Asianet Suvarna News Asianet Suvarna News

ಕೊರೋನಾ ಹಾವಳಿ: ಕಾಂಡೋಮ್‌ಗೆ ಹೆಚ್ಚಾದ ಡಿಮ್ಯಾಂಡ್, ಉತ್ಪಾದನೆ ಬಂದ್!

ಕೊರೋನಾ ವೈರಸ್‌ ಹಾವಳಿಯಿಂದ ಆಗಿರೋ ಒಂದು ವಿಚಿತ್ರ ಬೆಳವಣಿಗೆ ಅಂದರೆ, ಕಾಂಡೋಮ್‌ಗಳಿಗೆ ವಿಪರೀತ ಅನ್ನಿಸುವಂತೆ ಬೇಡಿಕೆ ಹಚ್ಚಿರುವುದು. ಇದರಿಂದಾಗಿ, ಮಾರುಕಟ್ಟೆಯಲ್ಲಿ ಇರುವ ಕಾಂಡೋಮ್‌ಗಳೆಲ್ಲ ಕೆಲವೇ ದಿನದಲ್ಲಿ ಖಾಲಿಯಾಗಿವೆ.

Demand increased for Condoms but shortage due to corona lockdown
Author
Bengaluru, First Published Mar 30, 2020, 10:50 AM IST

ಕೊರೋನಾ ವೈರಸ್‌ ಹಾವಳಿಯಿಂದ ಆಗಿರೋ ಒಂದು ವಿಚಿತ್ರ ಬೆಳವಣಿಗೆ ಅಂದರೆ, ಕಾಂಡೋಮ್‌ಗಳಿಗೆ ವಿಪರೀತ ಅನ್ನಿಸುವಂತೆ ಬೇಡಿಕೆ ಹಚ್ಚಿರುವುದು. ಇದರಿಂದಾಗಿ, ಮಾರುಕಟ್ಟೆಯಲ್ಲಿ ಇರುವ ಕಾಂಡೋಮ್‌ಗಳೆಲ್ಲ ಕೆಲವೇ ದಿನದಲ್ಲಿ ಖಾಲಿಯಾಗಿವೆ. ಕಾಂಡೋಮ್‌ ತಯಾರಿಕಾ ಕಂಪನಿಗಳೂ ಕೆಲಸ ನಿಲ್ಲಿಸಿವೆ. ಕೊರೋನಾ ಹಾವಳಿಯ ಪರಿಣಾಮ, ಕಾಂಡೋಮ್‌ ಅಗತ್ಯ ವಸ್ತು ಅಥವಾ ಅಗತ್ಯ ವೈದ್ಯಕೀಯ ಸಾಧನ ಅಲ್ಲವಾದ್ದರಿಂದ, ಇವುಗಳ ಫ್ಯಾಕ್ಟರಿಗಳು ಮುಚ್ಚಿವೆ. ಹೀಗಾಗಿ ಪೂರೈಕೆಯೂ ಆಗುತ್ತಿಲ್ಲ. ಬಹುಶಃ ಇನ್ನು ಒಂದು ತಿಂಗಳು ಇದೇ ಪರಿಸ್ಥಿತಿ ಮುಂದುವರಿದರೆ ಕಾಂಡೋಮ್‌ಗಳು ದೊರೆಯದ ಪರಿಸ್ಥಿತಿ ಉಂಟಾಗಬಹುದು ಎನ್ನುತ್ತಾರೆ ತಜ್ಞರು.

ಭಾರತದಲ್ಲಿ ಗಗನಕ್ಕೇರಿದೆ ಕಾಂಡೋಮ್ ಬೇಡಿಕೆ, ಪೋರ್ನ್ ಸೈಟ್ ವೀಕ್ಷಣೆಯೂ ಹೆಚ್ಚು

 

ಇದ್ದಕ್ಕಿದ್ದಂತೆ ಹೀಗಾಗಿರುವುದು ಏಕೆ ಎಂಬುದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ದೊರೆಯುತ್ತಿಲ್ಲ. ಆದರೆ ಊಹಿಸಬಹುದಾಗಿದೆ. ಕೊರೋನಾದಿಂದಾಗಿ ಸೆಕ್ಸ್ ಇಂಡಸ್ಟ್ರಿಯಲ್ಲಿಯೂ ಇದೇ ಬಗೆಯ ತಲ್ಲಣ ಉಂಟಾಗಿತ್ತು. ಅಲ್ಲೂ ಕೂಡ ಗ್ರಾಹಕರ ಕೊರತೆ ಉಂಟಾಗಿದೆ. ಬಂದ ಗ್ರಾಹಕರನ್ನೂ ಕೂಡ ಸೆಕ್ಸ್ ವರ್ಕರ್‌ಗಳು ಸುಲಭವಾಗಿ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ. ಸೆಕ್ಸ್‌ನಿಂದಲೂ ಕೊರೋನಾ ಹರಡಬಹುದು ಎಂಬ ಲೆಕ್ಕಾಚಾರವೂ ಇದೆ. ಹೀಗಾಗಿ ಇರುವ ಗ್ರಾಹಕರೂ ಕೂಡ ಕಾಂಡೋಮ್‌ ಕಡ್ಡಾಯವಾಗಿ ಧರಿಸುವಂತೆ ಹೇಳಲಾಗುತ್ತಿದೆ. ಹೀಗಾಗಿ ಅಲ್ಲೂ ಕಾಂಡೋಮ್‌ಗಳಿಗೆ ಬಲು ಬೇಡಿಕೆ.

 

ಇದನ್ನು ಹೊರತುಪಡಿಸಿ, ಇತರೆಡೆಯಲ್ಲಿಯೂ ಕಾಂಡೋಮ್‌ ಬೇಡಿಕೆ ಹೆಚ್ಚಿದೆ. ಕೊರೋನಾದಿಂದಾಗಿ ಉಂಟಾಗಿರುವ ತಲ್ಲಣದ ಪರಿಸ್ಥಿತಿಯಿಂದಾಗಿ, ಭವಿಷ್ಯದ ಬಗ್ಗೆ ಆತಂಕ ಮೂಡಿದೆ, ಹೊಸದಾಗಿ ಮದುವೆಯಾದವರು ಕೂಡ, ಮಕ್ಕಳನ್ನು ಮಾಡಿಕೊಳ್ಳಲು ಅನುಮಾನಪಡುತ್ತಿದ್ದಾರೆ. ಸ್ವಂತ ಭವಿಷ್ಯವೇ ಕಷ್ಟದಲ್ಲಿರುವ ಹೊತ್ತಿನಲ್ಲಿ, ಇನ್ನೊಂದು ಜೀವವನ್ನು ಸೃಷ್ಟಿ ಮಾಡಿ ಅದನ್ನು ಈ ರೋಗಪೀಡಿತ ಜಗತ್ತಿನಲ್ಲಿ ಓಡಾಡುವಂತೆ ಯಾಕೆ ಮಾಡಬೇಕು ಎಂಬುದು ಹೆಚ್ಚಿನವರ ಪ್ರಶ್ನೆ. ಇದಕ್ಕಾಗಿ ಹೆಚ್ಚಿನವರು ಕಾಂಡೋಮ್‌ ಸ್ಟಾಕ್‌ ಮಾಡಿ ಕೂಡ ಇಟ್ಟುಕೊಳ್ಳುತ್ತಿರಬಹುದು.

 

#FeelFree : ಈ ಟೈಮ್‌ನಲ್ಲಿ ಸೆಕ್ಸ್ ಮಾಡೋದು ಡೇಂಜರಾ?

 

ಇನ್ನೊಂದು ಸಾಧ್ಯತೆಯೂ ಇದೆ. ಬಹುಶಃ, ಎಲ್ಲರೂ ಮನೆಯಲ್ಲಿ ಈಗ ಮನೆಯಲ್ಲಿದ್ದಾರೆ. ಕಚೇರಿ ಕೆಲಸಗಳಿಂದಾಗಿ ದೂರ ದೂರ ಉಳಿದಿದ್ದ ಗಂಡ- ಹೆಂಡತಿ ಕೂಡ ಈಗ ಮನೆಯಲ್ಲಿದ್ದಾರೆ. ಇದರಿಂದಾಗಿ ಸೆಕ್ಸ್‌ ಚಟುವಟಿಕೆ ಹೆಚ್ಚಿರಬಹುದು. ಅದಕ್ಕಾಗಿಯೂ ಕಾಂಡೋಮ್‌ ಬೇಡಿಕೆ ಹೆಚ್ಚಿರುವ ಸಾಧ್ಯತೆ ಇದೆ.

 

ಕೊರೊನಾ: ಪ್ರಜೆಗಳ ಮೇಲೆ ಕಣ್ಣಿಡುವ ದಿನಗಳು ಮುಂದಿವೆ ಹುಷಾರ್‌!

 

ಮತ್ತೊಂದು ವಿಚಾರ ಎಂದರೆ, ಬಹುತೇಕ ಎಲ್ಲ ವೈದ್ಯಕೀಯ ಕ್ಲಿನಿಕ್‌ಗಳೂ ಮುಚ್ಚಿವೆ. ತುರ್ತು ವೈದ್ಯಕೀಯ ಸೇವೆ, ಆಸ್ಪತ್ರೆ ಹೊರತುಪಡಿಸಿದರೆ ಇನ್ಯಾವ ವೈದ್ಯಕೀಯ ಸೇವೆಯೂ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಹೀಗಾಗಿ, ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದ ಅನಪೇಕ್ಷಿತ ಬೆಳವಣಿಗೆಗಳು ಉಂಟಾದರೆ ಅದನ್ನು ನಿಭಾಯಿಸಲು ಸಾಧ್ಯವಿಲ್ಲ. ಅನಪೇಕ್ಷಿತ ಎಂದರೆ ಅನಗತ್ಯ ಗರ್ಭ ನಿಲ್ಲುವಿಕೆ ಮುಂತಾದವು. ಇದನ್ನು ನಿರ್ವಹಿಸಲು ಗೈನಕಾಲಜಿಸ್ಟ್‌ಗಳು ಇಲ್ಲ. ಇದರ ಮುನ್ನೆಚ್ಚರಿಕೆಯಾಗಿಯೂ ಕಾಂಡೋಮ್‌ಗಳ ಬಳಕೆಯಾಗುತ್ತಿರಬಹುದು.

 

ಡೈಮಂಡ್‌ ಪ್ರಿನ್ಸೆಸ್ ಎಂಬ ಮೃತ್ಯು ನೌಕೆ ಈಗ ಭೂತಬಂಗಲೆ!

 

ಹೆಚ್ಚಿನ ಪ್ರಮಾಣದ ಕಾಂಡೋಮ್‌ ತಯಾರಿಕೆ ಕಂಪನಿಗಳು ಚೀನಾದಲ್ಲಿವೆ. ಆದರೆ ಚೀನಾದಲ್ಲಿ ಎರಡು ತಿಂಗಳಿನಿಂದ ಎಲ್ಲ ಬಗೆಯ ನಿರ್ಮಾಣ, ಉತ್ಪಾದನೆ ಕಾರ್ಯಕ್ರಮಗಳು ನಿಂತುಹೋಗಿವೆ. ಫ್ಯಾಕ್ಟರಿಗಳು ಮುಚ್ಚಿವೆ. ಇದರ ಪರಿಣಾಮವೂ ಕಾಂಡೋಮ್‌ ಲಭ್ಯತೆಯ ಮೇಲೆ ಆಗಿದೆ.

"

Follow Us:
Download App:
  • android
  • ios