ವಾಹನ ಚಾಲನೆ ಮಾಡುವಾಗ ಮೊಬೈಲ್ ನೋಡುವುದು, ಮೊಬೈಲ್ ನಲ್ಲಿ ಮಾತನಾಡುವುದು ಸರಿಯಲ್ಲ. ಇದು ಅಪಾಯಕ್ಕೆ ಆಹ್ವಾನ ನೀಡಬಹುದು. ಆದರೆ, ಮುಂಬೈನಲ್ಲಿ ಕ್ಯಾಬ್ ಚಾಲಕರೊಬ್ಬರು ವೀಡಿಯೋ ನೋಡುತ್ತ ವಾಹನ ಚಾಲನೆ ಮಾಡಿರುವ ವೀಡಿಯೋವೊಂದನ್ನು ವೆಂಕಟ್ ಎನ್ನುವವರು ಹಂಚಿಕೊಂಡಿದ್ದು ಈಗ ವೈರಲ್ ಆಗಿದೆ.
ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಫೋನಿನಲ್ಲಿ ಮಾತನಾಡುತ್ತ ಚಲಾಯಿಸುವುದು ಅಪಾಯಕರವೆಂದು ತಿಳಿದಿದ್ದರೂ ಅನೇಕರು ಇದನ್ನು ನಿಯಂತ್ರಿಸಿಕೊಳ್ಳುವುದಿಲ್ಲ. ಕೆಲವು ಚಾಲಕರು ಹೀಗೆ ಮಾಡುತ್ತ ತಮ್ಮೊಂದಿಗೆ ಸಹ ಪ್ರಯಾಣಿಕರು ಅಥವಾ ಗ್ರಾಹಕರ ಜೀವವನ್ನೂ ಅಪಾಯಕ್ಕೆ ದೂಡುತ್ತಾರೆ. ಆಟೋ ಚಾಲಕರ ಮೇಲೂ ಇಂತಹ ಆರೋಪಗಳು ಸಾಕಷ್ಟಿವೆ. ಕೆಲವೊಮ್ಮೆ ಕ್ಯಾಬ್ ಚಾಲಕರು ಅಪಾಯಕಾರಿಯಾಗಿ ವರ್ತಿಸುವುದು ಕಂಡುಬರುತ್ತದೆ. ಮೊದಲೇ ಇಂದಿನ ದಿನಗಳಲ್ಲಿ ರಸ್ತೆ ಪ್ರಯಾಣ ಸುರಕ್ಷಿತ ಎನ್ನಲು ಸಾಧ್ಯವಿಲ್ಲ. ಜತೆಗೆ, ಚಾಲಕರ ಇಂತಹ ಮೈಮರೆವು ಇನ್ನಷ್ಟು ಡೇಂಜರಸ್ ಆಗಬಹುದು. ಇದಕ್ಕೆ ಸಾಕ್ಷಿ ಎನ್ನುವಂತೆ ಮುಂಬೈನಲ್ಲಿ ನಡೆದ ಘಟನೆಯೊಂದನ್ನು ವೆಂಕಟ್ ಎನ್ನುವ ಉಬರ್ ಗ್ರಾಹಕರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೆಂಕಟ್ ಎನ್ನುವವರು ಇತ್ತೀಚೆಗೆ ಮುಂಬೈನಲ್ಲಿ (Mumbai) ಉಬರ್ ಕ್ಯಾಬ್ (Uber Cab) ಬುಕ್ ಮಾಡಿದ್ದರು.
ಮುಂಬೈ ನಗರದಲ್ಲಿ ಟ್ರಾಫಿಕ್ (Traffic) ದಟ್ಟಣೆ ಅಪಾರವಾಗಿದ್ದು, ಬಹಳ ಎಚ್ಚರಿಕೆಯಿಂದ ಕಾರು (Car) ಚಲಾಯಿಸುವುದು ಅನಿವಾರ್ಯ. ಆದರೆ, ಈ ಉಬರ್ ಚಾಲಕರು ತಮ್ಮ ತೊಡೆಯ ಮೇಲೆ ಮೊಬೈಲ್ (Mobile) ಇಟ್ಟುಕೊಂಡು ನಿರಂತರವಾಗಿ ವೀಡಿಯೋ ನೋಡುತ್ತ ಕಾರು ಚಲಾಯಿಸುತ್ತಿದ್ದರು. ವಿಪರೀತ ದಟ್ಟಣೆ ಇದ್ದ ಸಮಯದಲ್ಲೇ ಅವರು ಹೀಗೆ ಮಾಡುತ್ತಿರುವುದನ್ನು ವೆಂಕಟ್ ಅವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕಾಂಗ್ರೆಸ್ ನಾಯಕ, 70ರ ವಯಸ್ಸಿನ ಮೇವಾರಾಂ ಅಶ್ಲೀಲ ವಿಡಿಯೋ ವೈರಲ್; ಗಾಂಧಿ ಕುಟುಂಬ ಕೆಣಕಿದ ಬಿಜೆಪಿ
ಗ್ರಾಹಕರನ್ನು ಕರೆದೊಯ್ಯುವ ಸಮಯದಲ್ಲಿ ಇಂತಹ ಅಪಾಯಕಾರಿ ವರ್ತನೆಯ ಕುರಿತು ಅವರ ವೀಡಿಯೋ ಗಮನ ಸೆಳೆದಿದೆ. ನಿರ್ಲಕ್ಷ್ಯತೆಯಿಂದ ರಸ್ತೆಯಲ್ಲಿ ಡ್ರೈವ್ (Drive) ಮಾಡುವ ಪರಿಪಾಠದ ಬಗ್ಗೆ ಎಲ್ಲರೂ ಗಮನ ಹರಿಸುವಂತೆ ಮಾಡಿದೆ. ಸೋಷಿಯಲ್ ಮೀಡಿಯಾ (Social Media) ಎಕ್ಸ್ ಖಾತೆಯಲ್ಲಿ ಅವರು, “ಇತ್ತೀಚೆಗೆ ಉಬರ್ ಇಂಡಿಯಾದಲ್ಲಿ ಪ್ರಯಾಣಿಸುವುದು ಸುರಕ್ಷಿತ (Safe) ಎನಿಸುತ್ತಿಲ್ಲ. ಚಾಲಕರು ಡೇಂಜರಸ್ ಆಗಿ ಕಾರು ಚಲಾಯಿಸುವುದು ಕಂಡುಬರುತ್ತಿದೆ. ಈ ಡ್ರೈವರ್ ನಿರಂತರವಾಗಿ ತನ್ನ ಮೊಬೈಲ್ ನಲ್ಲಿ ವೀಡಿಯೋ ನೋಡುತ್ತ ಸಾಗುತ್ತಿದ್ದಾರೆ. ಮುಂಬೈಗೆ ಏನಾಗಿದೆ? ಇದನ್ನು ನಿಲ್ಲಿಸುವವರು ಯಾರು?’ ಎಂದು ಪ್ರಶ್ನಿಸಿದ್ದಾರೆ.
ಟ್ರಾಫಿಕ್ ಪೊಲೀಸ್, ಉಬರ್ ಸ್ಪಂದನೆ
ವೆಂಕಟ್ ಅವರ ಈ ಕಳಕಳಿಗೆ ಮುಂಬೈ ಟ್ರಾಫಿಕ್ ಪೊಲೀಸರು (Police) ಸ್ಪಂದಿಸಿದ್ದಾರೆ. ಘಟನೆ (Incident) ಸಂಭವಿಸಿದ ನಿರ್ದಿಷ್ಟ ಸ್ಥಳದ ಬಗ್ಗೆ, ವಾಹನ ಸಂಖ್ಯೆ ಕುರಿತು ಮಾಹಿತಿ ನೀಡುವಂತೆ ವೆಂಕಟ್ ಅವರಿಗೆ ಸೂಚಿಸಿದ್ದಾರೆ. ಸೂಕ್ತ ತನಿಖೆ (Investigation) ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ, ಉಬರ್ ಇಂಡಿಯಾ ಕೂಡ ವೆಂಕಟ್ ಅವರ ಟ್ವೀಟ್ ಗೆ ಸ್ಪಂದಿಸಿದೆ. “ಇದು ನಿಜಕ್ಕೂ ಕಳವಳ (Concern) ಮೂಡಿಸುವ ಸಂಗತಿಯಾಗಿದೆ. ಇಂತಹ ವರ್ತನೆ (Behaviour) ಸಹನೀಯವಲ್ಲ. ನಾವು ನಿಮ್ಮ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡುತ್ತೇವೆ. ನಿಮ್ಮ ನೋಂದಾಯಿತ ಖಾತೆಯ ಬಗ್ಗೆ ಮಾಹಿತಿ ತಿಳಿಸಿ. ನಮ್ಮ ರಕ್ಷಣಾ ತಂಡ ನಿಮ್ಮನ್ನು ಸದ್ಯದಲ್ಲೇ ಭೇಟಿಯಾಗಲಿದೆ’ ಎಂದು ಪ್ರತಿಕ್ರಿಯೆ ನೀಡಿದೆ.
ಕಟ್ಟಡದಿಂದ ಜಿಗಿಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ 'ಅನಿಮಲ್' ನಟ: ವಿಡಿಯೋ ವೈರಲ್
ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಬಹಳಷ್ಟು ಜನ ತಮ್ಮ ತಮ್ಮ ಅನುಭವಗಳನ್ನು ಶೇರ್ (Share) ಮಾಡಿಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ದಿನವೂ ನಡೆಯುತ್ತವೆ ಎಂದೂ ಹೇಳಿದ್ದಾರೆ. ಚಾಲಕರು ಸುರಕ್ಷಿತವಾಗಿ ವಾಹನ ಚಾಲನೆ ಮಾಡದಿದ್ದರೆ ಗ್ರಾಹಕರಿಗೆ ರಕ್ಷಣೆ ನೀಡುವವರು ಯಾರು ಎಂದೂ ಪ್ರಶ್ನಿಸಿದ್ದಾರೆ.
