ಆಟವಾಡುತ್ತ, ನಡೆಯುತ್ತ ಖುಷಿಯಾಗಿರುವ ಸಮಯದಲ್ಲಿ ಸಣ್ಣದೊಂದು ಎಡವಟ್ಟಾದರೂ ಪುಟ್ಟ ಮಕ್ಕಳು ಅಮ್ಮನನ್ನು ನೆನಪಿಸಿಕೊಂಡು ಬಂದುಬಿಡುತ್ತವೆ. ಅದೇ ರೀತಿ, ಪುಟ್ಟ ಆನೆಯ ಮರಿಯೊಂದು ತಾನು ಬಿದ್ದಾಗ ಸೀದಾ ಅಮ್ಮನ ಬಳಿಗೆ ಸಾಗುವ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಕ್ಕಳು ಆಟವಾಡುತ್ತ ಎಡವಿ ಬಿದ್ದಾಗ ಮೊದಲು ನೆನಪಿಸಿಕೊಳ್ಳುವುದು ಅಮ್ಮನನ್ನು. ಬಿದ್ದಾಗ ನೋವಾಗದಿದ್ದರೂ ಏನೋ ಒಂದು ರೀತಿಯ ಅವಮಾನವಾದಂತೆ ಅಳುತ್ತ ಅಮ್ಮನ ಸೆರಗಿನ ಮರೆಯಲ್ಲಿ ಅಡಗಿಕೊಳ್ಳುತ್ತವೆ. ಅಥವಾ ಅಮ್ಮ ಸಮಾಧಾನ ಮಾಡುವವರೆಗೂ ಅಳುತ್ತಲೇ ಇರುತ್ತವೆ. ಬಿದ್ದಾಗ ಅಮ್ಮನನ್ನು ನೆನಪಿಸಿಕೊಳ್ಳುವ ಅಭ್ಯಾಸ ಮನುಷ್ಯರಲ್ಲಿ ಮಾತ್ರ ಕಂಡುಬರುವಂಥದ್ದಲ್ಲ ಎನ್ನುವುದನ್ನು ವೀಡಿಯೋವೊಂದು ಬಹಳ ಚೆನ್ನಾಗಿ ತಿಳಿಸಿದೆ. ಸೋಷಿಯಲ್ ಮೀಡಿಯಾ ಎನ್ನುವುದು ಸಾಗರವಿದ್ದಂತೆ. ಕ್ಷಣಾರ್ಧದಲ್ಲಿ ಲಕ್ಷಾಂತರ ವೀಡಿಯೋ ಅಥವಾ ರೀಲ್ಸ್ ಗಳು ಅಪ್ ಲೋಡ್ ಆಗುತ್ತಿರುತ್ತವೆ. ಆದರೆ, ಕೆಲವು ಮಾತ್ರ ಎಲ್ಲರ ಗಮನ ಸೆಳೆಯುತ್ತವೆ. ವೈರಲ್ ಆಗಿ ಇಡೀ ವಿಶ್ವದ ನೋಡುಗರ ಮನ ಗೆಲ್ಲುತ್ತವೆ. ಅಂಥದ್ದೇ ವೀಡಿಯೋ ಈಗ ಪ್ರಾಣಿಪ್ರಿಯರ ಮನಸ್ಸನ್ನು ಸೂರೆಗೊಂಡಿದೆ. ಸೋಷಿಯಲ್ ಮೀಡಿಯಾದ ಎಕ್ಸ್ ಖಾತೆಯಲ್ಲಿ ಗೇಬ್ರಿಯಲ್ ಕಾರ್ನೊ ಎನ್ನುವವರು ಶೇರ್ ಮಾಡಿರುವ ಆನೆ ಮರಿಯ ವೀಡಿಯೋವೊಂದು ವೈರಲ್ ಆಗಿದ್ದು ನೋಡುಗರಲ್ಲಿ ಮುದ ತುಂಬುತ್ತದೆ.
ನಿಯಂತ್ರಣಕ್ಕೆ ಸಿಗದ ದೇಹ
ವೀಡಿಯೋದಲ್ಲಿ (Video) ಮೈದಾನವೊಂದರಲ್ಲಿ (Ground) ನಿಂತಿರುವ ಆನೆ (Elephant) ಹಾಗೂ ಆನೆಯ ಮರಿ (Baby) ಖುಷಿಯಾಗಿ ವಿಹರಿಸುತ್ತಿವೆ. ಆನೆಯ ಮರಿ ತನ್ನ ಸುತ್ತ ಇರುವ ಹಕ್ಕಿಗಳನ್ನು (Birds) ಹಾರಿಸುತ್ತ ಮುಗ್ಧವಾಗಿ ಆಟವಾಡುತ್ತಿದೆ. ಒಂದೆರಡು ಸುತ್ತು ಅವುಗಳ ಹಿಂದೆ ಓಡುತ್ತದೆ. ಆದರೆ, ಅದಕ್ಕೆ ತನ್ನ ದೇಹದ (Body) ಆಕಾರದ ಬಗ್ಗೆ ಅಂದಾಜು ಇದ್ದಂತಿಲ್ಲ.
'ನನ್ನ ಜೀವನ ಹೂವಿನ ಹಾಸಿಗೆಯಲ್ಲ' ಮಗನ ಮಾತು ಕೇಳಿ ಕಣ್ಣೀರು ಹಾಕಿದ ಮುಖೇಶ್ ಅಂಬಾನಿ
ಹಗುರವಾಗಿ ಓಡುವಂತೆ ಕಂಡರೂ ಆನೆ ಮರಿಯ ದೇಹ ಓಡುವ ಸಮಯದಲ್ಲಿ ನಿಯಂತ್ರಣಕ್ಕೆ ಸಿಗುವುದಿಲ್ಲ. ಖುಷಿಯಾಗಿ ಹಕ್ಕಿಯ ಮರಿಗಳೊಂದಿಗೆ ಆಟವಾಡುತ್ತಿರುವ ಪುಟ್ಟ ಆನೆಯ ಮರಿ ಇದ್ದಕ್ಕಿದ್ದ ಹಾಗೆ ಬಿದ್ದುಬಿಡುತ್ತದೆ. ಪುಟುಕ್ಕೆಂದು ಬಿದ್ದುಹೋಗುವ ಆನೆಯ ಮರಿಯನ್ನು ಕಂಡು ನೋಡುಗರು “ಅಯ್ಯೊ ಪಾಪ’ ಎಂದುಕೊಳ್ಳುವಷ್ಟರಲ್ಲಿಯೇ ಅದು ಹಾಗೆಯೇ ಎದ್ದು ಸೀದಾ ಅಮ್ಮನ (Mother) ಬಳಿಗೆ ಓಡುತ್ತದೆ. ಸಖತ್ತಾಗಿ ಖುಷಿ ಕೊಡುವ ವೀಡಿಯೋಕ್ಕೆ ಕ್ಯಾಪ್ಷನ್ (Caption) ಕೂಡ ಇದೇ ಆಗಿದೆ. “ಈ ಕ್ಯೂಟ್ ಆನೆಯ ಮರಿ ನಿಮ್ಮಲ್ಲಿ ನಗು ಮೂಡಿಸುತ್ತದೆ’ ಎನ್ನುವ ಕ್ಯಾಪ್ಷನ್ ಸತ್ಯವಾಗುತ್ತದೆ.
ಶುದ್ಧ ಮುಗ್ಧತೆ (Pure Innocense)
ಪೋಸ್ಟ್ ಆದ ಕೆಲವೇ ಸಮಯದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಿಕ್ಕಾಪಟ್ಟೆ ಜನ ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ. ಹಲವರು ಮುಗ್ಧ (Innocent) ಆನೆ ಮರಿಯ ಚೆಲ್ಲಾಟವನ್ನು ಕಂಡು “ಅದ್ಭುತ’ ಎಂದು ಮೆಚ್ಚಿಕೊಂಡಿದ್ದಾರೆ.
ಜನ ಇಂಥ ವಸ್ತುನೂ ಖರೀದಿ ಮಾಡ್ತಾರಾ? ತನ್ನ ಹೂಸು, ಬೆವರು ಮಾರಿ, ಲಕ್ಷ ಗಳಿಸಿದ ಮಹಿಳೆ!
ಹಲವರು “ಇದು ನಿಜಕ್ಕೂ ಶುದ್ಧ ಹಾಗೂ ಮುಗ್ಧತನ’ ಎಂದು ಹೇಳಿದ್ದಾರೆ. “ಸಣ್ಣದೊಂದು ಮುಜುಗರವಾದರೂ (Embarrassment) ಪುಟ್ಟ ಮಕ್ಕಳು ಅಮ್ಮನ ಬಳಿ ಓಡುತ್ತವೆ’ ಎಂದು ಕೆಲವರು ನಗು ಸೂಸಿದ್ದಾರೆ. ಬಹಳಷ್ಟು ಜನ ತಾವು ಆನೆಯನ್ನು ಬಹಳ ಇಷ್ಟಪಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಎಲ್ಲರನ್ನೂ ಸೆಳೆದಿದ್ದು, ಪ್ರಾಣಿಪ್ರಿಯರಿಗೆ (Animal Lovers) ಖುಷಿ ನೀಡಿದರೆ, ಪ್ರಾಣಿಪ್ರಿಯರಲ್ಲದವರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ.
