Asianet Suvarna News Asianet Suvarna News

ಪರಿಸರ ಪ್ರೇಮಿ ಹುಡುಗರಿಗೆ ಹುಡುಗೀರು ಬೀಳೋದು ಜಾಸ್ತಿ!

ಪರಿಸರ ಪ್ರೇಮಿ ಹುಡುಗರಿಗೆ ಹುಡುಗೀರು ಬೀಳೋದು ಜಾಸ್ತಿ!| ಸಮೀಕ್ಷೆಯಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ

Survey Reveals Most Of the Girls Will Love Those Boys Who Are Fond Of The Nature
Author
Bangalore, First Published Jan 12, 2020, 1:04 PM IST

ನವದೆಹಲಿ[ಜ.12]: ಫೇಸ್‌ಬುಕ್‌ನಲ್ಲಿ ನೀವು ಪರಿಸರ ರಕ್ಷಣೆಯ ಬಗ್ಗೆ, ನಿಸರ್ಗದಿಂದ ಪಡೆದ ವಸ್ತುಗಳನ್ನು ಮರುಬಳಕೆ ಮಾಡುವ ಬಗ್ಗೆ, ನೀರಿನ ಸಂರಕ್ಷಣೆ ಬಗ್ಗೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಪದೇಪದೇ ಪೋಸ್ಟ್‌ ಹಾಕುತ್ತೀರಾ? ಹಾಗಿದ್ದರೆ ನಿಮಗೆ ಹುಡುಗಿಯರು ಮರುಳಾಗುವ ಸಾಧ್ಯತೆ ಜಾಸ್ತಿ. ಹಾಗಂತ ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಅದರಲ್ಲಿ ಪರಿಸರ ಪ್ರೇಮಿ ಯುವಕರು ಮಹಿಳೆಯರಿಗೆ ಸಾಮಾನ್ಯ ಪುರುಷರಿಗಿಂತ ಶೇ.17ರಷ್ಟುಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ ಎಂಬ ಫಲಿತಾಂಶ ಬಂದಿದೆ.

ಬ್ರಿಟನ್ನಿನಲ್ಲಿ ನಡೆದ ಈ ಅಧ್ಯಯನಕ್ಕೆ 200ಕ್ಕೂ ಹೆಚ್ಚು ಮಹಿಳೆಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇಕೋ ಫ್ರೆಂಡ್ಲಿ ಉತ್ಪನ್ನಗಳನ್ನು ಬಳಸುವ, ಸಾಮಾನು ಖರೀದಿಸಲು ಅಂಗಡಿಗೆ ಹೋಗುವಾಗ ಮನೆಯಿಂದಲೇ ಮರುಬಳಕೆ ಬ್ಯಾಗ್‌ಗಳನ್ನು ಒಯ್ಯುವ, ಕಾರು ಅಥವಾ ಬೈಕ್‌ನ ಬದಲು ಸಿಟಿ ಬಸ್‌/ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವ... ಹೀಗೆ ಪರಿಸರಸ್ನೇಹಿ ಜೀವನಶೈಲಿ ಅನುಸರಿಸುವ ಪುರುಷರನ್ನು ನೀವು ಹೇಗೆ ನೋಡುತ್ತೀರಿ ಎಂದು ಅವರನ್ನು ಪ್ರಶ್ನಿಸಲಾಗಿತ್ತು.

ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವಾ? ಈ ಸಿಂಪಲ್ ಡೇಟಿಂಗ್ ಪ್ಲ್ಯಾನ್ಸ್ ಟ್ರೈ ಮಾಡಿ

ಅವರ ಉತ್ತರ ಆಧರಿಸಿ ಪ್ರೊ| ಸಿಲ್ವಿ ಬೋರೌ ಎಂಬಾಕೆ ಮನಶ್ಶಾಸ್ತ್ರಕ್ಕೆ ಸಂಬಂಧಿಸಿದ ಜರ್ನಲ್‌ನಲ್ಲಿ ಲೇಖನ ಪ್ರಕಟಿಸಿದ್ದಾರೆ. ‘ಗಂಡಸರು ನಿಸ್ವಾರ್ಥಿಗಳು ಎಂಬುದು ಗೊತ್ತಾದರೆ ಹೆಂಗಸರಿಗೆ ಅವರ ಮೇಲೆ ಪ್ರೀತಿ ಹುಟ್ಟುತ್ತದೆ. ಪರಿಸರ ಪ್ರೇಮಿಗಳ ಬಗ್ಗೆ ಹುಡುಗಿಯರು ಆಕರ್ಷಿತರಾಗುವುದಕ್ಕೂ ಇದೇ ಕಾರಣ’ ಎಂದು ಲೇಖನದಲ್ಲಿ ಸಿಲ್ವಿ ಹೇಳಿದ್ದಾರೆ.

ಈ ಸಮೀಕ್ಷೆ ಓದಿ ನಾಳೆಯಿಂದ ಹುಡುಗರೆಲ್ಲ ಫೇಸ್‌ಬುಕ್‌ನಲ್ಲಿ ಪರಿಸರ ಪ್ರೇಮಿಗಳ ಪೋಸ್‌ ನೀಡಲು ಆರಂಭಿಸಿದರೆ ಹುಡುಗಿಯರು ಹುಷಾರಾಗಿರಬೇಕಷ್ಟೆ!

Follow Us:
Download App:
  • android
  • ios