌ನೆಟ್ ಸೆನ್ಸೇಷನ್ ಆಗಿರುವ ಉರ್ಫಿ ಜಾವೇದ್‌ ಇತ್ತೀಚೆಗೆ ಗಲತ್ ಇಂಡಿಯಾ ಜೊತೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ತಮ್ಮ ಕ್ರಶ್‌ ಬಗ್ಗೆ ಮಾತನಾಡಿದ್ದಾರೆ.  ಅಲ್ಲದೇ ಆತನನ್ನು ಭೇಟಿಯಾದಾಗ ಮನಸ್ಸಲ್ಲಿ ಮಂಡಕ್ಕಿ ಕುಟ್ಟಿದಂತಹ ಫೀಲಿಂಗ್ ಇತ್ತು ಎಂದು ಉರ್ಫಿ ಹೇಳಿದ್ದಾರೆ. 

ಮಲೈಕಾ ಆರೋರಾ ಮಾಜಿ ಗೆಳೆಯನ ಮೇಲೆ ಉರ್ಫಿಗೆ ಕ್ರಶ್

ಗಲತ್ ಇಂಡಿಯಾ ಜೊತೆ ಸಂದರ್ಶನದಲ್ಲಿ ಮಾತನಾಡಿದ ಉರ್ಫಿ ತನಗೆ ನಟ ಅರ್ಜುನ್ ಕಪೂರ್ ಮೇಲೆ ವಿಪರೀತವಾದ ಕ್ರಶ್ ಇದೆ ಇದನ್ನು ನಾನು ಒಪ್ಪಿಕೊಳ್ಳಲೇ ಬೇಕು ಎಂದು ಹೇಳಿಕೊಂಡಿದ್ದಾರೆ.  ನಾವು ಎರಡು ಬಾರಿ ಪಾರ್ಟಿಗಳಲ್ಲಿ ಭೇಟಿಯಾಗಿದ್ದೇವೆ. ಆದರೆ ಈ ವೇಳೆ ನನಗೆ ಸಂಪೂರ್ಣವಾಗಿ ನಾಲಿಗೆಯನ್ನು ಕಟ್ಟಿ ಹಾಕಿದಂತೆ ಆಗಿತ್ತು.  ನನ್ನ ಮನಸ್ಸು ಓಡುತ್ತಲೇ ಇತ್ತು. ಆದರೆ ದುರಾದೃಷ್ಟವಶಾತ್ ನನ್ನ ಮನಸ್ಸಿನಲ್ಲಿ ಏನು ಓಡುತ್ತಿದೆ ಎಂಬ ಬಗ್ಗೆ ಆತನಿಗೆ ಯಾವುದೇ ಐಡಿಯಾ ಇರಲಾರದು. ಒಂದು ಪಾರ್ಟಿಯಲ್ಲಂತೂ ನಾನು ಅವರನ್ನು ಮಾತನಾಡಿಸುವ ಧೈರ್ಯ ತೆಗೆದುಕೊಂಡಡ, ಹಾಗೂ ಸುಮ್ಮನೇ , ನಿಮಗೆ ನನ್ನ ಹೆಸರು ಗೊತ್ತಿದೆಯಾ ಎಂದು ಕೇಳಿದೆ. ನನ್ನ ಮನಸ್ಸಿನಲ್ಲಾಗುತ್ತಿದ್ದ ಒತ್ತಡವನ್ನು ನಿಯಂತ್ರಿಸಿಕೊಳ್ಳಲು ಹಾಗೂ ಆತನ ಗಮನವನ್ನು ಸೆಳೆಯಲು ಮಾಡಿದ ಪ್ರಯತ್ನ ಇದಾಗಿತ್ತು ಎಂದು ಉರ್ಫಿ ಮನಬಿಚ್ಚಿ ಮಾತನಾಡಿದ್ದಾರೆ. 

ಈ ಸಂದರ್ಶನದಲ್ಲಿ ಉರ್ಫಿ ದಕ್ಷಿಣ ಭಾರತದ ಸಿನಿಮಾ ತಾರೆ ಸಮಂತಾ ರುತ್ ಪ್ರಭು ಬಗ್ಗೆಯೂ ಮಾತನಾಡಿದ್ದು, ಸಮಂತಾ ಹಾಗೂ ನಾನು ಇನ್ಸ್ಟಾಗ್ರಾಮ್ ಸ್ನೇಹಿತರು.  ಆಕೆಗೆ ಯಾವುದಾದರೂ ನನ್ನ ವೀಡಿಯೋ ಇಷ್ಟವಾದರೆ ಅದನ್ನು ಅವರು ತಮ್ಮ ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ. ಅದರ ಹಿಂದೆ ಬೇರೇನೂ ಉದ್ದೇಶವಿಲ್ಲ ಎಂಬುದು ನನಗೆ ತಿಳಿದಿದೆ. ಆಕೆ ಪ್ರಮಾಣಿಕವಾಗಿ ನನಗೆ ಸಪೋರ್ಟ್ ಮಾಡುತ್ತಿದ್ದಾಳೆ.   ಅವಳೊಂತರ ಹೆಣ್ಣು ಮಕ್ಕಳ ಸಪೋರ್ಟರ್  ಎಂದು ಸಮಂತಾರನ್ನ ಹೊಗಳಿದ್ದಾಳೆ ಉರ್ಫಿ. 

ಇನ್ನು ಉರ್ಫಿ ನಟನೆಯ ಫಾಲೋ ಕರ್ಲೊ ಯಾರ್  ರಿಯಾಲಿಟಿ ಶೋ ಆಗಸ್ಟ್ 23 ರಂದು ಒಟಿಟಿ ಪ್ಲಾಟ್‌ಫಾರ್ಮ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಸಿರೀಸ್‌ನ 9 ಎಪಿಸೋಡ್‌ಗಳನ್ನು ಸೋಲ್ ಪೊಡಕ್ಷನ್ ಜಿಲಾ ಅಲನಾ ಹಾಗೂ ಕಾಮ್ನಾ ಮಿನೇಜಸ್  ಅವರು ನಿರ್ಮಾಣ ಮಾಡಿದ್ದಾರೆ.  ಹಾಗೂ ಸಂದೀಪ್ ಕುಕ್ರೇಜಾ ಅವರು ಇದನ್ನು ನಿರ್ದೇಶನ ಮಾಡಿದ್ದಾರೆ.  ಇವರು ನಿಜವಾದ ಉರ್ಫಿಯನ್ನು ಇಲ್ಲಿ ತೋರಿಸಲಿದ್ದಾರೆ. 

ಉರ್ಫಿ ಜಾವೇದ್ ಅವರು ಟಿವಿ ರಿಯಾಲಿಟಿ ಶೋ ಹಿಂದಿ ಬಿಗ್‌ಬಾಸ್‌ ಒಟಿಟಿ ಶೋದಲ್ಲಿ ಹಾಗೂ ಎಂಟಿವಿಯ ಸ್ಪ್ಲಿಟ್‌ ವಿಲ್ಲಾದಲ್ಲಿ ಭಾಗವಹಿಸಿದ್ದಾರೆ. ತಮ್ಮ ವಿಭಿನ್ನ ಡ್ರೆಸ್ಸಿಂಗ್ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್ಮೆಂಟ್‌ನಿಂದ ಅವರು  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾರೆ. ಬರೀ ಇಷ್ಟೇ ಅಲ್ಲದೇ ಹಿಂದಿಯ ದಾಯನ್ ಹಾಗೂ ಬಡೇ ಬೈಯಾ ಕಿ ದುಲ್ಹಾನಿಯಾದಲ್ಲಿ ಅವರು ನಟಿಸಿದ್ದಾರೆ.

Latest Videos
Follow Us:
Download App:
  • android
  • ios