Asianet Suvarna News Asianet Suvarna News

ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!

ಇನ್ನೊಂದು ದಿನ ಕಳೆದರೆ ಬಹಳ ಮಂದಿ ಹುಡುಗ ಹುಡುಗೀರು ಎಕ್ಸೈಟ್ ಆಗೋ ವ್ಯಾಲೆಂಟೈನ್ಸ್ ಡೇ ಬರುತ್ತೆ. ಗುಪ್ತವಾಗಿಟ್ಟ ಪ್ರೇಮ ನಿವೇದನೆಗಳ ಗುಂಗು, ಒಪ್ಪುತ್ತಾಳೋ/ನೋ ಇಲ್ವೋ ಅನ್ನೋ ಚಡಪಡಿಕೆ.. ನಿಮ್ ಮನಸ್ಸಲ್ಲಿರೋ ಪ್ರೇಮಿಗೆ ಪ್ರೇಮ ನಿವೇದನೆ ಮಾಡೋ ಮುಂದೆ ತಿಳ್ಕೊಳ್ಬೇಕಾದ ಕೆಲವು ವಿಚಾರಗಳಿವೆ.

Girls are unlike  what men think aware while proposing
Author
Bengaluru, First Published Feb 12, 2020, 2:07 PM IST

ಮನ ಮೆಚ್ಚಿದ ಹುಡುಗಿ ಎದುರು ನಿಂತಾಗ ಎದೆ ಡವಗುಡುತ್ತದೆ. ಏನು ಮಾತಾಡಬೇಕು ಅಂತಾನೇ ಗೊತ್ತಾಗಲ್ಲ. ಈ ವಿಷಯದಲ್ಲಿ ಹುಡುಗರಿಗಿಂತ ಹುಡುಗಿಯರಿಗೆ ಧೈರ್ಯ ಜಾಸ್ತಿ. ಅವರು ಹುಡುಗರಿಗಿಂತ ಡೇರಿಂಗ್ ಆಗಿ ಮನಸ್ಸಲ್ಲಿದ್ದದ್ದನ್ನು ನೇರವಾಗಿ ಹೇಳಬಲ್ಲರು. ಆದರೆ ಹುಡುಗರು ಯಡವಟ್ಟು ಮಾಡ್ಕೊಳ್ಳೋದೇ ಜಾಸ್ತಿ. ಕೆಲವು ಹುಡುಗಿಯರು ಇದನ್ನು ಅರ್ಥ ಮಾಡ್ಕೊಳ್ತಾರೆ, ಮತ್ತೆ ಕೆಲವರು ಈ ಹುಡುಗ ಯಾಕೋ ತನ್ನ ಮನಸ್ಥಿತಿಗೆ ಸೆಟ್ ಆಗಲ್ಲ, ಹೀಗೆಲ್ಲ ಆಡುವವನ ಜೊತೆಗೆ ಇಡೀ ಲೈಫ್ ಕಳೆಯೋದು ಹೇಗೆ ಅಂತ ಯೋಚನೆ ಮಾಡಿ ನೋ ಅಂದುಬಿಡಬಹುದು. ಸಿನಿಮಾಗಳಲ್ಲಿ ಹೀರೋ ಹೀರೋಯಿನ್ ಗೆ ಪ್ರೊಪೋಸ್ ಮಾಡೋದು ಬರೀ ಡ್ರಾಮಾ ಅನಿಸಬಹುದು. ಆದರೆ ಪ್ರೊಪೋಸ್ ಮಾಡೋದಕ್ಕೆ ಬೆಸ್ಟ್ ವೇ ಅದೇ.

* ಅವಳೆದುರು ಸಂಪೂರ್ಣ ಶರಣಾಗತಿ

ಎಂಥಾ ಕಟು ಹೃದಯದ ಹುಡುಗಿ ಅಂದುಕೊಂಡರೂ ಅವಳು ಒಳಗೊಳಗೇ ಭಾವನಾತ್ಮಕವಾಗಿರುತ್ತಾಳೆ. ಈ ಭೂಮಿಯ ಮೇಲಿನ ಎಲ್ಲ ವಿಚಾರಗಳನ್ನೂ ಅವಳು ಬುದ್ಧಿಪೂರ್ವಕವಾಗಿ ಯೋಚಿಸೋದು ಕಡಿಮೆ. ಹೃದಯಪೂರ್ವಕವಾಗಿ ಯೋಚಿಸೋದೇ ಹೆಚ್ಚು. ಪ್ರೀತಿಯ ಶತ್ರು ಇಗೋ, ಅಹಂಕಾರ. ನಿಮ್ಮ ಅಹಂನ ಗೋಡೆಯನ್ನು ಕೆಡವಿ ಅವಳೆದುರು ಸಂಪೂರ್ಣ ಶರಣಾಗಿ ಪ್ರೊಪೋಸ್ ಮಾಡಿ. ಅವಳೆದುರು ನಾನು ತಗ್ಗಲ್ಲ ಅನ್ನೋದೆಲ್ಲ ಫ್ರೆಂಡ್ಸ್ ಎದುರು ಬಡಾಯಿಕೊಚ್ಚಿಕೊಳ್ಳಲಿಕ್ಕೆ ಮಾತ್ರ ಸೀಮಿತವಾಗಲಿ. ಆದರೆ ಹುಡುಗಿ ಎದುರಲ್ಲಿ ನಿಂತಾಗ ನೀನಿಲ್ಲದೇ ನನಗೆ ಏನೂ ಇಲ್ಲ ಅನ್ನೋದು ಅವಳಿಗೆ ರಿವೀಲ್ ಆಗಬೇಕು. ಹಾಗಾಗಿ ನೀವು ಅವಳಿಗೆ ಸಂಪೂರ್ಣ ಸರೆಂಡರ್ ಅನ್ನೋದನ್ನು ತೋರಿಸಿಕೊಳ್ಳೋದು ಬಹಳ ಮುಖ್ಯ.

ಅವನೆಲ್ಲೋ, ಇವನೆಲ್ಲೋ, ಮನೆಯವ್ರು ಮುಗಿಸಿದ್ರು ಆನ್‍ಲೈನ್ ನಿಶ್ಚಿತಾರ್ಥ 

 

* ನಿಮ್ಮ ಬಗ್ಗೆ ಬಡಾಯಿ ಕೊಚ್ಕೊಳ್ಬೇಡಿ

ಕೆಲವು ಮಂದಿ ಹುಡುಗರಿಗೊಂದು ಕೆಟ್ಟ ಚಾಳಿ ಇದೆ. ಅದು ತಮ್ಮ ಬಗ್ಗೆ ಹೇಳ್ಕೊಳ್ಳೋದು. ಇದು ನಿಮ್ಮ ಪ್ರೇಮದ ಆರೋಗ್ಯದ ದೃಷ್ಟಿಯಿಂದ ನೋಡಿದರೆ ಒಳ್ಳೆಯದಲ್ಲ. ನೀವೇನು ಅನ್ನೋದನ್ನು ಗ್ರಹಿಸೋ ಸೂಕ್ಷ್ಮ ಹುಡುಗಿಯರಿಗೆ ಇದ್ದೇ ಇರುತ್ತೆ. ಅವರ ಕಣ್ಣಲ್ಲಿ ನೀವು ಹೀರೋಗಿಂತ ಹೆಚ್ಚಾಗಿರ್ತೀರಿ. ನಿಮ್ಮ ಬಗ್ಗೆ ಬಡಾಯಿ ಕೊಚ್ಕೊಳ್ಳೋಕೆ ಶುರು ಮಾಡಿದ್ರೆ ಅವಳ ದೃಷ್ಟಿಯಲ್ಲಿ ನೀವು ಕೆಳಗಿಳಿಯುತ್ತಾ ಹೋಗುತ್ತೀರಿ. 'ನನ್ನ ಬಗ್ಗೆ ಬಡಾಯಿಕೊಚ್ಕೊಳ್ಳೋದಿಲ್ಲ. ಆದರೆ ನನ್ನ ಬಗ್ಗೆ ಹೇಳ್ತೀನಿ' ಅಂತಲೂ ಅಂದಕೊಳ್ಬೇಡಿ. ಅವಳಿಗೆ ನಿಮ್ಮ ಬಗ್ಗೆ ಪ್ರೀತಿ ಇದ್ದರೆ ನಿಮ್ಮ ಬಗೆಗಿನ ವಿವರಗಳನ್ನೆಲ್ಲ ಅವಳು ಸಂಗ್ರಹಿಸಿರುತ್ತಾಳೆ ಇಲ್ಲವೇ ಅವಳೇ ನಿಮ್ಮ ಜೊತೆಗೆ ಪ್ರಶ್ನೆ ಮಾಡಿ ನಿಮ್ಮ ಬಗ್ಗೆ ತಿಳ್ಕೊಳ್ತಾಳೆ. ನೀವಾಗಿ ನೀವೆ ನಿಮ್ಮ ಬಗ್ಗೆ ಅವಳಿಗೆ ಹೇಳೋದು ಬೇಡ. ತೀರಾ ಅವಶ್ಯವಾದದ್ದನ್ನು ಮಾತ್ರ ಹೇಳಿ.

 

* ಅಡ್ಜೆಸ್ಟ್ ಮೆಂಟ್ ಸುದ್ದಿ ತೆಗೀಬೇಡಿ

ನಮ್ಮದು ಜಾಯಿಂಟ್ ಫ್ಯಾಮಿಲಿ. ಮದುವೆ ಆದಮೇಲೆ ನೀನು ಅವರ ಜೊತೆಗೆ ಹೊಂದಿಕೊಂಡು ಹೋಗಬೇಕು ಅನ್ನುವ ಮಾತುಗಳೆಲ್ಲ ಈ ಸಂದರ್ಭ ಬೇಡ. ಈ ಕಾಲದ ಹುಡುಗಿಯರು ಹೊಂದಿಕೊಳ್ಳೋ ಬಗೆಗಿನ ಮಾತುಗಳನ್ನು ಇಷ್ಟಪಡಲ್ಲ. ಹಾಗಂತ ಮದುವೆ ಆದಮೇಲೂ ಹಾಗೇ ಇರುತ್ತಾರೆ ಅಂತಲ್ಲ. ಅವರು ಆ ಲೈಫ್ ಅನ್ನು ಎನ್ ಜಾಯ್ ಮಾಡಬಹುದು. ಸ್ವಲ್ಪ ದಿನ ಕಷ್ಟಪಡಬಹುದು. ಆದರೆ ಈ ಅಡ್ಜೆಸ್ಟ್ ಮೆಂಟ್ ಅನ್ನೋದಕ್ಕೆ ನೆಗೆಟಿವ್ ಅರ್ಥಗಳೇ ಹೆಚ್ಚು. ನಮಗಿಷ್ಟವಿಲ್ಲದ ವಿಷಯಗಳಲ್ಲಿ ಹೊಂದಾಣಿಕೆ ಮಾಡ್ಕೊಳ್ಳೋದು ಅನ್ನುವ ಅರ್ಥ ಬರುತ್ತೆ. ನಮಗೆ ಖುಷಿಯಿದ್ದರೆ ನಾವು ಆ ಬದುಕಿನ ಜೊತೆಗೇ ಹೋಗುತ್ತೀವಿ. ಅಲ್ಲಿ ಅಡ್ಜೆಸ್ಟ್ ಮೆಂಟ್ ಮಾತು ಬರಲ್ಲ.

 

* ಮೌನ ಹೆಚ್ಚಿರಲಿ, ಮಾತು ಕಡಿಮೆ ಸಾಕು

ಅವಳು ಒಪ್ಪಿದಳು ಅಂದ ತಕ್ಷಣವೇ ಅತಿಯಾಗಿ ಮಾತಾಡಿ ಅವಳಲ್ಲಿ ರೇಜಿಗೆ ಹುಟ್ಟಿಸಬೇಡಿ. ಹಿತ ಮಿತವಾದ ಮಾತುಗಳು ಹುಡುಗ ಹುಡುಗಿಯನ್ನು ಭಾವನಾತ್ಮಕವಾಗಿ ಬೆಸೆಯುತ್ತವೆ. ಇಲ್ಲಿ ಮಾತಿಗಿಂತ ಮೌನ ಹೆಚ್ಚು ಬೆಲೆ ಬಾಳುತ್ತೆ. ಮೌನದಲ್ಲೇ ಪ್ರೇಮ ಅರಳೋದು ಅನ್ನೋ ಸತ್ಯ ನಿಮಗೆ ಗೊತ್ತಿರಲಿ. ಅವಳು ಮಾತನಾಡುತ್ತಿದ್ದರೆ ಅದಕ್ಕೆ ಕಿವಿಯಾಗಿ. ನಿಮ್ಮಲ್ಲಿ ಪ್ರಾಮಾಣಿಕತೆ ಇರಲಿ. ಇಡೀ ಜಗತ್ತಿಗೆ ನೀವು ಕೆಟ್ಟವರಂತೆ ಕಂಡರೂ ಅವಳ ಕಣ್ಣಲ್ಲಿ ನಿಮ್ಮ ಸ್ಥಾನ ಬೇರೆಯೇ ಇರುತ್ತದೆ.

ಪ್ರೇಮಿ ಮೇಲಿ ಹೆಚ್ಚು ಅವಲಂಬಿತರಾಗಬೇಡಿ... 

 

* ಗುಟ್ಟು ಬೇಡವೇ ಬೇಡ

ಅವಳು ನಿಜಕ್ಕೂ ನಿಮ್ಮ ಹೃದಯ ಸಿಂಹಾಸನವನ್ನು ಏರಿದ್ದರೆ ಅವಳ ಬಳಿ ಯಾವ ವಿಷಯವನ್ನೂ ಮರೆಮಾಚಬೇಡಿ. ಆರಂಭದಲ್ಲೇ ಬೇಡ. ಆದರೆ ನಿಧಾನಕ್ಕೆ ಅವಳ ಮನಸ್ಥಿತಿ ಅರಿತು ಅವಳ ಮೂಡ್ ನೋಡ್ಕೊಂಡು ಕಹಿ ವಿಚಾರಗಳನ್ನೂ ನೇರವಾಗಿ ಹೇಳಿ. ಇದರಿಂದ ನಿಮ್ಮ ಸಂಬಂಧಕ್ಕೆ ಯಾವುದೇ ಹಾನಿಯಾಗೋದಿಲ್ಲ ಅನ್ನೋದನ್ನು ಮನದಟ್ಟು ಮಾಡಲು ಮರೆಯಬೇಡಿ. ನಿಮ್ಮ ಹಳೆಯ ಪ್ರೇಮ ವೈಫಲ್ಯಗಳಿದ್ದರೆ ಅದನ್ನೂ ಹೇಳಿ. ಹಾಗಂತ ಅವಳಲ್ಲಿ ಆ ಬಗ್ಗೆ ಅನುಮಾನಗಳು ಏಳದ ಹಾಗೆ ನೋಡಿಕೊಳ್ಳಿ. ಅವಳು ನಿಮ್ಮ ಪ್ರೇಮಿ ಅಂದ ಕೂಡಲೇ ನಿಮ್ಮ ವೈಯುಕ್ತಿಕ ವಿಷಯ ಅವಳ ಕಿವಿಗೆ ಬಿದ್ದೇ ಬೀಳುತ್ತದೆ. ಅದು ಇತರರ ಬಾಯಿಯಿಂದ ಅವಳ ಕಿವಿಗೆ ಬೀಳೋ ಮೊದಲು ನಿಮ್ಮಿಂದಲೇ ಗೊತ್ತಾದರೆ ಅವಳಿಗೆ ಹೆಚ್ಚು ಆಘಾತ ಆಗೋದಿಲ್ಲ.

Follow Us:
Download App:
  • android
  • ios